For Quick Alerts
ALLOW NOTIFICATIONS  
For Daily Alerts

ನೇಲ್ ಪಾಲಿಷ್ ಕಲೆ ನಿವಾರಿಸಲು ಸಮರ್ಥ ವಿಧಾನಗಳು

By Arshad
|

ಉಗುರಿಗೆ ಬಣ್ಣ ಹಚ್ಚುವುದೇನೋ ದೊಡ್ಡ ಕೆಲಸವಲ್ಲ. ಆದರೆ ಕೆಲದಿನಗಳ ಬಳಿಕ ಬಣ್ಣ ನಿಧಾನವಾಗಿ ಮಾಸಿದಂತೆ ಕಲೆಯಿಲ್ಲದಂತೆ ನಿವಾರಿಸುವುದೇ ದೊಡ್ಡ ಸಮಸ್ಯೆ. ಏಕೆಂದರೆ ಬಣ್ಣ ಹಚ್ಚಿದ್ದಾಗ ಉಗುರಿನ ಬುಡ ಮತ್ತು ಅಂಚುಗಳಲ್ಲಿ ಸೇರಿದ್ದ ಬಣ್ಣ ಗಮನಕ್ಕೆ ಬರುವುದಿಲ್ಲ. ಆದರೆ ನೇಲ್ ಪಾಲಿಶ್ ರಿಮೂವರ್ ದ್ರವ ಬಳಸಿ ಉಗುರಿನ ಮೇಲ್ಭಾಗವನ್ನು ಸುಲಭವಾಗಿ ನಿವಾರಿಸಬಹುದಾದರೂ ಅಂಚು ಮತ್ತು ಬುಡದ ಬಣ್ಣವನ್ನು ನಿವಾರಿಸುವುದು ಸುಲಭಸಾಧ್ಯವಲ್ಲ ಎಂದು ತಕ್ಷಣವೇ ಗೊತ್ತಾಗುತ್ತದೆ. ಬಲವಂತ ಮಾಡಿದರೆ ಈ ಸೂಕ್ಷ್ಮಭಾಗಗಳಿಗೆ ಹಾನಿ ಮತ್ತು ನೋವು ಉಂಟಾಗಬಹುದು. ಇದನ್ನು ಕಲೆಯಿಲ್ಲದೇ ಸೌಂದರ್ಯತಜ್ಞರು ಹೇಗೆ ನಿವಾರಿಸುತ್ತಾರೆ ಎಂಬುದನ್ನು ಮುಂದೆ ಓದಿ...

Effective tips to clear nail polish stains from your nails

*ಕ್ಯೂಟಿಕಲ್ ಆಯಿಲ್ ಬಳಸಿ
ಒಂದು ಹನಿ ಕ್ಯೂಟಿಕಲ್ ಆಯಿಲ್ ಬಳಸಿ ಉಗುರುಗಳ ಅಂಚಿನಲ್ಲಿ ಉಗುರಿನ ಮೇಲೆ ಹರಡಿ. ಇದರಿಂದ ಉಗುರುಬಣ್ಣ ಉಗುರಿನ ಮೇಲೆ ಸಾಧಿಸಿದ್ದ ಹಿಡಿತವನ್ನು ಸಡಿಲಿಸಿದಂತಾಗುತ್ತದೆ. ಬಳಿಕ ನೇಲ್ ಪಾಲಿಶ್‌ ರಿಮೂವರ್ ದ್ರವವನ್ನು ಹಾಕಿ, ಇದು ಬಣ್ಣದ ಬುಡದವರೆಗೆ ತಲುಪಿ ತಳಸಹಿತ ಕೀಳಲು ನೆರವಾಗುತ್ತದೆ. ಅಲ್ಲದೇ ಉಗುರಿನಲ್ಲಿ ಕಲೆ ಉಳಿಯದಂತೆ ಅಥವಾ ಅತಿ ಕಡಿಕೆ ಕಲೆ ಉಳಿಯುವಂತೆ ಮಾಡುತ್ತದೆ.

