Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಮೊಣಕೈ ಮತ್ತು ಮೊಣಕಾಲಿಗೂ ಬೇಕು ಅಂದದ ಆರೈಕೆ
ಬೇಸಿಗೆಯಲ್ಲಿ ಚಿಕ್ಕದಾದ, ಚೆಂದವಾದ ಶಾರ್ಟ್ಸ್ ಅನ್ನು ಧರಿಸಿ ಹೊರಗೆ ಹೋದಾಗ ಮಾತ್ರ ಮೊಣಕಾಲು ಕಪ್ಪಗಾಗಿರುವುದು ಕಂಡುಬರುತ್ತದೆ. ಯಾರಾದರು ಗಮನಿಸಿ ಹೇಳದ ಹೊರತು, ಮೊಣಕೈ ಒಣ ಮತ್ತು ಕಪ್ಪು ಬಣ್ಣತಿರಿಗಿರುವುದು ಗೊತ್ತಾಗುವುದೇ ಇಲ್ಲ..!
ಸಾಮಾನ್ಯವಾಗಿ ಜನರು ತಮ್ಮ ಮುಖ ಚರ್ಯೆಯನ್ನು ಆರೈಕೆ ಮಾಡಿಕೊಳ್ಳುವುದರ ಕಡೆ ಹೆಚ್ಚು ಗಮನ ಕೊಡುತ್ತಾರೆ ಹೊರತು ಉಳಿದ ಭಾಗಗಳ ಆರೈಕೆ ಮಾಡಿಕೊಳ್ಳುವುದಿಲ್ಲ. ಮೊಣಕೈ ಮತ್ತು ಮೊಣಕಾಲನ್ನು ಸುಂದರವಾಗಿಟ್ಟುಕೊಳ್ಳಲು 2 ನಿಮಿಷದಲ್ಲಿ ಸಾಧ್ಯವಾಗುವ ಸುಲಭವಾದ ಉಪಾಯ ಇಲ್ಲಿದೆ. ಇದರಿಂದ ನಿಮ್ಮ ಸೌಂದರ್ಯವೂ ಹೆಚ್ಚುವುದರಲ್ಲಿ ಸಂಶಯವೇ ಇಲ್ಲ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಮುನ್ನ, ಇದಕ್ಕೆ ಕಾರಣಗಳೇನೇನು ಎಂಬುದನ್ನು ತಿಳಿದುಕೊಳ್ಳಬೇಕು. ಇಲ್ಲಿ ಕೆಳಗೆ ಕೆಲವು ಕಾರಣಗಳನ್ನು ನೀಡಲಾಗಿದೆ.

*ತೀವ್ರವಾದ ತೇವಾಂಶವಿಲ್ಲದ ಒಣ ತ್ವಚೆ
*ಮೊಣಕೈ ಹಾಗು ಮೊಣಕಾಲಿನ ಮೇಲೆ ಹೆಚ್ಚು ಒತ್ತಡ ಹಾಕುವುದು
*ಚರ್ಮಕ್ಕೆ ಒರಟೆನಿಸುವ ಬಟ್ಟೆಯ ಧರಿಸುವಿಕೆ
*ನೇರವಾಗಿ ತಮ್ಮನ್ನು ತಾವು ಬಿಸಿಲಿಗೆ ಒಡ್ಡಿಕೊಳ್ಳುವುದು
*ಕೆಲವು ಔಷಧಿಗಳಿಂದ ಆಗುವ ಅಡ್ಡ ಪರಿಣಾಮ
*ತ್ವಚೆಯಲ್ಲಿ ಡೆಡ್ ಸ್ಕಿನ್ ಸೆಲ್ಸ್ ಇರುವಿಕೆ ಈ ಟಿಪ್ಸ್ ಅಂದದ ಕೈ ಕಾಲು ಬಯಸುವವರಿಗಾಗಿ ಮಾತ್ರ
ಈ ಕಾರಣಗಳನ್ನು ನೀವು ಅರಿತಿದ್ದರೆ, ಭವಿಷ್ಯದಲ್ಲಿಯೂ ಕೂಡ ಇಂಥ ತಪ್ಪನ್ನು ಮಾಡಲಾರಿರಿ. ಇದಕ್ಕೆ ತಕ್ಕ ಪರಿಹಾರವನ್ನು ಸಹ ತಿಳಿಯುವುದಕ್ಕೆ ನೆರವಾಗುತ್ತದೆ. ನೀವು ಮೊಣಕೈ ಹಾಗು ಮೊಣಕಾಲಿನ ಕಪ್ಪನ್ನು ಹೋಗಲಾಡಿಸಲು, ನೈಸರ್ಗಿಕ ರೀತಿಯಲ್ಲಿ ಪರಿಹಾರವನ್ನು ಹುಡುಕುತ್ತಿದ್ದರೆ, ನಾವು ನಿಮಗೆ ಇಲ್ಲಿ ಎರಡು ಸಾಮಗ್ರಿಗಳನ್ನು ಸೂಚಿಸುತ್ತೇವೆ. ಅವು ಯಾವುವೆಂದರೆ, ಈರುಳ್ಳಿ ಮತ್ತು ಬೆಳ್ಳುಳ್ಳಿ.
