Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಅಂದವಾದ ತ್ವಚೆಗೆ ಬೇಕು ಆಲೀವ್ ಎಣ್ಣೆಯ ಆರೈಕೆ

* ಫೇಸ್ ವಾಶ್: ರಾಸಾಯನಿಕವಿರುವ ಫೇಸ್ ವಾಶ್ ಬಳಸುವ ಬದಲು ಆಲೀವ್ ಎಣ್ಣೆಯನ್ನು ಫೇಸ್ ವಾಶ್ ಆಗಿ ಬಳಸಬಹುದು. ಈ ಎಣ್ಣೆಯಿಂದ ಕ್ಲೆನ್ಸಿಂಗ್ ಮಾಡಿ ಮುಖದಲ್ಲಿರುವ ಮೇಕಪ್ ತೆಗೆಯುವುದರಿಂದ ಮೇಕಪ್‌ನಿಂದ ಮುಖ ಹಾಳಾಗುವುದನ್ನು ತಡೆಯಬಹುದು. ತ್ವಚೆ ರಂಧ್ರದಲ್ಲಿರುವ ಕಶ್ಮಲಗಳನ್ನು ಹೋಗಲಾಡಿಸಬಹುದು. ಅಲ್ಲದೆ ದಿನವೂ ಈ ಎಣ್ಣೆಯಿಂದ ಕ್ಲೆನ್ಸ್ ಮಾಡಿದರೆ ತಾಜಾ ಮತ್ತು ಮೃದುವಾದ ತ್ವಚೆ ನಿಮ್ಮದಾಗುವುದು.
* ಫೇಸ್ ಮಾಸ್ಕ್: ಆಲೀವ್ ಎಣ್ಣೆಯನ್ನು ಫೇಸ್ ಮಾಸ್ಕ್ ಆಗಿ ಬಳಸಬಹುದು. ಇದನ್ನು ಫೇಸ್ ಮಾಸ್ಕ್ ಆಗಿ ಬಳಸುವುದರಿಂದ ಮೊಡವೆ,ಇತರ ತ್ವಚೆ ಸಮಸ್ಯೆಗಳು ಬರದಂತೆ ತಡೆದು ಮುಖದ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಇದರಿಂದ ಫೇಸ್ಸ್ ಮಾಸ್ಕ್ ತಯಾರಿಸುವ ವಿಧಾನ ನೋಡಿ ಇಲ್ಲಿದೆ.
ಫೇಸ್ ಮಾಸ್ಕ್ ಸಾಮಾಗ್ರಿಗಳು:
1 ಚಮಚ ಆಲೀವ್ ಎಣ್ಣೆ
1 ಚಮಚ ಗಟ್ಟಿಯಾದ ಹಾಲು
1/2 ಚಮಚ ಉಪ್ಪು
ಈ 3 ವಸ್ತುಗಳನ್ನು ಮಿಶ್ರ ಮಾಡಿ ಮುಖಕ್ಕೆ ಹಚ್ಚಿ 15 ನಿಮಿಷದ ಬಳಿಕ ಮುಖ ತೊಳೆಯಬೇಕು.
* ತಾರುಣ್ಯಭರಿತ ತ್ವಚೆ: ವಯಸ್ಸಾದಂತೆ ಮುಖದಲ್ಲಿ ನೆರಿಗೆಗಳು ಬರುವುದು ಸಹಜ. ಆದರೆ ಅಕಾಲಿಕ ನೆರಿಗೆಯನ್ನು ತಡೆಗಟ್ಟಲು ಆಲೀವ್ ಎಣ್ಣೆಯನ್ನು ಬಳಸುವುದು ಒಳ್ಳೆಯದು. ಒಣ ತ್ವಚೆ ಇರುವವರು ಆಲೀವ್ ಎಣ್ಣೆಯಿಂದ ಮಾಯಿಶ್ಚರೈಸರ್ ಮಾಡಿಕೊಳ್ಳುವುದು ಒಳ್ಳೆಯದು.
ಅನೇಕ ಜನರು ಆಲೀವ್ ಎಣ್ಣೆ ಬಳಸಿದರೆ ಮುಖದಲ್ಲಿ ಎಣ್ಣೆ ಪಸೆ ಹೆಚ್ಚಾಗಿ ಮೊಡವೆ ಹೆಚ್ಚಾಗುತ್ತದೆ ಎಂದು ಭಾವಿಸುತ್ತಾರೆ. ಆದರೆ ಈ ಎಣ್ಣೆ ಮೊಡವೆ ಬರದಂತೆ ತಡೆದು ತ್ವಚೆ ಕಾಂತಿ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.



Click it and Unblock the Notifications
