For Quick Alerts
ALLOW NOTIFICATIONS  
For Daily Alerts

  ಸಂಜೆಯ ಹೊತ್ತು ಮುಖದ ಸೌಂದರ್ಯ ಹೆಚ್ಚಿಸುವ ಸ್ಕ್ರಬ್

  By Manjula Balaraj
  |

  ಬೇಸಿಗೆ ಸಮಯದಲ್ಲಿ ನಾನಾ ವಿಧವಾದ ಚರ್ಮಕ್ಕೆ ಸಂಬಂಧಪಟ್ಟ ಕಾಯಿಲೆಗಳು ಎದುರಾಗುವುದು ಸಹಜ. ಅದೂ ಈ ಬಾರಿಯ ಬಿರುಬೇಸಿಗೆಯಲ್ಲಿ ಕೇಳಬೇಕೇ? ಬೋಲ್ಡ್ ಸ್ಕೈ ಬೇಸಿಗೆಯ ಸಮಯದಲ್ಲಿ ಮುಖದ ಕಾಂತಿಯನ್ನು ಹೆಚ್ಚಿಸಲು ಮಾಡಬಹುದಾದ ಐದು ವಿಧಾನಗಳನ್ನು ಈ ಲೇಖನದ ಮೂಲಕ ತಿಳಿಸುತ್ತಿದೆ.

  Five Scrubs To Use Every Evening On Your Face
   

  ಬೇಸಿಗೆಕಾಲ ಬಂದರೆ ಸಾಕು ಚರ್ಮಕ್ಕೆ ಸಂಬಂಧಿಸಿದ ಅನೇಕ ತೊಂದರೆಗಳು ನಮಗೆ ಕಾಣ ಸಿಗುತ್ತವೆ. ಅವು ಮೊಡವೆಗಳಿಂದ ಮಾತ್ರವಲ್ಲದೆ ಕಪ್ಪುಕಲೆ, ನೋವಿನಿಂದ ಕೂಡಿದ ಗುಳ್ಳೆಗಳೂ ಆಗಿರಬಹುದು. ನೈಸರ್ಗಿಕವಾಗಿ ಮಾಡಿದ ಫೇಸ್ ಪ್ಯಾಕ್ ಮತ್ತು ಫೇಸ್ ಸ್ಕ್ರಬ್ ಇಂತಹ ಚರ್ಮಕ್ಕೆ ಸಂಬಂಧಿಸಿದ ತೊಂದರೆಗಳನ್ನು ಒಂದು ವಾರದೊಳಗಾಗಿ ಹೋಗಲಾಡಿಸುತ್ತದೆ.

  ತಜ್ಞರ ಪ್ರಕಾರ ಮುಖವು ಇಂತಹ ಸಮಸ್ಯೆಗಳಿಂದ ಹದಗೆಡದಂತೆ ಕಾಪಾಡಿಕೊಳ್ಳಲು ಅಥವಾ ಚರ್ಮದ ಸಮಸ್ಯೆಯು ಮರುಕಳಿಸದಂತೆ ಮಾಡಬೇಕೆಂದಿದ್ದರೆ ಕೆಲವು ನೈಸರ್ಗಿಕ ವಸ್ತುಗಳನ್ನು ತಮ್ಮ ದಿನಚರಿಯಲ್ಲಿ ಉಪಯೋಗಿಸುವುದು ಒಳಿತು. ಮುಖ್ಯವಾಗಿ ಮುಖಕ್ಕೆ ಹಣ್ಣಿನ ಅಥವಾ ಯಾವುದೇ ತರಕಾರಿಯ ರಸವನ್ನು ಬಳಸುವ ಮೊದಲು ಮುಖವನ್ನು ಸ್ವಚ್ಛವಾದ ನೀರಿನಿಂದ ಯಾವುದೇ ಸೋಪು ಬಳಸದೆ ಸರಿಯಾಗಿ ತೊಳೆದು ಕೊಳ್ಳಬೇಕು.

