Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವಯಸ್ಸಿನ ಮೇಲೆ ನಿರ್ಬಂಧ ಹೇರುವ ಅದ್ಭುತ ಹಣ್ಣು ದಾಳಿಂಬೆ
ಹಣ್ಣುಗಳು ನಮ್ಮ ದೈನಂದಿನ ಜೀವನದಲ್ಲಿ ಶಕ್ತಿಯನ್ನು ಪೂರೈಕೆ ಮಾಡುವ ಮೂಲವಾಗಿದೆ ಎಂಬುದಾಗಿ ನಮಗೆಲ್ಲಾ ತಿಳಿದಿರುವ ವಿಚಾರವಾಗಿದೆ. ದೈನಂದಿನ ಉಪಹಾರ, ಮಧ್ಯಾಹ್ನದೂಟ ಮತ್ತು ರಾತ್ರಿಯೂಟದ ನಡುವೆ ಕೂಡ ಹಣ್ಣುಗಳನ್ನು ಸೇವಿಸಿ ಎಂಬುದಾಗಿಯೇ ವೈದ್ಯರು ಸಲಹೆ ನೀಡುತ್ತಾರೆ. ಹೆಚ್ಚುವರಿ ಪ್ರೊಟೀನ್ ಮತ್ತು ವಿಟಮಿನ್ಗಳನ್ನು ಪ್ರತಿಯೊಂದು ಹಣ್ಣೂ ಹೊಂದಿದ್ದು ನಮಗೆ ಹೆಚ್ಚುವರಿ ಶಕ್ತಿಯನ್ನು ರೋಗನಿರೋಧಕ ಸಾಮರ್ಥ್ಯವನ್ನು ಒದಗಿಸುತ್ತದೆ.
ಇಂದಿನ ಲೇಖನದಲ್ಲಿ ಸ್ನಾಯು ಸಾಮರ್ಥ್ಯ ಮತ್ತು ವಯಸ್ಸಾಗುವಿಕೆಯನ್ನು ತಡೆಗಟ್ಟಲು ನೆರವಾಗಿರುವ ದಾಳಿಂಬೆಯ ವಿಶೇಷತೆಯನ್ನು ತಿಳಿದುಕೊಳ್ಳೋಣ. ದಾಳಿಂಬೆ ಜ್ಯೂಸ್ ಸೇವನೆಯು ಯುರೋಲಿತಿನ್ ಎ ಯನ್ನು ಉತ್ಪಾದಿಸಲು ನೆರವಾಗಲಿದೆ, ಇದು ಒಂದು ಅಣುವಾಗಿ ಕಾರ್ಯನಿರ್ವಹಿಸಲಿದೆ.

ಇದು ಸ್ನಾಯು ಕೋಶಕ್ಕೆ ಶಕ್ತಿಯನ್ನು ನೀಡಿ ವಯಸ್ಸಾಗುವಿಕೆಯಿಂದ ತಡೆಗಟ್ಟುತ್ತದೆ. ನಮಗೆ ವಯಸ್ಸಾದಂತೆ ನಮ್ಮ ಕೋಶಗಳು ಮೈಟೊಕಾಂಡಿಯವನ್ನು ಮರುಬಳಕೆ ಮಾಡಲು ಹೋರಾಡುತ್ತದೆ, ಅಂತೆಯೇ ಅವುಗಳಿಗೆ ಪ್ರಮುಖ ಕಾರ್ಯನಿರ್ವಹಣೆಯನ್ನು ಸಾಧಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದು ಕೋಶದಲ್ಲಿ ಒಟ್ಟುಗೂಡುತ್ತದೆ.
ಈ ವಿಘಟನೆಯು ಹಲವಾರು ಕೋಶಗಳ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ, ಸ್ನಾಯುಗಳು ಇದರಲ್ಲಿ ಸೇರಿಕೊಂಡಿವೆ, ವರ್ಷಗಳಾಗುತ್ತಿದಂತೆ ಇದು ದುರ್ಬಲಗೊಂಡು ಹಲವಾರು ವಯಸ್ಸು ಸಂಬಂಧಿ ರೋಗಗಳನ್ನು ದಯಪಾಲಿಸುತ್ತದೆ. ಯುರೋಲಿತಿನ್ ಎ ಕೋಶಗಳ ಸಾಮರ್ಥ್ಯವನ್ನು ಮರುಸ್ಥಾಪಿಸುತ್ತದೆ ಇದನ್ನು ಮೈಟೊಕಾಂಡ್ರಿಯಲ್ ಕ್ಲೀನ್ ಅಪ್ ಪ್ರೊಸೆಸ್ ಎಂಬುದಾಗಿ ಕೂಡ ಕರೆಯಲಾಗುತ್ತದೆ ಇಲ್ಲದಿದ್ದರೆ ಇದನ್ನು ಮೈತಿಪಜಿ ಎಂಬುದಾಗಿ ಕರೆಯಲಾಗುತ್ತದೆ, ಎಂಬುದಾಗಿ ಸ್ವಿಡ್ಜರ್ಲ್ಯಾಂಡ್ನ ಪೇಟ್ರಿಕ್ ಅಬಿಸಿಚರ್ ತಿಳಿಸುತ್ತಾರೆ.
