Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮೆಹೆಂದಿ -ಕೇವಲ ಅಲಂಕಾರಿಕವಲ್ಲ, ಆರೋಗ್ಯಕರವೂ ಕೂಡಾ
ಸಾವಿರಾರು ವರ್ಷಗಳಿಂದ ಮದರಂಗಿ ಅಥವಾ ಮೆಹೆಂದಿ ಒಂದು ಪ್ರಸಾಧನವಾಗಿ ಬಳಸಲ್ಪಡುತ್ತಾ ಬಂದಿದೆ. ಇದರ ಆರೋಗ್ಯಕರ ಗುಣಗಳನ್ನು ಕಂಡ ಬಳಿಕ ಅಲಂಕಾರದ ಹೊರತಾಗಿ ಔಷಧಿಯಾಗಿಯೂ ಬಳಸಲ್ಪಡಲಾಗುತ್ತಿದೆ. ಇದೊಂದು ನೈಸರ್ಗಿಕ ತಂಪುಕಾರಕ ಮತ್ತು ನೈಸರ್ಗಿಕ ಬಣ್ಣನೀಡುವ ಪ್ರಸಾಧನವಾಗಿದೆ.

ಮೂಲತಃ ಅರೇಬಿಯಾದದ್ದಾದರೂ ಭಾರತದ ಸಂಸ್ಕೃತಿಯಲ್ಲಿ ಮದರಂಗಿಯ ಮಹತ್ವದ ಪಾತ್ರವಿದೆ. ಮದುವೆ, ಹಬ್ಬ ಮೊದಲಾದ ಶುಭಸಂದರ್ಭಗಳಲ್ಲಿ ಮದರಂಗಿಯಿಂದ ಅಲಂಕರಿಸುವ ಪದ್ದತಿ ಸರಿಸುಮಾರು ಭಾರತದ ಎಲ್ಲಾ ಧರ್ಮಗಳಲ್ಲಿ ಹಾಸುಹೊಕ್ಕಾಗಿದೆ. ಕೂದಲಿಗೆ ಮೆಹೆಂದಿ ಹಚ್ಚಿಕೊಳ್ಳುವ ಮುನ್ನ ಎರಡು ಬಾರಿ ಆಲೋಚಿಸಿ!
ಬಿಳಿಯಾದ ತಲೆಗೂದಲಿಗೆ ಕೆಂಚು ಬಣ್ಣವನ್ನು ನೀಡುವ ಮದರಂಗಿ ತಲೆಯನ್ನು ತಂಪಾಗಿರಿಸಲು ನೆರವಾಗುತ್ತದೆ. ಇದರ ಹೊರತಾಗಿ ಮದರಂಗಿ ಇನ್ನೂ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಬನ್ನಿ, ಇದರ ಔಷಧೀಯ ಗುಣಗಳ ಬಗ್ಗೆ ಕೊಂಚ ಅರಿಯೋಣ: ನಂಬುತ್ತೀರೋ ಬಿಡುತ್ತೀರೋ 'ಮೆಹೆಂದಿಯ' ಹಿಂದೆಯೂ ಕಟ್ಟುಕಥೆ ಇದೆ!
ತಲೆಗೂದಲು ಉದುರುವುದನ್ನು ತಡೆಗಟ್ಟಲು
ಕೊಂಚ ಮದರಂಗಿಯ ಹಸಿ ಎಲೆಗಳನ್ನು ಸಾಸಿವೆ ಎಣ್ಣೆಯಲ್ಲಿ ಸುಮಾರು ಹತ್ತು ನಿಮಿಷ ಕಾಲ ಕುದಿಸಿ ತಣಿಸಿ. ಈ ಎಣ್ಣೆಯನ್ನು ತಲೆಗೂದಲಿಗೆ ಹಚ್ಚಿಕೊಂಡರೆ ತಲೆಗೂದಲು ಉದುರುವುದು ನಿಲ್ಲುವುದರ ಜೊತೆಗೇ ಕಳೆದುಕೊಂಡಿದ್ದ ಕೂದಲು ಮತ್ತೆ ಹುಟ್ಟಲು ನೆರವಾಗುತ್ತದೆ.
