For Quick Alerts
ALLOW NOTIFICATIONS  
For Daily Alerts

ಸೌಂದರ್ಯ ವೃದ್ಧಿಸಬೇಕೇ? ಇಲ್ಲಿದೆ ನೋಡಿ ನೈಸರ್ಗಿಕ ಔಷಧಿ!

By Hemanth
|

ವ್ಯಕ್ತಿಯೊಬ್ಬನ ತ್ವಚೆಯನ್ನು ನೋಡಿದ ತಕ್ಷಣ ಆತ ಆರೋಗ್ಯವಂತನಾಗಿದ್ದಾನೆಯಾ ಎಂದು ಹೇಳಬಹುದಂತೆ. ತ್ವಚೆಗೆ ಅಷ್ಟು ಮಹತ್ವವಿದೆ. ನಿಮ್ಮ ತ್ವಚೆಯಿಂದಲೇ ದೇಹದ ಸೌಂದರ್ಯವೂ ಎದ್ದು ಕಾಣುತ್ತದೆ. ಚರ್ಮದ ಆರೈಕೆ ಮಾಡಲು ಹಲವಾರು ರೀತಿಯ ಕ್ರೀಮ್, ಲೋಷನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಕೆಲವರು ಇದನ್ನು ಬಳಸಿಕೊಂಡು ಚರ್ಮದ ಆರೈಕೆ ಮಾಡುತ್ತಾರೆ. ಆದರೆ ಇದರಲ್ಲಿ ಕೆಲವೊಂದು ರಾಸಾಯನಿಕಗಳನ್ನು ಬಳಸಿರುವುದರಿಂದ ಅದು ಮುಂದೆ ಚರ್ಮದ ಮೇಲೆ ದುಷ್ಪರಿಣಾಮವನ್ನು ಬೀರಬಹುದು.

Natural Beauty Products: Try Them And Get A Glowing Skin

ಚರ್ಮದಲ್ಲಿನ ನೆರಿಗೆ, ಕಲೆಗಳು ಮಾಯವಾಗಬಹುದಾದರೂ ಇದರ ಅಡ್ಡಪರಿಣಾಮಗಳ ಬಗ್ಗೆ ಯೋಚಿಸುವುದು ಅತೀ ಅಗತ್ಯ. ಇದಕ್ಕಾಗಿಯೇ ನಾವು ನೈಸರ್ಗಿಕ ಹಾಗೂ ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ಚರ್ಮದ ಆರೈಕೆ ಮಾಡಬಲ್ಲ ಮನೆಮದ್ದನ್ನು ನಿಮಗೆ ತಿಳಿಸಿಕೊಡಲಿದ್ದೇವೆ. ಮನೆಯಲ್ಲೇ ಮಾಡಿದ ಈ ಸೌಂದರ್ಯವರ್ಧಕಗಳನ್ನು ಬಳಸುವುದರಿಂದ ನಿಮ್ಮ ತ್ವಚೆ ಕಾಂತಿಯುತ ಮತ್ತು ಯೌವನಭರಿತವಾಗಿ ಕಾಣಬಹುದು. ಇಂತಹ ಬ್ಯೂಟಿ ಟಿಪ್ಸ್ ಯಾವಾಗಲೂ ನಿಮ್ಮ ಪಾಕೆಟ್‌‌ನಲ್ಲಿರಲಿ!

ಬಾದಾಮಿ ಹುಡಿ, ಜೇನು ಮತ್ತು ಬಿಸಿ ಹಾಲಿನ ಮಿಶ್ರಣವನ್ನು ಚರ್ಮಕ್ಕೆ ಹಚ್ಚಿಕೊಳ್ಳುವುದರಿಂದ ನಿಮ್ಮ ತ್ವಚೆಯ ಬಣ್ಣ ಹೊಳೆಯುವುದು. ಇದು ಒಣಗಿರುವ ಚರ್ಮಕ್ಕೆ ತೇವಾಂಶವನ್ನು ನೀಡಿ ಚರ್ಮ ಕಾಂತಿಯನ್ನು ಪಡೆಯಲು ನೆರವಾಗುವುದು. ನೆಲಕಡಲೆ ಮತ್ತು ಹಾಲಿನ ಮಿಶ್ರಣವನ್ನು ಹಚ್ಚಿಕೊಂಡರೆ ಜಿಡ್ಡಿನ ಚರ್ಮದವರು ಕಾಂತಿಯನ್ನು ಪಡೆಯಬಹುದಾಗಿದೆ. ಬಾದಾಮಿ ಎಣ್ಣೆಯಲ್ಲಿದೆ 6 ಸೌಂದರ್ಯವರ್ಧಕ ಗುಣಗಳು

