For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ಮುಖದ ಸೌಂದರ್ಯಕ್ಕೆ ಒಂದಿಷ್ಟು ಟಿಪ್ಸ್

By Arshad
|

ನಮ್ಮ ಚರ್ಮದ ಆರೈಕೆಗೆ ಆರ್ದ್ರತೆ ಅತ್ಯಂತ ಅವಶ್ಯಕ. ಆರ್ದ್ರತೆ ಇಲ್ಲದಿದ್ದರೆ ಚರ್ಮ ತೀರಾ ಒಣಗಿ ಸೀಳತೊಡಗುತ್ತದೆ. ಮಳೆಗಾಲದಲ್ಲಿಯೂ ಇಷ್ಟೊಂದು ಮಳೆಯಾಗುತ್ತಿದ್ದರೂ ಚರ್ಮ ಸೀಳುವುದು ಅಥವಾ ಪರೆ ಏಳುವುದು ಮೊದಲಾದ ತೊಂದರೆಗೆ ಒಳಗಾಗುತ್ತದೆ. ಇದಕ್ಕೆ ಪ್ರಮುಖ ಕಾರಣ ಮಳೆಗಾಲದಲ್ಲಿ ಮಳೆ ಇದ್ದರೂ ಗಾಳಿಯಲ್ಲಿ ಆರ್ದ್ರತೆ ಇಲ್ಲದಿರುವುದು. ಅಂದರೆ ನೀರಹನಿ ಆವಿಯಾಗದೇ ಗಾಳಿಗೆ ಬರುವುದೇ ಇಲ್ಲ. ಹಾಗಾಗಿ ಗಾಳಿ ಒಣಗಿರುತ್ತದೆ. ಬಟ್ಟೆಗಳು ಒಣಗದಿರಲೂ ಇದೇ ಕಾರಣ.

Home Remedies to Brighten Dull Skin during Monsoon

ಆದರೆ ಈ ಕೊರತೆಯಿಂದ ಚರ್ಮ ಕಳೆಗುಂದುವುದು ಮಾತ್ರವಲ್ಲ, ಚಿಕ್ಕ ಗುಳ್ಳೆಗಳು ಏಳುವುದು, ಮೊಡವೆಗಳು ಮತ್ತು ಚರ್ಮ ಕೆಂಪಗಾಗುವ ತೊಂದರೆಯನ್ನೂ ಎದುರಿಸಬೇಕಾಗುತ್ತದೆ. ಇದಕ್ಕೆ ತಕ್ಕ ಮದ್ದು ಎಂದರೆ ದಿನಕ್ಕೆ ಕನಿಷ್ಠ ಎಂಟು ಲೋಟಗಳಾದರೂ ನೀರು ಕುಡಿಯುವುದು.

ಆದರೆ ಮಳೆಗಾಲದಲ್ಲಿ ಬಾಯಾರಿಕೆಯಾಗದ ಕಾರಣ ನಾವೆಲ್ಲಾ ಸೋಮಾರಿಗಳಾಗಿ ನೀರು ಕುಡಿಯದೇ ಚರ್ಮ ಒಣಗಲು ಪ್ರತ್ಯಕ್ಷರಾಗಿ ಕಾರಣರಾಗುತ್ತೇವೆ. ಆಯ್ತು, ಸೋಮಾರಿಗಳಾದ ಪರಿಣಾಮವಾಗಿ ಚರ್ಮ ಒಣಗಿದೆ, ಇದಕ್ಕೇನು ಪರಿಹಾರ ಎಂದು ಕೇಳಿದವರಿಗೆ ಇಲ್ಲಿ ಉತ್ತರ ನೀಡಲಾಗಿದೆ, ಮುಂದೆ ಓದಿ...

ಹುಣಸೆಹುಳಿಯ ನೀರು
ಕೊಂಚ ಹುಣಸೆಹುಳಿಯನ್ನು ನೀರಿನಲ್ಲಿ ಕಿವುಚಿ (ಕದಡುವುದಲ್ಲ, ಕೊಂಚ ನೀರು ಬೆರೆಸಿ ಮಡ್ಡಿಯಾಗಿಸಿದರೆ ಸಾಕು) ಇದನ್ನು ಮುಖ, ಕೈ, ಪಾದ, ಕುತ್ತಿಗೆಯ ಚರ್ಮದ ಮೇಲೆ ಸವರಿ ಒಣಗಲು ಬಿಡಿ. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಮತ್ತು ವಿಟಮಿನ್ನುಗಳು ಮುಂದಿನ ಕೆಲಸ ನೋಡಿಕೊಳ್ಳುತ್ತವೆ. ಇದರಿಂದ ಆರ್ದ್ರತೆಯ ಕೊರತೆಯಿಂದಾಗಿ ಬಾಡಿದ್ದ ಚರ್ಮ ಶೀಘ್ರವೇ ಮೊದಲಿನ ಕಾಂತಿ ಪಡೆಯುತ್ತದೆ. ತ್ವಚೆಯ ಸರ್ವ ರೋಗಕ್ಕೂ- ಹುಣಸೆ ಹಣ್ಣಿನ ಫೇಸ್ ಪ್ಯಾಕ್

