For Quick Alerts
ALLOW NOTIFICATIONS  
For Daily Alerts

  ಯಂಗ್ ಲುಕ್ ನಿಮ್ಮದಾಗಬೇಕೇ? ಇಲ್ಲಿದೆ ಸ್ಮಾರ್ಟ್ ಟಿಪ್ಸ್

  By Super Admin
  |

  ಇದುವರೆಗೆ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದ ನಿಮಗೆ ಈಗ ಹುಟ್ಟು ಹಬ್ಬ ಆಚರಿಸಿಕೊಳ್ಳಲು ದುಗುಡವಾಗುತ್ತಿದೆಯೇ? ವಯೋಸಹಜ ಚಿಹ್ನೆಗಳು ಚರ್ಮದಲ್ಲಿ ಕಾಣಿಸಿಕೊಂಡು ಇದನ್ನೆಲ್ಲಾದರೂ ಜನರು ಆಡಿಕೊಳ್ಳುತ್ತಾರೆಂಬ ಅಳುಕು ಕಾಡುತ್ತಿದೆಯೇ? ಇವನ್ನು ಮುಚ್ಚಲು ನೀವು ಪಡುತ್ತಿರುವ ಪಾಡು ಯಾರಿಗೂ ಬೇಡ ಅನ್ನಿಸುತ್ತಿದೆಯೇ?    ವಯಸ್ಸಿಗಿಂತ ಚಿಕ್ಕವರಂತೆ ಕಾಣಬೇಕೆ?

  ಒಂದು ವೇಳೆ ಇಂತಹ ಯಾವುದೇ ಪ್ರಶ್ನೆಗೆ ನಿಮ್ಮ ಉತ್ತರ ಹೌದು ಎಂದಾದಲ್ಲಿ ಈ ಸಮಸ್ಯೆ ನಡುವಯಸ್ಸಿನಲ್ಲಿರುವವರಿಗೆ ಸಾಮಾನ್ಯವಾದ ಚಿಂತೆಯಾಗಿದೆ. ಕೆಲವರಂತೂ ಇಪ್ಪತ್ತೈದು ವರ್ಷಕ್ಕೇ ಈ ಚಿಂತೆ ಆವರಿಸತೊಡಗುತ್ತದೆ.

  Did Your Hear About This Amazing Home Remedy To Look 5 Years Younger?
   

  ಏಕೆ ಈ ಚಿಂತೆ ಅಂದರೆ ನಮ್ಮ ಸಮಾಜ ನಮ್ಮ ಗುಣಕ್ಕಿಂತಲೂ ನೋಟಕ್ಕೇ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದು ಹಿಂದಿನ ದಿನದ ಮತ್ತು ಇಂದಿನ ದಿನದ ರೂಪದ ಹೋಲಿಕೆಯನ್ನೇ ತಮ್ಮ ಚರ್ಚೆಯ ವಿಷಯವಾಗಿಸುವ ಕಾರಣ ಇದು ನಮಗೆಲ್ಲರಿಗೂ ಮುಜುಗರದ ವಿಷಯವಾಗಿದೆ. ಅದರಲ್ಲೂ ಮುಖದಲ್ಲಿ ಬೀಳುವ ಸೂಕ್ಷ್ಮ ನೆರಿಗೆಗಳು, ವಯೋಸಹಜ ಕಲೆಗಳು, ಮಚ್ಚೆಗಳು, ತುಟಿಯ ಸುತ್ತ ಆವರಿಸುವ ಅರ್ಧವೃತ್ತಾಕಾರದ ನೆರಿಗೆಗಳು ನಗುವಾಗ ಸ್ಪಷ್ಟವಾಗಿ ಗೋಚರಿಸಿ ವೃದ್ಧರಾದರೆ ಹೇಗಿರುತ್ತಾರೆ ಎಂದು ಎದುರಿನವರು ಊಹಿಸುವಂತೆ ಮಾಡುತ್ತದೆ.     ಬ್ಯೂಟಿ ಟಿಪ್ಸ್: ಬರೀ ಒಂದೇ ವಾರದಲ್ಲಿ 16ರ ಸೌಂದರ್ಯ!

  ಆದರೆ ಈ ಚಿಂತೆಯನ್ನು ತಲೆಗೆ ಹಚ್ಚಿಕೊಂಡು ಕೊರಗಬೇಕಾಗಿಲ್ಲ. ಏಕೆಂದರೆ ಈ ತೊಂದರೆಯನ್ನು ಸಮರ್ಥವಾಗಿ ನಿವಾರಿಸಬಲ್ಲ ಮನೆಮದ್ದು ಲಭ್ಯವಿದ್ದು ಇದರ ಸರಿಯಾದ ಉಪಯೋಗದಿಂದ ಸುಮಾರು ಐದು ವರ್ಷದ ಹಿಂದಿನ ಚರ್ಮದ ಸೆಳೆತವನ್ನು ಪಡೆಯಬಹುದು. ಆ ಮೂಲಕ ಆವರಿಸುತ್ತಿರುವ ವೃದ್ಧಾಪ್ಯವನ್ನು ಕನಿಷ್ಠ ಐದು ವರ್ಷಗಳಾದರೂ ತಡವಾಗಿಸಬಹುದು.

