For Quick Alerts
ALLOW NOTIFICATIONS  
For Daily Alerts

ಉಗುರಿನ ಆರೈಕೆ: ನಿರ್ಲಕ್ಷ್ಯ ಬಿಡಿ, ಕಾಳಜಿ ವಹಿಸಿ....

By Manu
|

ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡುವಲ್ಲಿ ಉಗುರುಗಳು, ಅದರಲ್ಲೂ ಉಗುರುಗಳ ಸಂಧುಗಳಲ್ಲಿರುವ ಕೊಳೆಯನ್ನು ಆಗಾಗ ಸ್ವಚ್ಛಗೊಳಿಸುತ್ತಾ ಇರುವುದು ಮುಖ್ಯ. ಉಗುರುಗಳು ನಮ್ಮ ಸೌಂದರ್ಯವನ್ನು ವೃದ್ಧಿಸುವುದು ಮಾತ್ರವಲ್ಲ, ವ್ಯಕ್ತಿಯ ಸ್ವಭಾವದ ಬಗ್ಗೆಯೂ ತಿಳಿಸಿಬಿಡುತ್ತವೆ. ನಮ್ಮ ಸಂವಹನದಲ್ಲಿ ಕೈಗಳನ್ನು ಬಳಸುವುದು ತುಂಬಾ ಮುಖ್ಯ. ಈ ಸಮಯದಲ್ಲಿ ಹಸ್ತ ಮತ್ತು ಉಗುರುಗಳು ಸಹಾ ಮುಖ್ಯ ಪಾತ್ರ ವಹಿಸುತ್ತವೆ.

ಈ ಸಮಯದಲ್ಲಿ ಆರೈಕೆಯ ಕೊರತೆಯಿಂದಾಗಿ ಅಡ್ಡಾದಿಡ್ಡಿ ಕತ್ತರಿಸಿದ, ಕಳೆಗುಂದಿದ, ಹಿಂದೆಂದೋ ಬಣ್ಣ ಹಚ್ಚಿ ಅರ್ಧಂಬರ್ಧ ಉಳಿದಿರುವ ಬಣ್ಣ ಮೊದಲಾದವು ನಮ್ಮ ಬಗ್ಗೆ ಎದುರಿನವರಲ್ಲಿ ತಪ್ಪು ಗ್ರಹಿಕೆಯನ್ನುಂಟುಮಾಡಬಹುದು. ಈ ವ್ಯಕ್ತಿಗೆ ತನ್ನ ಉಗುರುಗಳನ್ನು ಕತ್ತರಿಸಿಕೊಳ್ಳಲೂ, ಕೊಂಚ ಆರೈಕೆಗೂ ಸಮಯವಿಲ್ಲವೆಂದಾದರೆ ನಮ್ಮ ಕೆಲಸಕ್ಕೆಲ್ಲಿಂದ ಸಮಯ ತೆಗೆಯಬಲ್ಲ ಎಂಬ ತಪ್ಪು ಭಾವನೆಯೂ ಎದುರಿನವರಲ್ಲಿ ಮೂಡಬಹುದು. ಅಥವಾ ಈತ ಶತಸೋಮಾರಿ ಎಂದೂ ಪರಿಗಣಿಸಿಬಿಡಬಹುದು. ಉಗುರಿನ ಅಂದಕ್ಕೆ ಬೇಕು ಅಲೋವೆರಾ-ಜೇನಿನ ಮಿಶ್ರಣ

Simple Home Treatments to Keep Nails Healthy

ಸಾಮಾನ್ಯವಾಗಿ ಹೆಚ್ಚಿನವರು ಉಗುರುಗಳ ಬಗ್ಗೆ ಹೆಚ್ಚಿನ ಆಸ್ಥೆ ತೋರುವುದಿಲ್ಲ. ಏಕೆಂದರೆ ಇದು ಮಾಡದಿದ್ದರೇನಾಯಿತು ಎಂಬ ಭಾವನೆ. ವಾಸ್ತವವಾಗಿ ದೊಡ್ಡ ದೊಡ್ಡ ತೊಂದರೆಗಳಾಗಲೀ ಸಾಧನೆಗಳಾಗಲಿ, ಚಿಕ್ಕದಿಂದಲೇ ಪ್ರಾರಂಭವಾಗಿರುತ್ತದೆ.

