For Quick Alerts
ALLOW NOTIFICATIONS  
For Daily Alerts

ಪಾರ್ಟಿ ಲುಕ್‌ಗೆ ಶಿಮ್ಮರಿ ಐ ಮೇಕಪ್ ಹೀಗಿರಲಿ

|

ಕಣ್ಣಿನಲ್ಲೇ ಕೊಲ್ತಾಳೆ, ಕಣ್ಸನ್ನೆ, ಕಮಲದಂಥ ಕಣ್ಣು ಎಂಬ ಮಾತುಗಳು ಎಷ್ಟು ಜನಜನಿತ ಅಲ್ಲವೇ, ಹುಡುಗಿಯರ ಕಣ್ಣುಗಳಲ್ಲಿ ಅಂದೆಂತ ಶಕ್ತಿ ಇದೆ ಎಂಬುದನ್ನು ಅರ್ಥೈಸಿಕೊಳ್ಳಲು ಇಂಥ ಮಾಡುಗಳೇ ಸಾಕ್ಷಿ. ಹೀಗೆ ಕಣ್ಣುಗಳು ಕೊಲ್ಲುವಷ್ಟು ಅಂದವಾಗಿ ಕಾಣಬೇಕು ಎಂದಾದರೆ ಕಣ್ಣುಗಳಿಗೆ ಸ್ವಲ್ಪ ಮೇಕಪ್ ಮಾಡಿಕೊಳ್ಳುವುದು ಒಳ್ಳೆಯದು. ಈಗಿನ ಕಾಲದಲ್ಲಿ ಟ್ರೆಂಡಿಯಾಗಿರುವ ಮೇಕಪ್ ಅನ್ನು ಎಲ್ಲರೂ ಬಳಸಲು ಟ್ರೈ ಮಾಡುತ್ತಾರೆ. ಶಿಮ್ಮರಿ ಮೇಕಪ್ ಈಗಿನ ಸೆಲೆಬ್ರೆಟಿಗಳ ಮತ್ತು ಯುವತಿಯರ ಹಾಟ್ ಫೇವರೆಟ್ ಎನಿಸಿದೆ.

ಪ್ರಿಯಾಂಕ ಚೋಪ್ರಾರ ಬ್ಯೂಟಿ ಬಗ್ಗೆ ಹೇಳುವುದಾದರೆ ಆಕೆ ತನ್ನ ಮೇಕಪ್ ನಲ್ಲಿ ಅತೀ ಹೆಚ್ಚು ಪ್ರಯೋಗಗಳನ್ನು ಮಾಡುತ್ತಾರೆ. ಆಕೆಯ ಹೇರ್ ಸ್ಟೈಲ್, ಕಣ್ಣಿನ ಮೇಕಪ್ ಗೆ ಬಳಸುವ ಬಣ್ಣಗಳು ಎಲ್ಲವೂ ಕೂಡ ಬೋಲ್ಡ್ ಆಗಿರುತ್ತದೆ ಮತ್ತು ಗಾಢವಾಗಿರುತ್ತದೆ. ಆಕೆಯ ಕಣ್ಣಿನ ಅಂದಕ್ಕೆ ಯಾವಾಗಲೂ ಕೂಡ ಆಕೆ ಶಿಮ್ಮರಿ ಕಣ್ಣುಗಳನ್ನು ಹೊಂದಿರಲು ಬಯಸುತ್ತಾಳೆ.

Make-Up

ಮೇಟಾಲಿಕ್ ಶೇಡ್ಸ್ ನಿಂದ ಚಿಣ್ಕಿ ಗ್ಲಿಟರ್ ಅನ್ನು ಕಣ್ಣುಗಳಿಗೆ ಬಳಸುವುದರಿಂದಾಗಿ ಪ್ರಿಯಾಂಕ ಚೋಪ್ರಾ ಯಾವಾಗಲೂ ಕೂಡ ಕಣ್ಣುಗಳಲ್ಲೇ ಎಲ್ಲರನ್ನೂ ಸೆಳೆಯುವ ಆಕರ್ಷಣೆಯನ್ನು ಹೊಂದಿರುತ್ತಾಳೆ. ಪ್ರಿಯಾಂಕ ಎಲ್ಲಾ ರೀತಿಯ ಬ್ಯೂಟಿ ಟ್ರೆಂಡ್ ಅನ್ನೂ ಪ್ರಯತ್ನಿಸುತ್ತಾಳೆ.

