For Quick Alerts
ALLOW NOTIFICATIONS  
For Daily Alerts

ಹಲ್ಲುಗಳು ಹಳದಿಯಾಗಿವೆ ಎಂದು ಕೊರಗಬೇಡಿ,ಬೆಳ್ಳಗಾಗಲು ಹೀಗೆ ಮಾಡಿ...

ಹಲ್ಲುಗಳು ಬಿಳುಪಾಗಲು ಕೇವಲ ಟೂಥ್‍ಪೇಸ್ಟ್ ಮಾತ್ರ ಸಾಲದು. ಈ ನಿಟ್ಟಿನಲ್ಲಿ ಸಹಕರಿಸಲು ಮನೆ ಮದ್ದುಗಳು ಸಹ ಪರಿಣಾಮಕಾರಿಯಾದ ಫಲಿತಾಂಶಗಳನ್ನು ನೀಡುತ್ತವೆ...

By Jaya subramanya
|

ಹೊಳೆಯುವ ಮುತ್ತಿನಂತಹ ಹಲ್ಲುಗಳನ್ನು ಹೊಂದುವುದು ಎಂದರೆ ಯಾರಿಗೆ ತಾನೇ ಇಷ್ಟವಿರುವುದಿಲ್ಲ ಹೇಳಿ? ಹಲ್ಲು ಹುಳುಕಾಗಿದ್ದು, ಕಲೆಗಳಿಂದ ತುಂಬಿಕೊಂಡಿದ್ದರೆ ನಿಮ್ಮ ನಗು ಕೂಡ ಕೊಳಕಾಗಿಯೇ ಕಾಣುತ್ತದೆ. ಹಿಂದಿನ ಕಾಲದ ಜನರು ತಮ್ಮ ಹಲ್ಲುಗಳನ್ನು ಶುಭ್ರವಾಗಿ ಮುತ್ತಿನಂತೆ ಇರಿಸುವುದರ ಜೊತೆಗೆ ಹುಳುಕಿಲ್ಲದೆ ಗಟ್ಟಿಯಾಗಿ ಕಾಪಾಡಿಕೊಂಡಿದ್ದರು.

ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ದುಬಾರಿ ಟೂತ್‌ಪೇಸ್ಟ್‌ಗಳ ಜಂಜಾಟವಿಲ್ಲದೆ ಇವರು ಬೇವಿನ ಕಡ್ಡಿ, ಇದ್ದಿಲು ಮತ್ತು ಉಪ್ಪು, ಸೇಬಿನ ಕಡ್ಡಿ ಮೊದಲಾದ ನೈಸರ್ಗಿಕ ಉತ್ಪನ್ನಗಳಿಂದಲೇ ತಮ್ಮ ಹಲ್ಲುಗಳನ್ನು ಸಂರಕ್ಷಿಸಿಕೊಳ್ಳುತ್ತಿದ್ದರು ಸಿಹಿ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಿಕೊಂಡು ಹಲ್ಲುಗಳು ಹುಳುಕಿಗೆ ಕಡಿವಾಣವನ್ನು ಹಾಕಿದ್ದರು.

ತೆಂಗಿನ ಎಣ್ಣೆಯಿಂದ ಹಲ್ಲು ಉಜ್ಜಿದರೆ- ಹಲ್ಲುಗಳು ಇನ್ನಷ್ಟು ಬೆಳ್ಳಗೆ ಆಗುತ್ತೆ!

ನಮ್ಮ ಹಲ್ಲುಗಳ ರಚನಾ ವಿಧಾನವನ್ನು ನೋಡಹೊರಟಲ್ಲಿ ಮೃದುವಾದ ಅಂಶವನ್ನು ಕಂಡುಕೊಳ್ಳಬಹುದಾಗಿದೆ ಇದು ಹಲ್ಲುಗಳ ಹೊರವಲಯದಲ್ಲಿ ಎನಾಮಲ್ ಎಂಬ ಹೆಸರಿನಿಂದ ಕರೆಯಲಾಗಿದ್ದು ಇದು ನೈಸರ್ಗಿಕ ಬಿಳುಪಾಗಿದೆ. ಇದು ಹೊರಟುಹೋದಲ್ಲಿ ಹಳದಿ ಬಣ್ಣ ಗೋಚರವಾಗುತ್ತದೆ. ಹಲ್ಲಿನಲ್ಲಿ ಹಳದಿ ಬಣ್ಣ ಉಂಟಾಗಲು ನಾವು ಮಾಡುವ ಕೆಲವೊಂದು ಅಜಾಗರೂಕತೆಗಳು ಕಾರಣವಾಗಿದ್ದು ಇಂದಿನ ಲೇಖನದಲ್ಲಿ ಅದೇನು ಎಂಬುದನ್ನು ಕಂಡುಕೊಳ್ಳೋಣ....