ಉಗುರುಗಳ ಆರೈಕೆ ನೋಡಲು ಚಿಕ್ಕದೆಂದು ಕಂಡುಬಂದರೂ ವಾಸ್ತವವಾಗಿ ಇವು ಅತಿ ಸೂಕ್ಷ್ಮವಾದ ಕಾಳಜಿ ಬೇಡುವ ಅಂಗಗಳಾಗಿದ್ದು ನಮ್ಮ ದೇಹದ ಹೆಚ್ಚಿನ ನರಾಗ್ರಗಳ ದಟ್ಟಣೆ ಉಗುರುಗಳ ಬುಡದಲ್ಲಿದೆ. ಇದೇ ಕಾರಣಕ್ಕೆ ಉಗುರು ಮೂಗು ಹಲ್ಲು, ಈ ಮೂರು ಅಂಗಗಳಿಗೆ ಪೆಟ್ಟಾದರೆ ಜೀವ ಹೋದಷ್ಟು ನೋವಾಗುತ್ತದೆ. ಉಗುರುಗಳ ಆರೈಕೆಗೆ ದುಬಾರಿ ಆರೈಕೆಯ ಅಗತ್ಯವೇನೂ ಇಲ್ಲ, ನಮ್ಮ ಮನೆಯ ಸರಳ ಸಾಮಾಗ್ರಿ ಮತ್ತು ಕೊಂಚ ಸಮಯ ಮೀಸಲಿಟ್ಟರೆ ಸಾಕು. ಉಗುರು ಮಿರಿಮಿರಿ ಮಿನುಗುತ್ತಿದ್ದರೆ ಎಷ್ಟು ಚೆಂದ ಅಲ್ಲವೇ?

ಇಂದು ಇಂತಹ ಸರಳ, ಸುಲಭ ಮತ್ತು ಅತಿ ಅಗ್ಗವಾಗಿ ಮನೆಯಲ್ಲಿಯೇ ತಯಾರಿಸಬಹುದಾದ ಉಗುರುಗಳ ಆರೈಕೆಯ ಕೆಲವು ವಿಧಾನಗಳನ್ನು ಪ್ರಸ್ತುತಪಡಿಸಲಾಗುತ್ತಿದ್ದು ಇವುಗಳು ಉಗುರುಗಳನ್ನು ಸ್ವಚ್ಛವಾಗಿ ಮತ್ತು ದೃಢವಾಗಿರಿಸಲು ನೆರವಾಗುತ್ತವೆ. ಅಲ್ಲದೇ ಇವುಗಳನ್ನು ಅನುಸರಿಸಲು ಪರಿಣಿತಿ ಬೇಕಾಗಿಲ್ಲ, ಸ್ವತಃ ಅನುಸರಿಸಲು ಸುಲಭವಾಗಿವೆ:

ಆಹಾರದಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಿರುವಂತೆ ನೋಡಿಕೊಳ್ಳಿ
ನಮ್ಮ ಆಹಾರದಲ್ಲಿ ಉತ್ತಮ ಪೋಷಕಾಂಶಗಳಿರಬೇಕಾದುದು ದೇಹದ ಇತರ ಎಲ್ಲಾ ಅಂಗಗಳ ಜೊತೆಗೇ ಉಗುರುಗಳಿಗೂ ಅಗತ್ಯವಾಗಿದೆ. ಉಗುರುಗಳು ಮತ್ತು ಮೂಳೆಗಳಿಗೆ ಕ್ಯಾಲ್ಸಿಯಂ ಅತಿ ಅಗತ್ಯವಾಗಿದ್ದು ನಮ್ಮ ಆಹಾರದಲ್ಲಿ ಸಾಕಷ್ಟು ಕ್ಯಾಲ್ಸಿಯಂ ಇರುವಂತೆ ನೋಡಿಕೊಳ್ಳಬೇಕು.

