Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
ರೇಷ್ಮೆಯಂತಹ ಕೂದಲಿಗೆ ಮೆಂತೆ- ಮೊಸರಿನ ಹೇರ್ ಪ್ಯಾಕ್
ಭಾರತೀಯ ಅಡುಗೆ ಕೋಣೆಯ ಸಾಂಬಾರ ಪದಾರ್ಥಗಳಲ್ಲಿ ತನ್ನದೇ ಆದ ಪ್ರಾಮುಖ್ಯತೆ ಪಡೆದುಕೊಂಡಿರುವ ಮೆಂತೆ ಮತ್ತು ಮೆಂತೆ ಸೊಪ್ಪನ್ನು ವಿವಿಧ ರೀತಿಯ ಔಷಧಿಗಳಲ್ಲಿ ಬಳಸುತ್ತಾರೆ. ಆಯುರ್ವೇದದಲ್ಲಿಯೂ ಮೆಂತೆಗೆ ವಿಶೇಷ ಸ್ಥಾನವನ್ನು ನೀಡಲಾಗುತ್ತದೆ. ಇದರಲ್ಲಿನ ಕೆಲವೊಂದು ಗುಣಗಳು ಹಲವಾರು ರೋಗಗಳನ್ನು ನಿವಾರಣೆ ಮಾಡುತ್ತದೆ ಮಾತ್ರವಲ್ಲದೆ ಬರದಂತೆ ತಡೆಯುತ್ತದೆ. ಇಂತಹ ಗುಣಗಳುಳ್ಳ ಮೆಂತೆಯನ್ನು ತ್ವಚೆ ಮತ್ತು ಕೂದಲಿನ ಆರೈಕೆಯಲ್ಲೂ ಬಳಸಲಾಗುತ್ತದೆ.

ಮೆಂತೆಯು ಕೂದಲಿನ ಬೆಳವಣಿಗೆಗೆ ಕಾರಣವಾಗಿ ಕೂದಲು ಉದುರದಂತೆ ನೋಡಿಕೊಳ್ಳುತ್ತದೆ. ಚರ್ಮದಲ್ಲಿನ ಕಳೆಗಳನ್ನು ನಿವಾರಣೆ ಮಾಡಿ ಕಾಂತಿಯನ್ನು ನೀಡುವುದು. ಮೆಂತೆ ಒಳಗೊಂಡಿರುವ ಆಹಾರವನ್ನು ತಿನ್ನುವುದರಿಂದ ರಕ್ತವು ಶುದ್ಧೀಕರಣಗೊಂಡು ಚರ್ಮವು ಹೊಳೆಯುವುದು. ಚರ್ಮ ಮತ್ತು ಕೂದಲಿಗೆ ಮೆಂತೆಯ ಪೇಸ್ಟ್ ಅನ್ನು ಹಚ್ಚಿಕೊಂಡಾಗ ಇದರ ಹಲವಾರು ಲಾಭಗಳಿವೆ.
ನೀರಿನಲ್ಲಿ ಮೆಂತೆಯನ್ನು ಬೇಯಿಸಿ ಅದರ ನೀರನ್ನು ಕೂದಲಿಗೆ ಹಚ್ಚಿಕೊಂಡರೆ ಕೂದಲು ಉದುರುವುದು ಕಡಿಮೆಯಾಗುವುದು. ತಲೆ ಬೋಳಾಗುವುದು, ಕೂದಲು ತುಂಡಾಗುವುದು ಮತ್ತು ತಲೆಹೊಟ್ಟಿಗೆ ಮೆಂತೆ ಒಳ್ಳೆಯ ಮನೆಔಷಧಿಯಾಗಿದೆ.
