For Quick Alerts
ALLOW NOTIFICATIONS  
For Daily Alerts

ಉಗುರುಗಳ ಬಣ್ಣ ಹಳದಿಯಾದರೆ ಆರೈಕೆ ಹೀಗಿರಲಿ....

By Hemanth
|

ದೇಹದ ಸೌಂದರ್ಯ ಎದ್ದು ಕಾಣಬೇಕಾದರೆ ಪ್ರತಿಯೊಂದು ಅಂಗವೂ ತುಂಬಾ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಅದರಲ್ಲೂ ಮಹಿಳೆಯರಲ್ಲಿ ಉಗುರುಗಳಿಗೆ ಹೆಚ್ಚಿನ ಮಹತ್ವವಿರುತ್ತದೆ. ಇದಕ್ಕೆ ಹಲವಾರು ರೀತಿಯ ಬಣ್ಣ ಹಚ್ಚಿ ಅದನ್ನು ಅಂದಗೊಳಿಸುತ್ತಾರೆ.

ಇನ್ನು ಕೆಲವರು ತಾವು ಧರಿಸಿದ ಬಟ್ಟೆಯ ಬಣ್ಣಕ್ಕೆ ಹೊಂದಿಕೊಂಡಿರುವಂತೆ ಉಗುರುಗಳಿಗೆ ಬಣ್ಣ ಹಚ್ಚುತ್ತಾರೆ. ಇದು ಸೌಂದರ್ಯದ ಪ್ರತೀಕ. ಆದರೆ ಉಗುರುಗಳಲ್ಲಿ ಹಳದಿ ಬಣ್ಣದ ಕಳೆಗಳು ಮೂಡುವುದು ಎಲ್ಲಾ ಫ್ಯಾಷನ್‌ಗೆ ಮಸಿ ಬಳಿದಂತೆ ಮಾಡುತ್ತದೆ.

Ways to Get Rid of Stained Nails

ಉಗುರು ಹಳದಿ ಬಣ್ಣಕ್ಕೆ ತಿರುಗಲು ಆರೋಗ್ಯ ಸಮಸ್ಯೆ ಕಾರಣವಾಗಿರುತ್ತದೆ. ಕಾಮಾಲೆ ಮತ್ತು ಇತರ ಕೆಲವೊಂದು ರೋಗಗಳು ಉಗುರುಗಳಿಗೆ ಒಳಗಿನಿಂದಲೇ ಹಾನಿಯುಂಟು ಮಾಡುತ್ತದೆ.

ಸಿಗರೇಟ್ ಸೇದುವುದರಿಂದ ಉಗುರುಗಳು ಹಳದಿ ಬಣ್ಣಕ್ಕೆ ತಿರುಗುತ್ತದೆ. ಸಿಗರೇಟಿನಲ್ಲಿರುವ ನಿಕೋಟಿನ್ ಇದಕ್ಕೆ ಕಾರಣವಾಗಿದೆ. ಆದರೆ ಮಹಿಳೆಯರು ಗಾಢವಾದ ಬಣ್ಣವನ್ನು ಉಗುರುಗಳಿಗೆ ಹಚ್ಚಿಕೊಳ್ಳುವ ಕಾರಣದಿಂದಾಗಿ ಉಗುರಿನಲ್ಲಿ ಹಳದಿ ಕಳೆಗಳು ಮೂಡುತ್ತದೆ. ಇದು ನಿಮ್ಮ ಸೌಂದರ್ಯವನ್ನು ಕೆಡಿಸುವುದರಲ್ಲಿ ಎರಡು ಮಾತಿಲ್ಲ. ಇಂತಹ ಸಮಯದಲ್ಲಿ ಯಾವ ರೀತಿಯ ಮದ್ದನ್ನು ಬಳಸಿಕೊಳ್ಳಬಹುದು ಎನ್ನುವುದನ್ನು ಇಲ್ಲಿ ತಿಳಿಯಿರಿ. ಉಗುರಿನ ಆರೈಕೆ: ನಿರ್ಲಕ್ಷ್ಯ ಬಿಡಿ, ಕಾಳಜಿ ವಹಿಸಿ....

ಹಳದಿ ಕಳೆಗಳು ಇರುವ ಉಗುರುಗಳಿಗೆ ನಿಂಬೆರಸವನ್ನು ಹಾಕಿದರೆ ಅದು ನೆರವಾಗುತ್ತದೆ. ಒಂದು ನಿಂಬೆಯ ರಸವನ್ನು ತೆಗೆದು ಅದನ್ನು ಉಗುರುಗಳಿಗೆ ಹಚ್ಚಿಕೊಳ್ಳಿ. ಸ್ವಲ್ಪ ಸಮಯ ಹಾಗೆ ಬಿಟ್ಟ ಬಳಿಕ ಇದನ್ನು ತೆಗೆಯಿರಿ.

