ಕೂದಲಿನ ಸಮೃದ್ಧ ಪೋಷಣೆಗೆ 'ಗಿಡಮೂಲಿಕೆಗಳಿಂದ' ಆರೈಕೆ

By Jaya Subramanya
Subscribe to Boldsky

ಕೂದಲಿನ ಪೋಷಣೆಗೆ ಅನಾದಿ ಕಾಲದಿಂದಲೂ ಪರಿಹಾರಗಳನ್ನು ಕಂಡುಕೊಳ್ಳುವ ಬಗೆಯಲ್ಲಿ ಪರಿಣಿತರು ಅನ್ವೇಷಣೆಯನ್ನು ನಡೆಸುತ್ತಿದ್ದಾರೆ. ರಾಸಾಯನಿಕವಲ್ಲದ ಕೂದಲಿನ ಪೋಷಣಾ ಸಂಪತ್ತುಗಳಿಂದ ನಿಮ್ಮ ಕೇಶಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ ಅಂತೆಯೇ ಕೂದಲೂ ಕೂಡ ಸಮೃದ್ಧವಾಗಿ ಬೆಳೆಯುತ್ತದೆ. ನೀವು ಮನೆಯಲ್ಲೇ ತಯಾರಿಸುವ ಕೂದಲಿಗೆ ಹಚ್ಚಿಕೊಳ್ಳುವ ಎಣ್ಣೆ ಮತ್ತು ಮಾರುಕಟ್ಟೆಯಲ್ಲಿ ಲಭ್ಯವಿರುವ ಎಣ್ಣೆ ಇದಕ್ಕಿರುವ ವ್ಯತ್ಯಾಸಗಳನ್ನು ಕಂಡುಕೊಂಡಾಗ ನಿಮಗೆ ಇದರ ಬಗ್ಗೆ ತಿಳಿಯುತ್ತದೆ.  ಬೊಕ್ಕತಲೆಯಲ್ಲಿ ಕೂದಲು ಚಿಗುರಿಸಲು ಆಯುರ್ವೇದ ಚಿಕಿತ್ಸೆ

ಅದಕ್ಕೆಂದೇ ಇಂದಿನ ಲೇಖನದಲ್ಲಿ ಆಯುರ್ವೇದಿಕ್ ಗಿಡಮೂಲಿಕೆಗಳನ್ನು ಕುರಿತು ಮಾಹಿತಿಗಳನ್ನು ನೀಡುತ್ತಿದ್ದು ಈ ಗಿಡಮೂಲಿಕೆಗಳು ನಿಮ್ಮ ಕೂದಲಿನ ಪೋಷಣೆಯಲ್ಲಿ ಮಾಡುತ್ತಿರುವ ಕಮಾಲನ್ನು ನಾವಿಲ್ಲಿ ತಿಳಿಸಲಿದ್ದೇವೆ. ಬನ್ನಿ ಅವುಗಳೇನು ಎಂಬುದನ್ನು ಅರಿಯೋಣ.....

ಭೃಂಗರಾಜ

ನಿಮ್ಮ ಕೂದಲಿಗೆ ಹಾಗೆಯೇ ಹಚ್ಚಿಕೊಳ್ಳಲೂಬಹುದು ಏಕೆಂದರೆ ಇದು ಶಕ್ತಿಶಾಲಿ ಉತ್ಕರ್ಷಣ ನಿರೋಧಿ ಅಂಶಗಳನ್ನು ಒಳಗೊಂಡಿದೆ ಅಂತೆಯೇ ಮಿನರಲ್‌ಗಳು ಮತ್ತು ವಿಟಮಿನ್‌ಗಳ ಖಜಾನೆ ಎಂದೆನಿಸಿದೆ. ಕೂದಲು ಬೆಳ್ಳಗಾಗುವುದನ್ನು ಇದು ತಡೆಯುತ್ತದೆ.

