For Quick Alerts
ALLOW NOTIFICATIONS  
For Daily Alerts

ಸುಂದರವಾಗಿ ಕಾಣಬೇಕೇ? ಈ ಸಿಂಪಲ್ ಟಿಪ್ಸ್ ಅನುಸರಿಸಿ

By Super
|

ಮಾರುಕಟ್ಟೆಯಲ್ಲಿ ಸುಮ್ಮನೇ ಕಣ್ಣಾಡಿಸಿದರೆ ಪುರುಷರಿಗಾಗಿ ಲಭ್ಯವಿರುವ ಸೌಂದರ್ಯ ಪ್ರಸಾಧನಗಳಿಗೆ ಸಾವಿರಾರು ಪಟ್ಟು ಹೆಚ್ಚು ಮಹಿಳೆಯರ ಸೌಂದರ್ಯ ಪ್ರಸಾಧನಗಳು ಇರುವುದನ್ನು ಗಮನಿಸಬಹುದು. ಏಕೆಂದರೆ ಸೌಂದರ್ಯಪ್ರಜ್ಞೆ ಮಹಿಳೆಯರಲ್ಲಿ ಮಾತ್ರ ಹೆಚ್ಚು ಇರುತ್ತದೆ ಎಂದಲ್ಲ, ಪುರುಷರಲ್ಲಿಯೂ ಇರುತ್ತದೆ. ಆದರೆ ಖರ್ಚು ಮಾಡುವ ವಿಷಯ ಬಂದಾಗ ಮಾತ್ರ ಮಹಿಳೆಯರು ಹಿಂದೇಟು ಹಾಕದೇ ಇರುವುದೇ ಇದರ ಗುಟ್ಟು. ಸೌಂದರ್ಯ ರಹಸ್ಯ- ಇದು ಮಹಿಳೆಯರಿಗೆ ಮಾತ್ರ..!

ಅಷ್ಟೇ ಅಲ್ಲದೆ ಇದರ ಜಾಹೀರಾತುಗಳಿಗಾಗಿ ವ್ಯಯಿಸುವ ಭಾರೀ ಮೊತ್ತದ ಹಣ ಮತ್ತು ಅಬ್ಬರದ ಪ್ರಚಾರದ ಕಾರಣ ಇವುಗಳನ್ನು ಕೊಳ್ಳದೇ ಇದ್ದರೆ ತಮ್ಮ ಸೌಂದರ್ಯ ಎಲ್ಲಿ ಹಾಳಾಗುತ್ತದೋ ಎಂಬ ಮಿಥ್ಯೆಯನ್ನೂ ಮೂಡಿಸಿವೆ, ಸತತ ಪುನರಾವರ್ತಿಸುವ ಜಾಹೀರಾತುಗಳ ಮೂಲಕ ಈ ಮಿಥ್ಯೆಯನ್ನೇ ಸತ್ಯವಾಗಿಸಿಯೂ ಇವೆ. ಜಾಹೀರಾತಿನಲ್ಲಿ ಹೇಳಿದ ಪ್ರಕಾರ ಕೊಂಚವಾದರೂ ಕೆಲಸ ಮಾಡಲೇಬೇಕಲ್ಲವೇ, ಅದಕ್ಕಾಗಿ ಕೆಲವು ಪ್ರಬಲ ರಾಸಾಯನಿಕಗಳನ್ನೂ ಬಳಸಲಾಗಿರುತ್ತದೆ. ಇವು ಪ್ರಥಮ ಕೆಲವು ಪ್ರಯೋಗಗಳಲ್ಲಿ ಉತ್ತಮ ಫಲ ನೀಡಿದೆ ಎಂಬ ಭ್ರಮೆ ಮೂಡಿಸಿದರೂ ಕಾಲಕ್ರಮೇಣ ಇವುಗಳ ಪ್ರಭಾವ ವಿಪರೀತವಾಗಿರಬಹುದು. ಕೆಲವು ಅಡ್ಡಪರಿಣಾಮಗಳು ಮುಖದ ಚರ್ಮ, ತಲೆಗೂದಲಿಗೆ ಶಾಶ್ವತ ಹಾನಿಯನ್ನೂ ಮಾಡಬಹುದು.