  Did Your Hear About This Amazing Home Remedy To Look 5 Years Younger?
   

  ಮುಖಲೇಪ ತಯಾರಿಸುವ ವಿಧಾನ:

  ಅಗತ್ಯವಿರುವ ಸಾಮಾಗ್ರಿಗಳು:

  *ಪಪ್ಪಾಯಿ: ಒಂದು ಚಿಕ್ಕ ತುಂಡು (ಮಧ್ಯಮ ಗಾತ್ರದ ಪಪ್ಪಾಯಿ ಹಣ್ಣಿನ ಅರ್ಧಭಾಗದ ಸುಮಾರು ಒಂದಿಂಚು ಅಗಲದ ಹೋಳು)

  *ಗುಲಾಬಿ ನೀರು: ಎರಡು ಚಿಕ್ಕ ಚಮಚ

  *ಎಳೆ ಸೌತೆಕಾಯಿ: ನಾಲ್ಕೈದು ಬಿಲ್ಲೆಗಳು (ಸಿಪ್ಪೆ ಸಹಿತ)                ಸುಮ್ಮನೆ ನಕ್ಕು ಬಿಡಿ ವಯಸ್ಸು ಕಾಣೋದಿಲ್ಲ..

  ಈ ಮೂರೂ ಸಾಮಾಗ್ರಿಗಳಲ್ಲಿರುವ ಪೋಷಕಾಂಶಗಳು ಒಟ್ಟಾದಾಗ ಚರ್ಮದ ಸೆಳೆತ ಹೆಚ್ಚಿಸಲು ಅತ್ಯುತ್ತಮವಾದ ಆರೈಕೆ ದೊರಕುತ್ತದೆ. ಅಲ್ಲದೇ ಕಲೆಗಳನ್ನು ತಿಳಿಯಾಗಿಸಿ ಚರ್ಮ ಸಹಜವರ್ಣ ಪಡೆಯಲೂ, ಕಾಂತಿ ಹೆಚ್ಚಿಸಲೂ ನೆರವಾಗುತ್ತದೆ.

  ಈ ಲೇಪದಲ್ಲಿರುವ ಪ್ರಬಲ ಆಂಟಿ ಆಕ್ಸಿಡೆಂಟುಗಳು ಚರ್ಮದ ಜೀವಕೋಶಗಳಿಗೆ ಹೆಚ್ಚಿನ ಪೋಷಣೆ ನೀಡುವ ಕಾರಣ ಸತ್ತ ಜೀವಕೋಶಗಳ ಜಾಗದಲ್ಲಿ ತುಂಬಿಕೊಂಡ ಜೀವಕೋಶಗಳು ಹುಟ್ಟಿ ಚರ್ಮದ ಸೆಳೆತವನ್ನು ಹೆಚ್ಚಿಸುತ್ತವೆ. ಇದೇ ಕಾರಣಕ್ಕೆ ಚರ್ಮ ಹಿಂದಿನ ಸೌಂದರ್ಯವನ್ನು ಪಡೆಯಲು ಸಾಧ್ಯವಾಗುತ್ತದೆ.

  Did Your Hear About This Amazing Home Remedy To Look 5 Years Younger?
   

  ಇದರೊಂದಿಗೆ ಗುಲಾಬಿ ನೀರು ಜೀವಕೋಶಗಳಿಗೆ ಅಗತ್ಯವಿರುವ ದ್ರವವನ್ನು ಪೂರೈಸಿ ಚರ್ಮ ಸಡಿಲವಾಗುವುದನ್ನು ತಪ್ಪಿಸುತ್ತದೆ. ಇದರಿಂದ ನೆರಿಗೆಗಳು ಮಾಯವಾಗುತ್ತವೆ. ಸೌತೆಯಲ್ಲಿರುವ ಪೋಷಕಾಂಶಗಳು ಚರ್ಮಕ್ಕೆ ಆರ್ದ್ರತೆ ಪೂರೈಸುವ ಮೂಲಕ ಚರ್ಮಕ್ಕೆ ಒಳಗಿನಿಂದ ಪೋಷಣೆ ಒದಗಿಸಿ ಕೋಮಲವಾಗಿಸುತ್ತದೆ.         ಒಂದೇ ವಾರದಲ್ಲಿ ನೀವು ಬೆಳ್ಳಗೆ ಕಾಣುವಿರಿ! ಚಾಲೆಂಜ್‌ಗೆ ರೆಡಿನಾ?

