ಮನೆಮದ್ದು: ಕೂದಲಿನ ಸರ್ವರೋಗಕ್ಕೂ ಮೆಂತೆ-ಕರಿಬೇವಿನ ಎಣ್ಣೆ

By: Hemanth
Subscribe to Boldsky

ಕೂದಲು ಉದುರುವುದು, ತಲೆಹೊಟ್ಟು ಮತ್ತು ಕೂದಲು ತುಂಡಾಗುವುದು ಈ ಸಮಸ್ಯೆಗಳು ಇದ್ದರೆ ಬೇರೆ ಯಾವುದೇ ಸಮಸ್ಯೆಗಳು ಬೇಡ. ಯಾಕೆಂದರೆ ಸುಂದರ ಹಾಗೂ ಕಾಂತಿಯುತ ಕೂದಲು ಪ್ರತಿಯೊಬ್ಬರಿಗೂ ಬೇಕು. ಕೂದಲು ಆರೋಗ್ಯವಾಗಿದ್ದರೆ ಮಾತ್ರ ಮಹಿಳೆಯರ ಸೌಂದರ್ಯ ಕೂಡ ಎದ್ದು ಕಾಣುತ್ತದೆ. ಯಾವಾಗಲೂ ಕೂದಲು ಉದುರುತ್ತಾ ತಲೆಬುರುಡೆ ಸರಿಯಾಗಿ ಕಾಣಿಸುತ್ತಾ ಇದ್ದರೆ ಆಗ ಸೌಂದರ್ಯವೇ ನಾಶವಾಗುತ್ತದೆ. 

Oil for hair
 

ಕೂದಲಿನ ಆರೈಕೆಗಾಗಿ ಹಲವಾರು ರೀತಿಯ ಶಾಂಪೂ, ಕಂಡೀಷನರ್ ಇತ್ಯಾದಿಗಳನ್ನು ಬಳಸಿರಬಹುದು. ಆದರೆ ಇದರಿಂದ ಯಾವುದೇ ಪ್ರಯೋಜವಾಗಿರಲಿಕ್ಕಿಲ್ಲ. ಯಾಕೆಂದರೆ ಇವುಗಳಲ್ಲಿ ಇರುವಂತಹ ರಾಸಾಯನಿಕಗಳು ಕೂದಲಿಗೆ ಮತ್ತಷ್ಟು ಹಾನಿ ಉಂಟು ಮಾಡುತ್ತದೆಯೇ ಹೊರತು ಕೂದಲಿಗೆ ಆರೋಗ್ಯವನ್ನು ನೀಡುವುದಿಲ್ಲ. ಇಂತಹ ಸಂದರ್ಭದಲ್ಲಿ ನೈಸರ್ಗಿಕವಾಗಿ ಕೆಲವೊಂದು ಮನೆಮದ್ದನ್ನು ಬಳಸಿದರೆ ಕೂದಲಿನ ಹಲವಾರು ಸಮಸ್ಯೆಗಳನ್ನು ನಿವಾರಣೆ ಮಾಡಬಹುದು. ಇಂತಹ ಒಂದು ಅದ್ಭುತವಾಗಿರುವ ಎಣ್ಣೆಯ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ತಿಳಿಸಲಿದೆ.   ಉದ್ದನೆಯ ಕೂದಲಿಗೆ ಕರಿಬೇವಿನ ಹೇರ್ ಪ್ಯಾಕ್

ಮೆಂತೆ ಕಾಳು ಹಾಗೂ ಕರಿಬೇವನ್ನು ಬಳಸಿಕೊಂಡು ತಯಾರಿಸುವಂತಹ ಎಣ್ಣೆಯಿಂದ ಕೂದಲಿನ ಹಲವಾರು ಸಮಸ್ಯೆ ನಿವಾರಣೆ ಮಾಡಬಹುದು. ಇದು ಹೇಗೆ ಎಂದು ತಿಳಿದುಕೊಳ್ಳಿ. 