Home Remedies To Make Your Face Glowing & Beautiful

ಆದರೆ ಇದಕ್ಕೂ ಉತ್ತಮವಾದ, ಯಾವುದೇ ಅಡ್ಡಪರಿಣಾಮಗಳಿಲ್ಲದ, ಸುಲಭವಾಗಿ ಮನೆಯಲ್ಲಿಯೇ ತಯಾರಿಸಬಹುದಾದ ಪ್ರಸಾಧನಗಳನ್ನು ಭಾರತದಲ್ಲಿ ನೂರಾರು ವರ್ಷಗಳಿಂದ ಆಚರಿಸುತ್ತಾ ಬರಲಾಗಿದೆ. ಇವುಗಳ ಪರಿಣಾಮ ಕೊಂಚ ನಿಧಾನ ಎಂಬ ಒಂದೇ ಕಾರಣ ಬಿಟ್ಟರೆ ಇವನ್ನು ಉಪಯೋಗಿಸದೇ ಇರಲು ಯಾವುದೇ ಕಾರಣ ಉಳಿಯುವುದಿಲ್ಲ. ಆದ್ದರಿಂದ ರಾಸಾಯನಿಕಗಳ ಬದಲು ಸುಲಭ ಮನೆಮದ್ದುಗಳನ್ನು ಉಪಯೋಗಿಸುವುದೇ ಜಾಣತನದ ಮತ್ತು ಆರೋಗ್ಯಕರ ಕ್ರಮವಾಗಿದೆ. ಬನ್ನಿ, ಮುಖದ ಚರ್ಮಕ್ಕಾಗಿ ಇಂತಹ ಕೆಲವು ಸುಲಭ ಮನೆಮದ್ದುಗಳನ್ನು ವಿಧಾನಗಳನ್ನು ನೋಡೋಣ: ಬಾಳೆ ಹಣ್ಣಿನ ಸಿಪ್ಪೆಯ 10 ಅದ್ಭುತ ಪ್ರಯೋಜನಗಳು

ಬಾಳೆಹಣ್ಣಿನ ಸಿಪ್ಪೆ

ಬಾಳೆಹಣ್ಣುಗಳನ್ನು ತಿಂದ ಬಳಿಕ ಎಸೆಯುವ ಸಿಪ್ಪೆಯಲ್ಲಿಯೂ ಹಲವಾರು ಪೋಷಕಾಂಶಗಳಿದ್ದು ಮುಖದ ಚರ್ಮಕ್ಕೆ ಇದು ಅದ್ಭುತವಾದ ಆರೈಕೆ ನೀಡಬಲ್ಲುದು. ಹಣ್ಣಾಗಿ ಚುಕ್ಕೆ ಬಂದ ಸಿಪ್ಪೆಗಳ ಒಳಭಾಗದಲ್ಲಿ ಬಿಳಿಯ ದಾರದಂತೆ ಉದ್ದಕ್ಕೆ ಇರುವ ಭಾಗವನ್ನು ನಿಧಾನವಾಗಿ ಬಿಡಿಸಿ ಸಂಗ್ರಹಿಸಿ. ಈ ಬಿಳಿಭಾವನ್ನು ಚೆನ್ನಾಗಿ ಕಿವುಚಿ ಲೇಪನ ತಯಾರಿಸಿ. ಈ ಲೇಪನವನ್ನು ಮುಖ, ಕುತ್ತಿಗೆ ಮತ್ತು ಕೈಗಳಿಗೆ (ಬಿಸಿಲು ತಾಗುವ ಭಾಗ) ಹಚ್ಚಿ ಸುಮಾರು ಇಪ್ಪತ್ತು ನಿಮಿಷ ಹಾಗೇ ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಇದರಿಂದ ಮುಖದ ಚರ್ಮ ಬೆಳಗಲು ತೊಡಗುತ್ತದೆ.

ಒಣಗಿಸಿ ಪುಡಿಮಾಡಿದ ಕಿತ್ತಳೆಯ ಸಿಪ್ಪೆ

ಕಿತ್ತಳೆ ಹಣ್ಣುಗಳನ್ನು ತಿಂದ ಬಳಿಕ ಇದರ ಸಿಪ್ಪೆಯನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ. ಒಂದು ದಿನ ಒಳಭಾಗ ಮೇಲಿರುವಂತೆ, ಮರುದಿನ ಹೊರಭಾರ ಮೇಲಿರುವಂತೆ ಒಣಗಿಸಿ ತೇವಾಂಶವೆಲ್ಲಾ ಹೋಗುವಂತೆ ಮಾಡಿ. ಚೆನ್ನಾಗಿ ಒಣಗಿದ ಬಳಿಕ ಇದನ್ನು ಕುಟ್ಟಿ ಪುಡಿ ಮಾಡಿ ಬಾಟಲಿಯಲ್ಲಿ ಸಂಗ್ರಹಿಸಿ. ಈ ಪುಡಿಯನ್ನು ಕೊಂಚ ಹಾಲಿನಲ್ಲಿ ಬೆರೆಸಿ ಲೇಪನ ಮಾಡಿಕೊಂಡು ಮುಖಕ್ಕೆ ಹಚ್ಚಿಕೊಂಡು ಸುಮಾರು ಇಪ್ಪತ್ತು ನಿಮಿಷಗಳ ಬಳಿಕ ತಣ್ಣೀರಿನಲ್ಲಿ ತೊಳೆದುಕೊಳ್ಳಿ. ಇದರಿಂದ ಮುಖದ ನೆರಿಗೆಗಳು, ಮೊಡವೆ ಮತ್ತು ಚರ್ಮದ ಇತರ ಚಿಕ್ಕಪುಟ್ಟ ತೊಂದರೆಗಳು ಇಲ್ಲವಾಗುತ್ತವೆ. ಮುಖದ ಅಂದಕ್ಕೆ-ಕಿತ್ತಳೆ ಹಣ್ಣಿನ ಸಿಪ್ಪೆಯ ಫೇಸ್ ಪ್ಯಾಕ್

