For Quick Alerts
ALLOW NOTIFICATIONS  
For Daily Alerts

ಹಳ್ಳಿ ಮದ್ದು ಇರಬೇಕಾದರೆ ತಲೆಹೊಟ್ಟಿನ ಸಮಸ್ಯೆಯ ಚಿಂತೆ ಏತಕ್ಕೆ?

ತಲೆಹೊಟ್ಟು ನಿವಾರಣೆಗೆ ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಶಾಂಪೂಗಳು ಹಾಗೂ ಔಷಧಿಗಳು ಲಭ್ಯವಿದೆ, ಆದರೆ ಫಲಿತಾಂಶ ಮಾತ್ರ ಶೂನ್ಯ! ಚಿಂತಿಸದಿರಿ ಇಲ್ಲಿದೆ ನೋಡಿ ಸಿಂಪಲ್ ಮನೆಮದ್ದು

By Hemanth
|

ಒಮ್ಮೆ ಕೂದಲಿಗೆ ಕೈಯಾಡಿಸಿದರೆ ಸಾಕು, ಗಾಳಿಗೆ ತರಗೆಲೆಗಳು ಹಾರಿ ಹೋಗುವಂತೆ ತಲೆಯಿಂದ ತಲೆಹೊಟ್ಟು ಬರುತ್ತಾ ಇರುತ್ತದೆ. ಇದು ಕೇವಲ ನಿಮ್ಮೊಬ್ಬರ ಸಮಸ್ಯೆಯಲ್ಲ. ಹಲವಾರು ಮಂದಿ ಇಂತಹ ಸಮಸ್ಯೆಯನ್ನ ಎದುರಿಸುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ತಲೆಬುರುಡೆ ಒಣಗುವುದು ಇತ್ಯಾದಿ ಕಾರಣಗಳಿವೆ. ಲಿಂಬೆಹಣ್ಣನ್ನು ಬಳಸಿ ತಲೆ ಹೊಟ್ಟಿನಿಂದ ಮುಕ್ತಿ ಪಡೆಯಿರಿ

ತಲೆಹೊಟ್ಟಿಗೆ ನೀವು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಬಗೆಯ ಶಾಂಪೂಗಳನ್ನು ಪರೀಕ್ಷಿಸಿ ನೋಡಿರಬಹುದು. ಆದರೆ ಇದು ತಲೆಹೊಟ್ಟನ್ನು ಸಂಪೂರ್ಣವಾಗಿ ನಿವಾರಣೆ ಮಾಡುವಲ್ಲಿ ಯಶಸ್ವಿಯಾಗುವುದಿಲ್ಲ. ಇದರಿಂದ ನಿಮ್ಮ ಸಮಸ್ಯೆ ದಿನೇ ದಿನೇ ಹೆಚ್ಚುತ್ತಾ ಇರುತ್ತದೆ. ತಲೆಹೊಟ್ಟನ್ನು ಬೇರು ಸಮೇತ ಕಿತ್ತು ಹಾಕುವ ಮನೆಮದ್ದು

ಇದಕ್ಕೆ ಕಾರಣ ಶಾಂಪೂವಿನಲ್ಲಿರುವ ಹಾನಿಕಾರಕವಾದ ರಾಸಾಯನಿಕಗಳು. ತಲೆಹೊಟ್ಟನ್ನು ನಿವಾರಣೆ ಮಾಡಲು ನೀವು ಯಾವತ್ತಾದರೂ ಮನೆಮದ್ದನ್ನು ಬಳಸಿ ನೋಡಿದ್ದೀರಾ? ಅಪ್ಪಿತಪ್ಪಿಯೂ ತಲೆ ಹೊಟ್ಟಿನ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ

ಹಾಗಾದರೆ ಈಗ ಮನೆಮದ್ದನ್ನು ಪ್ರಯೋಗಿಸಿ ನೋಡುವಂತಹ ಸಮಯ ಬಂದಿದೆ. ಈ ಲೇಖನದಲ್ಲಿ ತಲೆಹೊಟ್ಟಿಗೆ ಪ್ರಯೋಗಿಸಬಹುದಾದ ಮನೆಮದ್ದಿನ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ಪ್ರಯೋಗಿಸಿ ನೋಡಿದರೆ ಫಲಿತಾಂಶ ಸಿಗುವುದು....