ರೇಷ್ಮೆಯಂತಹ ಕೂದಲು ಪಡೆಯಲು ಅಡುಗೆ ಮನೆಯಲ್ಲಿ ಸಿಗುವ ಈ ಸಾಂಬಾರು ಪದಾರ್ಥವನ್ನು ಬಳಸಿಕೊಳ್ಳಿ. ಇದು ಕಡಿಮೆ ಖರ್ಚಿನಲ್ಲಿ ಖಂಡಿತವಾಗಿಯೂ ಫಲಿತಾಂಶ ನೀಡಲಿದೆ. ಕೂದಲು ಉದುರುವಿಕೆ ತಡೆಯುತ್ತೆ ಮೆಂತೆ ಹೇರ್ ಮಾಸ್ಕ್
ಬೇಕಾಗುವ ಸಾಮಗ್ರಿಗಳು
*ಮೆಂತೆ
*ಮೊಸರು
*ಆಲಿವ್ ಎಣ್ಣೆ
ಬಳಸುವ ವಿಧಾನ
*ಮೆಂತೆಯನ್ನು ಧೂಳಿನ ರೂಪಕ್ಕೆ ಬರುವಷ್ಟು ಹುಡಿ ಮಾಡಿಕೊಳ್ಳಿ. ಯಾಕೆಂದರೆ ಕೂದಲು ತೊಳೆದ ಬಳಿಕ ಮೆಂತೆಯ ತುಂಡುಗಳು ಕೂದಲಿನಲ್ಲಿ ನಿಲ್ಲಬಾರದು. ದಪ್ಪಗಿನ ಮೊಸರನ್ನು ಮೆಂತೆ ಹುಡಿಗೆ ಹಾಕಿಕೊಳ್ಳಿ. ಕೂದಲಿಗೆ ತೇವಾಂಶ ಸಿಗಲು ಕೆಲವು ಹನಿ ಆಲಿವ್ ಎಣ್ಣೆ ಸೇರಿಸಿದರೆ ತುಂಬಾ ಒಳ್ಳೆಯದು. ನಿಜಕ್ಕೂ ಆಶ್ಚರ್ಯ! ಮೆಂತೆ ಕಾಳು ಕೂದಲುದುರುವ ಸಮಸ್ಯೆಗೆ ಪರಿಹಾರವೇ?
*ಸ್ನಾನಕ್ಕೆ ಮೊದಲು ಈ ಪ್ಯಾಕ್ ಅನ್ನು ಕಂಡೀಷನರ್ ಆಗಿ ಬಳಸಿಕೊಳ್ಳಿ. ಕೂದಲನ್ನು ಬನ್ ಆಕಾರದಲ್ಲಿ ಕಟ್ಟಿಕೊಳ್ಳಿ ಮತ್ತು ಶವರ್ ಕ್ಯಾಪ್ ಬಳಸಿಕೊಳ್ಳಿ. ಇದರಿಂದ ಇದು ಎಲ್ಲೆಡೆ ಹರಡುವುದು ತಪ್ಪುತ್ತದೆ. ಇದನ್ನು 30 ನಿಮಿಷ ಅಥವಾ ಒಂದು ಗಂಟೆ ಕಾಲ ಹಾಗೆ ಬಿಡಿ. ಬಳಿಕ ತಲೆಗೆ ಸ್ನಾನ ಮಾಡಿಕೊಳ್ಳಿ.
*ಈ ಪ್ಯಾಕ್‌ನಲ್ಲಿ ಇರುವಂತಹ ಮೊಸರು ಕೂದಲಿಗೆ ನೈಸರ್ಗಿಕ ಕಂಡೀಷನರ್ ಆಗಿ ಕೆಲಸ ಮಾಡುತ್ತದೆ. ಮೆಂತೆ ಹುಡಿಯು ಕೂದಲಿನ ಬೆಳವಣಿಗೆಗೆ ಮತ್ತು ಕೂದಲು ತುಂಡಾಗುವುದನ್ನು ತಡೆಯುವುದು. ಮೊಸರು ಕೂದಲಿಗೆ ಹೆಚ್ಚಿನ ತೇವಾಂಶವನ್ನು ನೀಡುತ್ತದೆ. ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ಸಲ ಇದನ್ನು ಬಳಸಿಕೊಳ್ಳಿ.



Click it and Unblock the Notifications

