For Quick Alerts
ALLOW NOTIFICATIONS  
For Daily Alerts

ಮಳೆಗಾಲದ ಸೌಂದರ್ಯ: ಅಡುಗೆ ಮನೆಯಲ್ಲಿಯೇ ಒಂದು ರೌಂಡಪ್!

By Jaya subrtamanya
|

ಬಿರು ಬೇಸಿಗೆಯಿಂದ ಮುಕ್ತಿಯನ್ನೊದಗಿಸಲು ಇಳೆಗೆ ಮಳೆರಾಯನ ಆಗಮನವಾಗಿದೆ. ಮಳೆಯೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಮಳೆಯಲ್ಲಿ ನೆನೆದರೂ ಬಿಸಿ ಬಿಸಿ ಚಹಾವನ್ನು ಹೀರಿ ಕುರುಕಲು ಮೆಲ್ಲುತ್ತಾ ತಂಪಾದ ವಾತಾವರಣವನ್ನು ಆಸ್ವಾದಿಸುವ ಪರಿಯೇ ಬೇರೆ. ಮಳೆಗಾಲದಲ್ಲೂ ರೋಗ ರುಜಿನಗಳು ನಮ್ಮ ಬೆನ್ನು ಬಿಡುವುದಿಲ್ಲ. ಆದರೂ ಆರೋಗ್ಯದ ಕಾಳಜಿಯನ್ನು ಮಾಡುತ್ತಾ ಮಳೆಗಾಲವನ್ನು ಬರಮಾಡಿಕೊಳ್ಳಲು ನಾವು ಸಿದ್ಧರಾಗಲೇಬೇಕು. ಮಳೆಗಾಲದ ಸಮಯದಲ್ಲಿ ತ್ವಚೆಯ ಆರೈಕೆಗೆ ಸೂಕ್ತ ಸಲಹೆಗಳು

ಮಳೆಗಾಲದಲ್ಲಿ ತಂಪಿನ ವಾತಾವರಣ ಇರುವುದರಿಂದ ತ್ವಚೆಗೆ ಇದು ತೀಕ್ಷ್ಣ ಪರಿಣಾಮವನ್ನು ಬೀರುತ್ತದೆ. ನೀವು ಒಣ ತ್ವಚೆಯುಳ್ಳವರು ಎಂದಾದಲ್ಲಿ ಈ ಸಮಸ್ಯೆ ತೀರಾ ಬಿಗಡಾಯಿಸುತ್ತದೆ. ಮಳೆಗಾಲವು ಜನರ ಮೇಲೆ ಬೀರುವ ಋಣಾತ್ಮಕ ಅಂಶ ಇದಾಗಿದೆ ಎಂದೇ ಹೇಳಬಹುದು. ವಾತಾವರಣದಲ್ಲಿರುವ ಆರ್ದ್ರತೆ ನಿಮ್ಮ ತ್ವಚೆಯನ್ನು ಒಣಗಿಸುತ್ತದೆ.

2 Kitchen Ingredients To Reduce Dry Skin During Monsoon!

ಹೊರಗಡೆ ಅಡ್ಡಾಡುವವರು ನೀವಾಗಿದ್ದು ಮಳೆಗೆ ಸಿಕ್ಕಿ ಒದ್ದೆಯಾಗಿದ್ದೀರಿ ಎಂದಾದಲ್ಲಿ ನೀರಿನಲ್ಲಿರುವ ಕೊಳಕು ಮತ್ತು ಹಾನಿಕಾರಕ ಅಂಶಗಳು ನಿಮ್ಮ ತ್ವಚೆಯ ಮಾಯಿಶ್ಚರೈಸರ್ ಅನ್ನು ಹೀರಿಕೊಂಡು ನಿಮ್ಮ ತ್ವಚೆಯನ್ನು ಅನಾರೋಗ್ಯಕರ ಮತ್ತು ಒರಟಾಗಿಸುತ್ತದೆ. ಹಾಗಿದ್ದರೆ ಈ ಸಮಸ್ಯೆಗೆ ಪರಿಹಾರವೂ ನಿಮ್ಮ ಕೈಯಲ್ಲೇ ಇದ್ದು ಸೂಕ್ತ ಮನೆಮದ್ದನ್ನು ಪಾಲಿಸುವುದರ ಮೂಲಕ ಒಣತ್ವಚೆಯನ್ನು ನಿವಾರಿಸಿಕೊಳ್ಳಬಹುದಾಗಿದೆ. ಹಾಗಿದ್ದರೆ ಬನ್ನಿ ಮನೆಯಲ್ಲೇ ಈ ಪರಿಹಾರವನ್ನು ತಯಾರು ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಕಂಡುಕೊಳ್ಳೋಣ.... ಅಡುಗೆ ಮನೆಯಲ್ಲಿಯೇ ಇದೆ, ಸೌಂದರ್ಯಕ್ಕೆ ಪರಿಹಾರ!