ಹಲ್ಲಿನ ಹಳದಿಗಟ್ಟುವಿಕೆ ಕಾರಣ...

ಹಲ್ಲಿನ ಹಳದಿಗಟ್ಟುವಿಕೆ ಕಾರಣ...

ಹೆಚ್ಚು ಪ್ರಮಾಣದಲ್ಲಿ ಕಾಫಿ ಅಥವಾ ಟೀ ಸೇವನೆಯಿಂದಾಗಿ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಅಂತೆಯೇ ನೀವು ಧೂಮಪಾನಿಗಳಾಗಿದ್ದರೂ ನಿಮ್ಮ ಹಲ್ಲುಗಳು ಹಳದಿಯಾಗುತ್ತವೆ. ಆಹಾರ ಸೇವನೆಯ ನಂತರ ಹಲ್ಲುಗಳ ಶುದ್ಧೀಕರಣಕ್ಕೆ ನೀವು ಗಮನವನ್ನು ನೀಡದೇ ಇದ್ದಲ್ಲಿ ಕೂಡ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗುವ ಸಂಭವ ಅಧಿಕವಾಗಿರುತ್ತದೆ. ಹಳದಿ ಬಣ್ಣಕ್ಕೆ ತಿರುಗಿರುವ ಹಲ್ಲನ್ನು ಹೊಳಪಾಗಿಸಲು ಇಲ್ಲಿ ಕೆಲವೊಂದು ಟಿಪ್ಸ್‌ಗಳನ್ನು ನಾವು ನೀಡುತ್ತಿದ್ದು ಅವುಗಳೇನು ಎಂಬುದನ್ನು ಅರಿತುಕೊಳ್ಳಿ...

ಬೇವಿನ ಎಲೆಗಳು

ಬೇವಿನ ಎಲೆಗಳು

ಒಂದು ಹಿಡಿ ಬೇವಿನ ಎಲೆಗಳನ್ನು ಜಜ್ಜಿ, ಅದನ್ನು ಹಾಲಿನೊಂದಿಗೆ ಬೆರೆಸಿ. ಇದನ್ನು ಒಂದು ದಪ್ಪವಾದ ಪೇಸ್ಟ್‌ನಂತೆ ಮಾಡಿಕೊಳ್ಳಿ ಮತ್ತು ಇದನ್ನು ನಿಮ್ಮ ಟೂಥ್‌ಪೇಸ್ಟಿನಿಂದ ಹಲ್ಲುಜ್ಜುವ ಮೊದಲು ಬಳಸಿ.

ಕಿತ್ತಳೆ ಸಿಪ್ಪೆ

ಕಿತ್ತಳೆ ಸಿಪ್ಪೆ

ತಾಜಾ ಕಿತ್ತಳೆ ಸಿಪ್ಪೆ ಲಭ್ಯವಿದೆ. ನಿಮ್ಮ ಹಲ್ಲುಗಳ ಮೇಲ್ಭಾಗಕ್ಕೆ ನಿತ್ಯವೂ ಕಿತ್ತಳೆ ಸಿಪ್ಪೆಯನ್ನು ಉಜ್ಜಿರಿ. ನೀವು ಮಲಗುವ ಮುನ್ನ ಇದನ್ನು ಮಾಡಿ. ಸಿಪ್ಪೆಯಲ್ಲಿರುವ ಕ್ಯಾಲ್ಶಿಯಂ ಮತ್ತು ವಿಟಮಿನ್ ಸಿ ಅಂಶವು ಕೆಟ್ಟ ಬ್ಯಾಕ್ಟೀರಿಯಾದೊಂದಿಗೆ ಹೋರಾಡಿ ಹಲ್ಲುಗಳನ್ನು ಸಂರಕ್ಷಿಸುತ್ತವೆ. ತಾಜಾ ಸಿಪ್ಪೆ ಲಭ್ಯವಿಲ್ಲದಿದ್ದರೆ, ಒಣಗಿದ ಸಿಪ್ಪೆ ಹುಡಿಯನ್ನು ನಿಮಗೆ ಬಳಸಬಹುದಾಗಿದೆ.