ಇವೆರಡನ್ನು ಬಳಸಿ ಮನೆಯಲ್ಲೇ ಲೇಪನವನ್ನು ತಯಾರಿಸಿ, ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಈರುಳ್ಳಿಯೇ ಏಕೆ? ಎಂಬುದು ನಿಮ್ಮ ಪ್ರಶ್ನೆಯಾದರೆ, ಈರುಳ್ಳಿಯಲ್ಲಿ ವಿಟಮಿನ್ ಎ, ಸಿ, ಮತ್ತು ಇ ಹೇರಳವಾಗಿರುತ್ತದೆ ಹಾಗು ಇದು ಉತ್ಕರ್ಷಣ ನಿರೋಧಕ (ಆಂಟಿಆಕ್ಸಿಡೆಂಟ್)ವಾಗಿ ಕೆಲಸ ಮಾಡುತ್ತದೆ. ಉತ್ಕರ್ಷಣ ನಿರೋಧಕವು ಸೂರ್ಯನ ಯುವಿ ಕಿರಣಗಳಿಂದ ತ್ವಚೆಯನ್ನು ರಕ್ಷಿಸಿ ಹಾಗು ತ್ವಚೆಯಲ್ಲಿರುವ ಸತ್ತ ಜೀವಕೋಶಗಳನ್ನು ತೆಗೆದು ಹಾಕಿ ನಿರ್ಮಲ ತ್ವಚೆಯು ಕಾಣುವಂತೆ ಮಾಡುತ್ತದೆ.
ಇನ್ನೊಂದು ಕಡೆ, ಬೆಳ್ಳುಳ್ಳಿ ಬಗ್ಗೆ ಹೇಳಬೇಕೆಂದರೆ, ಅದರಲ್ಲಿ "ಅಲಿಸಿನ್" ಎಂಬ ಸಂಯುಕ್ತ ಇರುತ್ತದೆ. ಇದು ಜೀವಿರೊಧಿಯಾಗಿ ಕೆಲಸ ಮಾಡಿ, ಚರ್ಮ ಒಡೆಯುವುದನ್ನು ತಡೆಗಟ್ಟಿ, ತ್ವಚೆಯನ್ನು ಮೃದುಗೊಳಿಸಿ, ಉರಿಯೂತವನ್ನು ಕಡಿಮೆ ಮಾಡುತ್ತದೆ. ಇಷ್ಟೇ ಅಲ್ಲದೇ, ಬೆಳ್ಳುಳ್ಳಿಯಲ್ಲಿಯೂ ಸಹ ಉತ್ಕರ್ಷಣ ನಿರೋಧಕವು ಇದ್ದು, ತ್ವಚೆಯಲ್ಲಿರುವ ಕಲ್ಮಶಗಳನ್ನು ತೆಗೆದು ಹಾಕುತ್ತದೆ. ಹಾಗಾಗಿ ಇದನ್ನು ತಯಾರಿಸುವ ಬಗೆಯನ್ನು ಹಾಗು ಉಪಯೋಗಿಸುವ ರೀತಿ ಹೇಗೆಂಬುದನ್ನು ತಿಳಿಯೋಣ.
ಬೇಕಾಗುವ ಸಾಮಗ್ರಿಗಳು
*ಒಂದು ಟೀ ಚಮಚ ಈರುಳ್ಳಿ ರಸ
*ಒಂದು ಟೀ ಚಮಚ ಬೆಳ್ಳುಳ್ಳಿ ರಸ
*ಒಂದು ಟೀ ಚಮಚ ರೋಸ್ ವಾಟರ್
*ಅರ್ಧ ಟೀ ಚಮಚ ನಿಂಬೆ ರಸ
*ಅರ್ಧ ಟೀ ಚಮಚ ಗ್ಲಿಸರಿನ್
ತಯಾರಿಸುವ ಮತ್ತು ಲೇಪಿಸಿಕೊಳ್ಳುವ ಬಗೆ
* ಒಂದು ಬೌಲ್ನಲ್ಲಿ, ಈರುಳ್ಳಿ ರಸ ಹಾಗು ಬೆಳ್ಳುಳ್ಳಿ ರಸ ಮಿಶ್ರಣ ಮಾಡಿ, ಅದರಲ್ಲಿ ಒಂದು ಹತ್ತಿಯ ಉಂಡೆಯನ್ನು ಅದ್ದಿ ಕಪ್ಪಾದ ಜಾಗಕ್ಕೆ ಲೇಪಿಸಿರಿ. 10 ನಿಮಿಷಗಳ ನಂತರ ತಣ್ಣನೆಯ ನೀರಿನಿಂದ ತೊಳೆದು ಒಣಗಲು ಬಿಡಿ.
* ಇದೇ ರೀತಿಯಾಗಿ, ರೋಸ್ ವಾಟರ್, ನಿಂಬೆ ರಸ, ಗ್ಲಿಸರಿನ್ ಯಿಂದ ತಯಾರಾದ ಮಿಶ್ರಣವನ್ನು ತ್ವಚೆಯನ್ನು ಪೊಷಿಸಲು ಹಚ್ಚಿರಿ.
* ಹೀಗೆ, ಈ ವಿಧಾನವನ್ನು ವಾರದಲ್ಲಿ 3 ಬಾರಿ ಮಾಡಿರಿ. ಸ್ನಾನವಾದ ಮೇಲೆ ಮಾಯಿಸ್ಚರೈಜರ್ ಅನ್ನು ಹಚ್ಚುವುದು ಮರೆಯದಿರಿ.
* ಹೊರಗೆ ಹೊರಡುವ ಮುನ್ನ ಸನ್ ಸ್ಕ್ರೀನ್ ಲೋಷನ್ ಅನ್ನು ಬಳಸಿ. ಟಾಕ್ಸಿನ್ ಅನ್ನು ಹೊರಹಾಕಲು ನೀರನ್ನು ಹೆಚ್ಚಾಗಿ ಸೇವಿಸಿ. ಈ ಸುಲಭವಾದ ಪರಿಹಾರವನ್ನು ನೀವು ಪ್ರಯತ್ನಿಸಿ, ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಸೆಕ್ಷನ್ ಅಲ್ಲಿ ಹಂಚಿಕೊಳ್ಳಿ.



Click it and Unblock the Notifications


