For Quick Alerts
ALLOW NOTIFICATIONS  
For Daily Alerts

ಡಬಲ್‌ ಚಿನ್‌ ಇಲ್ಲವಾಗಿಸಲು ನಿತ್ಯ ಈ ವ್ಯಾಯಾಮಗಳನ್ನು ಮಾಡಿ

|

ಎಲ್ಲರಿಗೂ ಸೌಂದರ್ಯ ಇದ್ದೇ ಇರುತ್ತದೆ, ಇತ್ತೀಚಿನ ದಿನಗಳಲ್ಲಿ ಈ ಸೌಂದರ್ಯ ಕಾಳಜಿಗೆ ವಯಸ್ಸಿನ ಮಿತಿಯೇ ಇಲ್ಲದಾಗಿದೆ. ಆದರೆ ನಮ್ಮ ಆಹಾರ ಶೈಲಿಯೋ ಅಥವಾ ಅನಾರೋಗ್ಯ ಸಮಸ್ಯೆಗಳಿಂದ ಹಲವರಲ್ಲಿ ಗಲ್ಲದ ಕೆಳಗೆ ಕೊಬ್ಬು ಶೇಖರಣೆಯಾಗುತ್ತದೆ. ಇದನ್ನು 'ಡಬಲ್‌ ಚಿನ್‌' ಎಂದೂ ಕರೆಯಲಾಗುತ್ತದೆ.

ಡಬಲ್‌ ಚಿನ್‌ ಕೇವಲ ದಪ್ಪ ಇರುವವರಿಗೆ ಮಾತ್ರವಲ್ಲ ಸಣ್ಣ ಇರುವವರಿಗೆ ಸಹ ಕಾಡುವ ಸಮಸ್ಯೆಯಾಗಿದೆ. ಇದಕ್ಕೆ ಯಾವುದೇ ಚಿಕಿತ್ಸೆ ಇಲ್ಲದೆ ಕೆಲವು ಸರಳ ವ್ಯಾಯಾಮಗಳಿಂದ ನಿಮ್ಮ ಮುಖ ಮತ್ತು ಕತ್ತಿನ ಕೊಬ್ಬನ್ನು ಕಡಿಮೆ ಮಾಡಬಹುದು. ಮುಖ ಮತ್ತು ಕುತ್ತಿಗೆಗೆ ಯಾವ ವ್ಯಾಯಾಮಗಳನ್ನು ಮಾಡಬೇಕು ಎಂದು ಮುಂದೆ ತಿಳಿಯಿರಿ:

ನೆಕ್ ಸ್ಟ್ರೆಚ್ ವ್ಯಾಯಾಮ

ನೆಕ್ ಸ್ಟ್ರೆಚ್ ವ್ಯಾಯಾಮ

ಕುತ್ತಿಗೆಯನ್ನು ತೆಳ್ಳಗೆ ಮಾಡಲು ನೀವು ಈ ವ್ಯಾಯಾಮವನ್ನು ಮಾಡಬಹುದು. ನೆಲದ ಮೇಲೆ ಚಾಪೆಯನ್ನು ಹಾಸಿ ನಿಮ್ಮ ಬೆನ್ನಿನ ಮೇಲೆ ಮಲಗಿಕೊಳ್ಳಿ. ಈಗ ಉಸಿರನ್ನು ಒಳಗೆಳೆದುಕೊಳ್ಳುತ್ತಾ ನಿಧಾನವಾಗಿ ಕುತ್ತಿಗೆಯನ್ನು ಮೇಲಕ್ಕೆತ್ತಿ. ಇದರ ನಂತರ, ಉಸಿರಾಡುವಾಗ, ಕುತ್ತಿಗೆಯನ್ನು ಕೆಳಕ್ಕೆ ಸರಿಸಿ. ನೀವು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ 10-15 ಬಾರಿ ಈ ವ್ಯಾಯಾಮವನ್ನು ಮಾಡಬಹುದು.

