For Quick Alerts
ALLOW NOTIFICATIONS  
For Daily Alerts

ಉಗುರಿನ ಅಂದ ಹೆಚ್ಚಿಸಲು, ಬೇಕು ಚೆಂದದ ಆರೈಕೆ!

By Super Admin
|

ಸಿನಿಮಾ ತಾರೆಯರು ಆಗಿರಲಿ ಅಥವಾ ಯಾವುದೇ ಸೆಲೆಬ್ರಿಟಿಗಳಾಗಿರಲಿ ಅವರ ಸೌಂದರ್ಯವನ್ನು ನೋಡಿದಾಗ ಇಂತಹ ಸೌಂದರ್ಯವನ್ನು ನಮಗೂ ಕೊಡು ದೇವರೇ ಎಂದು ಬೇಡಿಕೊಳ್ಳುವುದು ಸಹಜ. ಅದರಲ್ಲೂ ಕೆಲವು ಸಿನಿಮಾ ತಾರೆಯರ ಆರೋಗ್ಯವಂತಹ ಉಗುರುಗಳು ಮತ್ತು ಅದರ ಮೇಲಿನ ಕಲಾಕೃತಿಗಳನ್ನು ನೋಡಿರಬಹುದು.

ಸಿನಿಮಾ ಅಥವಾ ಮ್ಯಾಗಜಿನ್‌ಗಳಲ್ಲಿ ಇದನ್ನು ನಾವು ನೋಡಿರುತ್ತೇವೆ. ಆದರೆ ಸುಂದರವಾದ ಉಗುರುಗಳನ್ನು ಪಡೆಯಲು ಅವರು ಕೆಲವೊಂದು ಆರೋಗ್ಯ ಕ್ರಮಗಳನ್ನು ಕೂಡ ಪಾಲಿಸಿಕೊಂಡು ಹೋಗುತ್ತಾರೆ. ಆರೋಗ್ಯಕರವಾದ ಉಗುರುಗಳನ್ನು ಹೊಂದಿದ್ದರೆ ಅದು ದೇಹದ ಸೌಂದರ್ಯವನ್ನು ವೃದ್ಧಿಸುತ್ತದೆ. ಆಕರ್ಷಕ ಬಿಳುಪಿನ ಉಗುರಿಗಾಗಿ ಸರಳ ವಿಧಾನ

Simple Tips For Lovely Nails That Actually Work!

ಇಷ್ಟು ಮಾತ್ರವಲ್ಲದೆ ಆರೋಗ್ಯಕರ ಉಗುರುಗಳನ್ನು ಹೊಂದಿದ್ದರೆ ಇದರಲ್ಲಿ ಹಲವಾರು ರೀತಿಯ ಕಲಾಕೃತಿಗಳನ್ನು ನಿಮಗೆ ಬೇಕಾದಂತೆ ರಚಿಸಿಕೊಳ್ಳಬಹುದು. ಆರೋಗ್ಯಕರವಾಗಿರದ ಉಗುರುಗಳು ಬೇಗನೆ ತುಂಡಾಗುತ್ತದೆ ಮತ್ತು ಅಷ್ಟೊಂದು ಆಕರ್ಷಕವಾಗಿ ಕಾಣಿಸುವುದಿಲ್ಲ.

ಉಗುರುಗಳನ್ನು ಆರೋಗ್ಯವಾಗಿಡಬೇಕಾದರೆ ಅದಕ್ಕಾಗಿ ಕೆಲವೊಂದು ಕ್ರಮಗಳನ್ನು ಪಾಲಿಸಿಕೊಂಡು ಹೋಗಬೇಕಾಗುತ್ತದೆ. ಇದು ನಿಜವಾಗಿಯೂ ನಿಮ್ಮ ಉಗುರುಗಳನ್ನು ಆರೋಗ್ಯವಾಗಿರಿಸಿ ಆಕರ್ಷಕವಾಗಿಸುತ್ತದೆ. ಉಗುರುಗಳ ಬಣ್ಣ ಹಳದಿಯಾದರೆ ಆರೈಕೆ ಹೀಗಿರಲಿ....

*ಉಗುರುಗಳಿಗೆ ಮತ್ತು ಅದರ ಹೊರಪದರಕ್ಕೆ ಪೆಟ್ರೋಲಿಯಂ ಜೆಲ್ ಅನ್ನು ಪ್ರತೀದಿನ ಹಚ್ಚಿಕೊಳ್ಳಬೇಕು. ಇದರಿಂದ ಉಗುರುಗಳು ಮೃಧುವಾಗಿ ತೇವಾಂಶದಿಂದ ಇರುತ್ತದೆ.

