ಕೂದಲುದುರುವ ಸಮಸ್ಯೆಗೆ ಬಿಸಿ ಎಣ್ಣೆಯ ಮಸಾಜ್...

By: Jaya subramanya
Subscribe to Boldsky

ಹೆಚ್ಚಿನ ಹೆಣ್ಮಕ್ಕಳಲ್ಲಿ ತಲೆದೋರಿರುವ ಸಮಸ್ಯೆ ಕೂದಲು ಉದುರುವುದಾಗಿದೆ. 10 ರಲ್ಲಿ ಮೂರು ಜನರಂತೂ ಇಂತಹ ಸಮಸ್ಯೆಯಿಂದ ಬಳಲುವುದು ಸಾಮಾನ್ಯವಾಗಿದೆ. ದಿನದಲ್ಲಿ 40 ರಿಂದ 80 ಕೂದಲು ಉದುರುವುದು ಸಾಮಾನ್ಯ ವಿಷಯವಾಗಿದ್ದರೂ ಅದಕ್ಕಿಂತ ಹೆಚ್ಚಿಗೆ ಕೂದಲು ಉದುರುತ್ತಿದೆ ಎಂದಾದಲ್ಲಿ ನೀವು ಕಾಳಜಿಯನ್ನು ತೆಗೆದುಕೊಳ್ಳಲೇಬೇಕು.

ಅದಕ್ಕಾಗಿ ವಿಪರೀತ ಖರ್ಚುಗಳನ್ನು ಕೂದಲಿನ ಸಂರಕ್ಷಣೆಗಾಗಿ ನೀವು ಮಾಡಬೇಕಾಗಿಲ್ಲ. ಮನೆಯಲ್ಲೇ ಕೆಲವೊಂದು ಔಷಧ ವಿಧಾನಗಳನ್ನು ಅನುಸರಿಸುವುದರ ಮೂಲಕ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಬಿಸಿ ಕೂದಲಿನ ಮಸಾಜ್ ಅನ್ನು ಕೇಶಕ್ಕೆ ಮಾಡಿಕೊಳ್ಳುವುದರಿಂದ ಕೂದಲುದುರುವ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದಾಗಿದೆ.

coconut
 

ತೆಂಗಿನೆಣ್ಣೆ

*ತೆಂಗಿನೆಣ್ಣೆ + ಆಲೀವ್ ಆಯಿಲ್

*ನಿಮ್ಮ ಕೂದಲಿಗೆ ಬೇಕಾದ ಪ್ರೋಟೀನ್ ಅಂಶಗಳನ್ನು ತೆಂಗಿನೆಣ್ಣೆ ಪಡೆದುಕೊಂಡಿದೆ. ಆಲೀವ್ ಆಯಿಲ್ ಉತ್ಕರ್ಷಣ ನಿರೋಧಿ ಅಂಶಗಳನ್ನು ಹೊಂದಿರುವುದರಿಂದ ತಲೆಬುರುಡೆಯನ್ನು ಸ್ವಚ್ಛಮಾಡಿ ಕೂದಲಿನ ಬೆಳವಣಿಗೆಯನ್ನು ಮಾಡುತ್ತದೆ.

ಇದು ಹೇಗೆ ಕೆಲಸ ಮಾಡುತ್ತದೆ

*1/2 ಕಪ್‎ನಷ್ಟು ತೆಂಗಿನೆಣ್ಣೆಗೆ ಒಂದು ಚಮಚದಷ್ಟು ಆಲೀವ್ ಎಣ್ಣೆಯನ್ನು ಮಿಶ್ರ ಮಾಡಿ

*5 ನಿಮಿಷಗಳ ಕಾಲ ಹಾಗೆಯೇ ಬಿಡಿ

*ಕೊಠಡಿಯ ತಾಪಮಾನಕ್ಕೆ ಈ ಮಿಶ್ರಣವನ್ನು ಹಾಗೆಯೇ ಬಿಡಿ

*ತಣ್ಣಗಾದ ನಂತರ, ನಿಮ್ಮ ತಲೆಬುರುಡೆಗೆ ಮಸಾಜ್ ಮಾಡಿ

*ಗಂಟೆಯಷ್ಟು ಕಾಲ ಹಾಗೆಯೇ ಬಿಡಿ ನಂತರ ಶಾಂಪೂ ಮಾಡಿ ಮತ್ತು ಕಂಡೀಷನ್ ಹಚ್ಚಿರಿ.