ಕುರ್ಚಿ ವ್ಯಾಯಾಮ

ಕುರ್ಚಿ ವ್ಯಾಯಾಮ

ನೀವು ಕುರ್ಚಿಯ ಮೇಲೆ ಕುಳಿತು ಈ ವ್ಯಾಯಾಮವನ್ನು ಮಾಡಬಹುದು. ಮೊದಲನೆಯದಾಗಿ ನೇರವಾಗಿ ಕುರ್ಚಿಯ ಮೇಲೆ ಕುಳಿತುಕೊಳ್ಳಿ. ಈಗ ನಿಮ್ಮ ಬಲಗೈಯನ್ನು ಬಲಗೈಯ ಭುಜದ ಮೇಲೆ ಇರಿಸಿ ಮತ್ತು ಎದುರು ಕೈಯನ್ನು ತಲೆಯ ಮೇಲೆ ಇರಿಸಿ. ಈಗ ನಿಧಾನವಾಗಿ ಕುತ್ತಿಗೆಯನ್ನು ಕೆಳಕ್ಕೆ ಬಗ್ಗಿಸಿ. ಕೆಲವು ಸೆಕೆಂಡುಗಳ ಕಾಲ ಹಿಡಿದುಕೊಳ್ಳಿ ಮತ್ತು ಕುತ್ತಿಗೆಯನ್ನು ಗಡಿಯಾರದಂತೆ ತಿರುಗಿಸಿ. ಇದು ಕುತ್ತಿಗೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ.

ಬ್ರಹ್ಮ ಮುದ್ರಾ ವ್ಯಾಯಾಮ

ಬ್ರಹ್ಮ ಮುದ್ರಾ ವ್ಯಾಯಾಮ

ಈ ವ್ಯಾಯಾಮಕ್ಕಾಗಿ, ನೇರವಾಗಿ ಕುರ್ಚಿಯ ಮೇಲೆ ಕುಳಿತುಕೊಳ್ಳಿ ಮತ್ತು ನಿಮ್ಮ ಕೈಗಳನ್ನು ನಿಮ್ಮ ತೊಡೆಯ ಮೇಲೆ ಇರಿಸಿ. ಈಗ ಕುತ್ತಿಗೆಯನ್ನು ಹಿಂದಕ್ಕೆ ಸರಿಸಿ ಮತ್ತು ನಿಧಾನವಾಗಿ ಉಸಿರಾಡಿ. ಈಗ ಕುತ್ತಿಗೆಯನ್ನು ಎಡ-ಬಲಕ್ಕೆ ತಿರುಗಿಸಿ. ನಂತರ 10 ಸೆಕೆಂಡುಗಳ ಕಾಲ ತಲೆಯನ್ನು ಕೆಳಕ್ಕೆ ತಿರುಗಿಸಿ ಮತ್ತು ನಂತರ ಕುತ್ತಿಗೆಯನ್ನು ಬಲದಿಂದ ಎಡಕ್ಕೆ ವೃತ್ತಾಕಾರದ ಚಲನೆಯಲ್ಲಿ ಸರಿಸಿ.

ಭರತನಾಟ್ಯದ ಶಿರೋಬೇಧ

ಭರತನಾಟ್ಯದ ಶಿರೋಬೇಧ

ನಾಟ್ಯಶಾಸ್ತ್ರದ ಪ್ರಕಾರ ಭರತನಾಟ್ಯದಲ್ಲಿ ಇರುವ 9 ಶಿರೋಬೇಧಗಳು ನಿಮ್ಮ ಕತ್ತುಗಳ ಉತ್ತಮ ಕಾರ್ಯನಿರ್ವಹಣೆ, ರಕ್ತಪರಿಚಲನೆಗೆ, ಡಬಲ್‌ ಚಿನ್‌ ಇಲ್ಲವಾಗಿಸಲು, ಗಲ್ಲದ ಆಕರ್ಷಕ ಆಕೃತಿಗೆ ಕಾರಣವಾಗುತ್ತದೆ.

English summary

Exercises To Lose Double Chin And Face Fat in Kannada

Here we are discussing about Exercises To Lose Double Chin And Face Fat in Kannada. Read more.
Story first published: Wednesday, May 25, 2022, 17:22 [IST]
X
Desktop Bottom Promotion