For Quick Alerts
ALLOW NOTIFICATIONS  
For Daily Alerts

ಲಿಂಬೆಹಣ್ಣನ್ನು ಬಳಸಿ ತಲೆ ಹೊಟ್ಟಿನಿಂದ ಮುಕ್ತಿ ಪಡೆಯಿರಿ

By Deepak
|

ಹದಿಹರೆಯದವರನ್ನು ಮತ್ತು ವಯಸ್ಕರನ್ನು ಅತೀ ಸಾಮಾನ್ಯವಾಗಿ ಕಾಡುವ ಮತ್ತು ಅತೀ ಕಿರಿಕಿರಿಯನ್ನು೦ಟು ಮಾಡುವ ಸಮಸ್ಯೆಗಳಲ್ಲೊ೦ದು ಈ ತಲೆಹೊಟ್ಟು. ತಲೆಹೊಟ್ಟು ಯಾವ ವಯಸ್ಸಿನಲ್ಲಿ ಬೇಕಾದರೂ ಕಾಣಿಸಿಕೊಳ್ಳಬಹುದು. ತಲೆಹೊಟ್ಟು ಸಾಮಾನ್ಯವಾಗಿ ಮುಜುಗುರಕ್ಕೀಡಾಗುವ ಸನ್ನಿವೇಶವನ್ನು೦ಟು ಮಾಡುತ್ತದೆ. ಏಕೆ೦ದರೆ, ತಲೆಹೊಟ್ಟು ತಲೆದೋರಿದಾಗ, ವ್ಯಕ್ತಿಯ ತಲೆಯಿ೦ದ ನಿರ್ಜೀವ ತ್ವಚೆಯು ಸಣ್ಣ ಸಣ್ಣ

ತುಣುಕುಗಳ ರೂಪದಲ್ಲಿ ಉದುರುತ್ತವೆ ಅಥವಾ ಕೆಲವೊಮ್ಮೆ ತಲೆಯ ಮೇಲೆ ಹಾಗೆಯೇ ಉಳಿದುಬಿಡುತ್ತವೆ ಇಲ್ಲವೇ ಕೆಲವೊಮ್ಮೆ ಧರಿಸಿಕೊ೦ಡಿರುವ ಬಟ್ಟೆಗಳ ಮೇಲೂ ಉದುರಿಬಿಡುತ್ತವೆ. ತಲೆಹೊಟ್ಟಿನ ಸಾಮಾನ್ಯವಾದ ರೋಗಲಕ್ಷಣಗಳೆ೦ದರೆ, ತಲೆಯ ಮೇಲೆ ಉರಿಯ೦ತಹ ಅನುಭವ, ತಲೆ ತುರಿಸುವಿಕೆ, ಮತ್ತು ನಿರ್ಜೀವ ತ್ವಚೆಯು ತುಣುಕುಗಳ ರೂಪದಲ್ಲಿ ತಲೆಯಿ೦ದ ಉದುರುವುದು.

ಹಾಗಾದರೆ ಇದನ್ನು ಹೇಗೆ ನಿಯಂತ್ರಣಕ್ಕೆ ತರುವುದು? ಚಿಂತಿಸಬೇಡಿ, ನಿಮ್ಮ ಅಡುಗೆ ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ಈ ಸಮಸ್ಯೆಯನ್ನು ಹತೋಟಿಗೆ ತರಬಹುದು. ಹೌದು, ತಲೆ ಹೊಟ್ಟಿನ ನಿವಾರಣೆಗಾಗಿ ಲಿಂಬೆ ಹಣ್ಣನ್ನು ಬಳಸುವುದು ಅನಾದಿಕಾಲದಿಂದಲೂ ನಡೆದುಕೊಂಡು ಬಂದಿರುವ ಚಿಕಿತ್ಸಾ ವಿಧಾನವಾಗಿದೆ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ದೊರೆಯುವ ತಳುಕು, ಬಳುಕಿನ, ರಂಗು ರಂಗಾದ ಜಾಹೀರಾತುಗಳ ಉತ್ಪನ್ನಗಳ ನಡುವೆ ನಾವು ಈ ಚಿಕಿತ್ಸಾ ವಿಧಾನವನ್ನು ಮರೆತೇ ಬಿಟ್ಟಿದ್ದೇವೆ.