ಬೇಕಾಗುವ ಸಾಮಾಗ್ರಿಗಳು
*ಅವೊಕಾಡೊ (ಬೆಣ್ಣೆಹಣ್ಣು) - 1
*ತೆಂಗಿನೆಣ್ಣೆ - 1 ಚಮಚ

ಅವೊಕಾಡೊ ಮತ್ತು ತೆಂಗಿನೆಣ್ಣೆ ನಿಮ್ಮ ತ್ವಚೆಗೆ ಅದ್ಭುತ ಪರಿಹಾರವನ್ನು ನೀಡಲಿದ್ದು ಇದರಲ್ಲಿರುವ ಹೈಡ್ರೇಟ್ ಮಾಡುವ ಗುಣಗಳು ತ್ವಚೆಯನ್ನು ಮಾಯಿಶ್ಚರೈಸ್ ಮಾಡಿ ತ್ವಚೆಯ ಒಣತ್ವವವನ್ನು ನಿವಾರಿಸಿ ತ್ವಚೆಯ ಬಿರುಕುಗಳನ್ನು ಹೋಗಲಾಡಿಸುತ್ತದೆ.

ನಿಮ್ಮ ತ್ವಚೆಯು ಕಳೆದುಕೊಂಡಿರುವ ಮಾಯಿಶ್ಚರೈಸ್ ಮಟ್ಟವನ್ನು ಇದು ಮರಳಿ ನೀಡಲಿದ್ದು ನಿಮ್ಮ ತ್ವಚೆಯ ಪಿಎಚ್ ಮಟ್ಟವನ್ನು ನಿಯಂತ್ರಿಸುತ್ತದೆ ಅಂತೆಯೇ ತ್ವಚೆಯನ್ನು ಮೃದುವಾಗಿಸಿ ಒಣ ಪ್ಯಾಚ್‎ಗಳನ್ನು ಹೋಗಲಾಡಿಸುತ್ತದೆ. ಬ್ಯೂಟಿ ಟಿಪ್ಸ್: ಬೆಣ್ಣೆ ಹಣ್ಣಿನಲ್ಲಿದೆ-ಬೆಣ್ಣೆಯಂತಹ ಸೌಂದರ್ಯ!

ತಯಾರು ಮಾಡುವ ವಿಧಾನ ಮತ್ತು ತ್ವಚೆಗೆ ಹಚ್ಚಿಕೊಳ್ಳುವ ರೀತಿ
*ಮೊದಲಿಗೆ ಅವೊಕಾಡೊ ತಿರುಳನ್ನು ಬೇರ್ಪಡಿಸಿ ಬೌಲ್‎ಗೆ ಹಾಕಿ
*ಇದಕ್ಕೆ 1 ಚಮಚ ತೆಂಗಿನೆಣ್ಣೆಯನ್ನು ಸೇರಿಸಿ
*ಈಗ ಎರಡೂ ಸಾಮಾಗ್ರಿಗಳನ್ನು ಚೆನ್ನಾಗಿ ಬೆರೆಸಿಕೊಳ್ಳಿ


*ನಿಮ್ಮ ತ್ವಚೆಯ ಪ್ಯಾಕ್ ಈಗ ಹಚ್ಚಲು ಸಿದ್ಧವಾಗಿದೆ
*ದಪ್ಪನೆಯ ಪೇಸ್ಟ್ ಅನ್ನು ಬೇಕಾದಲ್ಲಿಗೆ ಹಚ್ಚಿಕೊಳ್ಳಿ
*ಇದನ್ನು 20 ನಿಮಿಷಗಳ ಕಾಲ ಹಾಗೆಯೇ ಬಿಡಿ
*ಈಗ, ಮೃದುವಾದ ಬಾಡಿ ವಾಶ್ ಜೊತೆಗೆ ನೀರಿನಲ್ಲಿ ಮುಖವನ್ನು ತೊಳೆದುಕೊಳ್ಳಿ. ಮಳೆಗಾಲ ಬಂತೆಂದರೆ ಸಾಕು ಕೂದಲುದುರುವ ಸಮಸ್ಯೆ!
English summary

2 Kitchen Ingredients To Reduce Dry Skin During Monsoon!

Due to the rise of humidity in the atmosphere, your skin tends to dry out, especially if you already have a dry skin type, the problem worsens during monsoon. So, apart from making sure that you do not run about in the rain too much, you can also try a homemade remedy to get rid of the dry skin during monsoon. Read all about it, here!
X
Desktop Bottom Promotion