ನೆಲಕಡಲೆ, ಲಿಂಬೆರಸ, ಹಳದಿ ಮತ್ತು ಮೊಸರಿನಿಂದ ಮಾಡಿರುವ ಪೇಸ್ಟ್‌ನ್ನು ಚರ್ಮಕ್ಕೆ ಹಚ್ಚಿಕೊಳ್ಳುವುದರಿಂದ ಚರ್ಮವು ಬಿಳಿ ಬಣ್ಣವನ್ನು ಪಡೆದು ಹೊಳೆಯುವುದು. ಕುದಿಸದೆ ಇರುವ ಹಾಲನ್ನು ಚರ್ಮಕ್ಕೆ ಹಚ್ಚಿಕೊಂಡು ಮಸಾಜ್ ಮಾಡಿಕೊಂಡರೆ ಕಾಂತಿ ಬರುವುದು. ಇದು ತುಂಬಾ ಸಾಂಪ್ರದಾಯಿಕ ಹಾಗೂ ಪರಿಣಾಮಕಾರಿ ಸೌಂದರ್ಯ ವರ್ಧಕ ವಿಧಾನವಾಗಿದೆ. ಸಾಸಿವೆ ಹುಡಿ ಮತ್ತು ಹಾಲಿನ ಮಿಶ್ರಣವನ್ನು ಚರ್ಮಕ್ಕೆ ಹಚ್ಚಿಕೊಂಡರೆ ಕಲೆಗಳು ನಿವಾರಣೆಯಾಗುವುದು.

ಸೂರ್ಯನ ಕಿರಣಗಳಿಂದ ಸುಟ್ಟ ಚರ್ಮಕ್ಕೆ ಇಲ್ಲಿ ಕೆಲವೊಂದು ಮದ್ದುಗಳನ್ನು ಸೂಚಿಸಲಾಗಿದೆ. ಚರ್ಮದ ಮೇಲೆ ಸೂರ್ಯನ ಕಿರಣಗಳಿಂದ ಸುಟ್ಟ ಕಲೆಗಳು ಆಗಿದ್ದರೆ ಅಲೋವೆರಾದ ಜ್ಯೂಸ್ ನಿಂದ ಚರ್ಮವನ್ನು ಉಜ್ಜಿಕೊಳ್ಳಿ. ಆ್ಯಪಲ್ ಸೀಡರ್ ವಿನೇಗರ್ ಕೂಡ ಸೂರ್ಯನಿಂದ ಸುಟ್ಟ ಚರ್ಮಕ್ಕೆ ಅತ್ಯಂತ ನೈಸರ್ಗಿಕ ಮದ್ದು. ಎರಡು ಚಮಚ ಮಜ್ಜಿಗೆ ಮತ್ತು ಸ್ವಲ್ಪ ಟೊಮೆಟೊ ರಸವನ್ನು ಹಾಕಿಕೊಂಡು ಮೈಗೆ ಹಚ್ಚಿಕೊಂಡರೆ

ಸೂರ್ಯನಿಂದ ಸುಟ್ಟ ಚರ್ಮಗಳು ನಿವಾರಣೆಯಾಗುವುದು. ನೆರಿಗೆಯನ್ನು ದೂರ ಮಾಡಲು ಹಲವಾರು ರೀತಿಯ ವಿಧಾನಗಳಿವೆ. ತೆಂಗಿನ ಎಣ್ಣೆಯನ್ನು ಮೈಗೆ ಚೆನ್ನಾಗಿ ತಿಕ್ಕಿಕೊಳ್ಳಬೇಕು. ಅನಾನಸಿನ ಸಿಪ್ಪೆಯನ್ನು ಚರ್ಮಕ್ಕೆ ಸರಿಯಾಗಿ ತಿಕ್ಕಿಕೊಂಡರೆ ನೆರಿಗೆಗೆಳು ದೂರವಾಗಿ ಚರ್ಮವು ಕಾಂತಿಯುತವಾಗುವುದು. ಮೊಟ್ಟೆಯ ಬಿಳಿಭಾಗದ ಚಿಕಿತ್ಸೆ-ಮುಖದ ನೆರಿಗೆ ಮಂಗಮಾಯ!

English summary

Natural Beauty Products: Try Them And Get A Glowing Skin

Everyone desires for a clean, healthy and beautiful skin. Appropriate hygiene and skincare techniques will help you to possess such a wonderful skin. So boldsky kannada recommend home made beauty recipes and herbal cosmetics that improve the quality of the skin in a natural way and have no harmful side effects. Here are some simple and effective home made beauty recipes that can help you look younger and beautiful.
X
Desktop Bottom Promotion