ಕ್ಯಾಲ್ಸಿಯಂ ಕೊರತೆಯಿಂದಾಗಿ ಉಗುರುಗಳು ಉದ್ದಕ್ಕೆ ಸೀಳುಬಿಡುವುದು, ಒಳಗಿನಿಂದ ಟೊಳ್ಳಾಗುವುದು, ಸುಲಭವಾಗಿ ತುಂಡಾಗುವಂತಿರುವುದು ಮತ್ತು ಕೆಲವೊಮ್ಮೆ ಉಗುರುಗಳ ಅಡಿಯಲ್ಲಿ ಚಿಕ್ಕ ಮೋಡದಂತೆ ಬಿಳಿ ಚುಕ್ಕೆಗಳು ಮೂಡುವುದು ಮೊದಲಾದವು ಕ್ಯಾಲ್ಸಿಯಂ ಕೊರತೆಯನ್ನು ಬಿಂಬಿಸುತ್ತವೆ. ಈ ಪರಿಸ್ಥಿತಿಗೆ ಒಳಗಾಗದಿರಲು ಕ್ಯಾಲ್ಸಿಯಂ ಹೆಚ್ಚಿರುವ ಮೊಟ್ಟೆ ಮತ್ತು ಹಾಲನ್ನು ನಿಯಮಿತವಾಗಿ ಸೇವಿಸುತ್ತಿರಬೇಕು. ಹಾಲಿನ ಕ್ಯಾಲ್ಸಿಯಂ ಅನ್ನು ದೇಹ ನೇರವಾಗಿ ಹೀರಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಹಾಲಿನೊಂದಿಗೆ ಜೇನನ್ನು ಬೆರೆಸಿ ಕುಡಿಯುವುದನ್ನು ಮರೆಯಬಾರದು.

ಹಳದಿಯಾದ ಉಗುರುಗಳಿಗೆ
ಕೆಲವೊಮ್ಮೆ ಪ್ರಬಲ ಉಗುರುಬಣ್ಣ ಅಥವಾ ಉಗುರು ಬಣ್ಣ ನಿವಾರಕ ದ್ರಾವಣಗಳ ಕಾರಣ ನಮ್ಮ ಉಗುರುಗಳು ಹಳದಿಯಾಗಿಬಿಡುತ್ತವೆ. ಈ ಹಳದಿ ಕಲೆಯನ್ನು ನಿವಾರಿಸಲು ಒಂದು ಚಿಕ್ಕ ಬೋಗುಣಿಯಲ್ಲಿ ಕೊಂಚ ಉಗುರುಬೆಚ್ಚನೆಯ ನೀರನ್ನು ತೆಗೆದುಕೊಂಡು ಇದರಲ್ಲಿ ಕೊಂಚ ಲಿಂಬೆರಸ ಸೇರಿಸಿ ಕಲಕಿ ಈ ನೀರಿನಲ್ಲಿ ಉಗುರುಗಳನ್ನು ಕೊಂಚಕಾಲ ಮುಳುಗಿಸಿಟ್ಟಿರಿ. ಬಳಿಕ ಸ್ವಚ್ಛ ಬಟ್ಟೆಯಿಂದ ಒರೆಸಿಕೊಂಡರೆ ಈ ಹಳದಿ ಕಲೆಗಳು ಸುಲಭವಾಗಿ ನಿವಾರಣೆಯಾಗುತ್ತದೆ. ಉಗುರಿನ ಬಣ್ಣ ಹಳದಿ ಆಗಿದೆಯೇ? ಇನ್ನು ಚಿಂತೆ ಬಿಡಿ...