ಲಿಂಬೆ ಮತ್ತು ತೆಂಗಿನ ಎಣ್ಣೆ

ಲಿಂಬೆ ಮತ್ತು ತೆಂಗಿನ ಎಣ್ಣೆ

ಲಿಂಬೆಯು ತಲೆಯಲ್ಲಿ ಕಿಣ್ವ ಬೆಳವಣಿಗೆಯನ್ನು ತಡೆಯುತ್ತದೆ ಮತ್ತು ಪಿಎಚ್ ಮಟ್ಟವನ್ನು ಮರುಸ್ಥಾಪಿಸುತ್ತದೆ. ಇದರಿಂದ ತಲೆಹೊಟ್ಟು ನಿವಾರಣೆಯಾಗುವುದು. ತೆಂಗಿನ ಎಣ್ಣೆಯು ನೈಸರ್ಗಿಕವಾಗಿ ಆ್ಯಂಟಿಬ್ಯಾಕ್ಟೀರಿಯಾ ಗುಣವನ್ನು ಹೊಂದಿರುವ ಕಾರಣದಿಂದ ಇದು ತಲೆಬುರುಡೆಗೆ ತೇವಾಂಶ ಒದಗಿಸುವುದು.

ಲಿಂಬೆ ಮತ್ತು ತೆಂಗಿನ ಎಣ್ಣೆಯ ಮನೆಮದ್ದು ತಯಾರಿಸುವ ವಿಧಾನ

ಲಿಂಬೆ ಮತ್ತು ತೆಂಗಿನ ಎಣ್ಣೆಯ ಮನೆಮದ್ದು ತಯಾರಿಸುವ ವಿಧಾನ

ಎರಡು ಚಮಚ ಉಗುರುಬೆಚ್ಚಗಿನ ತೆಂಗಿನ ಎಣ್ಣೆಗೆ ಅಷ್ಟೇ ಪ್ರಮಾಣದ ಲಿಂಬೆ ರಸವನ್ನು ಬೆರೆಸಿಕೊಳ್ಳಿ. ಇದನ್ನು ತಲೆಬುರುಡೆಗೆ ಮಸಾಜ್ ಮಾಡಿ ಮತ್ತು 30 ನಿಮಿಷ ಕಾಲ ಹಾಗೆ ಬಿಡಿ. ಶಾಂಪೂವಿನಿಂದ ಕೂದಲು ತೊಳೆಯಿರಿ. ವಾರದಲ್ಲಿ ಮೂರು ಸಲ ಒಂದು ತಿಂಗಳ ಕಾಲ ಈ ಮನೆಮದ್ದನ್ನು ಪ್ರಯೋಗಿಸಿ ನೋಡಿ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿ ಫಂಗಲ್ ವಿರೋಧಿ ಗುಣಗಳು ಇರುವ ಕಾರಣದಿಂದ ಇದು ತುರಿಕೆ ಮತ್ತು ಕಿರಿಕಿರಿ ಉಂಟು ಮಾಡುವ ತಲೆಹೊಟ್ಟನ್ನು ದೂರವಿಡುವುದು. ಹಲವಾರು ರೋಗಗಳನ್ನು ಗುಣಪಡಿಸುವ ಸಾಮರ್ಥ್ಯವಿರುವ ಬೆಳ್ಳುಳ್ಳಿ ತಲೆಹೊಟ್ಟನ್ನು ದೂರವಿಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ. ಬೆಳ್ಳುಳ್ಳಿ ಜಜ್ಜಿ ಹಾಕಿದ ಹಾಲು ಕುಡಿದರೆ, ಆರೋಗ್ಯ ವೃದ್ಧಿ

ಬೆಳ್ಳುಳ್ಳಿ ಮನೆಮದ್ದು ತಯಾರಿ

ಬೆಳ್ಳುಳ್ಳಿ ಮನೆಮದ್ದು ತಯಾರಿ

ಎರಡು ಎಸಲು ಬೆಳ್ಳುಳ್ಳಿಯನ್ನು ತೆಗೆದುಕೊಂಡು ಅದನ್ನು ಜಜ್ಜಿ. ಇದನ್ನುಜೇನುತುಪ್ಪದ ಜತೆ ಸೇರಿಸಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಇದನ್ನು ತಲೆಬುರುಡೆಗೆ ಹಚ್ಚಿಕೊಂಡು ಸುಮಾರು 20 ನಿಮಿಷ ಕಾಲ ಹಾಗೆ ಬಿಟ್ಟುಬಿಡಿ. ಬಳಿಕ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ.

ಅಡುಗೆ ಸೋಡಾ

ಅಡುಗೆ ಸೋಡಾ

ಅಡುಗೆ ಸೋಡಾವು ತಲೆಹೊಟ್ಟನ್ನು ನಿವಾರಣೆ ಮಾಡುವ ಅಡುಗೆ ಸಾಮಗ್ರಿಗಳಲ್ಲಿ ಒಂದಾಗಿದೆ. ಇದರಲ್ಲಿ ಫಂಗಲ್ ವಿರೋಧಿ ಗುಣಗಳು ಇದೆ. ತಲೆಬುರುಡೆ ಒಣಗಲು ಮತ್ತು ತಲೆಹೊಟ್ಟು ಉಂಟು ಮಾಡಲು ಕಾರಣವಾಗುವ ಫಂಗಲ್ ಅನ್ನು ಇದು ನಿವಾರಿಸುತ್ತದೆ.ಅಡುಗೆ ಸೋಡಾದಿಂದ ಬರೋಬ್ಬರಿ ಏಳು ಪ್ರಯೋಜನಗಳಿವೆ!