ಬಾಳೆ ಹಣ್ಣು ಸಿಪ್ಪೆ

ಬಾಳೆ ಹಣ್ಣು ಸಿಪ್ಪೆ

ನಿಮ್ಮ ಹಳದಿಗಟ್ಟಿದ ಹಲ್ಲನ್ನು ಸ್ವಚ್ಛ ಮಾಡಲು ಬಾಳೆ ಹಣ್ಣಿನ ಸಿಪ್ಪೆಯನ್ನು ನಿಮಗೆ ಬಳಸಬಹುದಾಗಿದೆ. ಸಿಪ್ಪೆಯಲ್ಲಿರುವ ವಿಟಮಿನ್‌ಗಳು ಮತ್ತು ಮಿನರಲ್‌ಗಳು ಹಲ್ಲಿನ ಹಳದಿ ಬಣ್ಣವನ್ನು ಹೋಗಲಾಡಿಸಲು ನೆರವನ್ನು ನೀಡಲಿದೆ. ನಿಯಮತವಾಗಿ ಬಾಳೆಹಣ್ಣಿನ ಸಿಪ್ಪೆಯನ್ನು ಬಳಸುವುದರಿಂದ ಹಲ್ಲಿನ ಹಳದಿ ಕರೆಗಳು ಮಾಯವಾಗಿ ಮುತ್ತಿನಂತಹ ಹಲ್ಲುಗಳನ್ನು ನಿಮಗೆ ಹೊಂದಬಹುದಾಗಿದೆ.

ಬೇಕಿಂಗ್ ಸೋಡಾ

ಬೇಕಿಂಗ್ ಸೋಡಾ

ಹಲ್ಲಿನ ಹಳದಿ ಕರೆಯನ್ನು ನಿವಾರಿಸಲು ಬೇಕಿಂಗ್ ಸೋಡಾ ಅತ್ಯದ್ಭುತ ಉತ್ಪನ್ನವಾಗಿದೆ. ನಿಮ್ಮ ಹಲ್ಲನ್ನು ಸ್ವಚ್ಛಮಾಡುವಲ್ಲಿ ಇದು ನೆರವನ್ನು ನೀಡಲಿದೆ. ಕಾಲು ಭಾಗದಷ್ಟು ಸೋಡಾವನ್ನು ತೆಗೆದುಕೊಂಡು ನಿಮ್ಮ ಹಲ್ಲುಗಳನ್ನು ಬ್ರಶ್‌ನಿಂದ ತಿಕ್ಕಿರಿ. ಬೆಚ್ಚಗಿನ ನೀರಿನಿಂದ ಹಲ್ಲನ್ನು ತೊಳೆದುಕೊಳ್ಳಿ. ವಾರದಲ್ಲಿ ಒಂದು ಅಥವಾ ಎರಡು ಬಾರಿ ಇದನ್ನು ಬಳಸಿ.

ಹುಷಾರ್, ಹಲ್ಲುಗಳ ಜೊತೆ ಎಂದೂ ಆಟವಾಡಬೇಡಿ..!

ಅರಿಶಿನ ಮತ್ತು ತೆಂಗಿನೆಣ್ಣೆ

ಅರಿಶಿನ ಮತ್ತು ತೆಂಗಿನೆಣ್ಣೆ

ಸ್ವಲ್ಪ ಅರಿಶಿನವನ್ನು ತೆಂಗಿನೆಣ್ಣೆಯೊಂದಿಗೆ ಮಿಶ್ರ ಮಾಡಿ ಮತ್ತು ಇದರಿಂದ ಹಲ್ಲು ತಿಕ್ಕಿರಿ. ಐದು ನಿಮಿಷಗಳ ತರುವಾಯ ಹಲ್ಲುಗಳನ್ನು ತೊಳೆದುಕೊಳ್ಳಿ. ಹಳದಿ ಕಲೆಯನ್ನು ಹೋಗಲಾಡಿಸಲು ನಿಯಮಿತವಾಗಿ ಈ ವಿಧಾನವನ್ನು ಅನುಸರಿಸಿ... ಇಲ್ಲದಿದ್ದರೆ ಇನ್ನೊಂದು ವಿಧಾನವಿದೆ ಅರಿಶಿನವನ್ನು ಹಾಲಿನೊಂದಿಗೆ ಚೆನ್ನಾಗಿ ಬೆರೆಸಿ. ಆ ಪೇಸ್ಟನ್ನು ಹಲ್ಲುಗಳಿಗೆ ಲೇಪಿಸಿ. 3 ನಿಮಿಷಗಳ ನಂತರ ಹಲ್ಲುಗಳನ್ನು ಚೆನ್ನಾಗಿ ತೊಳೆಯಿರಿ.

