Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕೂದಲು ಉದುರುವಿಕೆ ತಡೆಯುತ್ತೆ ಮೆಂತೆ ಹೇರ್ ಮಾಸ್ಕ್
ವಾರಕ್ಕೊಮ್ಮೆ ಮೆಂತೆ ಬೀಜವನ್ನು ನೀರಿನಲ್ಲಿ ನೆನೆ ಹಾಕಿ ರುಬ್ಬಿ ತಲೆಗೆ ಹಚ್ಚಿ ಅರ್ಧ ಗಂಟೆಯ ಬಳಿಕ ತೊಳೆಯುವುದರಿಂದ ನಿಮ್ಮ ಕೂದಲನ್ನು ಉದುರದಂತೆ, ಅಕಾಲಿಕ ನೆರೆ ಕೂದಲು ಉಂಟಾಗದಂತೆ ರಕ್ಷಣೆ ಮಾಡಬಹುದು. ಕೂದಲಿನ ರಕ್ಷಣೆಗೆ ಮೆಂತೆ ಬೀಜ ಮಾತ್ರವಲ್ಲ, ಮೆಂತೆ ಸೊಪ್ಪನ್ನು ಕೂಡ ಬಳಸಬಹುದು.
ಇಲ್ಲಿ ನಾವು ಮೆಂತೆ ಬೀಜದಿಂದ ಕೂದಲಿನ ಆರೈಕೆ ಮಾಡಿದಾಗ ಅದರ ಗುಣ ಕೂದಲಿನ ಮೇಲೆ ಮತ್ತಷ್ಟು ಪರಿಣಾಮ ಬೀರಲು ಕೆಲವೊಂದು ಟಿಪ್ಸ್ ನೀಡುತ್ತಿದ್ದೇವೆ. ಈ ಟಿಪ್ಸ್ ಪಾಲಿಸಿದ್ದೇ ಆದರೆ ಅಕಾಲಿಕ ನೆರೆ, ಕೂದಲು ಉದುರುವುದು ಈ ರೀತಿಯ ಸಮಸ್ಯೆಗಳಿಂದ ಪಾರಾಗಬಹುದು.

ಮೆಂತೆ ಬೀಜದ ಪೇಸ್ಟ್
ಮೆಂತೆ ಬೀಜವನ್ನು ರಾತ್ರಿ ನೆನೆ ಹಾಕಿ ಅದನ್ನು ಪೇಸ್ಟ್ ಮಾಡಿ ತಲೆಗೆ ಹಚ್ಚಿ ಅರ್ಧ ಗಂಟೆಯ ಬಳಿಕ ಮೈಲ್ಡ್ ಶ್ಯಾಂಪೂ ಹಾಕಿ ತಲೆ ತೊಳೆಯಿರಿ.

ಕೂದಲಿನ ಪೋಷಣೆಗೆ
ಈ ರೀತಿ ಮಾಡುವುದರಿಂದ ಕೂದಲು ಉದುರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಕೆಲವರಿಗೆ ತಲೆ ಬುಡ ತುಂಬಾ ತುರಿಸುತ್ತದೆ. ಇದನ್ನು ಮೆಂತೆ ಬಳಸಿ ಹೇಗೆ ಹೋಗಲಾಡಿಸುವುದು ಎಂದು ತಿಳಿಯಲು ಮುಂದಿನ ಸ್ಲೈಡ್ ನೋಡಿ:

ತೆಂಗಿನೆಣ್ಣೆ
ಮೆಂತೆ ಬೀಜವನ್ನು ತೆಂಗಿನೆಣ್ಣೆ ಜೊತೆ ಮಿಕ್ಸ್ ಮಾಡಿ ತಲೆಗೆ ಹಚ್ಚಿ ಅರ್ಧ ಗಂಟೆಯ ಬಳಿಕ ತಲೆ ತೊಳೆಯುವುದರಿಂದ ತಲೆ ತುರಿಕೆ ಬರದಂತೆ ತಡೆಯಬಹುದು. ತಲೆಹೊಟ್ಟು ಕೂಡ ಕಡಿಮೆಯಾಗುವುದು.

ಮೆಂತೆ ಸೊಪ್ಪು ಮತ್ತು ಮೊಸರು
ಮೆಂತೆ ಸೊಪ್ಪನ್ನು ಪೇಸ್ಟ್ ಮಾಡಿ ಅದನ್ನು ಮೊಸರಿನೊಂದಿಗೆ ಮಿಶ್ರಣ ಮಾಡಿ ತಲೆಗೆ ಹಚ್ಚಿದರೆ ಕೂದಲು ಆರೋಗ್ಯಕರವಾಗಿ ಇರುವುದರ ಜೊತೆಗೆ ಹೊಳಪನ್ನು ಪಡೆಯುತ್ತದೆ.

ತಲೆಹೊಟ್ಟಿನ ಸಮಸ್ಯೆಯೇ?
ತಲೆಹೊಟ್ಟಿನ ಸಮಸ್ಯೆ ಇರುವವರು ಮೆಂತೆ ಬೀಜದ ಪೇಸ್ಟ್ ಗೆ ನಿಂಬೆ ರಸ ಹಾಕಿ ಮಿಕ್ಸ್ ಮಾಡಿ ತಲೆಗೆ ಹಚ್ಚುವುದರಿಂದ ತಲೆ ಹೊಟ್ಟಿನ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.

ಕೂದಲು ಉದುರುವುದನ್ನು ತಡೆಗಟ್ಟಲು
ಮೆಂತೆ ಬೀಜವನ್ನು ಹಾಲಿನ ಜೊತೆ ರುಬ್ಬಿ ತಲೆಗೆ ಹಚ್ಚುವುದರಿಂದ ಕೂದಲು ಉದುರುವುದನ್ನು ತಡೆಯಬಹುದು.

ನೆಲ್ಲಿಕಾಯಿ
ಮೆಂತೆ ಬೀಜದ ಜೊತೆ ನೆಲ್ಲಿಕಾಯಿ ಹಾಕಿ ರುಬ್ಬಿ ತಲೆಗೆ ಹಚ್ಚಿದರೆ ಕೂದಲಿಗೆ ನೆಲ್ಲಿಕಾಯಿ ಮತ್ತು ಮೆಂತೆ ಬೀಜದ ಗುಣ ಎರಡೂ ದೊರೆಯುವುದರಿಂದ ಕೂದಲು ಮತ್ತಷ್ಟು ಸೊಂಪಾಗಿ ಬೆಳೆಯುವುದು.



Click it and Unblock the Notifications
