For Quick Alerts
ALLOW NOTIFICATIONS  
For Daily Alerts

ಅಪ್ಪಿತಪ್ಪಿಯೂ ತಲೆ ಹೊಟ್ಟಿನ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ

|

ತಲೆ ಹೊಟ್ಟಿನ ಸಮಸ್ಯೆ ಈಗ ಎಲ್ಲಾ ಕಡೆ, ಎಲ್ಲರಲ್ಲಿಯೂ ಕಾಣಿಸಿಕೊಳ್ಳುವಷ್ಟು ದೊಡ್ಡ ಸಮಸ್ಯೆಯಾಗಿದೆ. ಬಹುಶಃ ನೀವು ಸಹ ಗಮನಿಸಿರಬಹುದು. ನಿಮ್ಮ ತಲೆ ಮತ್ತು ಹೆಗಲ ಮೇಲೆ ಬಿಳಿಯ ಬಣ್ಣದ ಪುಡಿ ರೀತಿಯ ತುಣುಕುಗಳು ಅಲ್ಲಲ್ಲಿ ಬಿದ್ದಿರುವುದನ್ನು. ಅದನ್ನೇ ತಲೆ ಹೊಟ್ಟು ಎಂದು ಕರೆಯುತ್ತಾರೆ. ವೈದ್ಯಕೀಯ ವಿಜ್ಞಾನವು ಇದನ್ನು ಇನ್‍ಫೆಕ್ಷನ್ ಎಂದು ಪರಿಗಣಿಸುತ್ತದೆ.

ಇದು ತ್ವಚೆ, ಕೂದಲು ಮತ್ತು ಮಾನವನ ದೇಹಕ್ಕೂ ಸಹ ಹಾನಿಕಾರಕ. ಸತ್ಯಾಂಶವೆಂದರೆ, ತಲೆ ಹೊಟ್ಟು ಮಾನವನ ದೇಹಕ್ಕು ಸಹ ಹಾನಿಕಾರಕ. ಇದು ಮಾನವನ ದೇಹದ ಮೇಲೆ ಸಹ ಅಡ್ಡ ಪರಿಣಾಮಗಳನ್ನು ಉಂಟು ಮಾಡುತ್ತದೆ. ಅದಕ್ಕಾಗಿ ಅದನ್ನು ನಿವಾರಿಸಿಕೊಳ್ಳಬೇಕಾದುದು ಅತ್ಯಗತ್ಯ.

ತಲೆ ಹೊಟ್ಟು ಕೂದಲಿನಲ್ಲಿ ಸೃಷ್ಟಿಯಾಗಿ ಕೂದಲನ್ನು ಹಾಳು ಮಾಡುತ್ತದೆಯಾದರು, ಅದರಿಂದ ಮುಖದ ಮೇಲೆ ಅಡ್ಡ ಪರಿಣಾಮಗಳು ಉಂಟಾಗುತ್ತದೆ. 100 ಮಂದಿಯಲ್ಲಿ 50 ಜನರಲ್ಲಿ ಇದರಿಂದ ತ್ವಚೆಯ ಇನ್‌ಫೆಕ್ಷನ್‌ಗಳು ಕಂಡು ಬರುತ್ತವೆ. ವಿಶೇಷವಾಗಿ ಮುಖದ ಮೇಲೆ ಈ ಇನ್‍ಫೆಕ್ಷನ್ ಹೆಚ್ಚು ಕಂಡು ಬರುವುದರಿಂದ, ಈ ಸನ್ನಿವೇಶವು ತೀರಾ ಅಪಾಯಕಾರಿಯಾಗಿರುತ್ತದೆ. ಹಾಗೆಂದು ತಲೆ ಹೊಟ್ಟನ್ನು ಎಲ್ಲರೂ ನಿವಾರಿಸಿಕೊಳ್ಳಲು ಸಾಧ್ಯವಿಲ್ಲ. ಕೆಲವರಿಗೆ ಇದು ಕೆಲವು ವಾರಗಳ ಕಾಲ ಮಾತ್ರ ದೂರವಿರುತ್ತದೆ. ಮತ್ತೆ ಅದು ಅವರಿಗೆ ಕಾಡಲು ಆರಂಭಿಸುತ್ತದೆ. ಬನ್ನಿ ತಲೆಹೊಟ್ಟಿನಿಂದ ಕಾಣಿಸಿಕೊಳ್ಳುವ ಅಡ್ಡ ಪರಿಣಾಮಗಳು ಎಂತಹವು ಎಂದು ತಿಳಿದುಕೊಳ್ಳೋಣ: ತಲೆ ಹೊಟ್ಟಿನ ನಿವಾರಣೆಗೆ ಇಲ್ಲಿದೆ 7 ವಿಧಾನ

Side Effects Of Dandruff

ತುರಿಕೆ
ತಲೆ ಹೊಟ್ಟು ಹೆಚ್ಚಾದಷ್ಟು ತುರಿಕೆ ಕಾಣಿಸಿಕೊಳ್ಳುತ್ತದೆ. ಅದನ್ನು ನೀವು ನಿಲ್ಲಿಸಲು ಸಾಧ್ಯವಿಲ್ಲ. ಇದರಿಂದಾಗಿ ತಲೆಯನ್ನು ಕೆರೆದುಕೊಳ್ಳುತ್ತಲೆ ಇರಬೇಕು ಎಂದೆನಿಸುತ್ತದೆ. ಇದು ನಿಮಗೆ ಮುಜುಗರ ತಂದು ಕೊಡುವಂತಹ ಸಂಗತಿಯಾಗಿರುತ್ತದೆ. ಒಂದು ವೇಳೆ ನಿಮ್ಮ ತ್ವಚೆಯು ಒಣ ತ್ವಚೆಯಾಗಿದ್ದರೆ, ತಲೆ ಹೊಟ್ಟಿನ ಕುರಿತಾಗಿ ನೀವು ಸ್ವಲ್ಪ ಹೆಚ್ಚು ಕಾಳಜಿಯನ್ನು ವಹಿಸಬೇಕಾಗುತ್ತದೆ. ಆದ್ದರಿಂದ ನಿಮ್ಮ ತ್ವಚೆಯ ಎಣ್ಣೆಯ ಅಂಶವನ್ನು ಕಾಪಾಡಿಕೊಳ್ಳಿ. ವಿಶೇಷವಾಗಿ ಬೇಸಿಗೆ ದಿನಗಳಲ್ಲಿ, ತಪ್ಪದೆ ನಿಮ್ಮ ತ್ವಚೆಯಲ್ಲಿ ಎಣ್ಣೆಯಂಶವನ್ನು ಕಾಪಾಡಿಕೊಳ್ಳಿ. ಇದಕ್ಕಾಗಿ ನೀವು ಮೊಯಿಶ್ಚರೈಸಿಂಗ್ ಶಾಂಪೂವನ್ನು ಬಳಸಿ, ತಲೆಹೊಟ್ಟಿನ ಅಡ್ಡಪರಿಣಾಮಗಳನ್ನು ನಿಲ್ಲಿಸಿ.

ತಲೆ ಕೂದಲು ಉದುರುವಿಕೆ
ತಲೆ ಹೊಟ್ಟು ನಿಮ್ಮ ಕೂದಲಿನ ಬುಡದಲ್ಲಿನ ಸ್ವಾಭಾವಿಕ ಪದಾರ್ಥಗಳನ್ನು ಹಾಳು ಮಾಡುತ್ತದೆ. ಹೀಗೆ ತಲೆ ಹೊಟ್ಟಿನ ಕಾರಣದಿಂದ ತಲೆ ಕೂದಲು ಉದುರುವಿಕೆ ಕಾಣಿಸಿಕೊಳ್ಳುತ್ತದೆ. ಒಂದು ವೇಳೆ ನಿಮಗೆ ತಲೆ ಹೊಟ್ಟು ಕಾಣಿಸಿಕೊಂಡರೆ, ನಿಮಗೆ ತಲೆ ಕೂದಲು ಉದುರುವಿಕೆಯ ಅಪಾಯ ಹೆಚ್ಚು ಇರುತ್ತದೆ. ಆದರೂ ತಲೆಗೆ ಹಾಕುವ ಎಣ್ಣೆಯ ಉತ್ಪಾದಕರು ತಮ್ಮ ಎಣ್ಣೆಯನ್ನು ಬಳಸಿದರೆ ತಲೆಹೊಟ್ಟು ನಿವಾರಣೆಯಾಗುತ್ತದೆ ಎಂದು ಹೇಳುತ್ತಾರೆ. ಆದರೆ ನಿಜಾಂಶ ಎಂದರೆ ತಲೆ ಹೊಟ್ಟು ಯಾವತ್ತಿಗೂ ನಿವಾರಣೆಯಾಗುವುದಿಲ್ಲ.

