For Quick Alerts
ALLOW NOTIFICATIONS  
For Daily Alerts

ಸಾಸಿವೆ ಎಣ್ಣೆ: ಕೂದಲಿನ ಸಮಸ್ಯೆಗಳಿಗೆ ಹೇಳಿ ಮಾಡಿಸಿದ ಮನೆಮದ್ದು

|

ಕೂದಲು ಉದುರುವುದು, ತಲೆ ಹೊಟ್ಟು, ಬಿಳಿ ಕೂದಲು, ಒಡೆದ ಕೂದಲಿನ ಬುಡ, ಜಿಡ್ಡುಗಟ್ಟಿದ ಕೂದಲು ಮತ್ತು ಇನ್ನಿತರ ಕೂದಲಿನ ಸಮಸ್ಯೆಗಳು ಗಂಡು ಮತ್ತು ಹೆಣ್ಣು ಎಂಬ ಭೇದ-ಭಾವವಿಲ್ಲದೆ ಕಾಡುತ್ತವೆ. ಇಂತಹ ಕೊನೆಯಿಲ್ಲದ ಸಮಸ್ಯೆಗಳನ್ನು ನಿವಾರಿಸಲು ಬಹುಶಃ ನೀವು ಹಲವಾರು ಉತ್ಪನ್ನಗಳನ್ನು ಬಳಸಿರಬಹುದು.

ಮಾರುಕಟ್ಟೆಯಲ್ಲಿ ಲಭ್ಯವಿರುವ ವೈಜ್ಞಾನಿಕವಾಗಿ ಸಾಬೀತು ಮಾಡಲಾದ ಉತ್ಪನ್ನಗಳನ್ನು ಬಳಸಿದರೂ ಕೂಡ, ನಿಮ್ಮ ಸಮಸ್ಯೆಗಳು ಇನ್ನೂ ಉಳಿದುಕೊಂಡಿರಲೂಬಹುದು. ಇವೆಲ್ಲಾ ಸಮಸ್ಯೆಗಳಿಗೆ ಸಾಸಿವೆ ಎಣ್ಣೆಯು ಒಳ್ಳೆಯ ಮನೆಮದ್ದಾಗಿದೆ! ಈ ಸ್ವಾಭಾವಿಕ ಪದಾರ್ಥವು ನಮ್ಮ ಅಜ್ಜಿಯರ ಅಚ್ಚುಮೆಚ್ಚಿನ ಕೂದಲು ರಕ್ಷಣೆಯ ಔಷಧಿಯಾಗಿದೆ. ಆರೋಗ್ಯಕರ ಕೂದಲಿಗಾಗಿ ಹಾಗಲಕಾಯಿ ಜ್ಯೂಸ್ ಪ್ರಯತ್ನಿಸಿ ನೋಡಿ!

ಅಡುಗೆಗೆ ಬಳಸಲಾಗುವ ಸಾಸಿವೆ ಕಾಳುಗಳಿಂದ ತಯಾರಿಸಲಾಗುವ ಈ ಸಾಸಿವೆಎಣ್ಣೆಯನ್ನು ಕೂದಲಿಗೆ ಹಾಕಿ ಮಸಾಜ್ ಮಾಡಿದರೆ, ಕೂದಲ ಬೆಳವಣಿಗೆಯನ್ನು ಸುಧಾರಿಸುವುದರ ಜೊತೆಗೆ ದಪ್ಪವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಬನ್ನಿ ಆ ಸಾಸಿವೆ ಎಣ್ಣೆಯನ್ನು ಹೇಗೆ ಬಳಸುವುದು ಎಂದು ತಿಳಿದುಕೊಳ್ಳೋಣ...

ಕೂದಲು ಉದುರುವಿಕೆಗೆ

ಕೂದಲು ಉದುರುವಿಕೆಗೆ

ಸತುವಿನ ಕೊರತೆಯಿಂದ ಒಮ್ಮೊಮ್ಮೆ ಕೂದಲು ಉದುರುವಿಕೆ ಕಂಡು ಬರುತ್ತದೆ. ಸಾಸಿವೆ ಎಣ್ಣೆಯಲ್ಲಿ ಅಧಿಕ ಪ್ರಮಾಣದ ಸತುವಿನ ಅಂಶವಿರುತ್ತದೆ.ಆದ್ದರಿಂದ ಸಾಸಿವೆ ಎಣ್ಣೆಯನ್ನು ಕೂದಲ ಬುಡಕ್ಕೆ ಲೇಪಿಸುವುದರಿಂದ ಕೂದಲು ಉದುರುವಿಕೆಯನ್ನು ತಡೆಗಟ್ಟಬಹುದು. ಇದಕ್ಕಾಗಿ ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ ಮಸಾಜ್ ಮಾಡಿ ಸಾಕು.