musturd oil
 

ಸಾಸಿವೆ ಎಣ್ಣೆ

*ಸಾಸಿವೆ ಎಣ್ಣೆ + ಜೊಜೊಬಾ ಆಯಿಲ್ + ಕರಿಬೇವು

*ಸಾಸಿವೆ ಎಣ್ಣೆಯಲ್ಲಿ ಮಾಯಿಶ್ಚರೈಸಿಂಗ್ ಶಕ್ತಿ ಇದ್ದು ಕ್ಯೂಟಿಕಲ್‎ಗಳನ್ನು ಇದು ಸೀಲ್ ಮಾಡುತ್ತದೆ, ಒಣ ತಲೆಬುರುಡೆಯನ್ನು ಉಪಚರಿಸುತ್ತದೆ ಮತ್ತು ರಕ್ತದ ಹರಿವನ್ನು ಸರಾಗಗೊಳಿಸುತ್ತದೆ.

*ಜೊಜೊಬಾ ಆಯಿಲ್‎ನಲ್ಲಿರುವ ರಾಸಾಯನಿಕ ಅಂಶವು ಮಾನವನ ತ್ವಚೆಗೆ ಅನುಕೂಲಕರವಾಗಿದೆ ತ್ವಚೆಯಲ್ಲಿ ಇದು ಬೇಗನೇ ಹೀರಿಕೊಳ್ಳುತ್ತದೆ. ಕರಿಬೇವು ನರೆಗೂದಲನ್ನು ನಿವಾರಿಸುತ್ತದೆ.      ಸಾಸಿವೆ ಎಣ್ಣೆ: ಕೂದಲಿನ ಸಮಸ್ಯೆಗಳಿಗೆ ಹೇಳಿ ಮಾಡಿಸಿದ ಮನೆಮದ್ದು

ಇದು ಹೇಗೆ ಕೆಲಸ ಮಾಡುತ್ತದೆ

*2 ಚಮಚದಷ್ಟು ಸಾಸಿವೆ ಎಣ್ಣೆಯನ್ನು ತೆಗೆದುಕೊಂಡು, ಇದಕ್ಕೆ 10 ಹನಿಗಳಷ್ಟು ಜೊಜೊಬಾ ಆಯಿಲ್ ಅನ್ನು ಸೇರಿಸಿ ಮತ್ತು ಇದಕ್ಕೆ ಒಣಗಿದ ಕರಿಬೇವಿನ ಹುಡಿಯನ್ನು ಹಾಕಿ.

*ಇನ್ನು ಉರಿಯನ್ನು ಸಣ್ಣಗೆ ಮಾಡಿಕೊಂಡು, ಎಲ್ಲಾ ಸಾಮಾಗ್ರಿಗಳನ್ನು ಒಟ್ಟಿಗೆ ಬಿಸಿ ಮಾಡಿ. 5 ನಿಮಿಷ ಹಾಗೆಯೇ ಬಿಡಿ. ನಂತರ ಗ್ಯಾಸ್ ಆರಿಸಿ.

*ವೃತ್ತಾಕಾರವಾಗಿ ಎಣ್ಣೆಯನ್ನು ತಲೆಬುರುಡೆಗೆ ಮಸಾಜ್ ಮಾಡಿ

*30 ನಿಮಿಷ ಹಾಗೆಯೇ ಬಿಡಿ

*ಕೊನೆಗೆ ಶಾಂಪೂ ಹಚ್ಚಿ ಕಂಡೀಷನ್ ಮಾಡಿಕೊಳ್ಳಿ

olive oil
 

ಆಲೀವ್ ಎಣ್ಣೆ 

ಆಲೀವ್ ಆಯಿಲ್ + ಆರ್ಗನ್ ಆಯಿಲ್ + ಅಲ್ಮಂಡ್ ಆಯಿಲ್

ಕೊಬ್ಬಿನ ಆಸಿಡ್, ಉತ್ಕರ್ಷಣ ನಿರೋಧಿ ಅಂಶಗಳು ಮತ್ತು ಪ್ರೊಟೀನ್‎ಗಳನ್ನು ಇದು ಒಳಗೊಂಡಿದೆ. ಕೂದಲಿನ ಬುಡವನ್ನು ಈ ಎಣ್ಣೆಗಳು ಗಟ್ಟಿ ಮಾಡುತ್ತದೆ ಅಂತೆಯೇ ಸೀಳುಕೂದಲು ಮತ್ತು ಕೂದಲಿನ ಬೆಳವಣಿಗೆಯನ್ನು ಮಾಡುತ್ತದೆ.  ಅಂದವಾದ ತ್ವಚೆಗೆ ಬೇಕು ಆಲೀವ್ ಎಣ್ಣೆಯ ಆರೈಕೆ