Bhringraj
 

ಇದು ಹೇಗೆ ಕೆಲಸ ಮಾಡುತ್ತದೆ

*ಒಂದು ಚಮಚದಷ್ಟು ಭೃಂಗರಾಜ ಎಣ್ಣೆಯನ್ನು ತೆಗೆದುಕೊಂಡು ಇದಕ್ಕೆ ಸಮಪ್ರಮಾಣದಲ್ಲಿ ತೆಂಗಿನೆಣ್ಣೆಯನ್ನು ಹಾಕಿ

*ನಿಮ್ಮ ತಲೆಬುರುಡೆಗೆ ಮಸಾಜ್ ಮಾಡಿಕೊಳ್ಳಿ

*ರಾತ್ರಿ ಪೂರ್ತಿ ಹಾಗೆಯೇ ಬಿಡಿ, ಬೆಳಗ್ಗೆ ಎದ್ದು ಮೃದುವಾದ ಶಾಂಪೂವಿನಿಂದ ಕೂದಲನ್ನು ತೊಳೆದುಕೊಳ್ಳಿ

ನೆಲ್ಲಿಕಾಯಿ

ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಿ ಅಂಶಗಳನ್ನು ಒಳಗೊಂಡಿರುವ ನೆಲ್ಲಿಕಾಯಿಯು ಕೂದಲಿನ ಕೊಲೆಗನ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಇದು ಕೂದಲನ್ನು ಗಟ್ಟಿಮಾಡುವಲ್ಲಿ ಕೂಡ ಸಹಕಾರಿಯಾಗಿದೆ.

Amla
 

ಇದು ಹೇಗೆ ಕೆಲಸ ಮಾಡುತ್ತದೆ

*ಎರಡು ಚಮಚಗಳಷ್ಟು ನೆಲ್ಲಿಕಾಯಿ ಎಣ್ಣೆಯನ್ನು ತೆಗೆದುಕೊಂಡು ಇದಕ್ಕೆ ಒಂದು ಚಮಚದಷ್ಟು ಆಲೀವ್ ಎಣ್ಣೆಯನ್ನು ಸೇರಿಸಿ ಬಿಸಿ ಮಾಡಿ

*ನಿಮ್ಮ ಕೂದಲಿಗೆ ಎಣ್ಣೆಯಿಂದ ಮಸಾಜ್ ಮಾಡಿ ಮತ್ತು ತಲೆಬುರುಡೆಗೆ ವೃತ್ತಾಕಾರವಾಗಿ ಮಸಾಜ್ ಮಾಡಿ

Amla Oil

*ಒಂದು ಗಂಟೆಯಷ್ಟು ಕಾಲ ಹಾಗೆಯೇ ಬಿಡಿ ಮತ್ತು ಎಂದಿನಂತೆ ಶಾಂಪೂನಿಂದ ಕೂದಲನ್ನು ತೊಳೆದುಕೊಳ್ಳಿ.  ಅಬ್ಬಬ್ಬಾ..ಬೆಟ್ಟದ ನೆಲ್ಲಿಕಾಯಿಯ ಜಾದೂಗೆ ತಲೆಬಾಗಲೇಬೇಕು

ಬೇವು

ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಸೆಪ್ಟಿಕ್ ಗುಣಗಳಿಂದ ಸಮೃದ್ಧವಾಗಿರುವ ಬೇವು ತಲೆಬುರುಡೆಯಲ್ಲಿರುವ ಕೊಳೆಯನ್ನು ನಿವಾರಿಸುತ್ತದೆ ಮತ್ತು ಡ್ಯಾಂಡ್ರಫ್‌ಗೆ ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ, ರಕ್ತ ಸಂಚಾರವನ್ನು ನಿಯಂತ್ರಿಸಿ ಕೂದಲು ಉದುರುವುದನ್ನು ತಡೆಯುತ್ತದೆ.   ಕೂದಲಿನ ಆರೈಕೆಗೆ, ಮೊಸರು-ಬೇವಿನ ಮ್ಯಾಜಿಕ್ ಚಿಕಿತ್ಸೆ  