ಸಂಪೂರ್ಣ ಸ್ವಾಭಾವಿಕ ದ್ರವ್ಯವಾಗಿರುವ ಇದು, ಪ್ರಬಲವಾಗಿದೆ ಮತ್ತು ಸಾಮರ್ಥ್ಯವನ್ನು ಅಳೆಯಬಹುದಾಗಿದೆ ಎಂಬುದಾಗಿ ಪೇಟ್ರಿಕ್ ತಿಳಿಸುತ್ತಾರೆ. ಅಧ್ಯಯನಕ್ಕಾಗಿ, ತಂಡವು ತಮ್ಮ ಕಲ್ಪನೆಯನ್ನು ನೆಮಾಟೋಡ್, ಸಿ ಅಲೆಗನ್ಸ್ ಆಧಾರದ ಮೇಲೆ ಮೇಲೆ ಅಳೆದಿದ್ದು, 8-10 ದಿನಗಳ ನಂತರ ಇದನ್ನು ಹಿರಿಯ ಎಂಬುದಾಗಿ ಪರಿಗಣಿಸಲಾಗಿದೆ.
ಯುರೋಲಿತಿನ್ ಎ ಗೆ ಹುಳುಗಳನ್ನು ಒಡ್ಡಿದಾಗ ನಿಯಂತ್ರಿತ ಗುಂಪಿಗಿಂತ ಇದು 45% ದಷ್ಟು ಏರಿಕೆಯಾಗಿದೆ. ದಂಶಕಗಳ ಅಧ್ಯಯನದಲ್ಲಿ, ಹಿರಿಯ ಇಲಿಗಳೆಂದರೆ 2 ವರ್ಷಗಳದ್ದನ್ನು, ಯುರೋಲಿತಿನ್ ಎ ಗೆ ಒಡ್ಡಿದಾಗ ನಿಯಂತ್ರಿತ ಹಿರಿ ಇಲಿಗಳಿಗಿಂತ 42% ಉತ್ತಮ ಸಹಿಷ್ಣುತೆಯು ಕಂಡುಬಂದಿದೆ. ಸರ್ವತೋಮುಖ ಆರೋಗ್ಯಕ್ಕಾಗಿ ದಾಳಿಂಬೆ ಸೇವಿಸಿ ನೋಡಿ!
ಅದಾಗ್ಯೂ, ದಾಳಿಂಬೆಯು ಅದ್ಭುತ ಅಣುವನ್ನು ಮಾತ್ರ ಒಳಗೊಂಡಿರದೇ ಪೂರ್ವಗಾಮಿಯಾಗಿದೆ ಎಂಬುದಾಗಿ ಕೂಡ ಸಂಶೋಧಕರು ತಿಳಿಸಿದ್ದಾರೆ. ಪ್ರಾಣಿಗಳ ತಳಿ ಮತ್ತು ಗಟ್ ಮೈಕ್ರೊಬಯಾಮ್ನಲ್ಲಿರುವ ಫ್ಲೋರಾವನ್ನು ಆಧರಿಸಿ ಯುರೋಲಿತಿನ್ ಎ ಉತ್ಪನ್ನ ಬೇರೆ ಬೇರಯದಾಗಿರುತ್ತದೆ. ಸರಿಯಾದ ಸೂಕ್ಷ್ಮಜೀವಿಗಳು ಇಲ್ಲದೇ ಇದ್ದಾಗ ಯುರೋಲಿತಿನ್ ಎ ಉತ್ಪತ್ತಿಯಾಗುವುದಿಲ್ಲ ಎಂಬುದಾಗಿ ಸಂಶೋಧಕರು ತಿಳಿಸಿದ್ದಾರೆ. ಯುರೋಲಿತಿನ್ ಎ ಯು ನಮ್ಮ ಕರುಳಗಳಲ್ಲಿ ಉತ್ಪತ್ತಿಯಾಗುತ್ತದೆ, ನಾವು ಏನು ತಿನ್ನುತ್ತೇವೆಯೋ ಅದನ್ನು ಮುರಿಯಲು ಬ್ಯಾಕ್ಟೀರಿಯಾಗೆ ಸಾಧ್ಯವಾಗುತ್ತದೆ.
ಜೀರ್ಣಕ್ರಿಯೆಯಾಗುವಾಗ, ಉತ್ಪಾದನೆಯಾಗುವ ವಸ್ತುವುದು ನಮಗೆ ಪ್ರಯೋಜನಕಾರಿಯಾಗಿರುತ್ತದೆ, ನೈಸರ್ಗಿಕ ಆಯ್ಕೆಯಲ್ಲಿ ಬ್ಯಾಕ್ಟೀರಿಯಾ ಮತ್ತು ಅವುಗಳ ಪರಪೋಷಿಯನ್ನು ಒಳಗೊಂಡಿರುತ್ತದೆ. ಎಂಬುದಾಗಿ ಸ್ವಿಜರ್ಲ್ಯಾಂಡ್ನ ಒಂದು ಜೀವ ವಿಜ್ಞಾನ ಕಂಪೆನಿಯ ಸಿಇಒ ರಿಂಚ್ ಅಮೆಜಿಂಟೀಸ್ ತಿಳಿಸುತ್ತಾರೆ. ದಾಳಿಂಬೆ ಆರೋಗ್ಯಕ್ಕೆ ಮಾತ್ರವಲ್ಲ, ಸೌಂದರ್ಯಕ್ಕೂ ಬೇಕು
ಇವರು ಹೇಳುವಂತೆ ಯುರೋಲಿತಿನ್ ಬರಿಯ ದಾಳಿಂಬೆಯಲ್ಲಿ ಮಾತ್ರವಲ್ಲದೆ ಸಣ್ಣ ಸಣ್ಣ ನಟ್ಸ್ ಮತ್ತು ಬೆರ್ರಿಗಳಲ್ಲೂ ಇರುತ್ತದೆ. ಈ ಅಧ್ಯಯನವು ನೇಚರ್ ಮೆಡಿಸಿನ್ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾಗಿದ್ದು ಮಾನವರ ಮೇಲೆ ಶೋಧನೆಯನ್ನು ನಡೆಸಲಾಗುತ್ತಿದೆ.
ಮೂಲ- ಐಎಎನ್‍ಎ



Click it and Unblock the Notifications


