For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಒಡೆಯುವ ಪಾದಗಳ ಆರೈಕೆಗೆ ಮನೆಮದ್ದು

ಚಳಿಗಾಲದಲ್ಲಿ ಕೈಗಳು ನೆರಿಗೆ ಕಟ್ಟಿದಂತೆ ಆಗುವುದು, ಪಾದಗಳು ಒಡೆಯುವುದು, ಚರ್ಮದ ಮೇಲೆ ತಲೆಹೊಟ್ಟಿನಂತೆ ಚರ್ಮವು ಕಿತ್ತು ಬರುವುದು ಹೀಗೆ ಹಲವಾರು ರೀತಿಯ ಸಮಸ್ಯೆಗಳು ಕಾಡುತ್ತದೆ... ಚಿಂತಿಸದಿರಿ ಇಲ್ಲಿದೆ ನೋಡಿ ಮನೆಮದ್ದು....

By Arshad
|

ಚಳಿಗಾಲದಲ್ಲಿ ದೇಹದ ಚರ್ಮ ಒಣಗಾಗುವ ಮೂಲಕ ಒಡೆಯಲು ಪ್ರಾರಂಭಿಸುತ್ತದೆ. ಅದರಲ್ಲೂ ಚರ್ಮ ಹೆಚ್ಚು ದಪ್ಪವಿರುವ ಪಾದಗಳ ಅಂಚು ಮತ್ತು ಹಸ್ತಗಳ ಚರ್ಮ ಹೆಚ್ಚು ಬಿರುಕು ಬಿಡುತ್ತದೆ. ಕೈಗಳನ್ನಾದರೂ ನಾವು ಆಗಾಗ ತೊಳೆದುಕೊಳ್ಳುತ್ತಾ ಇರುವ ಮೂಲಕ ಒಣಗಿದ ಜೀವಕೋಶಗಳನ್ನು ಕಳೆದುಕೊಳ್ಳುತ್ತೇವೆ. ಬಿರುಕು ಬಿಟ್ಟ ಪಾದಗಳ ಆರೈಕೆಗಾಗಿ ಸರಳ ಮನೆಮದ್ದುಗಳು

ಆದರೆ ಪಾದಗಳ ಅಂಚುಗಳನ್ನು ಮಾತ್ರ ಆಗಾಗ ಸವೆಸದೇ ಇರುವ ಕಾರಣ ಚಳಿಗಾಲ ಬರುತ್ತಿದ್ದಂತೆಯೇ ಈ ಭಾಗ ವಿಪರೀತ ಒಣಗಿ ಗಟ್ಟಿಯಾಗಿ ಬಿರುಕು ಬಿಡುತ್ತದೆ. ಇದಕ್ಕೆ ಸರಿಯಾದ ಆರೈಕೆ ಎಂದರೆ ಈ ಚರ್ಮದ ಭಾಗಕ್ಕೆ ಸಾಕಷ್ಟು ಆರ್ದ್ರತೆ ಒದಗಿಸುವುದು. ಒಡೆದ ಪಾದಗಳ ರಕ್ಷಣೆಗಿರಲಿ ಇಂತಹ ಎಲೆಗಳು

ಇದನ್ನು ಒದಗಿಸುವುದು ಹೇಗೆ? ಚರ್ಮತಜ್ಞರ ಪ್ರಕಾರ ಆಲಿವ್ ಎಣ್ಣೆಯ ಮಸಾಜ್ ನಿಂದ ಅತ್ಯುತ್ತಮವಾದ ಆರೈಕೆ ದೊರಕುತ್ತದೆ. ಬನ್ನಿ, ಚಳಿಗಾಲದಲ್ಲಿ ಪಾದಗಳ ಆರೈಕೆ ಹೇಗಿರಬೇಕು ಎಂಬುದನ್ನು ನೋಡೊಣ....