ಕೂದಲ ಬೆಳವಣಿಗೆಗೆ

ಕೂದಲ ಬೆಳವಣಿಗೆಗೆ

ಸಾಸಿವೆ ಎಣ್ಣೆಯಲ್ಲಿ ವಿಟಮಿನ್‍ಗಳು, ಒಮೆಗಾ-3 ಕೊಬ್ಬಿನ ಆಮ್ಲಗಳು ಇರುತ್ತವೆ. ಈ ಅಂಶಗಳು ಕೂದಲಿನ ಬೆಳವಣಿಗೆಗೆ ಸಹಕರಿಸುತ್ತವೆ.ಇವುಗಳು ಕೂದಲನ್ನು ಸದೃಢಗೊಳಿಸುತ್ತವೆ. ಕೂದಲಿನ ಬೆಳವಣಿಗೆಗೆ ನೆರವಾಗುವ ಅತ್ಯುತ್ತಮ ಮನೆಮದ್ದುಗಳಲ್ಲಿ ಇದು ಸಹ ಒಂದಾಗಿದೆ.

ಒಡೆದ ಕೂದಲಿನ ತುದಿಗಳನ್ನು ಸರಿಪಡಿಸುತ್ತದೆ

ಒಡೆದ ಕೂದಲಿನ ತುದಿಗಳನ್ನು ಸರಿಪಡಿಸುತ್ತದೆ

ಕೂದಲಿನ ತುದಿಗಳು ಒಡೆಯಲು ಪ್ರಮುಖ ಕಾರಣ ಅಗತ್ಯ ಪ್ರಮಾಣದ ಎಣ್ಣೆ ಮತ್ತು ಪೋಷಕಾಂಶ ಇಲ್ಲದಿರುವುದಾಗಿದೆ. ನಿಮ್ಮ ಕೂದಲ ತುದಿಗಳನ್ನು ಮೊಟ್ಟೆ ಬೆರೆಸಿದ ಬಿಸಿ ಸಾಸಿವೆ ಎಣ್ಣೆಯಲ್ಲಿ ಮಸಾಜ್ ಮಾಡುವುದರಿಂದ ಈ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು.

ಒಣ ಕೂದಲಿಗೆ

ಒಣ ಕೂದಲಿಗೆ

ಒಣಕೂದಲಿಗೆ ಬಿಸಿ ಸಾಸಿವೆ ಎಣ್ಣೆಯ ಮಸಾಜನ್ನು ಮಾಡಿ. ಸಾಸಿವೆ ಎಣ್ಣೆಯು ಕೂದಲ ತುದಿಗೆ ಮೊಯಿಶ್ಚರ್ ಒದಗಿಸುತ್ತದೆ. ಜೊತೆಗೆ ಸಿಕ್ಕುಗಳನು ತಡೆಯುತ್ತದೆ.

ಕೂದಲಿಗೆ ಹೊಳಪು ನೀಡುತ್ತದೆ

ಕೂದಲಿಗೆ ಹೊಳಪು ನೀಡುತ್ತದೆ

ಸಾಸಿವೆ ಎಣ್ಣೆಯು ಎಂತಹ ನಿರ್ಜೀವ ಕೂದಲಿಗು ಸಹ ಹೊಳಪನ್ನು ನೀಡುತ್ತದೆ. ಇದಕ್ಕಾಗಿ ಒಂದು ಟೇಬಲ್ ಚಮಚ ತೆಂಗಿನಎಣ್ಣೆಗೆ ಮೂರು ಟೇಬಲ್ ಚಮಚ ಬಿಸಿ ಸಾಸಿವೆ ಎಣ್ಣೆಯನ್ನು ಬೆರೆಸಿ. ಈ ಮಿಶ್ರಣವನ್ನು ಕೂದಲ ಬುಡಕ್ಕೆ ಲೇಪಿಸಿ. ತದನಂತರ ಇದನ್ನು 10 ನಿಮಿಷ ನೆನೆಯಲು ಬಿಡಿ, ನಂತರ ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

English summary

Ways To Use Hot Mustard Oil On Hair

Hair fall, dandruff, grey hair, split ends, oily scalp and the list goes on for the en number of hair problems faced by men and women. Therefore, a hot mustard oil massage once a week will provide your scalp with good amount of zinc which will help in reducing hair fall, have a look
X
Desktop Bottom Promotion