Get Rid Of Dandruff Using Lemon

ಹಾಗಾಗಿ ತಲೆಹೊಟ್ಟಿನ ಸಮಸ್ಯೆಯನ್ನು ಹೊಡೆದಟ್ಟಲು, ಬಹಳ ಪರಿಣಾಮಕಾರಿ ಮನೆಮದ್ದಾದ ಲಿಂಬೆ ರಸದ ಬಗ್ಗೆ ನಾವು ಇಂದು ಚರ್ಚಿಸಲಿದ್ದೇವೆ. ಹೌದು. ತಲೆಹೊಟ್ಟಿನ ನಿವಾರಣೆಗೆ ಒ೦ದು ಚಮತ್ಕಾರಿಕ ನೈಸರ್ಗಿಕ ಪರಿಹಾರದ ರೂಪದಲ್ಲಿ ಲಿಂಬೆಯನ್ನು ನೀವು ನಿಶ್ಚಿತವಾಗಿಯೂ ಅವಲ೦ಬಿಸಬಹುದು. ಇನ್ನೇಕೆ ತಡ ಮುಂದೆ ಓದಿ... ಅಷ್ಟಕ್ಕೂ ತಲೆಹೊಟ್ಟಿನ ಸಮಸ್ಯೆಗೆ ನಿಜವಾದ ಕಾರಣವೇನು?

ಲಿಂಬೆಹಣ್ಣಿನ ಸ್ಕ್ರಬ್

ತಲೆಹೊಟ್ಟಿನ ಸಮಸ್ಯೆಗೆ ಲಿಂಬೆ ಹಣ್ಣಿನ ಸ್ಕ್ರಬ್ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಹಾಗಾಗಿ ಮೊದಲಿಗೆ ನಿಮ್ಮ ಕೂದಲಿನ ಬುಡದಲ್ಲಿ ಒಂದು ಲಿಂಬೆಹಣ್ಣಿನ ತುಂಡನ್ನು ಉಜ್ಜಿಕೊಳ್ಳಿ. ನಂತರ ಹಾಗೆಯೇ ಕೆಲವು ನಿಮಿಷ ಈ ರಸವು ನಿಮ್ಮ ಕೂದಲಿನಲ್ಲಿ ನೆನೆಯಲು ಬಿಡಿ. ಅದೇ ಸಮಯದಲ್ಲಿ ಮತ್ತೊಂದು ಅರ್ಧ ಭಾಗ ಲಿಂಬೆರಸವನ್ನು ನೀರಿನ ಮಗ್‌ಗೆ ಹಿಂಡಿಕೊಳ್ಳಿ. ಈ ಲಿಂಬೆರಸದ ನೀರಿನಿಂದ ತಲೆಯನ್ನು ತೊಳೆಯಿರಿ. ಈ ಪರಿಹಾರೋಪಾಯವನ್ನು ನೀವು ತಲೆ ಹೊಟ್ಟಿನಿಂದ ಮುಕ್ತರಾಗುವವರೆಗೆ ವಾರಕ್ಕೆ ಎರಡು ಮೂರು ಬಾರಿ ಪುನರಾವರ್ತಿಸಿ. ಆದರೆ ಎಚ್ಚರಿಕೆ: ಅಧಿಕ ಪ್ರಮಾಣದ ಲಿಂಬೆರಸವನ್ನು ಬಳಸಲು ಹೋಗಬೇಡಿ. ಇದರಲ್ಲಿರುವ ಆಮ್ಲೀಯ ಗುಣಗಳು ಕೂದಲಿಗೆ ಒಳ್ಳೆಯದಲ್ಲ. ಅವು ಕೂದಲನ್ನು ಬ್ಲೀಚ್ ಮಾಡಿಬಿಡುತ್ತವೆ.

Get Rid Of Dandruff Using Lemon

ಎಣ್ಣೆ ಮತ್ತು ಲಿಂಬೆರಸ

ತುರಿಕೆ ಸಮಸ್ಯೆಯನ್ನು ನೀಡುವ ತಲೆ ಹೊಟ್ಟಿಗೆ ಲಿಂಬೆ ರಸ ಮತ್ತು ಎಣ್ಣೆಯ ಪರಿಹಾರ ನಿಜಕ್ಕೂ ಒಳ್ಳೆಯದು. ಒಂದು ವೇಳೆ ನೀವು ತಲೆ ಹೊಟ್ಟಿಗೆ ತಕ್ಷಣದ ಪರಿಹಾರವನ್ನು ಕಾಣಬೇಕಾದಲ್ಲಿ ಒಂದು ಟೀ ಚಮಚ ಲಿಂಬೆ ರಸಕ್ಕೆ ಎರಡು ಟೇಬಲ್ ಚಮಚ ಎಣ್ಣೆಯನ್ನು ಬೆರೆಸಿಕೊಳ್ಳಿ. ಇದನ್ನು ನಿಮ್ಮ ಕೂದಲಿಗೆ ಲೇಪಿಸಿ ಮತ್ತು ಅದನ್ನು ಒಂದು ಗಂಟೆಗಳ ಕಾಲ ನೆನೆಯಲು ಬಿಡಿ. ಮತ್ತೊಂದು ವಿಧಾನ ಎಂದರೆ, ತೆಂಗಿನ ಎಣ್ಣೆಗೆ ಲಿಂಬೆ ಹಣ್ಣಿನ ಸಿಪ್ಪೆಗಳನ್ನು ಸೇರಿಸಿ. ಎಣ್ಣೆ ಮತ್ತು ಸಿಪ್ಪೆಗಳನ್ನು ಒಂದು ತಿಂಗಳು ಹಾಗೆಯೇ ಬಿಡಿ, ಇದರಿಂದ ನಿಮಗೆ ಒಳ್ಳೆಯ ಮೂಲಿಕೆಯಂತಹ ಎಣ್ಣೆ ಸಿಕ್ಕುತ್ತದೆ.