ಇದು ಹೇಗೆ ಕೆಲಸ ಮಾಡುತ್ತದೆ

1 ಚಮಚದಷ್ಟು ಆಲೀವ್ ಆಯಿಲ್ ಅನ್ನು ತೆಗೆದುಕೊಳ್ಳಿ ಇದಕ್ಕೆ 1 ಚಮಚ ಆರ್ಗನ್ ಆಯಿಲ್ ಸೇರಿಸಿ ಮತ್ತು 10 ಹನಿ ಬಾದಾಮಿ ಎಣ್ಣೆಯನ್ನು ಬೆರೆಸಿ ಸಣ್ಣ ಉರಿಯಲ್ಲಿ ಬಿಸಿ ಮಾಡಿ.

*ಎಣ್ಣೆಯನ್ನು 5 ನಿಮಿಷಗಳ ಕಾಲ ಹಾಗೆಯೇ ಬಿಡಿ ಮತ್ತು ಉರಿಯನ್ನು ಆಫ್ ಮಾಡಿ

*ಈ ದ್ರಾವಣ ಸ್ವಲ್ಪ ತಣ್ಣಗಾದರೆ, ಹತ್ತಿ ಉಂಡೆಯನ್ನು ಬಳಸಿಕೊಂಡು ನಿಮ್ಮ ತಲೆಬುರುಡೆ ಮತ್ತು ಕೂದಲಿನ ಉದ್ದಕ್ಕೂ ಹಚ್ಚಿಕೊಳ್ಳಿ

15 ನಿಮಿಷಗಳ ಕಾಲ ತಲೆಬುರುಡೆಯನ್ನು ಮಸಾಜ್ ಮಾಡಿ

*ನ್ಯೂಟ್ರೀನ್ ಅಂಶದಲ್ಲಿ 1 ಗಂಟೆಗಳ ಕಾಲ ಕೂದಲನ್ನು ಹಾಗೆಯೇ ಬಿಡಿ ನಂತರ ಮೃದುವಾದ ಶಾಂಪೂನಿಂದ ಕೂದಲನ್ನು ತೊಳೆದುಕೊಳ್ಳಿ.

ನೆಲ್ಲಿಕಾಯಿ ಎಣ್ಣೆ                       ಕೂದಲಿನ ಸಮಸ್ಯೆಗಳಿಗೆ ನೆಲ್ಲಿಕಾಯಿ ಎಣ್ಣೆ ಪರಿಹಾರವೇ?

ನೆಲ್ಲಿಕಾಯಿ ಎಣ್ಣೆ + ರೋಸ್ಮೇರಿ ಎಣ್ಣೆ + ಹರಳೆಣ್ಣೆ

ಒಮೇಗಾ 9 ಫ್ಯಾಟಿ ಕೊಬ್ಬನ್ನು ಈ ಎಣ್ಣೆಗಳು ಹೊಂದಿದ್ದು, ಹರಳೆಣ್ಣೆ ತಲೆಬುರುಡೆ ಸೋಂಕಿನ ವಿರುದ್ಧ ಹೋರಾಡುತ್ತದೆ. ತಲೆಕೂದಲಿನ ಬುಡವನ್ನು ರೋಸ್ಮೇರಿ ಎಣ್ಣೆ ಗಟ್ಟಿಗೊಳಿಸುತ್ತದೆ ಮತ್ತು ನೆಲ್ಲಿಕಾಯಿಯಲ್ಲಿರುವ ವಿಟಿಮಿನ್ ಸಿ ಕೂದಲಿನ ಬೆಳವಣಿಗೆಯನ್ನು ಮಾಡುತ್ತದೆ.

*1 ಚಮಚದಷ್ಟು ಹರಳೆಣ್ಣೆಯನ್ನು ಮಿಶ್ರ ಮಾಡಿ ಇದಕ್ಕೆ ಸಮಪ್ರಮಾಣದಲ್ಲಿ ನೆಲ್ಲಿಕಾಯಿ ಎಣ್ಣೆಯನ್ನು ಸೇರಿಸಿ ಮತ್ತು 4 ಹನಿ ರೋಸ್ಮೇರಿ ಆಯಿಲ್ ಅನ್ನು ಹಾಕಿ.