ಪಾದಗಳಿಗೆ ದಿನಕ್ಕೆರಡು ಬಾರಿ ಆರ್ದ್ರತೆ ನೀಡಿ

ಪಾದಗಳಿಗೆ ದಿನಕ್ಕೆರಡು ಬಾರಿ ಆರ್ದ್ರತೆ ನೀಡಿ

ನೀವು ಸಾಮಾನ್ಯವಾಗಿ ಉಪಯೋಗಿಸುವ ತೇವಕಾರಕ ಅಥವಾ ಮಾಯಿಶ್ಚರೈಸರ್ ದ್ರವವನ್ನೇ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಉಗುರುಬೆಚ್ಚನೆಯ ನೀರಿನಲ್ಲಿ ತೊಳೆದುಕೊಂಡು ಒರೆಸಿಕೊಂಡ ಬಳಿಕ ತೆಳುವಾಗಿ ಹೆಚ್ಚಿಕೊಳ್ಳಿ. ಇದರಿಂದ ಪಾದಗಳು ಮೃದುವಾಗಿ ಬಿರುಕುರಹಿತವಾಗಿರುತ್ತವೆ.

ಪಾದಗಳಿಗೆ ದಿನಕ್ಕೆರಡು ಬಾರಿ ಆರ್ದ್ರತೆ ನೀಡಿ

ಪಾದಗಳಿಗೆ ದಿನಕ್ಕೆರಡು ಬಾರಿ ಆರ್ದ್ರತೆ ನೀಡಿ

ಸೂಚನೆ, ತೇವಕಾರಕ ಹಚ್ಚಿದ ಬಳಿಕ ಸಾಧ್ಯವಾದಷ್ಟು ಹೊತ್ತು ನಡೆಯಬಾರದು. ಏಕೆಂದರೆ ಜಾರುವ ಸಂಭವ ಇರುವುದರಿಂದ ಸುಮಾರು ಅರ್ಧಘಂಟೆಯಾದರೂ ನಡೆದಾಡದೇ ಒಣಗಲು ಬಿಡಬೇಕು

ಬಿಸಿನೀರು ಮತ್ತು ಜೇನಿನ ಆರೈಕೆ

ಬಿಸಿನೀರು ಮತ್ತು ಜೇನಿನ ಆರೈಕೆ

ಒಂದು ಅಗಲವಾದ ಬಕೆಟ್ಟು ಅಥವಾ ಪಾತ್ರೆಯಲ್ಲಿ ಉಗುರುಬೆಚ್ಚಗಿಂತ ಕೊಂಚ ಹೆಚ್ಚು ಬಿಸಿ ಇರುವ ನೀರಿನಲ್ಲಿ ಕೊಂಚ ಜೇನು ಬೆರೆಸಿ ಪಾದಗಳನ್ನು ಮುಳುಗಿಸಿಡಿ. ಜೇನಿನಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಮತ್ತು ನಂಜುನಿವಾರಕ ಗುಣ ಬಿರುಕುಗಳಲ್ಲಿ ಅಡಗಿದ್ದ ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ನೆರವಾಗುತ್ತದೆ. ಬಿಸಿನೀರಿನಿಂದ ಒರಟಾಗಿದ್ದ ಚರ್ಮ ನೀರನ್ನು ಹೀರಿಕೊಂಡು ಮೃದುವಾಗುತ್ತದೆ. ಸುಮಾರು ಇಪ್ಪತ್ತು ನಿಮಿಷಗಳ ಬಳಿಕ ಒರಟು ಕಲ್ಲಿನ ಮೇಲೆ ಉಜ್ಜಿಜೊಂಡು ಅಥವಾ ಇದೇ ಕೆಲಸಕ್ಕಾಗಿ ಬಳಸುವ ಸಾಧನವನ್ನು ಬಳಸಿ ಒರಟು ಭಾಗವನ್ನು ಕೆರೆದು ತೆಗೆಯಿರಿ.

ಆಲಿವ್ ಎಣ್ಣೆಯಿಂದ ಮಸಾಜ್ ಮಾಡಿ

ಆಲಿವ್ ಎಣ್ಣೆಯಿಂದ ಮಸಾಜ್ ಮಾಡಿ

ಬಿರುಕು ಕೊಂಚ ಹೆಚ್ಚಾಗಿದ್ದು ಬಿಸಿನೀರಿನಲ್ಲಿಟ್ಟಾಗ ಉರಿಯಾದರೆ ಆಲಿವ್ ಎಣ್ಣೆಯನ್ನು ಬಳಸಿ. ಬಿರುಕುಗಳಿರುವಲ್ಲಿ ಕೊಂಚ ಹೆಚ್ಚೇ ಎನಿಸುವಷ್ಟು ಎಣ್ಣೆಯನ್ನು ಹಚ್ಚಿ ನಯವಾಗಿ ಮಸಾಜ್ ಮಾಡಿ ಕೊಂಚ ಕಾಲ ಹಾಗೇ ಬಿಡಿ.....