ಲಿಂಬೆ ಪ್ಯಾಕ್

ಇದು ತಲೆ ಹೊಟ್ಟನ್ನು ಹೋಗಲಾಡಿಸುವುದರ ಜೊತೆಗೆ ಕೂದಲಿನ ಸಮೃದ್ಧ ಪೋಷಣೆಗೂ ಸಹಾಯಕ. ಹಾಗಾಗಿ ಮೊದಲಿಗೆ ಬಟ್ಟಲಿನಲ್ಲಿ ಒಂದು ಪೂರ್ಣ ಪ್ರಮಾಣದ ಮೊಟ್ಟೆಯನ್ನು ತೆಗೆದುಕೊಳ್ಳಿ, ಅದಕ್ಕೆ ಒಂದು ಟೇಬಲ್ ಚಮಚ ಎಣ್ಣೆ ಮತ್ತು ಅರ್ಧ ಲಿಂಬೆಹಣ್ಣಿನ ರಸವನ್ನು ಸೇರಿಸಿ. ಈ ಪ್ಯಾಕ್ ಅನ್ನು ನಿಮ್ಮ ಕೂದಲಿಗೆ ಸರಿ ಸಮನಾಗಿ ಲೇಪಿಸಿ. ಈ ಪ್ಯಾಕ್ ನಿಮ್ಮ ಕೂದಲಿನಲ್ಲಿ ಅರ್ಧ ಗಂಟೆ ಕಾಲ ನೆನೆಯಲು ಬಿಡಿ. ನಂತರ ಶಾಂಪೂವಿನಿಂದ ತೊಳೆದುಕೊಳ್ಳಿ. ತಲೆಹೊಟ್ಟು ಸಮಸ್ಯೆ ನಿವಾರಿಸಲು 12 ನೈಸರ್ಗಿಕ ಮನೆಮದ್ದುಗಳು

Get Rid Of Dandruff Using Lemon

ಮೆಂತೆ ಮತ್ತು ಲಿಂಬೆ

ಮೆಂತೆ ಕಾಳುಗಳನ್ನು ರಾತ್ರಿಯೆಲ್ಲ ನೆನೆ ಹಾಕಿ, ಬೆಳಗ್ಗೆ ಅದನ್ನು ಪುಡಿ ಮಾಡಿಕೊಳ್ಳಿ. ಇದರಿಂದ ಪೇಸ್ಟ್ ತಯಾರಿಸಿಕೊಂಡು ಅದನ್ನು ಕೂದಲು ಮತ್ತು ಕೂದಲಿನ ಬುಡಕ್ಕೆ ಲೇಪಿಸಿ. ಒಂದು ಟೇಬಲ್ ಚಮಚ ಮೆಂತೆ ಪೇಸ್ಟ್‌ಗೆ ಒಂದು ಟೀ ಚಮಚ ಲಿಂಬೆರಸವನ್ನು ಬೆರೆಸಿಕೊಳ್ಳಿ. ಈ ಎರಡನ್ನು ಬೆರೆಸಿಕೊಂಡು ಕೂದಲಿಗೆ ಲೇಪಿಸಿಕೊಳ್ಳಿ. ಆಗ ಕೂದಲಿಗೆ ಪೋಷಣೆಯು ದೊರೆಯುತ್ತದೆ. ತಲೆಹೊಟ್ಟು ಮಾಯವಾಗುತ್ತದೆ.

English summary

Get Rid Of Dandruff Using Lemon

All of us face some or the other problem when it comes to our hair and scalp. While each one of it is difficult to manage, dandruff happens to be the master of all. Ask a person affected with dandruff and you will know the kinds of problems the person faces.On one hand the scalp is always itchy and on the other hand there are flakes forming on the scalp. There are various ways to use lemon, be it on its own or with other ingredients. From the following, you can choose the one that suits you the best.
Story first published: Wednesday, September 23, 2015, 23:26 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more