ಆಮಶಂಕೆ ನಿವಾರಣೆಗೆ
ಆಮಶಂಕೆಯಾಗಿದ್ದರೆ ಮದರಂಗಿಯ ಹೂವಿನ ಬೀಜಗಳು ಅತ್ಯುತ್ತಮವಾದ ಪರಿಹಾರ ನೀಡುತ್ತದೆ. ಇದರ ಬೀಜದ ಪುಡಿಯನ್ನು ಕೊಂಚ ತುಪ್ಪದೊಂದಿಗೆ ಮಿಶ್ರಣ ಮಾಡಿ ಚಿಕ್ಕ ಚಿಕ್ಕ ಗೋಲಿಗಳನ್ನಾಗಿಸಿ ಕೊಂಚ ನೀರಿನೊಂದಿಗೆ ಸೇವಿಸಿ.
ಕಾಮಾಲೆ ಕಾಯಿಲೆಗೆ
ಕಾಮಾಲೆ ಕಾಯಿಲೆಗೆ ಮದರಂಗಿ ಗಿಡದ ಕಾಂಡವನ್ನು ಬಳಸಬಹುದು. ಕಾಮಾಲೆ ಮತ್ತು ಇದರ ಮೂಲಕ ಯಕೃತ್ ನ ಕ್ಷಮತೆ ಉಡುಗಿದ್ದರೆ ಕಾಂಡದ ಚಿಕ್ಕ ಚಿಕ್ಕ ತುಂಡುಗಳನ್ನು ಕೊಂಚ ನೀರಿನಲ್ಲಿ ಚೆನ್ನಾಗಿ ಕುದಿಸಿ ದಿನಕ್ಕೆ ಎರಡು ಬಾರಿ ಕುಡಿಯುವ ಮೂಲಕ ಶೀಘ್ರ ಪರಿಹಾರ ಪಡೆಯಬಹುದು.
ಗಂಟಲ ಬೇನೆಗೆ
ಗಂಟಲ ಬೇನೆ, ಕೆರೆತ, ಕೆಮ್ಮು, ಕಫ ಕಟ್ಟಿರುವುದು ಮೊದಲಾದವುಗಳಿಗೆ ಮದರಂಗಿ ಪುಡಿಯನ್ನು ಟೀಪುಡಿಯಂತೆ ಉಪಯೋಗಿಸಿ ಒಂದೆರಡು ನಿಮಿಷ ಕುದಿಸಿ ಸೋಸಿ ಕುಡಿಯಬೇಕು. ಇನ್ನು ಗಂಟಲು ನೋವಿಗೆ ವೈದ್ಯರ ಬಳಿ ಓಡಬೇಡಿ...!
ಬೆವರುಸಾಲೆಗೆ
ಸೆಖೆಯಿಂದ ಮೂಡಿರುವ ಬೆವರುಸಾಲೆಯಿಂದ ಪರಿಹಾರ ಪಡೆಯಲು ಕೊಂಚ ಮದರಂಗಿಯ ಹಸಿ ಎಲೆಗಳನ್ನು ನೀರಿನೊಂದಿಗೆ ಅರೆದು ಬೆವರುಸಾಲೆ ಇರುವ ಚರ್ಮದ ಮೇಲೆಲ್ಲಾ ತೆಳುವಾಗಿ ಹಚ್ಚಿ. ಸುಮಾರು ಹತ್ತು ನಿಮಿಷ ಬಿಟ್ಟು ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.
ಸುಟ್ಟ ಗಾಯಗಳಿಗೆ
ಗಾಯದಿಂದ ಸುಟ್ಟ ಚರ್ಮವನ್ನು ತಣ್ಣೀರಿನ ಅಡಿ ಇರಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಎದುರಾಗುವ ಗುಳ್ಳೆ ಶೀಘ್ರವಾಗಿ ಒಡೆಯಲು ಮತ್ತು ಹೊಸಚರ್ಮ ಮೂಡಲು ಮದರಂಗಿಯ ಹಸಿ ಎಲೆಗಳನ್ನು ಅರೆದು ಹಚ್ಚಬೇಕು. ಸುಟ್ಟಗಾಯ ಶೀಘ್ರವಾಗಿ ಸಾಂತ್ವನ ನೀಡುವ ಸರಳ ಮನೆಮದ್ದುಗಳು
ತಲೆನೋವಿಗೆ
ಅರೆತಲೆನೋವು ಮತ್ತು ಒಂದು ಬದಿಯ ತಲೆನೋವಿದ್ದರೆ ಕೊಂಚ ಮದರಂಗಿ ಪುಡಿಯನ್ನು ಶಿರ್ಕಾದೊಂದಿಗೆ ಬೆರೆಸಿ ಲೇಪನ ತಯಾರಿಸಿ ಹಣೆಗೆ ಹಚ್ಚಿಕೊಳ್ಳಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications



