ಒಡೆಯುವ ಪಾದಗಳ ಆರೈಕೆಗೆ ಪವರ್‌ಫುಲ್ ಮನೆಮದ್ದುಗಳು

Posted By: Hemanth
Subscribe to Boldsky

ಚಳಿಗಾಲದಲ್ಲಿ ಪಾದಗಳು ಒಡೆದು ಹೋಗುವುದು ಸಾಮಾನ್ಯ ವಿಚಾರ. ಕೆಲವರ ಪಾದಗಳು ಒಡೆದು ಹೋಗಿ ಅದರಿಂದ ರಕ್ತ ಕೂಡ ಬರುತ್ತದೆ. ಆದರೆ ವರ್ಷವಿಡೀ ಪಾದಗಳು ಒಡೆದು ಕಿರಿಕಿರಿ ಉಂಟು ಮಾಡುವುದು. ಇಂತಹ ಸಮಸ್ಯೆ ಇರುವವರು ಹಲವಾರು ರೀತಿಯ ಕ್ರೀಮ್ ಹಾಗೂ ಔಷಧಿ ಮಾಡಿರಬಹುದು. ಇದರಿಂದ ಯಾವುದೇ ಪ್ರಯೋಜನವಾಗದೆ ಸುಮ್ಮನೆ ಕುಳಿತಿರಬಹುದು.

ಪಾದಗಳು ಒಡೆದು ಹೋಗಲು ಪೋಷಕಾಂಶಗಳ ಕೊರತೆ, ಒತ್ತಡ, ವಯಸ್ಸಾಗುವುದು, ಗಡುಸಾದ ಸಾಬೂನು, ನೀರು ಮತ್ತು ಅಸ್ವಚ್ಛತೆ ಇವುಗಳು ಕಾರಣವಾಗಿರಬಹುದು. ಪಾದಗಳು ಹಾಗೂ ಅಂಗೈಯಲ್ಲಿ ಯಾವುದೇ ತೈಲಗ್ರಂಥಿಗಳು ಇಲ್ಲದೆ ಇರುವ ಕಾರಣದಿಂದಾಗಿ ಇವುಗಳು ತುಂಬಾ ಒಣಗಿರುತ್ತದೆ.ಇದರ ಕಡೆ ಹೆಚ್ಚಿನ ಗಮನಹರಿಸುವುದು ತುಂಬಾ ಅಗತ್ಯವಾಗಿದೆ. 

ಪಾದಗಳು ಒರಟಾಗಲು ಕಾರಣ ಮತ್ತು ಪರಿಹಾರ

ಒಡೆದ ಪಾದಗಳನ್ನು ಹಾಗೆ ಬಿಟ್ಟರೆ ಇದು ಸೋಂಕಿಗೆ ಒಳಗಾಗಿ ಇದರಿಂದ ಹಲವಾರು ಸಮಸ್ಯೆ ಉಂಟಾಗಬಹುದು. ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಂಡು ಒಡೆದ ಪಾದಗಳಿಗೆ ಚಿಕಿತ್ಸೆ ಮಾಡಬಹುದು. ಇದರಿಂದ ಪಾದಗಳು ತೇವಾಂಶ ಪಡೆದು ಒಡೆದು ಹೋಗುವುದು ಕಡಿಮೆಯಾಗುತ್ತದೆ. ಇದು ಹೇಗೆಂದು ಲೇಖನ ಓದುತ್ತಾ ತಿಳಿಯಿರಿ....

ಬಿಸಿ ನೀರಿನೊಂದಿಗೆ ಜೇನುತುಪ್ಪ

ಬಿಸಿ ನೀರಿನೊಂದಿಗೆ ಜೇನುತುಪ್ಪ

ಎರಡು ಲೀಟರ್ ನಷ್ಟು ಸ್ವಲ್ಪ ಬಿಸಿಯಿರುವ ನೀರಿಗೆ ಎರಡು ಚಮಚ ಜೇನುತುಪ್ಪ ಹಾಕಿಕೊಂಡು ಅದರಲ್ಲಿ ನಿಮ್ಮ ಪಾದಗಳನ್ನು ಇಟ್ಟರೆ ನೋವು ಕಡಿಮೆಯಾಗುವುದು. ನೀರು ತಣ್ಣಗೆ ಆಗುವ ತನಕ ಅಂದರೆ ಸುಮಾರು 15 ನಿಮಿಷ ಕಾಲ ಪಾದಗಳನ್ನು ನೀರಿನಲ್ಲಿ ಇಡಿ. ಇದರಿಂದ ನಿಮಗೆ ಆರಾಮ

ಸಿಗುವುದು. ಜೇನುತುಪ್ಪದಲ್ಲಿ ಸೂಕ್ಷ್ಮಜೀವಿ ನಿರೋಧಕ ಮತ್ತು ಮೃಧುವಾಗಿಸುವ ಗುಣಗಳು ಇವೆ.

ಬೇವಿನ ಎಲೆಗಳು

ಬೇವಿನ ಎಲೆಗಳು

ಆಯುರ್ವೇದದಲ್ಲಿ ಬಿರುಕುಬಿಟ್ಟ ಹಿಮ್ಮಡಿಗಳಿಗೆ ಬೇವಿನ ಎಲೆಗಳನ್ನು ಅರೆದು ಮಾಡಿದ ಲೇಪನವನ್ನು ಸವರಲು ತಿಳಿಸಲಾಗಿದೆ. ಕೆಲವು ಕಹಿಬೇವಿನ ಎಲೆಗಳನ್ನು ಚೆನ್ನಾಗಿ ತೊಳೆದು ಅರೆಯಿರಿ. ಕೊಂಚ ನೀರು ಸೇರಿಸಿ ಮದರಂಗಿ ಹಚ್ಚುವಷ್ಟು ದಟ್ಟನೆಯ ಲೇಪನ ತಯಾರಿಸಿಕೊಳ್ಳಿ. ಇದಕ್ಕೆ ಸ್ವಲ್ಪ ಅರಿಶಿನ ಪುಡಿಯನ್ನು ಸೇರಿಸಿ ರಾತ್ರಿ ಮಲಗುವ ಮುನ್ನ ಪಾದಗಳಿಗೆ ಹಚ್ಚಿಕೊಳ್ಳಿ. ಸುಮಾರು ಅರ್ಧಗಂಟೆಯವರೆಗೆ ಒಣಗಲು ಬಿಟ್ಟು ಸ್ವಚ್ಛವಾದ ನೀರಿನಿಂದ ತೊಳೆದುಕೊಳ್ಳಿ. ಬೇವು ಮತ್ತು ಅರಿಶಿನ ಎರಡೂ ಬ್ಯಾಕ್ಟೀರಿಯಾಗಳ ವಿರುದ್ಧ ಸಮರ್ಥವಾಗಿ ಹೋರಾಡುವ ಶಕ್ತಿ ಪಡೆದಿರುವುದರಿಂದ ಶೀಘ್ರವೇ ಬಿರುಕುಬಿಟ್ಟ ಚರ್ಮ ಆರೋಗ್ಯಕರವಾಗಿ ಕಂಗೊಳಿಸುತ್ತದೆ. ಅತಿಹೆಚ್ಚು ಬಿರುಕಿದ್ದರೆ ಮಾತ್ರ ದಿನಕ್ಕೆರಡು ಬಾರಿ, ಇಲ್ಲದಿದ್ದರೆ ದಿನಕ್ಕೊಂದು ಬಾರಿ ಮಾತ್ರ ಉಪಯೋಗಿಸಿದರೆ ಸಾಕು.

ಬಾಳೆಹಣ್ಣಿನ ಪೇಸ್ಟ್

ಬಾಳೆಹಣ್ಣಿನ ಪೇಸ್ಟ್

ಒಂದು ದೊಡ್ಡ ಬಾಳೆಹಣ್ಣನ್ನು ಕಿವುಚಿ ಎರಡು ಚಮಚ ಆಲಿವ್ ಎಣ್ಣೆಯನ್ನು ಸೇರಿಸಿ. ಈ ಮಿಶ್ರಣವನ್ನು ಪಾದಗಳಿಗೆ ಹಚ್ಚಿ ಸುಮಾರು ಹದಿನೈದು ನಿಮಿಷಗಳವರೆಗೆ ಒಣಗಲು ಬಿಡಿ. ಬಳಿಕ ಸ್ವಚ್ಛವಾದ ನೀರಿನಿಂದ ತೊಳೆದುಕೊಳ್ಳಿ.

