For Quick Alerts
ALLOW NOTIFICATIONS  
For Daily Alerts

  ಬೊಕ್ಕತಲೆಯಲ್ಲಿ ಕೂದಲು ಚಿಗುರಿಸಲು ಆಯುರ್ವೇದ ಚಿಕಿತ್ಸೆ

  By Jaya
  |

  ತಲೆಗೂದಲು ಸೌಂದರ್ಯದ ಒಂದು ಭಾಗವಾಗಿದ್ದು ಇದನ್ನು ಕಾಪಾಡಿಕೊಳ್ಳುವುದಕ್ಕೆ ಹೆಚ್ಚಿನ ಕಾಳಜಿ ವಹಿಸುತ್ತೇವೆ. ಇದರ ಹೊರತಾಗಿಯೂ ವಯಸ್ಸಾದಂತೆಯೇ ತಲೆಗೂದಲುಗಳು ಒಂದೊಂದಾಗಿ ವಿದಾಯ ಹೇಳುತ್ತಾ ಬೊಕ್ಕ ತಲೆ ಆವರಿಸುತ್ತದೆ. ಬಹುತೇಕ ಇದು ಅನುವಂಶೀಯವಾಗಿದ್ದು ಅನಿವಾರ್ಯ ಬೆಳವಣಿಗೆಯಾಗಿದ್ದರೂ ಸೂಕ್ತ ಆರೈಕೆಯಿಂದ ಈ ಪ್ರಕ್ರಿಯೆಯನ್ನು ತಡವಾಗಿಸಲು ಸಾಧ್ಯ.

  ಸಾಮಾನ್ಯವಾಗಿ ಬೊಕ್ಕ ತಲೆ ಅಥವಾ ಬೋಳು ತಲೆ ಸಮಸ್ಯೆ ಕಂಡುಬರುವುದು ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸದೇ ಇದ್ದಲ್ಲಿ, ಹೆಚ್ಚಿನ ಒತ್ತಡದಿಂದ, ವಂಶಪಾರ್ಯ ಸಮಸ್ಯೆ, ದೇಹದಲ್ಲುಂಟಾಗುವ ಹಾರ್ಮೋನು ಸಮಸ್ಯೆ ಅಂತೆಯೇ ತಲೆಹೊಟ್ಟು ಬಕ್ಕತಲೆಗೆ ಕಾರಣವಾಗಿದೆ. ಮೊದಲೆಲ್ಲಾ ಮಹಿಳೆ ಮತ್ತು ಪುರುಷರು ಬೋಳು ತಲೆಯ ಸಮಸ್ಯೆಯನ್ನು ತಮ್ಮ 40 ಮತ್ತು 50 ರ ಹರೆಯದಲ್ಲಿ ಅನುಭವಿಸುತ್ತಿದ್ದರು. ಆದರೆ ಈ ಸಮಸ್ಯೆ ಇದೀಗ ಹದಿಹರೆಯದವರನ್ನು ಕಾಡುತ್ತಿದೆ.   ಚಿಕ್ಕವಯಸ್ಸಿಗೇ ಬೊಕ್ಕ ತಲೆಯಾದೀತು, ಎಚ್ಚರ!

  Ayurvedic Remedies To Treat Bald Patches On Scalp
   

  ಈ ನಿಟ್ಟಿನಲ್ಲಿ ಬಕ್ಕ ತಲೆ ಅಥವಾ ಬೋಳು ತಲೆಯ ಸಮಸ್ಯೆಯನ್ನು ನಿವಾರಿಸಲು ಆಯುರ್ವೇದದಲ್ಲಿ ಅನೇಕ ಪರಿಹಾರಗಳಿದ್ದು ಈ ಪರಿಹಾರಗಳನ್ನು ಸಮಸ್ಯೆಯುಳ್ಳವರು ಅನ್ವಯಿಸಿಕೊಳ್ಳಬಹುದಾಗಿದೆ. ನೈಸರ್ಗಿಕ ಗಿಡಮೂಲಿಕೆಗಳು ಈ ಸಮಸ್ಯೆಗೆ ಪರಿಹಾರವನ್ನು ಒದಗಿಸಲಿದ್ದು, ಕೂದಲಿನ ಬುಡವನ್ನು ಸದೃಢಗೊಳಿಸಿ ಹೊಸ ಕೂದಲು ಹುಟ್ಟುವಂತೆ ಮಾಡುತ್ತದೆ. ಬನ್ನಿ ಇಂದಿನ ಲೇಖನದಲ್ಲಿ ಆ ಗಿಡಮೂಲಿಕೆಗಳು ಯಾವುದು ಎಂಬುದನ್ನು ಅರಿತುಕೊಳ್ಳೋಣ

  ತುಳಸಿ

  ಭಾರತೀಯ ಮನೆಗಳಲ್ಲಿ ಸಾಮಾನ್ಯವಾಗಿರುವ ಔಷಧೀಯ ಸಸ್ಯವಾಗಿದ್ದು, 5000 ವರ್ಷಗಳ ಪರಂಪರೆಯನ್ನು ಇದು ಪಡೆದುಕೊಂಡಿದೆ ಮತ್ತು ಭಾರತದಲ್ಲಿ ಈ ಔಷಧೀಯ ಸಸ್ಯದ ಬಳಕೆಯನ್ನು ಮಾಡುತ್ತಿದ್ದಾರೆ. ನಿತ್ಯವೂ ಈ ಗಿಡಮೂಲಿಕೆಯನ್ನು ಬಳಸುವುದರಿಂದ ಕೂದಲನ್ನು ದೃಢವಾಗಿಸಿ ಕೂದಲಿನ ಅಕಾಲ ನೆರೆಯುವಿಕೆಯನ್ನು ಕಡಿಮೆ ಮಾಡುತ್ತದೆ.