ನಿಮಗೆ ವ್ಯತ್ಯಾಸ ತಕ್ಷಣ ತಿಳಿದುಬರುವುದು. ಕೆಲವು ದಿನಗಳ ಕಾಲ ಹೀಗೆ ಮಾಡುತ್ತಾ ಇರಿ. ಉಗುರುಗಳಲ್ಲಿನ ಹಳದಿ ಕಳೆಯು ಮಾಯವಾಗುವುದು.

ಪೆರಾಕ್ಸೈಡ್ ಟೂಥ್ ಪೇಸ್ಟ್ ನ್ನು ಇದಕ್ಕೆ ಬಳಸಬಹುದು. ಪೆರಾಕ್ಸೈಡ್ ಟೂಥ್ ಪೇಸ್ಟ್ ಅನ್ನು ಹಳೆಯ ಬ್ರಷ್‌ಗೆ ಹಾಕಿಕೊಂಡು ಅದರಿಂದ ಉಗುರುಗಳನ್ನು ಉಜ್ಜಿಕೊಳ್ಳಿ. ಇದನ್ನು ಕೆಲವು ದಿನಗಳ ಕಾಲ ಮುಂದುವರಿಸಿದರೆ ಸುಂದರವಾದ ಉಗುರುಗಳು ನಿಮ್ಮದಾಗುವುದು. ಉಗುರಿನ ಬಣ್ಣ ಹಳದಿ ಆಗಿದೆಯೇ? ಇನ್ನು ಚಿಂತೆ ಬಿಡಿ...

ಹಲ್ಲಿನ ಮಾತ್ರೆಗಳು ಇದಕ್ಕೆ ಮತ್ತೊಂದು ಔಷಧಿಯಾಗಿದೆ. ಎರಡು ಹಲ್ಲಿನ ಮಾತ್ರೆಗಳನ್ನು ಬಿಸಿ ನೀರಿನಲ್ಲಿ ಹಾಕಬೇಕು. ಅದು ಸಂಪೂರ್ಣವಾಗಿ ಕರಗಿದ ಬಳಿಕ ಬೆರಳುಗಳನ್ನು ಅದರಲ್ಲಿ ಅದ್ದಿಕೊಳ್ಳಿ. ಬೆರಳುಗಳನ್ನು ಕೆಲವು ನಿಮಿಷಗಳ ಕಾಲ ಮುಳುಗಿಸಿ ಇಡಿ. ಬೆರಳುಗಳನ್ನು ಹೊರಗೆ ತೆಗೆದು ಟವೆಲ್ ನಿಂದ ಒರೆಸಿಕೊಳ್ಳಿ. ಹತ್ತು ದಿನಗಳ ಕಾಲ ಹೀಗೆ ಮಾಡಿದರೆ ಹಳದಿ ಕಳೆಗಳು ಮಾಯವಾಗುವುದು ಖಚಿತ. ನೇಲ್ ಪಾಲಿಷ್ ಕಲೆ ನಿವಾರಿಸಲು ಸಮರ್ಥ ವಿಧಾನಗಳು

ನಸುಕನ್ನಿಲೆ ರಸವು ಹಳದಿಯಾಗಿರುವ ಉಗುರನ್ನು ಬಿಳಿಗೊಳಿಸಲು ನೆರವಾಗುವುದು. ಕೆಲವು ನಿಮಿಷಗಳ ಕಾಲ ಬೆರಳುಗಳನ್ನು ನಸುಕನ್ನಿಲೆ ರಸದಲ್ಲಿ ಅದ್ದಿಕೊಳ್ಳಿ. ಬಳಿಕ ಹೊರತೆಗೆದು ಟವೆಲ್ ನಲ್ಲಿ ಒರೆಸಿಕೊಳ್ಳಿ.ಎರಡು ವಾರಗಳ ಕಾಲ ಹೀಗೆ ಮಾಡಿದರೆ ನಿಮಗೆ ಒಳ್ಳೆಯ ಫಲಿತಾಂಶ ಕಂಡುಬರುವುದು.

English summary

Ways to Get Rid of Stained Nails

There are various reasons why one is plagued with the extremely unfashionable yellow stained nails. Health disorders are one reason, since jaundice and other such diseases cause internal damage which in turn affects your nails.So once you have been victimized by such a horrendous problem, how do you rectify it? There are several remedies that can help you in this quest of yours.
X
Desktop Bottom Promotion