  ಇಂತಹ ಒಂದು ಸಣ್ಣ ಪ್ರಯತ್ನ ನಿಮ್ಮ ಮುಖದಲ್ಲಿನ ಕೊಳೆ, ಕೀಟಾಣು ಮತ್ತು ಜಿಡ್ಡನ್ನು ಕೂಡ ಹೊಡೆದೋಡಿಸುತ್ತದೆ. ಸಂಜೆ ಹೊತ್ತು ಕೆಲಸ ಮುಗಿಸಿ ವಾಪಸ್ ಮನೆಗೆ ಬಂದ ನಂತರ ಇಂತಹ ಸ್ಕ್ರಬ್ ಗಳನ್ನು ಬಳಸುವುದನ್ನು ವಾಡಿಕೆ ಮಾಡಿಕೊಳ್ಲುವುದು ಉತ್ತಮ. ಕೆಲಸದಲ್ಲಿ ದಿನ ಫೂರ್ತಿ ಬಿಜಿಯಾಗಿದ್ದಲ್ಲಿ ಇದನ್ನು ದಿನ ಪೂರ್ತಿ ಬಳಸಲು ಆಗದಿದ್ದಲ್ಲಿ ಮಲಗುವ ಮುನ್ನ ಕೂಡ ಈ ಸ್ಕ್ರಬ್ ನ್ನು ಬಳಸಬಹುದು. ಈ ಸ್ಕ್ರಬ್ ಮುಖಕ್ಕೆ ಬಳಸಿದ ಅಥವಾ ಮಸಾಜ್‌ನ ನಂತರ ಮುಖದಲ್ಲಿನ ರಂಧ್ರಗಳು 30 ನಿಮಿಷಗಳ ಕಾಲ ನೆನೆಯಲು ಬಿಡಬೇಕು. ನಂತರ ಸಾನ್ಸ್ ಸೋಪನ್ನು ಬಳಸಿ ಶುದ್ಧವಾದ ನೀರಿನಲ್ಲಿ ಸ್ವಚ್ಛ ಮಾಡಬೇಕು. ಕೆಳಗೆ 5 ಬಗೆಯ ಸ್ಕ್ರಬ್ ವಿಧಾನಗಳ ಬಗ್ಗೆ ವಿವರಿಸಲಾಗಿದೆ. ಇದರಿಂದ ಬೇಸಿಗೆಯಲ್ಲಿ ಉಂಟಾಗುವ ಚರ್ಮಕ್ಕೆ ಸಂಬಂಧಿಸಿದ ಅನೇಕ ತೊಂದರೆಗಳನ್ನು ಹೋಗಲಾಡಿಸಬಹುದು.

  Five Scrubs To Use Every Evening On Your Face
   

  ಸ್ಟ್ರಾಬೆರಿ ಸ್ಕ್ರಬ್

  ಒಂದು ಸಣ್ಣ ಪಾತ್ರೆಯಲ್ಲಿ ಎಲೆ ತೆಗೆದ ಒಂದು ಹಿಡಿ ತಾಜಾ ಸ್ಟ್ರಾಬೆರಿ ಹಣ್ಣನ್ನು ಹಾಕಬೇಕು. ನಂತರ ಕೈಯಿಂದ ಅದನ್ನು ಹಿಸುಕಿ ಅದರ ತಿರುಳು ಮಾಡಿಕೊಳ್ಳಬೇಕು. ನಂತರ ಈ ತಾಜಾ ತಿರುಳನ್ನು ಮುಖಕ್ಕೆ ವಿರುದ್ಧ ದಿಕ್ಕಿನಿಂದ ಮಸಾಜ್ ಮಾಡಬೇಕು. ಸುಮಾರು 6 ನಿಮಿಷಗಳ ಕಾಲ ಮಸಾಜ್ ಮಾಡಬೇಕು. ನಂತರ ತಣ್ಣಗಿನ ಹಾಲಿನಲ್ಲಿ ತೊಳೆಯಬೇಕು. ಈ ವಿಧಾನ ಉಪಯೋಗಿಸುವುದರಿಂದ ಬೇಸಿಗೆಯಲ್ಲಿ ತ್ವಚೆಯು ಹೊಳೆಯುತ್ತದೆ.

  ಸೌತೆಕಾಯಿಯ ಸ್ಕ್ರಬ್

  ಸೌತೆಕಾಯಿ ತಂಪನ್ನು ನೀಡುವ ತರಕಾರಿಯಾದುದರಿಂದ ಇದು ಚರ್ಮಕ್ಕೆ ಅತ್ಯುತ್ತಮವಾದ ನೈಸರ್ಗಿಕ ತರಕಾರಿ. ಸಿಪ್ಪೆ ಸುಲಿದ ಸೌತೆಕಾಯಿಯನ್ನು ರುಬ್ಬಿ ದಪ್ಪನೆಯಾಗಿ ಪೇಸ್ಟ್ ಮಾಡಿಕೊಳ್ಳಬೇಕು. ನಂತರ ಇದರ ರಸ ಮತ್ತು ಪೇಸ್ಟನ್ನು ಚರ್ಮದ ಮೇಲೆ ಸಮವಾದ ರೀತಿಯಲ್ಲಿ ಹಚ್ಚಬೇಕು. ನಂತರ ಈ ಸ್ಕ್ರಬ್ ಮುಖದಲ್ಲಿ ಸರಿಯಾಗಿ ಹೀರಿಕೊಳ್ಳುವಂತಾಗಲು ಅರ್ಧ ಗಂಟೆಗಳ ಕಾಲ ಹಾಗೆ ಬಿಡಬೇಕು. ನಂತರ ಮುಖವನ್ನು ತೊಳೆಯಬೇಕು. ಈ ವಿಧಾನವನ್ನು ಬಳಸುವುದರಿಂದ ನಿಮ್ಮ ಚರ್ಮವು ಸುಂದರವಾಗಿ ಮತ್ತು ಮೃದುವಾಗಿ ಆಗುವಂತೆ ಮಾಡುತ್ತದೆ.