ಮೊಡವೆ


ತಲೆ ಹೊಟ್ಟು ಮೊಡವೆಗಳನ್ನು ಉಂಟು ಮಾಡುತ್ತದೆ. ಇವೆಲ್ಲವು ಸಹ ತ್ವಚೆಯ ಇನ್‌ಫೆಕ್ಷನ್‌ಗಳಿಂದ ಕಂಡು ಬರುತ್ತವೆ. ಈ ಇನ್‌ಫೆಕ್ಷನ್‌ ಅನ್ನು ಸರಿಯಾಗಿ ಚಿಕಿತ್ಸೆ ಮಾಡಲಿಲ್ಲವಾದಲ್ಲಿ, ಅದು ಮತ್ತಷ್ಟು ಹೆಚ್ಚಾಗುತ್ತದೆ. ಹೀಗೆ ತಲೆ ಹೊಟ್ಟು ಒಂದು ಕಡೆಯಿಂದ ಮತ್ತೊಂದು ಕಡೆಗೆ ವಿಸ್ತರಿಸುತ್ತಾ ಸಾಗುತ್ತದೆ. ಹೀಗೆ ಈ ಇನ್‍ಫೆಕ್ಷನ್ ನಿಮ್ಮ ತ್ವಚೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಾ ಸಾಗುತ್ತದೆ.

ತುರಿಕೆ


ತ್ವಚೆಯ ಸಮಸ್ಯೆಗಳಲ್ಲಿಯೇ ತುರಿಕೆಯೇ ಅತ್ಯಂತ ಮುಜುಗರ ತರುವ ಸಮಸ್ಯೆಯಾಗಿರುತ್ತದೆ. ತಲೆಹೊಟ್ಟು ನಿಮ್ಮ ತಲೆಯಲ್ಲಿ ಅಸಹನೀಯವಾದ ತುರಿಕೆಯನ್ನು ತರುತ್ತದೆ. ಬಹುಶಃ ತಲೆಯನ್ನು ಕೆರೆದುಕೊಳ್ಳುವ ಹೆಚ್ಚು ಜನರನ್ನು ನೀವು ನೋಡಿರಬಹುದು. ಒಂದು ವೇಳೆ ನಿಮಗೆ ತಲೆ ಹೊಟ್ಟು ಬಂದಲ್ಲಿ, ಅದರಿಂದ ನಿಮಗೆ ಅತಿಯಾದ ತುರಿಕೆ ಕಾಡುತ್ತದೆ. ಅದನ್ನು ನೀವು ಸಹ ನಿಲ್ಲಿಸಲು ಸಾಧ್ಯವಾಗುವುದಿಲ್ಲ. ತಲೆಯನ್ನು ಕೆರೆದುಕೊಳ್ಳುವುದನ್ನು ನಿಮ್ಮಿಂದ ತಡೆಯಲು ಸಾಧ್ಯವಾಗುವುದಿಲ್ಲ. ಈ ಅಡ್ಡ ಪರಿಣಾಮಗಳು ನಿಮಗೆ ಮುಜುಗರ ತರುವುದರ ಜೊತೆಗೆ, ನಿಮ್ಮ ತ್ವಚೆಯನ್ನು ಸಹ ಹಾನಿಮಾಡುತ್ತದೆ.
ಆದ್ದರಿಂದ ಇದನ್ನು ತಪ್ಪದೆ ನಿವಾರಿಸಿಕೊಳ್ಳಿ.
English summary

Side Effects Of Dandruff

You may have often noticed white powdery substances scattered everywhere on your hair or shoulders. This is nothing but dandruff. Medical science considers it as a skin infection that can be extremely harmful for the skin, hair, and ultimately to the whole human body. The most common side effects of dandruf
Story first published: Saturday, June 27, 2015, 10:14 [IST]
X
Desktop Bottom Promotion