Latest Updates
-
March 17 Horoscope: ಕುಟುಂಬದಲ್ಲಿ ಸಂತಸ ಅನುಭವಿಸುವ ದಿನವಿದು! -
ಕೌಟುಂಬಿಕ ಸುಖ & ಸಂಬಂಧಗಳಲ್ಲಿ ಮಧುರತೆ ಹೆಚ್ಚಳ! ಸಂಗಾತಿಯಿಂದ ಸಂಪೂರ್ಣ ಬೆಂಬಲ -
ಯುಗಾದಿ ಮಂತ್ರಗಳು: ಹಬ್ಬದಲ್ಲಿ ಈ ಮಂತ್ರ ಪಠಿಸಿದ್ರೆ ಕಷ್ಟಗಳು ದೂರಾಗುತ್ತೆ, ಅದೃಷ್ಟ ನಿಮ್ಮದಾಗುತ್ತೆ! -
ಯುಗಾದಿ ಹಬ್ಬದಲ್ಲಿ ಸಿಹಿಯೊಂದಿಗೆ ಬೇಬಿ ಕಾರ್ನ್ 65 ಸಹ ಮಾಡಿ! ಅದ್ಭುತ ರುಚಿಯ ತಿಂಡಿ ಇದು! -
Ugadi 2026: ಬೇವಿನ ಕಹಿ ಇರಲಿ, ಬೆಲ್ಲದ ಸಿಹಿ ಇರಲಿ! ನಿಮ್ಮ ಆತ್ಮೀಯರಿಗೆ ಈ ರೀತಿ ವಿಶೇಷ ಶುಭಾಶಯ ಕಳಿಸಿ -
ರವೆ ಮತ್ತು ತುಪ್ಪ ಬಳಸಿ ಸ್ಪಂಜಿನಂಥ ಕೇಕ್ ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ.. ಓವನ್ ಇಲ್ಲದೆ ಮಾಡಬಹುದು -
ಯುಗಾದಿ ಭವಿಷ್ಯ: ಹಬ್ಬದ ಬಳಿಕ ಈ ರಾಶಿಯವರಿಗೆ ಲಕ್ಷ್ಮಿ ಆಶೀರ್ವಾದ, ಆರ್ಥಿಕ ಲಾಭ! -
ಮುದ್ದೆ, ಗಂಜಿ ಬಿಡಿ.. ರಾಗಿ ಬಳಸಿ ಈ ರೆಸಿಪಿಗಳನ್ನು ಮಾಡಿ! ಆರೋಗ್ಯಕ್ಕೆ ಸೂಪರ್, ರುಚಿಯೂ ಮಿಸ್ ಆಗಲ್ಲ -
ಯುಗಾದಿ ಸ್ಪೆಷಲ್: ವಿಭಿನ್ನ ರುಚಿ ನೀಡುವ ತೊಗರಿ ಬೇಳೆ ಹೋಳಿಗೆ! -
ಗುರು ಮನೆಯಲ್ಲಿ ಸೂರ್ಯನ ಅಬ್ಬರ! ವೃಷಭ ಸೇರಿ ಈ ರಾಶಿಗಳಿಗೆ ಶುಭ ಫಲ.. ಯಾರಿಗೆ ಲಾಭ? ಯಾರಿಗೆ ನಷ್ಟ?
ಬೆಚ್ಚಿ ಬೀಳಿಸುವ ಸೌಂದರ್ಯವರ್ಧಕಗಳ ಹಿಂದಿರುವ ಕರಾಳ ಸತ್ಯ!