ಮಾಡುವ ವಿಧಾನ

ಮಾಡುವ ವಿಧಾನ

ಒಂದು ಚಮಚ ಅಡುಗೆ ಸೋಡಾವನ್ನು ತೆಗೆದುಕೊಂಡು ಅದನ್ನು ತಲೆಬುರುಡೆಗೆ ಚೆನ್ನಾಗಿ ಉಜ್ಜಿಕೊಳ್ಳಿ. ಕೂದಲು ಸ್ವಲ್ಪ ಒದ್ದೆಯಾಗಿರಲಿ. ಹತ್ತು ನಿಮಿಷ ಕಾಲ ಸೋಡಾ ತಲೆಯಲ್ಲಿರಲಿ. ಬಳಿಕ ಇದನ್ನು ನೀರಿನಿಂದ ತೊಳೆಯಿರಿ.

ಮೆಂತೆ ಕಾಳು

ಮೆಂತೆ ಕಾಳು

ಮೆಂತೆ ಕಾಳಿನಲ್ಲಿ ಇರುವಂತಹ ಫಂಗಲ್ ವಿರೋಧಿ ಗುಣಗಳು ತಲೆಯನ್ನು ತಲೆಹೊಟ್ಟಿನಿಂದ ನಿವಾರಣೆ ಮಾಡುತ್ತದೆ. ಮೆಂತ್ಯೆ ಕಾಳುಗಳು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ತಲೆಹೊಟ್ಟನ್ನು ನಿವಾರಣೆ ಮಾಡುವಲ್ಲಿ ಇದು ಪ್ರಮುಖವಾಗಿ ಕಾರ್ಯನಿರ್ವಹಿಸುತ್ತದೆ. ಅಡುಗೆಮನೆಯ ಮೆಂತೆ- ಕೂದಲಿನ ಸರ್ವ ರೋಗಕ್ಕೂ ರಾಮಬಾಣ

ತಯಾರಿಸುವ ವಿಧಾನ

ತಯಾರಿಸುವ ವಿಧಾನ

ಎರಡರಿಂದ ಮೂರು ಚಮಚ ಮೆಂತ್ಯೆ ಕಾಳುಗಳನ್ನು ತೆಗೆದುಕೊಂಡು ಅದನ್ನು ರಾತ್ರಿ ನೀರಿಗೆ ಹಾಕಿ ನೆನೆಸಿಡಿ. ಮರುದಿನ ಇದನ್ನು ರುಬ್ಬಿಕೊಂಡು ಪೇಸ್ಟ್ ಮಾಡಿ ತಲೆಗೆ ಹಚ್ಚಿಕೊಂಡು ಮರುದಿನ ಶಾಂಪೂವಿನಿಂದ ತೊಳೆಯಿರಿ.

ಮೊಸರು

ಮೊಸರು

ಪರಜೈವಿಕ ಗುಣ ಮತ್ತು ಒಳ್ಳೆಯ ಬ್ಯಾಕ್ಟೀರಿಯಾವನ್ನು ಹೊಂದಿರುವ ಮೊಸರು ಕಿಣ್ವದ ಕೋಶಗಳು ಬೆಳವಣಿಗೆಯಾಗುವುದನ್ನು ತಡೆಯುವುದು. ಇದರಿಂದಾಗಿ ತಲೆಹೊಟ್ಟು ನಿವಾರಣೆಯಾಗುವುದು.

ಮನೆಮದ್ದು ತಯಾರಿಸುವ ಕ್ರಮ

ಮನೆಮದ್ದು ತಯಾರಿಸುವ ಕ್ರಮ

ತಲೆಯನ್ನು ಚೆನ್ನಾಗಿ ತೊಳೆದುಕೊಂಡು ಬಂದು ಒಂದು ಕಪ್ ಮೊಸರನ್ನು ತೆಗೆದುಕೊಂಡು ತಲೆಗೆ ಹಚ್ಚಿಕೊಂಡು ಸುಮಾರು 15 ನಿಮಿಷ ಕಾಲ ಹಾಗೆ ಬಿಡಿ. ಇದರ ಬಳಿಕ ಶಾಂಪೂ ಬಳಸಿ ಕೂದಲು ತೊಳೆಯಿರಿ.

English summary

Ingredients In Your Kitchen To Treat Dandruff

Here are the different kitchen ingredients that will help treat dandruff, which you could use at the comfort of your home.
X
Desktop Bottom Promotion