ಆಲಿವ್ ಎಣ್ಣೆಯಿಂದ ಮಸಾಜ್ ಮಾಡಿ

ಆಲಿವ್ ಎಣ್ಣೆಯಿಂದ ಮಸಾಜ್ ಮಾಡಿ

ಆಲಿವ್ ಎಣ್ಣೆಯಲ್ಲಿರುವ ತೇವಕಾರಕ ಗುಣ ಬಿರುಕುಗಳ ಆಳದಲ್ಲಿ ಇಳಿದು ಒಳಚರ್ಮದಲ್ಲಿಯೂ ಆರ್ದ್ರತೆಯನ್ನು ನೀಡುತ್ತದೆ. ನೂರಾರು ವರ್ಷಗಳಿಂದ ಆಲಿವ್ ಎಣ್ಣೆಯನ್ನು ಅಭ್ಯಂಜನ ಸ್ನಾನದಲ್ಲಿ ಬಳಸುವ ಮೂಲಕ ತೇವಕಾರಕವಾಗಿ ಉಪಯೋಗಿಸಲ್ಪಡುತ್ತಿದೆ.

ಹತ್ತಿನ ಕಾಲುಚೀಲ ಧರಿಸಿ

ಹತ್ತಿನ ಕಾಲುಚೀಲ ಧರಿಸಿ

ಚಳಿಗಾಲದಲ್ಲಿ ನೆಲವೂ ತಣ್ಣಗಾಗಿದ್ದು ನಡೆದಾಡುವಾಗ ಸದಾ ತಣ್ಣಗೇ ಇರುವ ಮೂಲಕ ಚರ್ಮ ಇನ್ನಷ್ಟು ಒಣದಾಗುತ್ತದೆ. ಅಲ್ಲದೇ ಬಿರುಕುಗಳ ಮೂಲಕ ನೆಲದಲ್ಲಿದ್ದ ಧೂಳು ಮತ್ತಿತರ ಸೂಕ್ಷ್ಮಕಣಗಳು ಚರ್ಮದ ಒಳಸೇರುವ ಸಂಭವವಿರುತ್ತದೆ. ಆದ್ದರಿಂದ ಚಳಿಗಾಲದಲ್ಲಿ ಮನೆಯೊಳಗೆ ಓಡಾಡುವಾಗ ಹತ್ತಿಯ ಬೆಚ್ಚಗಿನ ಮತ್ತು ಗಾಳಿಯಾಡುವ ಕಾಲುಚೀಲಗಳನ್ನು ಧರಿಸಿ.

ಆಯುರ್ವೇದೀಯ ಕ್ರೀಂ ಬಳಸಿ

ಆಯುರ್ವೇದೀಯ ಕ್ರೀಂ ಬಳಸಿ

ಒಂದು ವೇಳೆ ಬಿರುಕು ಅತೀವ ಹೆಚ್ಚಾಗಿದ್ದು ರಕ್ತ ಒಸರುತ್ತಿದ್ದರೆ ಈ ಭಾಗಕ್ಕೆ ಆಯುರ್ವೇದೀಯ ಪಾದಗಳ ಕ್ರೀಂ ಅನ್ನು ಹಚ್ಚಿ. ಇದಕ್ಕೂ ಮುನ್ನ ಉಗುರುಬೆಚ್ಚನೆಯ ನೀರಿನಿಂದ ಪಾದಗಳನ್ನು ತೊಳೆದುಕೊಂಡು ಚೆನ್ನಾಗಿ ಒರಸಿಕೊಳ್ಳುವುದು ಅಗತ್ಯ. ಪ್ರತಿದಿನ ಬೆಳಿಗ್ಗೆ ಸ್ನಾನದ ಬಳಿಕ ಹಾಗೂ ರಾತ್ರಿ ಮಲಗುವ ಮುನ್ನ ಹಚ್ಚಿದರೆ ಉತ್ತಮ ಪರಿಣಾಮ ದೊರಕುತ್ತದೆ.

English summary

How to get happy feet this winter!

The winter season can be a nightmare for our feet as they are the main victims to the chilly weather. Rough and cracked heels can be very painful to deal with. One must moisturise the affected area and massage with olive oil. Beauty expert at gives five hacks that you can use to keep your feet silky smooth...
X
Desktop Bottom Promotion