neem
 

ಹೇಗೆ ಕೆಲಸ ಮಾಡುತ್ತದೆ

*ನಿಮ್ಮ ದೈನಂದಿನ ಕೂದಲಿಗೆ ಹಚ್ಚುವ ಎಣ್ಣೆಗೆ 10 ಹನಿಗಳಷ್ಟು ಬೇವಿನೆಣ್ಣೆಯನ್ನು ಮಿಶ್ರ ಮಾಡಿ

*10 ನಿಮಿಷಗಳ ಕಾಲ ಹಾಟ್ ಆಯಿಲ್ ಮಸಾಜ್ ಮಾಡಿ

*30 ನಿಮಿಷಗಳ ಕಾಲ ಹಾಗೆಯೇ ಬಿಡಿ ಮತ್ತು ಮೃದುವಾದ ಶಾಂಪೂವಿನಿಂದ ಕೂದಲನ್ನು ತೊಳೆದುಕೊಳ್ಳಿ

*ವಾರದಲ್ಲಿ ಎರಡು ಬಾರಿ ಸಮೃದ್ಧ ಕೂದಲಿಗಾಗಿ ಈ ಭಾರತೀಯ ಗಿಡಮೂಲಿಕೆಯ ಬಳಕೆಯನ್ನು ಮಾಡಿ

ಮೆಂತೆ

ವಿಟಮಿನ್‌ಗಳು ಮತ್ತು ಮಿನರಲ್‌ಗಳು ಅಂತೆಯೇ ಉತ್ಕರ್ಷಣ ನಿರೋಧಿ ಅಂಶಗಳನ್ನು ಒಳಗೊಂಡಿರುವ ಮೆಂತ್ಯ ಬುಡದಿಂದಲೇ ಕೂದಲನ್ನು ಗಟ್ಟಿಮಾಡುತ್ತದೆ ಅಂತೆಯೇ ಕೂದಲಿಗೆ ಹೊಳಪನ್ನು ನೀಡಿ ಬೆಳವಣಿಗೆಯನ್ನು ಮಾಡುತ್ತದೆ

methi
 

ಇದು ಹೇಗೆ ಕೆಲಸ ಮಾಡುತ್ತದೆ

*ರಾತ್ರಿ 2 ಚಮಚದಷ್ಟು ಮೆಂತ್ಯವನ್ನು ನೀರಿನಲ್ಲಿ ನೆನೆಸಿಡಿ

*ಬೆಳಗ್ಗೆ, ಇದನ್ನು ನುಣ್ಣನೆಯ ಪೇಸ್ಟ್‌ನಂತೆ ಮಾಡಿ

*ಇದಕ್ಕೆ ಕೆಲವು ಹನಿಗಳಷ್ಟು ಆಲ್‌ಮಂಡ್ ಆಯಿಲ್ ಅನ್ನು ಸೇರಿಸಿ

*ನಿಮ್ಮ ತಲೆಬುರುಡೆ ಮತ್ತು ಕೂದಲಿಗೆ ಇದನ್ನು ಹಚ್ಚಿಕೊಳ್ಳಿ

*ಗಂಟೆಗಳಷ್ಟು ಕಾಲ ಈ ಪೇಸ್ಟ್ ನಿಮ್ಮ ತಲೆಯಲ್ಲಿರಲಿ ನಂತರ ಮೃದುವಾದ ಶಾಂಪೂನಿಂದ ಕೂದಲನ್ನು ತೊಳೆದುಕೊಳ್ಳಿ.  ಕೂದಲು ಉದುರುವಿಕೆ ತಡೆಯುತ್ತೆ ಮೆಂತೆ ಹೇರ್ ಮಾಸ್ಕ್

