ಕೈ ಹಾಗೂ ಕಾಲಿನ ಗಂಟುಗಳ ಕಪ್ಪು ಕಲೆಗಳ ಸಮಸ್ಯೆಗೆ ಸರಳ ಟಿಪ್ಸ್

By: Hemanth
Subscribe to Boldsky

ನಮ್ಮ ದೇಹದ ಪ್ರತಿಯೊಂದು ಅಂಗವು ವಿಶೇಷವಾಗಿ ವಿನ್ಯಾಸಗೊಂಡಿರುವುದನ್ನು ನಮಗೆ ತಿಳಿದುಬರುತ್ತದೆ. ಇದರಲ್ಲಿ ಪ್ರಮುಖವಾಗಿ ಕೆಲವೊಂದು ಅಂಗಗಳು ದೇಹಕ್ಕೆ ತಂಪನ್ನು ಉಂಟುಮಾಡಿದರೆ ಇನ್ನು ಕೆಲವು ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳುತ್ತದೆ. ಕೈ ಹಾಗೂ ಕಾಲಿನ ಗಂಟುಗಳನ್ನು ವೀಕ್ಷಿಸಿದಾಗ ಇದು ದೇಹದ ಇತರ ಭಾಗಕ್ಕಿಂತ ಸ್ವಲ್ಪ ಗಡುಸಾಗಿರುತ್ತದೆ ಮತ್ತು ಹೆಚ್ಚು ಕಪ್ಪಾಗಿರುತ್ತದೆ.  ಆದರೆ ಇದು ಯಾಕೆಂದು ಹುಡುಕಲು ನಾವು ಇಂದಿಗೂ ಪ್ರಯತ್ನಿಸಿಲ್ಲ. ಈ ಟಿಪ್ಸ್ ಅಂದದ ಕೈ ಕಾಲು ಬಯಸುವವರಿಗಾಗಿ ಮಾತ್ರ

ದೇಹದ ಬೇರೆ ಭಾಗಕ್ಕಿಂತ ಈ ಭಾಗದ ಚರ್ಮವು ಸ್ವಲ್ಪ ಹೆಚ್ಚು ದಪ್ಪವಾಗಿರುತ್ತದೆ ಮತ್ತು ಅಲ್ಲಿ ಯಾವುದೇ ರೀತಿಯ ತೈಲ ಗ್ರಂಥಿಗಳು ಇಲ್ಲದೆ ಇರುವ ಕಾರಣದಿಂದ ಒರಟು ಹಾಗೂ ಕಪ್ಪಾಗಿರುತ್ತದೆ. ದೇಹದ ಈ ಭಾಗದ ಆರೈಕೆ ಮಾಡುವುದು ಕಡಿಮೆಯಾಗಿರುವ ಕಾರಣದಿಂದಾಗಿ ಈ ಭಾಗವು ಮತ್ತಷ್ಟು ಕಪ್ಪಾಗುತ್ತದೆ. ಮೊಣಕೈ ಮತ್ತು ಮೊಣಕಾಲಿಗೂ ಬೇಕು ಅಂದದ ಆರೈಕೆ

ಸೂರ್ಯನ ಕಿರಣಗಳು, ಅನುವಂಶೀಯತೆ ಸತ್ತಚರ್ಮದ ಕೋಶಗಳ ಶೇಖರಣೆ ಇವುಗಳು ಕೂಡ ದೇಹದ ಈ ಭಾಗವನ್ನು ಕಪ್ಪಾಗಿಡುತ್ತದೆ. ಆದರೆ ಇದಕ್ಕೆ ಮಾಯಿಶ್ಚರೈಸರ್ ಬಳಸಿಕೊಂಡರೆ ತೇವಾಂಶವನ್ನು ಕಾಪಾಡಿಕೊಳ್ಳಬಹುದು. ಕೆಲವೊಂದು ಮನೆಮದ್ದಿನಿಂದ ಮೊಣಕಾಲು ಹಾಗೂ ಮೊಣಕೈಯಲ್ಲಿರುವ ಕಪ್ಪ ಕಲೆಗಳನ್ನು ನಿವಾರಣೆ ಮಾಡಬಹುದು....

ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆ

ಹೆಚ್ಚಾಗಿ ಭಾರತೀಯ ಅಡುಗೆಮನೆಗಳಲ್ಲಿ ಬಳಸಲ್ಪಡುವಂತಹ ಸಾಸಿವೆ ಎಣ್ಣೆಯಲ್ಲಿ ಇರುವಂತಹ ಲಿನೋಲಿಕ್, ಎರುಸಿಸ್ ಮತ್ತು ಒಲಯಿಕ್ ಆಮ್ಲವು ಮೊಣಕೈ ಹಾಗೂ ಮೊಣಕಾಲಿನ ಬಣ್ಣವನ್ನು ತಿಳಿಯಾಗಿಸುವುದು. ಮಲಗುವ ಮೊದಲು ಸಾಸಿವೆ ಎಣ್ಣೆಯನ್ನು ಮೊಣಕಾಲು ಹಾಗೂ ಮೊಣಕೈಗೆ ಹಚ್ಚಿಕೊಂಡು ಸರಿಯಾಗಿ ಮಸಾಜ್ ಮಾಡಿಕೊಳ್ಳಿ. ರಾತ್ರಿಯಿಡಿ ಹಾಗೆ ಇರಲಿ.ಬೆಳಿಗ್ಗೆ ಎದ್ದ ಬಳಿಕ ಸೋಪಿನಿಂದ ತೊಳೆಯಿರಿ. ಸಾಸಿವೆ ಎಣ್ಣೆ- ಆರೋಗ್ಯಕ್ಕೂ ಸೈ, ಅಡುಗೆಗೂ ಜೈ