ವಿಟಮಿನ್ ಇ ತೈಲ ಮಸಾಜ್

ವಿಟಮಿನ್ ಇ ತೈಲ ಮಸಾಜ್

ಮೆಡಿಕಲ್ ನಲ್ಲಿ ಸಿಗುವಂತಹ ವಿಟಮಿನ್ ಇ 200 ಮಿ.ಗ್ರಾಂ. ಮಾತ್ರೆಯನ್ನು ತಂದು ಅದನ್ನು ತುಂಡು ಮಾಡಿಕೊಳ್ಳಿ. ಇದರಲ್ಲಿರುವ ತೈಲವನ್ನು ಒಡೆದ ಪಾದಗಳ ಮಧ್ಯೆ ಹಾಕಿಬಿಡಿ. ಪ್ರತಿಯೊಂದು ಪಾದವು 400 ಮಿ.ಗ್ರಾಂ.ನಷ್ಟು ವಿಟಮಿನ್ ಇ ತೈಲವನ್ನು ಪಡೆಯಲಿ. ಪಾದಗಳು ತೈಲವನ್ನು ಸುಲಭವಾಗಿ ಹೀರಿಕೊಳ್ಳುತ್ತದೆ.ರಾತ್ರಿ ಮಲಗುವ ವೇಳೆ ತೈಲ ಹಾಕಿ ಹಳೆಯ ಸಾಕ್ಸ್ ಹಾಕಿಕೊಂಡು ಮಲಗಿ.

ಒಡೆದ ಹಿಮ್ಮಡಿಗಳ ನಿವಾರಣೆಗೆ ಇಲ್ಲಿದೆ ಸುಲಭ ಅಸ್ತ್ರ

ತೆಂಗಿನ ಎಣ್ಣೆ ಮತ್ತು ಅರಿಶಿನ

ತೆಂಗಿನ ಎಣ್ಣೆ ಮತ್ತು ಅರಿಶಿನ

ಒಡೆದ ಪಾದಗಳಿಗೆ ಇದು ಅತ್ಯುತ್ತಮವಾದ ಮನೆಮದ್ದು. ಒಂದು ಚಮಚ ಅರಿಶಿನ ಹುಡಿ ಮತ್ತು ಅರ್ಧ ಚಮಚ ತೆಂಗಿನ ಎಣ್ಣೆಯನ್ನು ಮಿಶ್ರಣ ಮಾಡಿಕೊಂಡು ಫ್ರಿಡ್ಜ್ ನಲ್ಲಿ ಇಟ್ಟು ಲಘುವಾಗಿ ಘನೀಕರಿಸಿ. ಮಲಗುವ ಮೊದಲು ಈ ಮಿಶ್ರಣವನ್ನು ಹಚ್ಚಿಕೊಳ್ಳಿ. ಪಾದಗಳಿಗೆ ಪ್ಲಾಸ್ಟಿಕ್ ಕಟ್ಟಿಕೊಳ್ಳಿ. ಇಲ್ಲದೆ ಇದ್ದರೆ ಪಾದಗಳ ಬಣ್ಣವು ನೆಲದ ಮೇಲೆ ಮೂಡಬಹುದು.