ಶಿಮ್ಮರಿ ಕಣ್ಣಿನ ಮೇಕಪ್ ಮಾಡಿಕೊಳ್ಳುವುದು ಕಣ್ಣಿನ ಅಂದವನ್ನೇನೋ ಹೆಚ್ಚಿಸುತ್ತದೆ ನಿಜ. ಆದರೆ ಅದನ್ನು ಮಾಡಿಕೊಳ್ಳುವಾಗ ಕೆಲವು ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ. ಹೌದು ನಾವಿಲ್ಲಿ ಶಿಮ್ಮರಿ ಐ ಮೇಕಪ್ ಮಾಡಿಕೊಳ್ಳುವಾಗ ಪಾಲಿಸಬೇಕಾಗಿರುವ 5 ಪ್ರಮುಖ ನಿಯಮಗಳ ಬಗ್ಗೆ ನಿಮಗೆ ತಿಳಿಸಿಕೊಡುತ್ತಿದ್ದೇವೆ. ನೀವೂ ಕೂಡ ಶಿಮ್ಮರಿ ಐ ಮೇಕಪ್ ಅನ್ನು ಇಷ್ಟಪಡುವವರಾಗಿದ್ದಲ್ಲಿ ಖಂಡಿತ ಈ ನಿಯಮಗಳನ್ನು ಪಾಲಿಸಿ ಮೇಕಪ್ ಮಾಡಿಕೊಳ್ಳುವುದು ಬಹಳ ಒಳ್ಳೆಯದು.

1. ಅತಿಯಾಗಿ ಗ್ಲಿಟ್ಟರ್ ಬಳಸಬೇಡಿ

1. ಅತಿಯಾಗಿ ಗ್ಲಿಟ್ಟರ್ ಬಳಸಬೇಡಿ

ಕೆಲವು ಮಹಿಳೆಯರು ಅತಿಯಾಗಿ ಶಿಮ್ಮರ್ ಅನ್ನು ತಮ್ಮ ಕಣ್ಣುಗಳಿಗೆ ಹಚ್ಚಿಕೊಳ್ಳುತ್ತಾರೆ. ಮೊದಲಿಗೆ ನಿಮ್ಮ ಕೈಗಳಲ್ಲಿ ಪ್ರೊಡಕ್ಟ್ ಅನ್ನು ಪ್ರಯತ್ನಿಸಿ. ಅದೆಷ್ಟು ಹೊಳೆಯುತ್ತದೆ ಎಂಬುದನ್ನು ಗಮನಿಸಿಕೊಳ್ಳಿ. ಹೀಗೆ ಮಾಡಿಕೊಳ್ಳುವುದರಿಂದಾಗಿ ಅತಿಯಾಗಿ ಶಿಮ್ಮರ್ ನಿಮ್ಮ ಕಣ್ಣುಗಳಿಗೆ ಅಪ್ಲೈ ಆಗುವುದನ್ನು ತಡೆಯಬಹುದು. ಬೇರೆ ಮೇಕಪ್ ಗಳ ಜೊತೆಗೆ ನಿಮ್ಮ ಶಿಮ್ಮರಿ ಐ ಲುಕ್ ಬ್ಯಾಲೆನ್ಸ್ ಆಗುವಂತೆ ಮಾಡುವುದಕ್ಕೆ ಇದು ನೆರವಾಗುತ್ತದೆ. ಅತಿಯಾಗಿ ಶಿಮ್ಮರಿಯಾಗಿ ಅಲಂಕಾರದ ಚೆಂದ ಹಾಳಾಗುವುದನ್ನು ತಪ್ಪಿಸುವುದಕ್ಕಾಗಿ ಬ್ಲಾಕ್ ಲೈನರ್ ಮತ್ತು ಮಸ್ಕರಾದ ಕೋಟಿಂಗ್ ಅನ್ನು ಪರಿಪೂರ್ಣವಾಗಿ ಮಾಡಿಕೊಳ್ಳಿ.