ಜೇನು ಮತ್ತು ಸಕ್ಕರೆಯಿಂದ ಉಜ್ಜಿ
ಸಮಪ್ರಮಾಣದಲ್ಲಿ ಕೊಂಚ ಸಕ್ಕರೆ ಮತ್ತು ಜೇನನ್ನು ಬೆರೆಸಿ ನಯವಾಗಿ ಮುಖದ ಚರ್ಮದ ಮೇಲೆ ಉಜ್ಜುತ್ತಾ ಬನ್ನಿ. ಇದರಿಂದ ಮುಖದ ಮೇಲಿನ ಸತ್ತ ಜೀವಕೋಶಗಳು ಸುಲಭವಾಗಿ ನಿವಾರಣೆಯಾಗುತ್ತವೆ. ಕೊಂಚ ಹೊತ್ತಿನ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ತ್ವಚೆಯ ಅಂದವನ್ನು ಹೆಚ್ಚಿಸುವ ಜೇನು ಮತ್ತು ಹಾಲಿನ ಪ್ಯಾಕ್

ಪೀಚ್ ಮತ್ತು ಟೊಮೆಟೊ ಹಣ್ಣುಗಳ ಲೇಪನ
ಒಂದು ಟೊಮೆಟೊವಿನ ಸಿಪ್ಪೆ ಮತ್ತು ಬೀಜ ನಿವಾರಿಸಿ ಕೇವಲ ತಿರುಳನ್ನು ಸಮಪ್ರಮಾಣದಲ್ಲಿ ಪೀಚ್ ಹಣ್ಣಿನ ತಿರುಳಿನೊಂದಿಗೆ ಬೆರೆಸಿ ದಪ್ಪನೆಯ ಲೇಪ ತಯಾರಿಸಿ. ಈ ಲೇಪವನ್ನು ಈಗತಾನೇ ತೊಳೆದುಕೊಂಡ ಮುಖಕ್ಕೆ ಹಚ್ಚಿಕೊಳ್ಳಿ. ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ.

ಲಿಂಬೆ ರಸ
ಒಂದು ಲಿಂಬೆಹಣ್ಣಿನ ರಸವನ್ನು ನೇರವಾಗಿ ಮುಖದ ಮೇಲೆ ಹಚ್ಚಿಕೊಳ್ಳಿ. ಕಣ್ಣುಗಳಿಗೆ ತಾಕಿದರೆ ಭಾರೀ ಉರಿಯಾಗುವ ಕಾರಣ ಕಣ್ಣುಗಳ ಕೆಳಗೆ ಅತಿ ಹೆಚ್ಚಿನ ಎಚ್ಚರಿಕೆ ವಹಿಸಿ. ಲಿಂಬೆರಸದ ಬಿಳಿಚಿಸುವ ಗುಣ ಚರ್ಮ ಕಳೆದುಕೊಂಡಿದ್ದ ಕಾಂತಿಯನ್ನು ಮತ್ತೆ ತರಲು ನೆರವಾಗುತ್ತದೆ. ಸುಮಾರು ಐದು ನಿಮಿಷದ ಬಳಿಕ ಕೇವಲ ತಣ್ಣೀರಿನಿಂದ ತೊಳೆದುಕೊಳ್ಳಿ. ಕೂದಲಿನ ಆರೈಕೆಯ ರಹಸ್ಯ ಲಿಂಬೆ ಜ್ಯೂಸ್‌ನಲ್ಲಿದೆ!

ಹಾಲಿನ ಕೆನೆ
ಸಮಪ್ರಮಾಣದಲ್ಲಿ ಹಾಲಿನ ಕೆನೆ, ಕಡ್ಲೆಹಿಟ್ಟು ಮತ್ತು ಚಿಟಿಕೆಯಷ್ಟು ಅರಿಶಿನ ಸೇರಿಸಿ ದಪ್ಪನೆಯ ಲೇಪನ ತಯಾರಿಸಿ. ಈ ಲೇಪನವನ್ನು ದಪ್ಪನಾಗಿ ಹಚ್ಚಿ ಒಣಗಲು ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಚರ್ಮದ ತಾಜಾತನಕ್ಕೆ ಇರಲಿ ತೆಂಗಿನ ಹಾಲು

ಉತ್ತಮ ಗುಣಮಟ್ಟದ ಕ್ರೀಮ್ ಬಳಸಿ
ಈ ನೈಸರ್ಗಿಕ ವಿಧಾನಗಳ ಜೊತೆಗೇ ಉತ್ತಮ ಗುಣಮಟ್ಟದ ಚರ್ಮದ ಪ್ರಸಾದನಗಳನ್ನೂ ಬಳಸಬಹುದು. ವಿಶೇಷವಾಗಿ ಆದ್ರತೆ ನೀಡುವ ಓಲೇ ಕ್ರೀಂ, ಟೋಟಲ್ ಎಫೆಕ್ಟ್ಸ್ ಡೇ ಕ್ರೀಮ್ ಮೊದಲಾದವುಗಳನ್ನು ಬಳಸಿ ಚರ್ಮದ ಆರೈಕೆ ಮಾಡಿ. ಇದರಿಂದ ಚರ್ಮ ಮೊದಲಿಗಿಂತಲೂ ಹೆಚ್ಚು ಪ್ರಖರವಾಗುತ್ತದೆ.

English summary

Home Remedies to Brighten Dull Skin during Monsoon

The monsoon season is a skin care wake-up call of sorts. You are forced to take extra care of your skin unless you want dull skin or worse yet, acne and rashes. One sure-fire way to take care of your skin is to drink at least 8 glasses of water a day.
X
Desktop Bottom Promotion