ಬಿಸಿ ಆಲಿವ್ ತೈಲ

ಬಿಸಿ ಆಲಿವ್ ತೈಲ

ಎರಡು ಚಮಚ ಆಲಿವ್ ತೈಲವನ್ನು ಸೇರಿಸಿಕೊಂಡು ಅದನ್ನು ಬಿಸಿ ಮಾಡಿಕೊಂಡು ಇದನ್ನು ಪಾದಗಳಿಗೆ ಹಚ್ಚಿಕೊಳ್ಳಿ.ಅತಿಯಾಗಿ ಬಿಸಿ ಮಾಡಿಕೊಳ್ಳಬೇಡಿ ಮತ್ತು ಪಾದಗಳಿಗೆ ಹಚ್ಚಿಕೊಳ್ಳುವ ಮೊದಲು ಬಿಸಿಯನ್ನು ಪರೀಕ್ಷಿಸಿ. ಇದನ್ನು ಒಂದು ವಾರದ ತನಕ ಬಳಸಿದರೆ ಒಳ್ಳೆಯ ಫಲಿತಾಂಶ ಪಡೆಯಬಹುದು. ಆಲಿವ್ ತೈಲದಲ್ಲಿ ಸೂಕ್ಷ್ಮಾಣು ವಿರೋಧಿ ಮತ್ತು ಮೊಶ್ಚಿರೈಸರ್ ಮಾಡುವ ಗುಣಗಳು ಇವೆ. ಇದು ಪಾದಗಳನ್ನು ನಯವಾಗಿಸುವುದು. ತೈಲವನ್ನು ಮೂರು ಸಲ ಬಳಸಿಕೊಳ್ಳಬಹುದು. ಪಾದಗಳಿಗೆ ಎಣ್ಣೆ ಹಚ್ಚಿಕೊಂಡ ಬಳಿಕ ಪಾಸ್ಟಿಕ್ ಕಟ್ಟಿಕೊಳ್ಳಿ.

ತುಳಸಿ ಮತ್ತು ಲೋಳೆಸರ

ತುಳಸಿ ಮತ್ತು ಲೋಳೆಸರ

ಕೆಲವು ತುಳಸಿಯ ಎಲೆಗಳನ್ನು (ದಂಟಿನ ಕೆಳಭಾಗದ ಎಲೆಗಳು ಉತ್ತಮ) ನೀರಿನೊಂದಿಗೆ ಬೆರೆಸಿ ಅರೆದು ಲೇಪನ ತಯಾರಿಸಿ. ಇದಕ್ಕೆ ಸ್ವಲ್ಪ ಅರಿಶಿನದ ಪುಡಿ, ಒಂದೆರಡು ಚಿಕ್ಕ ಕರ್ಪೂರದ ಬಿಲ್ಲೆಗಳನ್ನು ಪುಡಿಮಾಡಿ ಸೇರಿಸಿ. ಕಡೆಯದಾಗಿ ಲೋಳೆಸರದ ಒಂದು ಚಿಕ್ಕ ಕೋಡನ್ನು ಅರೆದು ಬೆರೆಸಿ. ಈ ಮಿಶ್ರಣವನ್ನು ಪಾದಗಳಿಗೆ ಹಚ್ಚಿಕೊಂಡು ಸುಮಾರು ಹದಿನೈದು ನಿಮಿಷಗಳವರೆಗೆ ಒಣಗಲು ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಂಡು ಬಟ್ಟೆಯಿಂದ ಒರೆಸಿಕೊಳ್ಳಿ. ಅತಿಹೆಚ್ಚು ಬಿರುಕಿದ್ದರೆ ಮಾತ್ರ ದಿನಕ್ಕೆರಡು ಬಾರಿ, ಇಲ್ಲದಿದ್ದರೆ ದಿನಕ್ಕೊಂದು ಬಾರಿ ಅನುಸರಿಸಿದರೆ ಶೀಘ್ರವೇ ಬಿರುಕುಗಳು ತುಂಬಿ ಆರೋಗ್ಯಕರ ಹಿಮ್ಮಡಿಗಳ ಮೇಲೆ ನಿಮ್ಮ ನೆಚ್ಚಿನ ಉಡುಗೆ ಮತ್ತು ಸ್ಯಾಂಡಲ್ ಧರಿಸಿ ಹೆಮ್ಮೆಯಿಂದ ಓಡಾಡಿ.

English summary

DIY Solutions For Cracked Heels

Cracked heels can be a chronic problem for some, and often occur the year round. Often, they're aggravated by factors like nutritional deficiencies, stress, ageing, harsh soaps as well as poor water and sanitary conditions. There are certain simple remedies for cracked heels that work like magic. Here are five great DIY home remedies for treating cracked heels that heal the cuts, moisturize your feet and get you back on your beautiful feet, take a look...
Story first published: Friday, June 23, 2017, 8:31 [IST]