*ಒಂದು ವೇಳೆ ಈ ಕಲೆ ಗಮನಾರ್ಹವಾಗಿದ್ದರೆ ಎಣ್ಣೆಯಂಶ ಹೆಚ್ಚಿರುವ ಅಸಿಟೋನ್ ದ್ರಾವಣವನ್ನು ಬಳಸಿ ಕಲೆಯನ್ನು ನಿವಾರಿಸಬಹುದು. ಇದಕ್ಕಾಗಿ ಹತ್ತಿಯುಂಡೆಯನ್ನು ಅಸಿಟೋನ್ ದ್ರಾವಣದಲ್ಲಿ ಮುಳುಗಿಸಿ ಕೆಲೆಯಿದ್ದ ಭಾವನ್ನು ಆವರಿಸಿ. ಹತ್ತು ನಿಮಿಷ ಈ ಉಂಡೆ ಹಾಗೇ ಇರಲಿ ಬಳಿಕ ನಿವಾರಿಸಿ ಇನ್ನಷ್ಟು ಹತ್ತಿಯ ಉಂಡೆ ಅಥವಾ ಉರುಳೆಯಿಂದ ಸ್ವಲ್ಪವೇ ಒತ್ತಡ ನೀಡಿ ಒರೆಸಿಕೊಳ್ಳಿ.

*ಅಂತಿಮವಾಗಿ ಹಳೆಯ ಹಲ್ಲುಜ್ಜುವ ಬ್ರಶ್ ಒಂದನ್ನು ಬಳಸಿ ಕೊಂಚ ಅಡುಗೆ ಸೋಡಾ ಮತ್ತು ನೀರು ಬೆರೆಸಿದ ಲೇಪನವನ್ನು ಉಗುರಿನ ಮೇಲೆ ನಯವಾಗಿ ಉಜ್ಜಿಕೊಳ್ಳಿ. ಅಡುಗೆ ಸೋಡಾದ ಕ್ಷಾರೀಯ ಗುಣ ಉಗುರುಬಣ್ಣದ ಕಲೆಯನ್ನು ನಿವಾರಿಸುತ್ತದೆ. ಅಲ್ಲದೇ ಅಡುಗೆ ಸೋಡಾದ ಬಿಳಿಚಿಸುವ ಗುಣ ಮತ್ತು ಸತ್ತ ಜೀವಕೋಶಗಳನ್ನು ನಿವಾರಿಸುವ ಗುಣಗಳು ಉಗುರು ಮತ್ತು ಬೆರಳಿನ ಕಾಂತಿ ಮತ್ತು ಆರೋಗ್ಯವನ್ನು ಹೆಚ್ಚಿಸಲು ನೆರವಾಗುತ್ತವೆ.

*ಇನ್ನೊಂದು ವಿಧಾನವೆಂದರೆ ಲಿಂಬೆಹಣ್ಣಿನ ಬಳಕೆ. ಇದಕ್ಕಾಗಿ ಉಗುರುಬೆಚ್ಚನೆಯ ನೀರಿನಲ್ಲಿ ಕೊಂಚ ಲಿಂಬೆರಸವನ್ನು ಬೆರೆಸಿ ಸುಮಾರು ಹತ್ತರಿಂದ ಹದಿನೈದು ನಿಮಿಷ ಕೈಬೆರಳುಗಳನ್ನು ಮುಳುಗಿಸಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ಕೈ ತೊಳೆದುಕೊಂಡು ಒಣಗಿಸಿ ತೇವಕಾರಕ ದ್ರವ (ಮಾಯಿಶ್ಚರೈಸಿಂಗ್ ಲಿಕ್ವಿಡ್) ಬೆರಳುಗಳಿಗೆ ಹಚ್ಚಿಕೊಳ್ಳಿ. ವಾರಕ್ಕೆ ಎರಡು ಬಾರಿ ಈ ವಿಧಾನವನ್ನು ಅನುಸರಿಸುವ ಮೂಲಕ ಉಗುರುಗಳಲ್ಲಿ ಕಲೆ ನಿವಾರಣೆಯಾಗಿರುವುದನ್ನು ಕಾಣಬಹುದು.

English summary

Effective tips to clear nail polish stains from your nails

You sure loved those bright red nails but has your nail paint left a stain on your nail bed? Sometimes no amount of rubbing with cotton pads and scrubbing with acetone will wipe off those tough stains. However, you can try these tips recommended by cosmetologist to remove the faint colour from your nails.
Story first published: Tuesday, March 1, 2016, 20:40 [IST]
X
Desktop Bottom Promotion