  Ayurvedic Remedies To Treat Bald Patches On Scalp
   

  ಬಳಕೆ

  ತುಳಸಿಯ ಬೀಜಗಳನ್ನು ಹರಳೆಣ್ಣೆಯೊಂದಿಗೆ ಬೆರೆಸಿ ಕೂದಲಿನ ಬುಡಕ್ಕೆ ಹಚ್ಚಿಕೊಳ್ಳಿ ಇದರಿಂದ ಕೂದಲು ಉದುರುವುದಿಲ್ಲ. ಪರ್ಯಾಯವಾಗಿ, ಇದಕ್ಕೆ ನೆಲ್ಲಿಯನ್ನು ಮಿಶ್ರಮಾಡಿಕೊಂಡು ಸ್ನಾನಕ್ಕೆ ಮುನ್ನ ತಲೆಬುರುಡೆಗೆ ಹಚ್ಚಿಕೊಂಡು ಕೂದಲು ಉದುರುವಿಕೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.              ಬೊಕ್ಕ ತಲೆ: ಮನೆ ಮದ್ದಿರುವಾಗ ಚಿಂತೆ ಏತಕ್ಕೆ?

  ಒಂದೆಲಗ

  ಕೂದಲಿನ ಹಲವಾರು ಸಮಸ್ಯೆಗಳಿಗಾಗಿ ಅನಾದಿ ಕಾಲದಿಂದಲೂ ಈ ಗಿಡಮೂಲಿಕೆಯನ್ನು ಬಳಸಲಾಗುತ್ತಿದೆ. ಕೂದಲನ್ನು ದೃಢಗೊಳಿಸಿ ಕೂದಲಿನ ಬೆಳವಣಿಗೆಯನ್ನು ಇದು ಮಾಡುತ್ತದೆ. ನಿತ್ಯವೂ ಈ ಗಿಡಮೂಲಿಕೆಯನ್ನು ಬಳಸುವುದರಿಂದ ಕೂದಲಿನ ಬುಡ ಬಲಗೊಂಡು ಇನ್ನಷ್ಟು ಕೂದಲಿನ ಬೆಳವಣಿಗೆಯನ್ನು ಮಾಡುತ್ತದೆ.           ಆರೋಗ್ಯದ ಗಣಿ-ಎಲೆಮರೆ ಕಾಯಿಯಂತಿರುವ 'ಒಂದೆಲಗ'

  Ayurvedic Remedies To Treat Bald Patches On Scalp
   

  ಬಳಕೆ

  ಒಂದೆಲಗ ಎಣ್ಣೆಯನ್ನು ಮಾಡಿಕೊಂಡು ವಾರಕ್ಕೆ ಎರಡು ಅಥವಾ ಮೂರು ಬಾರಿ ಹಚ್ಚಿಕೊಳ್ಳಿ ಬಕ್ಕ ತಲೆಯ ಸಮಸ್ಯೆ ಈ ಎಣ್ಣೆಯಿಂದ ನಿವಾರಣೆಯಾಗುವುದು ಖಂಡಿತ.

  ತ್ರಿಫಲ

  ಎರಡು ಅಥವಾ ಮೂರು ಗಿಡಮೂಲಿಕೆಗಳನ್ನು ಹೊಂದಿರುವ ತ್ರಿಫಲ, ಕೂದಲು ಉದುರುವಿಕೆಯ ಸಮಸ್ಯೆಗೆ ಬಹಳ ಹಿಂದಿನಿಂದಲೂ ಬಳಸಿಕೊಂಡು ಬಂದಿರುವ ಸಸ್ಯ ಸಂಪತ್ತಾಗಿದೆ. ಮಾತ್ರೆ, ಟೀ ಅಥವಾ ಹುಡಿಯ ರೂಪದಲ್ಲಿ ತ್ರಿಫಲಾದ ಬಳಕೆಯನ್ನು ಮಾಡುತ್ತಾರೆ. ಕೂದಲಿನ ಕೋಶಗಳನ್ನು ಪುನರುತ್ಸಾಹಗೊಳಿಸಿ ಕೂದಲಿನ ಬೆಳವಣಿಗೆಯನ್ನು ಮಾಡುತ್ತದೆ.