ಅಲೊವೇರಾ

ಸಲಿಸಲಿಕ್ ಆಸಿಡ್ ಇದರಲ್ಲಿದ್ದು, ಎಂಜೀಮ್ಸ್ ಮತ್ತು ಪ್ರೊಟೀನ್ಸ್ ಸೆಬಮ್ ಉತ್ಪಾದನೆಯನ್ನು ನಿಯಂತ್ರಿಸಿ, ಪೋರ್ಸ್ ನಿವಾರಿಸಿ ಕೂದಲಿನ ಬೆಳವಣಿಗೆಯನ್ನು ಮಾಡುತ್ತದೆ

ಇದು ಹೇಗೆ ಕೆಲಸ ಮಾಡುತ್ತದೆ

*ಬೌಲ್‌ನಲ್ಲಿ ಅಲೊವೇರಾ ಜೆಲ್ ಅನ್ನು ತೆಗೆದುಕೊಳ್ಳಿ

*ನಂತರ ಅದನ್ನು ತಲೆಗೆ ಹಚ್ಚಿಕೊಂಡು 30 ನಿಮಿಷಗಳ ಕಾಲ ಹಾಗೆಯೇ ಬಿಡಿ ನಂತರ ತೊಳೆದುಕೊಳ್ಳಿ

*ವಾರದಲ್ಲಿ ಎರಡು ಬಾರಿ ಇದನ್ನು ಹಚ್ಚಿಕೊಳ್ಳಿ ಇದರಿಂದ ಕೂದಲು ದಪ್ಪಗೊಳ್ಳುತ್ತದೆ ಮತ್ತು ಹೊಳಪೂ ದೊರೆಯುತ್ತದೆ.

ಕರಿಬೇವಿನೆಸಳು

ಕೂದಲು ಬೆಳ್ಳಗಾಗುವುದನ್ನು ತಡೆಗಟ್ಟುವ ಕರಿಬೇವು ಕೂದಲುದುರುವುದನ್ನು ತಡೆಗಟ್ಟುತ್ತದೆ ಮತ್ತು ಕೂದಲಿನ ಬೇರುಗಳನ್ನು ಪೋಷಿಸುತ್ತದೆ.

curry leaves
 

ಇದು ಹೇಗೆ ಕೆಲಸ ಮಾಡುತ್ತದೆ

*1 ಚಮಚದಷ್ಟು ತೆಂಗಿನೆಣ್ಣೆ ಮತ್ತು 1 ಚಮಚದಷ್ಟು ಆಲೀವ್ ಎಣ್ಣೆಗೆ 1 ಚಮಚದಷ್ಟು ಕರಿಬೇವಿನೆಸಳನ್ನು ಸೇರಿಸಿಕೊಳ್ಳಿ

*ಸಣ್ಣ ಉರಿಯಲ್ಲಿ ಇದನ್ನು 5 ನಿಮಿಷಗಳ ಕಾಲ ಬಿಸಿ ಮಾಡಿ

*24 ಗಂಟೆಗಳ ಕಾಲ ದ್ರಾವಣ ಹೈಬರ್‌ನೇಟ್ ಆಗಲು ಬಿಡಿ

*ನಿಯಮಿತವಾಗಿ ಕೂದಲಿಗೆ ಹಚ್ಚಿಕೊಳ್ಳಲು ಈ ಗಿಡಮೂಲಿಕೆಯನ್ನು ಬಳಸಿಕೊಳ್ಳಿ

ದಾಸವಾಳ

ವಿಟಮಿನ್ ಇ ಮತ್ತು ಉತ್ಕರ್ಷಣ ನಿರೋಧಿ ಅಂಶಗಳನ್ನು ಒಳಗೊಂಡಿರುವ ದಾಸವಾಳವು ಕೂದಲನ್ನು ದೃಢಗೊಳಿಸಿ ಪೋಷಣೆಯನ್ನು ಮಾಡುತ್ತದೆ ಮತ್ತು ಸೀಳು ತುದಿಯನ್ನು ನಿವಾರಿಸಲು ನೆರವಾಗಿದೆ.