2. ಸರಿಯಾದ ಪ್ರೊಡಕ್ಟ್ ಅನ್ನು ಆಯ್ಕೆ ಮಾಡಿಕೊಳ್ಳಿ

2. ಸರಿಯಾದ ಪ್ರೊಡಕ್ಟ್ ಅನ್ನು ಆಯ್ಕೆ ಮಾಡಿಕೊಳ್ಳಿ

ಗ್ಲಿಟ್ಟರಿ ಮೇಕಪ್ ಅನ್ನು ಆಯ್ಕೆ ಮಾಡಿಕೊಳ್ಳುವಾಗ ಸಾಕಷ್ಟು ಪ್ರೊಡಕ್ಟ್ ಗಳು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತದೆ. ನಿಮಗೆ ಆರಾಮದಾಯಕ ಅನ್ನಿಸುವ ಪ್ರೊಡಕ್ಟ್ ಅನ್ನೇ ಆಯ್ಕೆ ಮಾಡಿಕೊಳ್ಳಿ. ಒಂದು ವೇಳೆ ಅಂಟಿಸುವ ಗ್ಲಿಟ್ಟರ್ ಅನ್ನು ರೂಕಿ ಜೊತೆಗೆ ಅಪ್ಲೈ ಮಾಡುವುದೇ ಆದಲ್ಲಿ ಕ್ರೀಮಿ ಶಾಡೋವನ್ನು ಬಳಕೆ ಮಾಡುವುದು ಒಳಿತು. ಪೆನ್ಸಿಲ್ ಮತ್ತು ಸ್ಟಿಕ್‌ಗಳನ್ನೂ ಕೂಡ ನೀವು ಕೊಂಡುಕೊಳ್ಳಬಹುದು. ಇವುಗಳು ನಿಮಗೆ ಹೆಚ್ಚು ಉತ್ತಮವಾದ ಮೇಕಪ್‌ಗೆ ನೆರವು ನೀಡುತ್ತದೆ.

3. ಸೂಕ್ಷ್ಮ ಕಣ್ಣುಗಳಾಗಿದ್ದಲ್ಲಿ ಗ್ಲಿಟರ್ ಅನ್ನು ಬಳಸಬೇಡಿ

3. ಸೂಕ್ಷ್ಮ ಕಣ್ಣುಗಳಾಗಿದ್ದಲ್ಲಿ ಗ್ಲಿಟರ್ ಅನ್ನು ಬಳಸಬೇಡಿ

ಗ್ಲಿಟ್ಟರ್ ನಲ್ಲಿರುವ ಸಣ್ಣಸಣ್ಣ ಕಣಗಳು ನಿಮ್ಮ ಕಣ್ಣುಗಳ ಕಾರ್ನಿಯಾವನ್ನು ನೋಯಿಸುತ್ತದೆ ಎಂಬ ವಿಚಾರ ನಿಮಗೆ ತಿಳಿದಿದೆಯೇ?. ನೀವು ಗ್ಲಿಟ್ಟರ್ ಮೇಕಪ್ ಅನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬ ಬಗ್ಗೆ ತಿಳಿದಿಲ್ಲವಾದರೆ ಖಂಡಿತ ಮೇಕಪ್‌ ಮಾಡಿಕೊಳ್ಳದೇ ಇರುವುದೇ ಒಳ್ಳೆಯದು. ಅಲರರ್ಜಿಕಾರಕ ಗ್ಲಿಟ್ಟರ್ ಪೌಡರ್‌ಗಳಿಂದ ದೂರವಿರುವುದೇ ಒಳ್ಳೆಯದು. ಒಂದು ವೇಳೆ ನೀವು ಲೆನ್ಸ್ ಬಳಸುವವರಾಗಿದ್ದಲ್ಲಿ, ಸೂಕ್ಷ್ಮ ಕಣ್ಣುಗಳನ್ನು ಹೊಂದಿರುವವರಾಗಿದ್ದಲ್ಲಿ ಕ್ರೀಮಿಯಾಗಿರುವ ಮತ್ತು ಸ್ಟಿಕ್ಕಿಯಾಗಿರುವ ಅಂದರೆ ಅಂಟುವಂತಿರುವ ಪ್ರೊಡಕ್ಟ್ ಗಳಿಗೆ ಮೊರೆ ಹೋಗುವುದು ಒಳಿತು. ಗ್ಲಿಟ್ಟರಿ ಪ್ರೊಡಕ್ಟ್ ಗಳು ನಿಮ್ಮ ಕಣ್ಣುಗಳಿಗೆ ಹಾನಿ ಮಾಡುವ ಸಾಧ್ಯತೆ ಇರುತ್ತದೆ.