  ಈ ಅಪ್ಪಟ ನೈಸರ್ಗಿಕ ಮುಖಲೇಪವನ್ನು ನಿಯಮಿತವಾಗಿ ಮತ್ತು ಸರಿಯಾದ ಕ್ರಮದಲ್ಲಿ ಹಚ್ಚಿಕೊಳ್ಳುತ್ತಾ ಬಂದರೆ ಹೊಸ ಜೀವಕೋಶಗಳು ಹಿಂದಿನ ಗಾಯಗಳಿಂದ, ಮೊಡವೆಗಳಿಂದಾಗಿದ್ದ ಕಲೆಗಳನ್ನೂ ನಿವಾರಿಸಲು ನೆರವಾಗಿ ವೃದ್ಧಾಪ್ಯದ ಚಿಹ್ನೆಗಳನ್ನು ದೂರಾಗಿಸುತ್ತದೆ. ಪಪ್ಪಾಯಿಯಲ್ಲಿರುವ ಪೋಷಕಾಂಶಗಳು ಸಹಾ ಚರ್ಮದ ಆರೈಕೆಗೆ ಹಲವು ವಿಧದಲ್ಲಿ ನೆರವಾಗುತ್ತದೆ. ಅಲ್ಲದೇ ಚರ್ಮದ ಅಡಿಯಲ್ಲಿ ಸಂಗ್ರಹವಾಗಿದ್ದ ಕಲ್ಮಶಗಳನ್ನು ನಿವಾರಿಸಿ ಕಾಂತಿ ಹೆಚ್ಚಿಸಲು ಸಾಧ್ಯವಾಗುತ್ತದೆ.

  Did Your Hear About This Amazing Home Remedy To Look 5 Years Younger?
   

  ಈ ಅದ್ಭುತ ಮುಖಲೇಪ ತಯಾರಿಸುವ ವಿಧಾನ:

  1) ಮೇಲೆ ತಿಳಿಸಿದ ಎಲ್ಲಾ ಸಾಮಾಗ್ರಿಗಳನ್ನು ಮಿಕ್ಸಿಯ ಬ್ಲೆಂಡರಿನಲ್ಲಿ ಹಾಕಿ ಚೆನ್ನಾಗಿ ಗೊಟಾಯಿಸಿ. ನೀರು ಸೇರಿಸಬೇಡಿ.

  2) ಈ ಲೇಪನವನ್ನು ಈಗತಾನೇ ತಣ್ಣೀರಿನಿಂದ ತೊಳೆದುಕೊಂಡ ಮುಖ, ಕುತ್ತಿಗೆ ಹಣೆಗಳಿಗೆ ತೆಳುವಾಗಿ ಹಚ್ಚಿ.

  3) ಕಣ್ಣಿನ ಕೆಳಭಾಗ, ತುಟಿಯ ಸುತ್ತ, ಹಣೆಯ ಪಕ್ಕ, ಅಂದರೆ ನೆರಿಗೆಗಳು ಹೆಚ್ಚು ಬೀಳುವ ಸ್ಥಳಗಳಲ್ಲಿ ಹೆಚ್ಚು ದಪ್ಪನಾಗಿ ಹಚ್ಚಿ, ಕಣ್ಣುರೆಪ್ಪೆಗಳ ಮೇಲೆ ಕೊಂಚವೇ ಸವರಿದರೆ ಸಾಕು.

  4) ಬಳಿಕ ಹದಿನೈದು ನಿಮಿಷಗಳ ಕಾಲ ಹಾಗೇ ಒಣಗಲು ಬಿಡಿ.

  5) ನಂತರ ತಣ್ಣೀರು ಉಪಯೋಗಿಸಿ ತೊಳೆದುಕೊಳ್ಳಿ. ಕೊಂಚ ಉರಿ ಅನ್ನಿಸಿದರೆ ಮಾತ್ರ ಸೌಮ್ಯ ಫೇಸ್ ವಾಶ್ ಬಳಸಿ ತೊಳೆದುಕೊಳ್ಳಿ. ಉತ್ತಮ ಪರಿಣಾಮ ಪಡೆಯಲು ಕೇವಲ ತಣ್ಣೀರು ಮಾತ್ರ ಸಾಕು. ಸೋಪು ಉಪಯೋಗಿಸಬೇಡಿ. ಬಳಿಕ ಟವೆಲ್ ನಿಂದ ಒತ್ತಿ ಒರೆಸಿಕೊಳ್ಳಿ.

  6) ಉತ್ತಮ ಪರಿಣಾಮಕ್ಕಾಗಿ ದಿನ ಬಿಟ್ಟು ದಿನ ಅನುಸರಿಸಿ. ಕೆಲವೇ ದಿನಗಳಲ್ಲಿ ಉತ್ತಮ ಪರಿಣಾಮವನ್ನು ನೋಡಬಹುದು.

  English summary

  Did Your Hear About This Amazing Home Remedy To Look 5 Years Younger?

  Do you feel slightly depressed during your birthdays lately because you feel that you are getting older? Do you worry because your skin is starting to show certain signs of ageing? If yes, then we'll have you know that this feeling of anxiety and frustration over ageing is quite common with many people who are in their mid 20s and over.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more