For Quick Alerts
ALLOW NOTIFICATIONS  
For Daily Alerts

ಬಿರುಕು ಬಿಟ್ಟ ಪಾದಗಳ ಆರೈಕೆಗಾಗಿ ಸರಳ ಮನೆಮದ್ದುಗಳು

|

ಒಡೆದ ಪಾದಗಳನ್ನು ನಾವು ಸಾಮಾನ್ಯವಾಗಿ ಬಿರುಕುಗಳೆಂದು ಕರೆಯುತ್ತವೆ. ಇದು ಕೇವಲ ಸಮಸ್ಯೆ ಉಂಟುಮಾಡುವುದು ಮಾತ್ರವಲ್ಲದೆ ತುಂಬಾ ನೋವು ಹಾಗೂ ಕೆಲವೊಂದು ಸಲ ಭಾರೀ ಮುಜುಗರನ್ನುಂಟು ಮಾಡುತ್ತದೆ. ಪಾದಗಳಲ್ಲಿ ಬಿರುಕು ಕಾಣಿಸುವುದು ಪಾದಗಳ ಆರೈಕೆ ಮತ್ತು ನೈರ್ಮಲ್ಯವಿಲ್ಲದ ಕಾರಣವೆಂದು ಹೆಚ್ಚಿನವರು ಪರಿಗಣಿಸಿದ್ದಾರೆ. ಆದಾಗ್ಯೂ ಕೆಲವೊಂದು ಇತರ ಪರಿಣಾಮ ನಿಮ್ಮ ಪಾದದ ಮೇಲಾಗಬಹುದು ಮತ್ತು ಇದು ಬಿರುಕು ಬಿಡಲು ಕಾರಣವಾಗಬಹುದು. ಕೆಲವೊಂದು ಪೌಷ್ಠಿಕಾಂಶಗಳ ಕೊರತೆಯಿಂದಲೂ ಪಾದ ಬಿರುಕು ಬಿಡಬಹುದು. ನಿಮ್ಮ ಪಾದಗಳ ಬಗ್ಗೆ ಹೆಚ್ಚಿನ ಕಾಳಜಿವಹಿಸಿದರೆ ಬಿರುಕು ಬಿಟ್ಟು ನೋವು ಉಂಟಾಗುವ ಅಪಾಯ ತಪ್ಪುತ್ತದೆ.

ಆದಾಗ್ಯೂ ಕೆಲವೊಂದು ಇತರ ಪರಿಣಾಮ ನಿಮ್ಮ ಪಾದದ ಮೇಲಾಗಬಹುದು ಮತ್ತು ಇದು ಬಿರುಕು ಬಿಡಲು ಕಾರಣವಾಗಬಹುದು. ಕೆಲವೊಂದು ಪೌಷ್ಠಿಕಾಂಶಗಳ ಕೊರತೆಯಿಂದಲೂ ಪಾದ ಬಿರುಕು ಬಿಡಬಹುದು. ನಿಮ್ಮ ಪಾದಗಳ ಬಗ್ಗೆ ಹೆಚ್ಚಿನ ಕಾಳಜಿವಹಿಸಿದರೆ ಬಿರುಕು ಬಿಟ್ಟು ನೋವು ಉಂಟಾಗುವ ಅಪಾಯ ತಪ್ಪುತ್ತದೆ. ಬಿರುಕುಬಿಟ್ಟು ಅತಿಯಾದ ನೋವು ಅನುಭವಿಸಿದ ಬಳಿಕ ಮದ್ದು ಮಾಡುವ ಮೊದಲು ಮುನ್ನೆಚ್ಚರಿಕೆ ವಹಿಸುವುದು ತುಂಬಾ ಮುಖ್ಯ. ನೀವು ಪಾದದ ಬಿರುಕಿನಿಂದ ಈಗಾಗಲೇ ನೋವು ಅನುಭವಿಸುತ್ತಿದ್ದರೆ ಇದಕ್ಕೆ ಹಲವಾರು ರೀತಿಯ ಮನೆಮದ್ದುಗಳಿವೆ. ಒಡೆದ ಹಿಮ್ಮಡಿ ನಿಮ್ಮನ್ನು ಕಾಡುತ್ತಿದೆಯಾ?