fenugreek seeds
 

ಬೇಕಾಗುವ ಸಾಮಗ್ರಿಗಳು

*ಎರಡು ಚಮಚ ಮೆಂತೆ ಕಾಳುಗಳು

*ಅರ್ಧ ಕಪ್ ತೆಂಗಿನ ಎಣ್ಣೆ

*ಒಂದು ಚಮಚ ಆಲಿವ್ ಎಣ್ಣೆ

*10-12 ಕರಿಬೇವಿನ ಎಲೆಗಳು

*ತಯಾರಿಸುವ ಸಮಯ: 10 ನಿಮಿಷ      ಕೂದಲು ಉದುರುವಿಕೆ ತಡೆಯುತ್ತೆ ಮೆಂತೆ ಹೇರ್ ಮಾಸ್ಕ್

ವಿಧಾನ

*ಅರ್ಧ ಕಪ್ ತೆಂಗಿನ ಎಣ್ಣೆಯನ್ನು ಒಂದು ಪಾತ್ರೆ ಹಾಕಿಕೊಂಡು ಅದನ್ನು ಬಿಸಿ ಮಾಡಿ.

*ಎರಡು ಚಮಚ ಮೆಂತೆ ಕಾಳುಗಳನ್ನು ಇದಕ್ಕೆ ಸೇರಿಸಿ ತೆಂಗಿನ ಎಣ್ಣೆಯೊಂದಿಗೆ ಕುದಿಯಲು ಬಿಡಿ.

*ಮೆಂತೆ ಕಾಳುಗಳು ಕಪ್ಪಗೆ ಆಗುವ ತನಕ ಕಾಯಿರಿ. ಈಗ ಒಂದು ಚಮಚ ಆಲಿವ್ ಎಣ್ಣೆಯನ್ನು ಹಾಕಿಕೊಂಡು ಮಿಶ್ರಣ ಮಾಡಿ.

*10-12 ಕರಿಬೇವನ್ನು ಹಾಕಿಕೊಂಡು ಅದು ಕಪ್ಪಗೆ ಆಗುವ ತನಕ ಬಿಸಿ ಮಾಡಿ. ಈಗ ಎಣ್ಣೆಯನ್ನು ತೆಗೆದು ಬದಿಗಿಟ್ಟು ತಣ್ಣಗಾಗಲು ಬಿಡಿ. 

curry leaves

*ಕರಿಬೇವಿನ ಎಲೆಗಳನ್ನು ಚೆನ್ನಾಗಿ ಹುಡಿ ಮಾಡಿಕೊಂಡು ಅದನ್ನು ಎಣ್ಣೆಯೊಂದಿಗೆ ಸರಿಯಾಗಿ ಮಿಶ್ರಣ ಮಾಡಿ.

*ಈಗ ಎಣ್ಣೆಯನ್ನು ಸೋಸಿಕೊಂಡು ಎರಡು ದಿನಕ್ಕೊಮ್ಮೆ ಇದನ್ನು ಬಳಸಿ.

ಕರಿಬೇವಿನ ಲಾಭಗಳು

*ಕರಿಬೇವಿನಲ್ಲಿ ಇರುವಂತಹ ಪ್ರೋಟೀನ್ ಮತ್ತು ಬೆಟಾ ಕ್ಯಾರೋಟಿನ್ ಕೂದಲು ತೆಳ್ಳಗಾಗುವುದು ಮತ್ತು ಉದುರುವುದನ್ನು ತಡೆಯುತ್ತದೆ. ಈ ಎಣ್ಣೆ ಬಳಸಿದರೆ ತಲೆಬೋಳಾಗುವುದನ್ನು ತಡೆಯಬಹುದು.

*ಕರಿಬೇವಿನಲ್ಲಿರುವ ಅಮಿನೋ ಆಮ್ಲವು ಕೂದಳಿನ ಕೋಶಗಳನ್ನು ಬಲಪಡಿಸಿ ಆರೋಗ್ಯವಾಗಿಡುತ್ತದೆ.

*ಕರಿಬೇವಿನಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ತಲೆಹೊಟ್ಟನ್ನು ಕಡಿಮೆ ಮಾಡಿ ಕೂದಲಿನ ಕೋಶಗಳನ್ನು ಬಲಗೊಳಿಸುತ್ತದೆ. ಇದರಿಂದಾಗಿ ಕೂದಲು ಬೆಳೆಯುತ್ತದೆ. 

fenugreek seeds
 

ಮೆಂತೆ ಕಾಳಿನ ಲಾಭಗಳು

*ಮೆಂತೆ ಕಾಳಿನಲ್ಲಿ ಇರುವಂತಹ ವಿಟಮಿನ್ ಬಿ ಅಕಾಲಿಕವಾಗಿ ಕೂದಲು ಬಿಳಿಯಾಗುವುದನ್ನು ತಡೆದು ಕೂದಲಿನ ಬುಡಕ್ಕೆ ಆಗುವ ಸಮಸ್ಯೆಯನ್ನು ತಪ್ಪಿಸುತ್ತದೆ.

*ಮೆಂತೆ ಕಾಳುಗಳು ಕೂದಲು ಉದುರುವುದನ್ನು ತಡೆಯುವುದು ಮತ್ತು ಕೂದಲು ತೆಳ್ಳಗಾಗದಂತೆ ಮಾಡುವುದು. ಮೆಂತೆ ಕಾಳಿನಲ್ಲಿ ಇರುವಂತಹ ಲೆಸಿತಿನ್ ಎನ್ನುವ ಅಂಶವು ಕೂದಲಿಗೆ ಕಾಂತಿ ಹಾಗೂ ಹೊಳಪನ್ನು ನೀಡುವುದು.

* ಮೆಂತೆ ಕಾಳಿನಲ್ಲಿ ಸಮೃದ್ಧವಾಗಿರುವಂತಹ ಆ್ಯಂಟಿಆಕ್ಸಿಡೆಂಟ್ ದೀರ್ಘಕಾಲದ ತನಕ ತಲೆಬುರುಡೆಯನ್ನು ತೇವಾಂಶದಿಂದ ಇಡುತ್ತದೆ ಮತ್ತು ಕೂದಲಿನ ಸತ್ತ ಕೋಶಗಳನ್ನು ತೆಗೆದುಹಾಕುವುದು.

* ಮೆಂತೆ ಕಾಳುಗಳು ಕೂದಲನ್ನು ಬುಡದಿಂದ ಬಲಿಷ್ಠಗೊಳಿಸಲು ತುಂಬಾ ಪರಿಣಾಮಕಾರಿ ಮತ್ತು ಕೂದಲಿನ ಕೋಶಗಳ ಸಮಸ್ಯೆಯನ್ನು ನಿವಾರಿಸುತ್ತದೆ. 

hair oil
 

ಈ ಎಣ್ಣೆ ಬಳಸುವ ಲಾಭಗಳು

*ಕೂದಲಿನ ಬುಡಕ್ಕೆ ಆಗಿರುವ ಹಾನಿಯನ್ನು ತಪ್ಪಿಸುವುದು.

*ತಲೆಬುರುಡೆಯನ್ನು ತೇವಾಂಶದಿಂದ ಇಡುತ್ತದೆ

*ಕೂದಲಿನ ಬೆಳವಣಿಗೆ ಹೆಚ್ಚಿಸುವುದು

*ಕೂದಲು ಉದುರುವುದನ್ನು ತಡೆಯುವುದು

*ಕೂದಲು ತುಂಡಾಗುವುದನ್ನು ತಡೆಯುವುದು

*ಅಕಾಲಿಕ ಬಿಳಿಯಾಗುವುದನ್ನು ತಪ್ಪಿಸುವುದು

* ತಲೆಹೊಟ್ಟನ್ನು ನಿವಾರಿಸುವುದು

* ತಲೆಬುರುಡೆಯ ಸೋಂಕು ತಡೆಯುವುದು    ರೇಷ್ಮೆಯಂತಹ ಕೂದಲಿಗೆ ಮೆಂತೆ- ಮೊಸರಿನ ಹೇರ್ ಪ್ಯಾಕ್

English summary

DIY- How To Make Fenugreek & Curry Leaf Infused Oil At Home

Fenugreek seeds and curry leaves are excellent ingredients to be used on the hair. These help to boost hair growth, deal with scalp issues, treat dandruff issues, prevent split ends and treat hair loss. Any kind of hair problems can be solved with fenugreek and curry leaf infused oil. So, let's start with the recipe of this magical oil.
Subscribe Newsletter