ಉಪ್ಪು

ಉಪ್ಪು

ಹಲ್ಲುಗಳ ಹಲವಾರು ಸಮಸ್ಯೆಗಳನ್ನು ನಿವಾರಿಸಲು ಉಪ್ಪು ಅತ್ಯದ್ಭುತ ಉಪಾಯವಾಗಿದೆ. ಹೆಚ್ಚಿನ ಟೂತ್‌ಪೇಸ್ಟ್‌ಗಳು ಉಪ್ಪಿನ ಅಂಶದೊಂದಿಗೆ ಬಂದಿದ್ದು ನಿಮ್ಮ ಹಲ್ಲುಗಳನ್ನು ತೊಳೆಯಲು ಉಪ್ಪನ್ನು ಬಳಸಿಕೊಳ್ಳಿ. ಕಲ್ಲುಪ್ಪನ್ನು ಬಳಸಿಕೊಂಡು ನಿತ್ಯ ಒಂದು ಬಾರಿ ಹಲ್ಲುಜ್ಜಿ. ಅಡುಗೆ ಸೋಡಾದೊಂದಿಗೆ ಉಪ್ಪನ್ನು ಬಳಸಿಕೊಂಡು ಹಲ್ಲುಜ್ಜಬಹುದಾಗಿದೆ. ಉಪ್ಪು ನಿಮ್ಮ ದವಡೆಯನ್ನು ಸ್ಪರ್ಶಿಸದಂತೆ ನೋಡಿಕೊಳ್ಳಿ.

ಲಿಂಬೆ

ಲಿಂಬೆ

ನೈಸರ್ಗಿಕ ಶುದ್ಧಕ ಎಂದೇ ಕರೆಯಲ್ಪಡುವ ಲಿಂಬೆಯನ್ನು ಬಳಸಿಕೊಂಡು ನಿಮಗೆ ಹಲ್ಲುಜ್ಜಬಹುದಾಗಿದೆ. ಹಲ್ಲಿನ ಹಳದಿ ಕರೆಯನ್ನು ನಿವಾರಿಸಲು ಲಿಂಬೆ ಅತ್ಯುನ್ನತ ಪರಿಣಾಮಕಾರಿ ಅಂಶವಾಗಿದೆ. ಸ್ವಲ್ಪ ಲಿಂಬೆ ರಸವನ್ನು ತೆಗೆದುಕೊಂಡು ಹಲ್ಲುಗಳನ್ನು ಬೆರಳಿನಿಂದ ತಿಕ್ಕಿಕೊಳ್ಳಿ. ಅಂತೆಯೇ ಲಿಂಬೆ ಸಿಪ್ಪೆಯಿಂದ ಹಲ್ಲುಗಳನ್ನು ಉಜ್ಜಿಕೊಳ್ಳಬಹುದು. ಸ್ವಲ್ಪ ಉಪ್ಪು ಕೆಲವು ಹನಿ ಲಿಂಬೆ ರಸವನ್ನು ಉಪಯೋಗಿಸಿಕೊಂಡು ಹಲ್ಲುಗಳನ್ನು ನಿಮಗೆ ಬಿಳಿ ಮಾಡಿಕೊಳ್ಳಬಹುದಾಗಿದೆ. ದಿನಕ್ಕೆ ಎರಡು ಬಾರಿ ಹೀಗೆ ಮಾಡುವುದರಿಂದ ಅತ್ಯುನ್ನತ ಫಲಿತಾಂಶವನ್ನು ಪಡೆದುಕೊಳ್ಳಬಹುದು.

ಪ್ರತಿದಿನ ಮಲಗುವ ಮುನ್ನ ಹಲ್ಲುಜ್ಜಿ-ವೈದ್ಯರಿಂದ ದೂರವಿರಿ!

English summary

Natural Home Remedies To Get Whiter Teeth

We all very well know that a Smile is a beautiful curve that sets everything straight. No doubt, beautiful shiny teeth contribute more to a beautiful smile. Yellow teeth can be awkward and disturbing. It can bring down your morale; however, a few tips to get white teeth can come in as saviours.
Story first published: Monday, May 22, 2017, 9:56 [IST]
X
Desktop Bottom Promotion