ಅಡುಗೆ ಸೋಡಾ ಮತ್ತು ಹಾಲು

ಅಡುಗೆ ಸೋಡಾ ಮತ್ತು ಹಾಲು

ಮೊಣಕಾಲು ಹಾಗೂ ಮೊಣಕೈಯಲ್ಲಿರುವಂತಹ ಸತ್ತಚರ್ಮದ ಕೋಶಗಳನ್ನು ಅಡುಗೆ ಸೋಡಾವು ತೆಗೆದುಹಾಕುವುದು. ಹಾಲಿನಲ್ಲಿರುವ ಲ್ಯಾಕ್ಟಿಕ್ ಆಮ್ಲವು ತೇವಾಂಶವನ್ನು ನೀಡುವುದು. ಒಂದು ಚಮಚ ಅಡುಗೆ ಸೋಡಾಕ್ಕೆ ಹಾಲು ಹಾಕಿ ದಪ್ಪಗಿನ ಪೇಸ್ಟ್ ಮಾಡಿಕೊಂಡು ಅದನ್ನು ಮೊಣಕೈ ಹಾಗೂ ಮೊಣಕಾಲಿಗೆ ಹಚ್ಚಿಕೊಳ್ಳಿ.ಇದು ಒಣಗಿದ ಬಳಿಕ ಸ್ಕ್ರಬ್ ಮಾಡಿಕೊಳ್ಳಿ. ವಾರದಲ್ಲಿ ಎರಡು ಸಲ ಇದನ್ನು ಬಳಸಿ.

ಈರುಳ್ಳಿ ಮತ್ತು ಲಿಂಬೆರಸ

ಈರುಳ್ಳಿ ಮತ್ತು ಲಿಂಬೆರಸ

ಈರುಳ್ಳಿ ಹಾಗೂ ನಿಂಬೆರಸದ ಮಾಸ್ಕ್ ನಲ್ಲಿರುವ ಸಲ್ಫರ್ ಮತ್ತು ಸಿಟ್ರಿಕ್ ಆಮ್ಲವು ಸತ್ತಚರ್ಮದ ಕೋಶಗಳ ಶೇಖರಣೆಯನ್ನು ತೆಗೆದುಹಾಕಿ ಚರ್ಮದ ಚಣ್ಣವನ್ನು ತಿಳಿಯಾಗಿಸುವುದು. ಒಂದು ಈರುಳ್ಳಿಯ ಸಿಪ್ಪೆ ತೆಗೆದು ಅದನ್ನು ಕತ್ತರಿಸಿಕೊಂಡು ತೆಳುವಾದ ಪೇಸ್ಟ್ ಮಾಡಿಕೊಳ್ಳಿ. ಈ ಮಿಶ್ರಣಕ್ಕೆ ಒಂದು ಚಮಚ ಲಿಂಬೆರಸ ಮತ್ತು ಒಂದು ಚಮಚ ಗ್ಲಿಸರಿನ್ ಹಾಕಿ. ಇದನ್ನು ಮೊಣಕೈಗೆ ಹಚ್ಚಿಕೊಂಡು ಸುಮಾರು 15 ನಿಮಿಷ ಕಾಲ ಕುಳಿತುಕೊಳ್ಳಿ. ಬಳಿಕ ಸ್ಕ್ರಬ್ ಮಾಡಿ ತೊಳೆಯಿರಿ.

ಕಿತ್ತಳೆ

ಕಿತ್ತಳೆ

ಕಿತ್ತಳೆಯ ಸಿಪ್ಪೆಯಲ್ಲಿರುವ ವಿಟಿಮಿನ್ ಸಿ ಚರ್ಮದ ಬಣ್ಣವನ್ನು ತಿಳಿಯಾಗಿಸುವುದು. ಕಿತ್ತಳೆಯ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಲು ಹಾಕಿ ಬಳಿಕ ಇದರ ಹುಡಿ ಮಾಡಿಕೊಳ್ಳಿ. ಒಂದು ಚಮಚ ಕಿತ್ತಳೆ ಹುಡಿಯನ್ನು ಸಣ್ಣ ಪಿಂಗಾಣಿಗೆ ಹಾಕಿ ಅದಕ್ಕೆ ರೋಸ್ ವಾಟರ್ ಹಾಕಿಕೊಳ್ಳಿ. ಪೇಸ್ಟ್ ಮಾಡಿಕೊಂಡು ಇದನ್ನು ಮೊಣಕೈಗೆ ಹಚ್ಚಿಕೊಂಡು ಒಣಗಲು ಬಿಡಿ. ಬಳಿಕ ಸ್ಕ್ರಬ್ ಮಾಡಿಕೊಂಡು ತೊಳೆಯಿರಿ.

 
English summary

Herbal Remedies To Lighten Your Dark Knees Quick!

Why is it that our elbows and knees tend to be darker than the rest of our body parts? Why is the skin on our knees so flaky and dry? Is there any way to lighten dark knees, without resorting to chemicals? Well, the herbal remedies we are about to discuss in this post will put your dark knees days behind, forever. here are some homemade masks to lighten dark knees!
Subscribe Newsletter