  Five Scrubs To Use Every Evening On Your Face
   

  ಆಕ್ರೋಟ್‌ನ ಸ್ಕ್ರಬ್

  ಕಪ್ಪು ಕಲೆ (ಬ್ಲಾಕ್ ಹೆಡ್ಸ್) ಮತ್ತು ಬಿಳಿ ಕಲೆಗಳಿಂದ ( ವೈಟ್ ಹೆಡ್ಸ್) ಬಳಲುತ್ತಿದ್ದರೆ, ಇಲ್ಲಿದೆ ಇದಕ್ಕೊಂದು ಸರಳವಾದ ಮತ್ತು ನಿತ್ಯ ಉಪಯೋಗಿಸಬೇಕಾದ ವಿಧಾನ. ಆಕ್ರೊಟ್ ನ ಪೇಸ್ಟನ್ನು ತೊಂದರೆಗೊಳಗಾದ ಚರ್ಮದ ಮೇಲೆ ಹಚ್ಚಬೇಕು .ಮಸಾಜ್ ಮಾಡುವಾಗ ವಿರುದ್ಧ ದಿಕ್ಕಿನಲ್ಲಿ ಮಾಡುತ್ತಿರುವಿರುವುದನ್ನು ಖಾತ್ರಿ ಮಾಡಿಕೊಳ್ಳಿ. ಹೀಗೆ ಮಸಾಜ್ ಮಾಡುವುದರಿಂದ ಕಲೆಗಳನ್ನು, ಗುಳ್ಳೆಗಳನ್ನು ಸಡಿಲಗೊಳಿಬಹುದು ಮತ್ತು ಅವುಗಳನ್ನು ತೊಡೆದು ಹಾಕಬಹುದು. ಇದರಿಂದ ಚರ್ಮವು ದೋಷರಹಿತವಾಗಿ ಕಾಣಲು ಸಹಾಯವಾಗುತ್ತದೆ.

  Five Scrubs To Use Every Evening On Your Face
   

  ಹಾಲಿನ ಸ್ಕ್ರಬ್

  ಮುಖದ ಮೇಲಿನ ರಂಧ್ರಗಳಲ್ಲಿ ಕೊಳೆ ಮತ್ತು ಬೆವರಿನಿಂದ ಮುಚ್ಚಿಹೋಗಿದ್ದರೆ, ಇದರಿಂದ ಹೊರಬರಲು ತಣ್ಣಗಿನ ಹಾಲಿನ ಸ್ಕ್ರಬ್ ನ ಅವಶ್ಯಕತೆ ಉಪಕಾರಿಯಾಗಬಹುದು. ಹಾಲನ್ನು ಬಳಸುವುದರಿಂದ ಚರ್ಮದ ಕಾಂತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಬುಡದಿಂದ ನಿಮ್ಮ ಚರ್ಮವನ್ನು ಸ್ವಚ್ಛಗೊಳಿಸುತ್ತದೆ. ಹೀಗೆ ಮಾಡುವುದರಿಂದ ಚರ್ಮವು ಹೊಳಪಿನಿಂದ ಕೂಡಿ ಹೆಚ್ಚು ಸುಂದರವಾಗಿ ಕಾಣುವಂತೆ ಮಾಡುತ್ತದೆ.

  Five Scrubs To Use Every Evening On Your Face
   

  ಬಾಳೆಹಣ್ಣಿನ ಸ್ಕ್ರಬ್

  ಬಾಳೆಹಣ್ಣು ನಿಮ್ಮ ಚರ್ಮಕ್ಕೆ ತುಂಬಾ ಉಪಯುಕ್ತ. ಬಾಳೆಹಣ್ಣಿನ ಸಿಪ್ಪೆ ತೆಗೆದು ಹಣ್ಣನ್ನು ಹಿಸುಕಿ ಪೇಸ್ಟ್ ತರಹ ಮಾಡಿಟ್ಟುಕೊಳ್ಳಬೇಕು. ನಂತರ ಇದನ್ನು ಮುಖದ ಮೇಲೆ ಹಚ್ಚಿ ಸುಮಾರು ಅರ್ಧ ತಾಸು ಒಣಗಲು ಬಿಡಬೇಕು. ನಂತರ ಮುಖವನ್ನು ಸ್ವಚ್ಛ ನೀರಿನಲ್ಲಿ ತೊಳೆಯಬೇಕು. ಈ ವಿಧಾನವು ಮುಖದಲ್ಲಿರುವ ಒಣ ಮತ್ತು ಸತ್ತ ಚರ್ಮದ ಜೀವಕೋಶಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ, ಅಷ್ಟೇ ಅಲ್ಲದೆ ಇದರಿಂದ ಮುಖವು ಸುಂದರವಾಗಿ ಮತ್ತು ಕಾಂತಿಯುಕ್ತವಾಗಿ ಕಾಣುವುದು.

  English summary

  Five Scrubs To Use Every Evening On Your Face

  During the summer season, you will experience a lot of skin problems. Not only will those ugly-looking pimples pop up, you will also be a witness to blackheads and painful boils too. With the help of natural ingredients made into face packs and face scrubs, you can get rid of these skin care problems in less than a week.
  Story first published: Monday, May 16, 2016, 18:03 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more