*ನೀವು ಪ್ರತೀ ದಿನ ಮನೆಕೆಲಸವನ್ನು ಮಾಡುವಾಗ ಉಗುರುಗಳ ರಕ್ಷಣೆ ಮಾಡುವುದು ಅಗತ್ಯ. ಪಾತ್ರೆ ತೊಳೆಯುವಾಗ, ಗಿಡಗಳ ಪಾಲನೆ ಮಾಡುವಾಗ, ನೆಲ ಒರೆಸುವಂತಹ ಕೆಲಸಗಳನ್ನು ಮಾಡುವಾಗ ಕೈಗಳಿಗೆ ರಬ್ಬರ್ ಗ್ಲೌಸ್ ಅನ್ನು ಹಾಕಿಕೊಳ್ಳಿ. ಇದರಿಂದ ಅಪಾಯಕಾರಿ ರಾಸಾಯನಿಕಗಳು ಉಗುರುಗಳಿಗೆ ಸೋಕುವುದಿಲ್ಲ. ಉಗುರುಗಳ ಬಣ್ಣ ಹಳದಿಯಾದರೆ ಆರೈಕೆ ಹೀಗಿರಲಿ....

*ಹಸ್ತಾಲಂಕಾರ ಮಾಡುವಾಗ ತುಂಬಾ ಎಚ್ಚರಿಕೆ ಇರಬೇಕು. ಹೊರಪದರವನ್ನು ಹಿಂದಕ್ಕೆ ದೂಡುವಾಗ ಅದಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳಿ.

*ಉಗುರುಗಳ ಸೌಂದರ್ಯವನ್ನು ಕಾಪಾಡುವಲ್ಲಿ ಪ್ರಮುಖಪಾತ್ರ ನಿರ್ವಹಿಸುವ ವಿಚಾರವೆಂದರೆ ಒಳಗಡೆ ಬೆಳೆಯುವ ಉಗುರುಗಳನ್ನು ತೆಗೆಯಬೇಕು. ಇದರಿಂದ ಉಗುರುಗಳು ಒಡೆಯಬಹುದು ಅಥವಾ ಸೋಂಕು ಉಂಟಾಗಬಹುದು.

*ಒಳ್ಳೆಯ ಗುಣಮಟ್ಟದ ಸಾಕ್ಸ್‌ಗಳನ್ನು ಧರಿಸುವುದರಿಂದ ಉಗುರಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಫಂಗಲ್ ಸೋಂಕು ಆಗದಂತೆ ತಡೆಯಲು ಸಾಕ್ಸ್ ಅನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಉಗುರಿನ ಆರೈಕೆ: ನಿರ್ಲಕ್ಷ್ಯ ಬಿಡಿ, ಕಾಳಜಿ ವಹಿಸಿ....

*ಉಗುರುಗಳ ಆರೈಕೆ ಮಾಡುವಾಗ ಒಂದೇ ದಿಶೆಯಲ್ಲಿ ಫೈಲಿಂಗ್ ಮಾಡಬೇಕು. ಹಿಂದಕ್ಕೆ ಹಾಗೂ ಮುಂದಕ್ಕೆ ಫೈಲಿಂಗ್ ಮಾಡಿದರೆ ಅದರಿಂದ ಉಗುರಿಗೆ ಹಾನಿಯಾಗಬಹುದು.

*ಉಗುರುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತೀ ನಿತ್ಯ ಉಗುರುಗಳು ಹಾಗೂ ಹೊರಪದರಕ್ಕೆ ಸರಿಯಾಗಿ ಮಸಾಜ್ ಮಾಡಿಕೊಳ್ಳಬೇಕು. ಸಾರಭೂತ ತೈಲ ಅಥವಾ ವಿಟಮಿನ್ ಇ ತೈಲವನ್ನು ಇದಕ್ಕೆ ಬಳಸಿಕೊಳ್ಳಿ.

English summary

Simple Tips For Lovely Nails That Actually Work!

You look at all the celebrities with their amazing nails and beautiful nail art, in magazines, and wonder how they have such healthy nails. Well, they follow certain beauty tips for healthy nails to attain that look! Having healthy, beautiful nails can instantly boost your style quotient naturally because if you have healthy nails, then you can experiment with various types of nail art!
Story first published: Wednesday, September 7, 2016, 20:25 [IST]
X
Desktop Bottom Promotion