ಉಗುರು ಹೊರಚರ್ಮ ತೋರುತ್ತಿದ್ದರೆ
ಕೆಲವೊಮ್ಮೆ ಕೈಬೆರಳು ಯಾ ಕಾಲು ಉಗುರಿನ ಸುತ್ತ ದಪ್ಪ ಚರ್ಮ ಬೆಳೆಯುತ್ತದೆ. ಇದಕ್ಕೆ ಹೊರಚರ್ಮ ಅಥವಾ cuticle ಎಂದು ಕರೆಯುತ್ತಾರೆ. ಇವು ವಾಸ್ತವವಾಗಿ ನಮ್ಮ ಉಗುರುಗಳ ಅಂಚಿನಲ್ಲಿರುವ ಚರ್ಮದ ಸತ್ತ ಜೀವಕೋಶಗಳಾಗಿದ್ದು ಗಟ್ಟಿಯಾಗಿ ಅಂಟಿಕೊಂಡಿರುತ್ತವೆ.
ಇವನ್ನು ನಿವಾರಿಸಲು ಕೊಂಚ ಆಲಿವ್ ಎಣ್ಣೆಯನ್ನು ಚಿಕ್ಕ ಪಾತ್ರೆಯಲ್ಲಿ ಕೊಂಚವೇ ಬಿಸಿಮಾಡಿ ಈ ಕಾರ್ಯಕ್ಕಾಗಿಯೇ ಸಿಗುವ cuticle stick ಎಂಬ ಉಪಕರಣವನ್ನು ಬಳಸಿ ಕೊಂಚವೇ ಎಣ್ಣೆಯನ್ನು ಬಳಸಿ ಈ ಪದರವನ್ನು ಹಿಂದೆ ಸರಿಸಿ. ಆಲಿವ್ ಎಣ್ಣೆ ಈ ಪದರವನ್ನು ಮೃದುವಾಗಿಸಿ ಹಿಂದೆ ಸರಿಸಲು ನೆರವಾಗುತ್ತದೆ

ಸುಲಭವಾದ ಕ್ಯೂಟಿಕಲ್ ಬಾಮ್ ತಯಾರಿಸಿ
ಈ ಹೊರಚರ್ಮ ಅಥವಾ ಕ್ಯೂಟಿಕಲ್ ನಿರ್ವಹಣೆಗೆ ಸುಲಭವಾದ ಲೇಪನವನ್ನು ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು. ಕೊಂಚ ಕೊಬ್ಬರಿ ಎಣ್ಣೆ ಮತ್ತು ನಿಮ್ಮ ಇಷ್ಟದ ಯಾವುದೇ ಅವಶ್ಯಕ ತೈಲವನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ಉಗುರುಗಳಿಗೆ ರಾತ್ರಿ ಹಚ್ಚಿ ಇಡಿಯ ರಾತ್ರಿ ಹಾಗೇ ಬಿಡಿ. ಮರುದಿನ cuticle stick ಉಪಕರಣವನ್ನು ಬಳಸಿ ಈ ಚರ್ಮವನ್ನು ನಿಧಾನವಾಗಿ ಹಿಂದೆ ದೂಡಿ. ಇದು ಸುಲಭವಾಗಿ ಸತ್ತ ಜೀವಕೋಶಗಳನ್ನು ನಿವಾರಿಸಲು ನೆರವಾಗುತ್ತದೆ.

English summary

Simple Home Treatments to Keep Nails Healthy

Nail care is extremely important for a good appearance and personal hygiene. How a person maintains their nails tells a lot about them. Moreover, most of us use our hands a lot when we talk or explain things. Now, if the nails on those hands are ugly to look at and are not well maintained, it gives off a very wrong impression, as if the person just could not care enough or is simply too lazy to maintain hygiene. Therefore, today I'll be listing down easy, at-home nail care tips to keep your nails clean and strong.
X
Desktop Bottom Promotion