  Ayurvedic Remedies To Treat Bald Patches On Scalp
   

  ಬಳಕೆ

  ತ್ರಿಫಲಾದ ಪೇಸ್ಟ್ ಅನ್ನು ಮಾಡಿಕೊಂಡು ನಿಮ್ಮ ತಲೆಬುರುಡೆಗೆ ಹಚ್ಚಿಕೊಳ್ಳಿ. ಇದರಿಂದ ಕೂದಲುದುರುವ ಸಮಸ್ಯೆ ನಿವಾರಣೆಯಾಗುತ್ತದೆ.

  ಪೇರಳೆ ಮರದ ಎಲೆಗಳು

  ಕೆಲವು ಪೇರಳೆ ಎಲೆಗಳನ್ನು (ತುಂಬಾ ಬಲಿತವೂ ಅಲ್ಲ, ತೀರಾ ಎಳೆಯವೂ ಅಲ್ಲ) ಕೊಂಚ ನೀರಿನೊಂದಿಗೆ ನಯವಗಿ ಅರೆಯಿರಿ. ಈ ಲೇಪನವನ್ನು ದಪ್ಪನಾಗಿ ತಲೆಯ ಕೂದಲಿಗೆ ಹಚ್ಚಿ ಒಣಗಲು ಬಿಡಿ. ಇಪ್ಪತ್ತು ನಿಮಿಷದ ಬಳಿಕ ಕೇವಲ ತಣ್ಣೀರು ಉಪಯೋಗಿಸಿ ತೊಳೆದುಕೊಳ್ಳಿ. ಇದು ಕೂದಲು ಉದುರುವುದನ್ನು ತಡೆಯುವುದರ ಜೊತೆಗೇ ಕೂದಲಿಗೆ ಕಾಂತಿ ನೀಡಲೂ ನೆರವಾಗುತ್ತದೆ.

  Ayurvedic Remedies To Treat Bald Patches On Scalp
   

  ಅಗಸೆ ಬೀಜಗಳು

  ಅಗಸೆ ಬೀಜಗಳ ನಿಯಮಿತ ಬಳಕೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಈ ಬೀಜದಲ್ಲಿ ಒಮೇಗಾ - 3 ಕೊಬ್ಬಿನ ಅಂಶಗಳಿದ್ದು ಬಕ್ಕ ತಲೆಯ ಸಮಸ್ಯೆಯನ್ನು ನಿವಾರಿಸಿ ಕೂದಲಿನ ಬೆಳವಣಿಗೆಯನ್ನು ಮಾಡುತ್ತದೆ. ನಿಯಮಿತವಾಗಿ ಈ ಬೀಜವನ್ನು ಸೇವಿಸುವುದರಿಂದ ಸುದೃಢ ಆರೋಗ್ಯಕಾರಿ ಕೂದಲನ್ನು ಪಡೆದುಕೊಳ್ಳಬಹುದಾಗಿದೆ. ನಿಮ್ಮ ಕೂದಲಿಗೆ ನೈಸರ್ಗಿಕ ಹೊಳಪನ್ನು ಈ ಬೀಜಗಳು ನೀಡುವುದರಿಂದ ಕೂದಲಿನ ಕಿರುಚೀಲಗಳನ್ನು ಬಲಗೊಳಿಸಿ ಕೂದಲಿನ ಬೆಳವಣಿಗೆಯನ್ನು ಮಾಡುತ್ತದೆ.

  Ayurvedic Remedies To Treat Bald Patches On Scalp
   

  ಬಳಕೆ

  ನಿಮ್ಮ ಆಹಾರದಲ್ಲಿ ಹಲವಾರು ಬಗೆಯಲ್ಲಿ ಈ ಬೀಜಗ ಬಳಕೆಯನ್ನು ಮಾಡಬಹುದಾಗಿದೆ. ಬಿಸ್ಕತ್ತು ಮತ್ತು ಕೇಕು ತಯಾರಿಸುವಾಗ ಈ ಬೀಜಗಳನ್ನು ಬಳಸಿಕೊಳ್ಳುವುದರಿಂದ ಇದರ ನ್ಯೂಟ್ರಿನ್ ಮೌಲ್ಯ ಹೆಚ್ಚುತ್ತದೆ. ನಿಮ್ಮ ಬೆಳಗ್ಗಿನ ಶೇಕ್ಸ್‎ನಲ್ಲಿ ಈ ಬೀಜಗಳ ಬಳಕೆಯನ್ನು ಮಾಡಬಹುದಾಗಿದೆ. ನೀರಿನಲ್ಲಿ ನೆನೆಸಿಟ್ಟ ಅಗಸೆ ಬೀಜಗಳನ್ನು ಸೇವಿಸುವುದರಿಂದ ಕೂಡ ಬೋಳು ತಲೆಯ ಸಮಸ್ಯೆ ನಿವಾರಣೆಯಾಗುತ್ತದೆ.

  English summary

  Ayurvedic Remedies To Treat Bald Patches On Scalp

  Earlier, men and women experienced the problem of bald patches in their 40s and 50s; however, today, these problems are even experienced by the youngsters at an alarming rate. According to Ayurveda Consuming spicy, sour, fried or oily food is one of the reasons that causes Pitta aggravation in the body. So, let's unearth these Ayurvedic herbs that can help treat bald patches on the scalp. Take a look.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more