ಇನ್ನು ಹುಡುಗಿಯರು ಹೊಸ ಸೌಂದರ್ಯವರ್ಧಕಗಳ ಬಗ್ಗೆ ಕೇಳಿದರೆ ಸಾಕು ಅದರ ಖರೀದಿಯ ಬಗ್ಗೆ ಒಲವು ತೋರುತ್ತಾರೆ. ಆದರೆ ಕೊನೆಗೆ ಅದರಿಂದ ಬರುವ ಫಲಿತಾಂಶ ನೋಡಿ ಅವರಿಗೆ ಆಘಾತವಾಗುವುದು ಒಂದೆಡೆಯಾದರೆ, ತುಂಬಾ ನಿರಾಸೆಯೂ ಉಂಟಾಗುತ್ತದೆ. ಕೆಲವೊಂದು ಸೌಂದರ್ಯವರ್ಧಕಗಳು ಚರ್ಮಕ್ಕೆ ಹೊಂದಿಕೊಳ್ಶದೆ ಇದ್ದಾಗ ಈ ರೀತಿಯ ಫಲಿತಾಂಶ ಹೊರಬೀಳುತ್ತದೆ.
ಸೌಂದರ್ಯವರ್ಧಕಗಳು ಒಬ್ಬರಿಗೆ ಹೊಂದಿಕೊಂಡರೆ ಇನ್ನೊಬ್ಬರ ತ್ವಚೆಗೆ ಹೊಂದಿಕೊಳ್ಳದೇ ಇರಬಹುದು. ಏಕೆಂದರೆ ಚರ್ಮದ ಲಕ್ಷಣವು ಒಬ್ಬರಿಂದ ಒಬ್ಬರಿಗೆ ಬದಲಾಗುತ್ತದೆ, ಒಬ್ಬರ ಹಾಗೇ ಇನ್ನೊಬ್ಬರಿಗೆ ತ್ವಚೆ ಇರುವುದಿಲ್ಲ. ಈ ಲೇಖನದಲ್ಲಿ ಸೌಂದರ್ಯವರ್ಧಕಗಳಲ್ಲಿ ಸೇರಿಕೊಂಡಿರುವ ಕೆಲವು ಸಾಮಗ್ರಿಗಳಿಂದ ಚರ್ಮಕ್ಕೆ ಆಗುವ ಹಾನಿಗಳ ಬಗ್ಗೆ ವಿವರಿಸಲಾಗಿದೆ. ಈ ಕೆಳಗೆ ಹೇಳಿರುವಂತಹ ಸಾಮಗ್ರಿಗಳು ಸೇರಿಕೊಂಡಿರುವಂತಹ ಸೌಂದರ್ಯವರ್ಧಕಗಳನ್ನು ಖಂಡಿತವಾಗಿಯೂ ಉಪಯೋಗಿಸದೇ ಇರುವುದು ಸೂಕ್ತ.

ಒಂದು ವೇಳೆ ಉಪಯೋಗಿಸಿದ್ದೇ ಆದಲ್ಲಿ ಇದರಿಂದ ನಿಮ್ಮ ಚರ್ಮಕ್ಕೆ ಬೇಡದೇ ಇರುವ ಅನೇಕ ತೊಂದರೆಗಳುಂಟಾಗಬಹುದು. ಕೆಳಗೆ ಹೇಳಿರುವಂತಹ ಮಾಹಿತಿಯನ್ನು ಓದಿ, ಅದರಲ್ಲಿ ಪಟ್ಟಿ ಮಾಡಲಾಗಿರುವ ಸೌಂದರ್ಯವರ್ಧಕಗಳನ್ನೊಮ್ಮೆ ಪರಿಶೀಲಿಸಿ. ಯಾವುದಾದರೂ ಕೆಳಗೆ ಹೇಳಿರುವಂತಹ ಸಾಮಗ್ರಿಗಳು ಇದ್ದಲ್ಲಿ ಅದನ್ನು ಉಪಯೋಗಿಸದೇ ನಿಮ್ಮ ಚರ್ಮವನ್ನು ಹಾಳಾಗುವುದರಿಂದ ಮತ್ತು ಚರ್ಮಕ್ಕೆ ಹಾನಿಕಾರಕ ರೋಗ ಉಂಟಾಗುವುದನ್ನು ತಪ್ಪಿಸಿಕೊಳ್ಳಿ ಎನ್ನುವುದು ನಮ್ಮ ಸಲಹೆ. ಮೇಕಪ್ ಉತ್ಪನ್ನಗಳಲ್ಲಿ ಅಡಗಿರುವ ಸೈಲೆಂಟ್ ಕಿಲ್ಲರ್...