hibiscusoil
 

ಇದು ಹೇಗೆ ಕೆಲಸ ಮಾಡುತ್ತದೆ

*ಒಂದು ಕಪ್‌ನಷ್ಟು ತೆಂಗಿನೆಣ್ಣೆಗೆ 10 ರಿಂದ 12 ದಾಸವಾಳ ಹೂವನ್ನು ಕತ್ತಿರಿಸಿಕೊಳ್ಳಿ

*ಸಣ್ಣ ಉರಿಯಲ್ಲಿ ಇದನ್ನು ಬಿಸಿ ಮಾಡಿ, 15 ನಿಮಿಷ ಉರಿಯನ್ನು ಸಣ್ಣಗಾಗಿಸಿ ನಂತರ ಗ್ಯಾಸ್ ಆಫ್ ಮಾಡಿ

*ಈ ಎಣ್ಣೆ 24 ಗಂಟೆಗಳ ಕಾಲ ಹಾಗೆಯೇ ಬಿಡಿ ನಂತರ ಸೋಸಿ ಮತ್ತು ನಿಮ್ಮ ದೈನಂದಿನ ಎಣ್ಣೆಯೊಂದಿಗೆ ಇದನ್ನು ಬಳಸಿಕೊಳ್ಳಿ

ತುಳಸಿ

ಮ್ಯಾಗ್ನೇಶಿಯಂ ಮತ್ತು ಇತರ ಮಿನರಲ್‌ಗಳೊಂದಿಗೆ ಶ್ರೀಮಂತವಾಗಿರುವ ತುಳಸಿ ಕೂದಲನ್ನು ದೃಢಪಡಿಸುತ್ತದೆ ಮತ್ತು ತುಂಡಾಗುವಿಕೆಯನ್ನು ತಡೆಯುತ್ತದೆ.

Besil
 

ಇದು ಹೇಗೆ ಕೆಲಸ ಮಾಡುತ್ತದೆ

*ಒಂದು ಕಪ್‌ನಷ್ಟು ನೀರನ್ನು ಕುದಿಸಿಕೊಳ್ಳಿ, ಇದಕ್ಕೆ ಒಂದು ಮುಷ್ಟಿಯಷ್ಟು ತುಳಸಿ ಎಲೆಗಳನ್ನು ಹಾಕಿ, ನಂತರ ಒಂದು ಚಮಚ

ಜೇನು ಮತ್ತು ಲಿಂಬೆ ರಸವನ್ನು ಸೇರಿಸಿಕೊಳ್ಳಿ

*15 ನಿಮಿಷಗಳ ಕಾಲ ಹಾಗೆಯೇ ಬಿಡಿ

*ಕೊಠಡಿಯ ತಾಪಮಾನಕ್ಕೆ ದ್ರಾವಣವನ್ನು ತಣ್ಣಗಾಗಲು ಬಿಡಿ ನಿಮ್ಮ ಕೂದಲಿಗೆ ಈ ಎಣ್ಣೆಯನ್ನು ಹಚ್ಚಿಕೊಂಡು ಶಾಂಪೂವಿನಿಂದ ಕೂದಲನ್ನು ತೊಳೆದುಕೊಳ್ಳಿ. ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳಲು ಪ್ರತೀಸಲ ಕೂದಲು ತೊಳೆದ ನಂತರ ಈ ಎಣ್ಣೆ ಬಳಸಿ

For Quick Alerts
ALLOW NOTIFICATIONS
For Daily Alerts

    English summary

    Herbs that can make your hair twice as longer and stronger

    Ayurvedic herbs for hair fall cannot reverse the cycle, per se, but they can strengthen the follicles, minimising the damage. So, what triggers hair fall? From genetics, humidity, pollution, hormonal imbalance to stress, it doesn't take much for your hair to start shedding. Sometimes, it is the combined effect of two or three causes that can lead to hair loss. Start off by going easy on your hair
    Story first published: Wednesday, October 5, 2016, 10:14 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more