ಸಕ್ಕರೆ, ಉಪ್ಪು ಮತ್ತು ಆಲಿವ್ ಎಣ್ಣೆ
ಈ ಮೂರೂ ಸಾಮಾಗ್ರಿಗಳು ಚರ್ಮಕ್ಕೆ ಅಧ್ಬುತವಾದ ಆರೈಕೆ ನೀಡಬಲ್ಲವು. ಅಗತ್ಯವಿದ್ದರೆ ಕೊಂಚ ಹಾಲು ಮತ್ತು ಜೇನನ್ನೂ ಸೇರಿಸಬಹುದು. ಸಮಪ್ರಮಾಣದಲ್ಲಿ ಈ ಮೂರನ್ನೂ ಬೆರೆಸಿ ನಯವಾದ ಲೇಪನ ತಯಾರಿಸಿ ಮುಖಕ್ಕೆ ಹಚ್ಚಿಕೊಂಡು ಸುಮಾರು ಇಪ್ಪತ್ತು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ಚರ್ಮದ ಮೇಲಿರುವ ಸತ್ತ ಜೀವಕೋಶಗಳು ನಿವಾರಣೆಯಾಗಿ ಮುಖದ ಕಾಂತಿ ಹೆಚ್ಚುತ್ತದೆ.

ಲಿಂಬೆರಸ ಮತ್ತು ಜೇನು
ಸಮಪ್ರಮಾಣದಲ್ಲಿ ಲಿಂಬೆರಸ ಮತ್ತು ಜೇನು ಬೆರೆಸಿ ಹಚ್ಚಿಕೊಂಡು ಇಪ್ಪತ್ತು ನಿಮಿಷ ಬಿಟ್ಟು ತೊಳೆದುಕೊಳ್ಳಿ. ಕೊಂಚ ಉರಿ ಅನಿಸಿದರೆ ಇನ್ನೂ ಬೇಗನೇ ನಿವಾರಿಸಿ. ಈ ವಿಧಾನದಿಂದಲೂ ಚರ್ಮದ ಕಾಂತಿ ಹೆಚ್ಚುತ್ತದೆ. ಆದರೆ ಒಡೆದ ಮೊಡವೆ ಇದ್ದರೆ ಹಚ್ಚಬೇಡಿ.

ಐಸ್ ತುಂಡುಗಳು
ಎಣ್ಣೆ ಚರ್ಮದವರಿಗೆ ಈ ವಿಧಾನ ಹೆಚ್ಚು ಸೂಕ್ತವಾಗಿದೆ. ಒಂದು ಐಸ್ ತುಂಡಿನಿಂದ ಮುಖದ ಚರ್ಮವನ್ನು ನೇರವಾಗಿ ಉಜ್ಜಿಕೊಳ್ಳುತ್ತಾ ಹೋಗಿ. ಇದರಿಂದ ಚರ್ಮದ ಸೂಕ್ಷ್ಮರಂಧ್ರಗಳು ತೆರೆದು ಕಲ್ಮಶಗಳು ಹೊರಬರಲು ಸಾಧ್ಯವಾಗುತ್ತದೆ. ಅಲ್ಲದೇ ರಕ್ತಪರಿಚಲನೆ ಹೆಚ್ಚುವ ಮೂಲಕ ಕಾಂತಿ ಹೆಚ್ಚುತ್ತದೆ ಹಾಗೂ ಚರ್ಮದ ಸೆಳೆತವೂ ಹೆಚ್ಚುತ್ತದೆ.

ಶಿಯಾ ಬೆಣ್ಣೆ (Shea butter)

ಕೊಂಚ ಕಮಟು ವಾಸನೆಯನ್ನು ತಾಳಿಕೊಳ್ಳಲು ಸಾಧ್ಯವಾದರೆ ಶಿಯಾ ಬಟರ್ ಒಂದು ಉತ್ತಮ ಸೌಂದರ್ಯ ವರ್ಧಕವಾಗಿದೆ. ಈ ಬೆಣ್ಣೆಯಿಂದ ರಾತ್ರಿ ಮಲಗುವ ಮುನ್ನ ಮುಖದ ಚರ್ಮವನ್ನು ನವಿರಾಗಿ ಮಸಾಜ್ ಮಾಡಿ ಹಚ್ಚಿಕೊಳ್ಳಿ, ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ಮುಖದ ಚರ್ಮ ಕಾಂತಿಯುಕ್ತ, ಸೌಮ್ಯ ಹಾಗೂ ನುಣುಪಾಗುತ್ತದೆ.
English summary

Simple Tips to Get Clear Glowing Skin Naturally

Most of our markets and malls are filled with different expensive facial products ironically most of them are made with harmful chemicals that end up damaging your skin. You should know you can boycott the use of these harmful products with simple and natural home made treatments and still get the flawless face of life.. Here are some of my special home treatment enjoy!
X
Desktop Bottom Promotion