ನೀವು ಬಳಸುವ ಸೌಂದರ್ಯವರ್ಧಕಗಳನ್ನು ಖರೀದಿಸುವ ಮೊದಲು ಅದರ ಸಾಮಗ್ರಿಗಳ ಪಟ್ಟಿಯನ್ನು ಒಮ್ಮೆ ಪರಿಶೀಲಿಸಿ ಮತ್ತು ಕೆಳಗೆ ಹೇಳಿರುವಂತಹ ಅಂಶಗಳು ಸೌಂದರ್ಯವರ್ಧಕಗಳಲ್ಲಿ ಕಾಣಸಿಗುವುದು ಸರ್ವೇಸಾಮಾನ್ಯವಾಗಿದೆ. ಹಾಗಾಗಿ, ಮಹಿಳೆಯರು ಖರೀದಿಗೆ ಮುನ್ನ ಎಚ್ಚರದಿಂದಿರುವುದು ಸೂಕ್ತ.
ಟ್ಯಾಲ್ಯುಯಿನ್ (ಒಂದು ಬಣ್ಣರಹಿತ ದ್ರಾವಣ)
ಟ್ಯಾಲ್ಯುಯಿನ್ ಅಂಶ ಹೆಚ್ಚಾಗಿ ಉಗುರಿಗೆ ಹಚ್ಚುವ ಬಣ್ಣಗಳಲ್ಲಿ (ನೈಲ್ ಪಾಲಿಶ್) ಕಂಡುಬರುತ್ತದೆ. ಇದು ಪೆಟ್ರೊಲಿಯಂ ನಿಂದ ಕೂಡಿದ್ದು ಒಂದು ರೀತಿಯ ವಾಸನೆಯಿಂದ ಕೂಡಿರುತ್ತದೆ. ಇದರ ವಾಸನೆಯನ್ನು ತೆಗೆದುಕೊಳ್ಳುವುದರಿಂದ ಉಸಿರಾಡುವಾಗ ಶ್ವಾಸಕೋಶಕ್ಕೆ ತೊಂದರೆ ಉಂಟಾಗಬಹುದು. ಅಲ್ಲದೆ ನಿಮ್ಮ ಕೇಂದ್ರ ನರಮಂಡಲಕ್ಕೆ ದಕ್ಕೆ ಉಂಟುಮಾಡಬಹುದು. ಹಾಗಾಗಿ ಮುಂದಿನ ಬಾರಿ ಉಗುರು ಬಣ್ಣ(ನೈಲ್ ಪಾಲಿಶ್) ಖರೀದಿಸುವ ಮುನ್ನ ಅದು ಟ್ಯಾಲ್ಯುಯಿನ್ ರಹಿತವೇ ಎಂದು ಪರಿಶೀಲಿಸುವುದು ಉತ್ತಮ. ಅಪಾಯಕ್ಕೆ ಆಹ್ವಾನ ನೀಡುವ ನಿಮ್ಮ ಮೇಕಪ್ ಕಿಟ್ ಬಗ್ಗೆ ಎಚ್ಚರ
ಆಕ್ಸಿಬೆನ್ಜೊನ್
ಇದೊಂದು ಅಂತ: ಸ್ರಾವಕವಾಗಿದೆ. ಇದರ ಬಳಕೆಯಿಂದ ಹಾರ್ಮೋನ್ ನಲ್ಲಿ ಸಮತೋಲನ ಸಮಸ್ಯೆ ಉಂಟಾಗುತ್ತದೆ ಜೊತೆಗೆ ಬೊಜ್ಜು ಮತ್ತು ಫಲವತ್ತತೆ ಸಮಸ್ಯೆಗಳನ್ನು ಹೊಂದಿರುವ ವಿವಿಧ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವ ಸಾಧ್ಯತೆಯಿದೆ. ಆದುದರಿಂದ, ಮುಂದಿನ ಬಾರಿ ಒಂದು ಸನ್ಸ್ಕ್ರೀನ್ ಲೋಷನ್ ಖರೀದಿಸುವ ಮೊದಲು ಮೇಲೆ ಹೇಳಿರುವ ಅಂಶಗಳನ್ನು ಪರಿಶೀಲಿಸಿ ಖಚಿತಪಡಿಸಿಕೊಂಡ ನಂತರ ಖರೀದಿಸಿ.