*2. ಇದು ದ್ರವರೂಪವನ್ನು ಪಡೆದುಕೊಳ್ಳುವರೆಗೂ ಬಿಸಿ ಮಾಡಿ

*15 ನಿಮಿಷಗಳ ಕಾಲ ಮಸಾಜ್ ಮಾಡಿ ನಂತರ 45 ನಿಮಿಷ ಹಾಗೆಯೇ ಬಿಡಿ

*ಮೃದುವಾದ ಶಾಂಪೂವಿನಿಂದ ತಲೆ ತೊಳೆದುಕೊಂಡು ಕಂಡೀಷನ್ ಮಾಡಿ

*ವಾರದಲ್ಲಿ ಎರಡು ಬಾರಿ ಈ ಮನೆಮದ್ದನ್ನು ಹಚ್ಚಿಕೊಳ್ಳಿ.

 

henna

ಮೆಹೆಂದಿ

ಮೆಹೆಂದಿ + ದಾಸವಾಳ + ತೆಂಗಿನೆಣ್ಣೆ

ವಿಟಮಿನ್‎ಗಳು, ಮಿನರಲ್‎ಗಳು ಮತ್ತು ಕೊಬ್ಬಿನ ಅಂಶವನ್ನು ಇದು ಹೊಂದಿದ್ದು, ಬಿಸಿ ಎಣ್ಣೆ ರೆಸಿಪಿಯು ನಿಮ್ಮ ಕೂದಲನ್ನು ಉದ್ದ, ಸುದೃಢ ಮತ್ತು ದಪ್ಪಗೊಳಿಸುತ್ತದೆ.

ಇದು ಹೇಗೆ ಕೆಲಸ ಮಾಡುತ್ತದೆ

*ಬಿಸಿಲಿಗೆ ಮುಷ್ಟಿಯಷ್ಟು ಮೆಹೆಂದಿ ಎಲೆಗಳನ್ನು ಮತ್ತು 10 ರಿಂದ 12 ದಾಸವಾಳ ಎಲೆಗಳನ್ನು ಬಿಸಿ ಮಾಡಿ

*1 ಕಪ್‎ನಷ್ಟು ತೆಂಗಿನೆಣ್ಣೆಯನ್ನು ಬಿಸಿ ಮಾಡಿ

*ಎಣ್ಣೆ ಕುದಿಯುತ್ತಿರುವ ಹಂತವನ್ನು ತಲುಪಿದಾಗ, ಇದಕ್ಕೆ ಮೆಹೆಂದಿ ಎಲೆಗಳನ್ನು ಹಾಕಿ ಮತ್ತು ದಾಸವಾಳ ಹೂವನ್ನು ಸೇರಿಸಿ

*15 ನಿಮಿಷಗಳ ಕಾಲ ಸಿಮ್‎ನಲ್ಲಿಡಿ, ನಂತರ ಬಿಸಿಯನ್ನು ಆರಿಸಿ ಮತ್ತು 2 ದಿನಗಳ ಕಾಲ ಎಣ್ಣೆಯನ್ನು ಹಾಗೆಯೇ ಇಡಿ.

*ಎಣ್ಣೆಯನ್ನು ಆರಿಸಿ ಮತ್ತು ತಲೆಬುರುಡೆಯನ್ನು ಮಸಾಜ್ ಮಾಡಲು ಬಳಸಿಕೊಳ್ಳಿ

*ಗಂಟೆಯಷ್ಟು ಕಾಲ ಹಾಗೆಯೇ ಬಿಡಿ ಮತ್ತು ಶಾಂಪೂ ಹಚ್ಚಿ ತೊಳೆದುಕೊಂಡು ಕಂಡೀಷನ್ ಮಾಡಿಕೊಳ್ಳಿ

*ಗಾಳಿಯಾಡದ ಬಾಟಲಿಯಲ್ಲಿ ಉಳಿದ ಎಣ್ಣೆಯನ್ನು ಭದ್ರಪಡಿಸಿ.   ಮೆಹೆಂದಿ -ಕೇವಲ ಅಲಂಕಾರಿಕವಲ್ಲ, ಆರೋಗ್ಯಕರವೂ ಕೂಡಾ

English summary

Hot Oil Massage Recipes To Stop Hair Fall

Two out of three girls complain about hair fall. And, 3 out of 10 males suffer from receding hair line. And if 40 to 80 hair strands fall in one day, this range is considered to be normal; however, most of us cross that range by leaps and bounds.
Please Wait while comments are loading...
Subscribe Newsletter