4. ಕಲರ್ ಪಾಪ್ ಮಾಡಿ

4. ಕಲರ್ ಪಾಪ್ ಮಾಡಿ

ಶಿಮ್ಮರಿ ಮೇಕಪ್ ಪಾಪ್ ಆಗಬೇಕು ಎಂದು ನೀವು ಬಯಸುವುದಾದರೆ ಲಿಡ್ಸ್ ಜೊತೆಗೆ ಬೇಸ್ ಅನ್ನು ಪ್ರಿಪೇರ್ ಮಾಡಿಕೊಳ್ಳಿ. ನೀವು ಆದಷ್ಟು ತಿಳಿಯಾದ ಶಾಡೋ ಬಳಸಿ ಅಥವಾ ಬಿಳಿ ವರ್ಣದ ಐಶಾಡೋ ಬಳಸುವುದು ಸೂಕ್ತ. ಆ ಮೂಲಕ ನೀವು ಬಣ್ಣವನ್ನು ಪಾಪ್ ಮಾಡುವುದಕ್ಕೆ ಅಥವಾ ಇನ್ನಷ್ಟು ಸುಂದರವಾಗಿ ಕಾಣುವಂತೆ ಮಾಡುವುದಕ್ಕೆ ಸಾಧ್ಯವಾಗುತ್ತದೆ.

5. ಹೆಚ್ಚುವರಿ ಗ್ಲಿಟರ್ ಅನ್ನು ತೆಗೆದುಬಿಡಿ

5. ಹೆಚ್ಚುವರಿ ಗ್ಲಿಟರ್ ಅನ್ನು ತೆಗೆದುಬಿಡಿ

ಗ್ಲಿಟ್ಟರ್ ಐ ಮೇಕಪ್ ಮಾಡುವಾಗ ಕಣ್ಣುಗಳ ಮೇಕಪ್ ಅನ್ನೇ ಮೊದಲಿಗೆ ಪ್ರಾರಂಭಿಸಿ ನಂತರ ಬೇಸ್ ಮೇಕಪ್ ಗೆ ತೆರಳುವುದು ಸೂಕ್ತವಾಗಿರುತ್ತದೆ. ಒಮ್ಮೆ ಮೇಕಪ್ ಮುಗಿದ ನಂತರ ನೀವು ಕಣ್ಣುಗಳ ಅಡಿಯಲ್ಲಿ ಮತ್ತು ಗಲ್ಲಗಳಲ್ಲಿರುವ ಹೆಚ್ಚುವರಿ ಶಿಮ್ಮರ್ ಅನ್ನು ತೆಗೆಯುವುದಕ್ಕಾಗಿ ಸ್ಟಿಕ್ಕಿ ಟೇಪ್ ಅನ್ನು ಬಳಸಿ. ಇಲ್ಲವೇ ಹತ್ತಿಯನ್ನು ಬಳಸಿ ಕೂಡ ಹೆಚ್ಚುವರಿ ಶಿಮ್ಮರ್ ಅನ್ನು ತೆಗೆಯಬಹುದು.

Read more about: eye makeup tips ಕಣ್ಣು
English summary

How To Wear Glitter Eye Make-up- 5 Rules Of Wearing Glitter Make-Up

When it comes to Priyanka Chopra's beauty looks, she loves to experiment with her make-up. Be it her hairstyles, eye make-up or choices of colours, she loves going bold and loud. And, the one thing she loves to sport is shimmery eyes. From metallic shades to specs of chunky glitter on eyes, she has tried almost every beauty trend out there. While shimmery eye make-up is beautiful to look at, it is also tricky to pull off. Here's a look at five rules you must follow to pull of this trend:
X
Desktop Bottom Promotion