ಸೀಸ (ಲೆಡ್)
ಸೀಸವನ್ನು ತುಂಬಾ ಸಮಯ ಬಳಸುವುದರಿಂದ ದೇಹಕ್ಕೆ ಹಾನಿಯುಂಟಾಗಬಹುದು ಇದರಿಂದ ಸ್ಮರಣಶಕ್ತಿ ಕಳೆದುಕೊಳ್ಳುವಿಕೆ, ನಿತ್ರಾಣ ಮತ್ತು ರಕ್ತಹೀನತೆಗೆ ಕಾರಣವಾಗಬಹುದು. ಇದು ಹೆಚ್ಚಾಗಿ ಪ್ರತೀ ದಿನ ಉಪಯೋಗಿಸುವ ಲಿಪ್ ಸ್ಟಿಕ್ ಗಳಲ್ಲಿ ಕಂಡುಬರುತ್ತದೆ. ಆದುದರಿಂದ ಮುಂದಿನ ಬಾರಿ ಮೇಕಪ್ ಮಾಡುವ ಮೊದಲು ಯೋಚಸಿ..
ಥಾಲೇಟ್ಗಳಿಗಳು
ಇದು ಹೆಚ್ಚಾಗಿ ಮಕ್ಕಳ ಆಟಿಕೆಗಳಲ್ಲಿ ಉಪಯೋಗಿಸಲಾಗುತ್ತದೆ. ಅದಲ್ಲದೆ ಇದನ್ನು ಕೆಲವು ಸೌಂದರ್ಯವರ್ಧಕಗಳಲ್ಲಿ, ಬಾಡಿವಾಶ್, ಕೇಶವರ್ಧಕಗಳಲ್ಲಿ ಮತ್ತು ಪರಿಮಳಯುಕ್ತ ಲೋಷನ್ ಗಳಲ್ಲಿ ಉಪಯೋಗಿಸಲಾಗುತ್ತದೆ.
ಸಂಶೋಧನೆಯ ಪ್ರಕಾರ ಇದರಲ್ಲಿರುವ ರಾಸಾಯನಿಕ ಪದಾರ್ಥಗಳಿಂದ ಕ್ಯಾನ್ಸರ್, ಸಂತಾನೋತ್ಪತ್ತಿ ಸಮಸ್ಯೆಗಳು ಮತ್ತು ಜನನ ದೋಷಗಳು ಮುಂತಾದ ತೊಂದರೆಗಳಿಗೆ ಕಾರಣವಾಗಿದೆ ಎಂದು ಕಂಡು ಬಂದಿದೆ.
ಬೆಂಜೀನ್
ಬೆಂಜೀನ್ ಇದನ್ನು ಕಲ್ಲಿದ್ದಲು ಟಾರ್ ಪಡೆಯಲಾಗಿದ್ದು ಇದರ ಬಳಕೆ ಕ್ಯಾನ್ಸರ್ ಗೆ ಕಾರಣವಾಗಬಹುದು. ಇದು ಸಾಮಾನ್ಯವಾಗಿ ಕೂದಲು ಕಂಡೀಷನಿಂಗ್ ಮತ್ತು ಕೂದಲಿನ ಶೈಲಿಯನ್ನು ಬದಲಾಯಿಸಲು ಉಪಯೋಗಿಸುವ ಲೋಷನ್‌ಗಳಲ್ಲಿ ಕಂಡುಬರುತ್ತದೆ. ಇದರ ನಿರಂತರ ಬಳಕೆಯಿಂದ ಮನುಷ್ಯ ಭಾರೀ ಕ್ಯಾನ್ಸರ್ ಕಾಯಿಲೆಯಿಂದ ತುತ್ತಾಗಬಹುದು.



Click it and Unblock the Notifications