ಸಾಮಾನ್ಯವಾಗಿ ಚರ್ಮದ ಆರೈಕೆಗೆ, ಅದರಲ್ಲೂ ವಿಶೇಷವಾಗಿ ಪಾದಗಳ ಚರ್ಮದ ಪೋಷಣೆಗೆ ನಿಮ್ಮ ಆಹಾರದಲ್ಲಿ ಸತು, ಒಮೆಗಾ-3 ಕೊಬ್ಬಿನ ತೈಲ (omega-3 fatty acid), ವಿಟಮಿನ್ ಇ, ಕ್ಯಾಲ್ಸಿಯಂ ಮತ್ತು ಕಬ್ಬಿಣಗಳ ಅವಶ್ಯಕತೆಯಿದೆ. ಅದರಲ್ಲೂ ವಿಶೇಷವಾಗಿ ಚಳಿಗಾಲದಲ್ಲಿ ಗಾಳಿಯಲ್ಲಿನ ತೇವಾಂಶ ಇಲ್ಲದೇ ಒಣಹವೆಯಾಗುವ ಕಾರಣ ಚರ್ಮಕ್ಕೆ ಅಗತ್ಯವಾದ ಆರ್ದ್ರತೆ ಇಲ್ಲದೇ ಹೊರಚರ್ಮ ಶೀಘ್ರವಾಗಿ ಒಣಗಿ ಬಿರುಕಿಗೆ ಕಾರಣವಾಗುತ್ತದೆ. ಈ ತೊಂದರೆಯಿಂದ ಹೊರಬರಲು ಕೆಲವು ಉಪಯುಕ್ತವಾದ ಮನೆಮದ್ದುಗಳನ್ನು ಇಲ್ಲಿ ವಿವರಿಸಲಾಗಿದೆ.

ಗುಲಾಬಿ ನೀರು ಮತ್ತು ಗ್ಲಿಸರಿನ್

ಗುಲಾಬಿ ನೀರು ಮತ್ತು ಗ್ಲಿಸರಿನ್

ಈ ವಿಧಾನವನ್ನು ಮಲಗುವ ಕೊಂಚ ಮೊದಲು ಅನುಸರಿಸಬೇಕು. ಸಿನೇಮಾಗಳಲ್ಲಿ ಕಣ್ಣೀರು ತರಿಸಲು ಉಪಯೋಗಿಸುವ ಗ್ಲಿಸರಿನ್ ಮತ್ತು ಗುಲಾಬಿನೀರನ್ನು ಸಮಪ್ರಮಾಣದಲ್ಲಿ ಬೆರೆಸಿ (ಸುಮಾರು ಅರ್ಧ ಲೋಟ) ಇದಕ್ಕೆ ಒಂದು ಚಮಚ ಈಗತಾನೇ ಹಿಂಡಿದ ಲಿಂಬೆಹಣ್ಣಿನ ರಸವನ್ನು ಸೇರಿಸಿ ಒಂದು ಪಕ್ಕದಲ್ಲಿಡಿ. ಈಗ ಒಂದು ಅಗಲವಾದ ಬಕೆಟ್ ಅಥವಾ ಎರಡೂ ಪಾದಗಳು ನೀರಿನಲ್ಲಿ ಮುಳುಗಲು ಸಾಧ್ಯವಾಗುವಂತಹ ಪಾತ್ರೆಯಲ್ಲಿ ಉಗುರು ಬೆಚ್ಚನೆಯ ನೀರು ಸುರಿದು ಸುಮಾರು ಐವತ್ತು ಗ್ರಾಂ ಉಪ್ಪು, ಎರಡು ಅಥವಾ ಮೂರು ಲಿಂಬೆಹಣ್ಣಿನ ರಸವನ್ನು ಹಿಂಡಿ ಬೆರೆಸಿ. ಈ ನೀರಿನಲ್ಲಿ ಪಾದಗಳನ್ನು ಸುಮಾರು ಇಪ್ಪತ್ತು ನಿಮಿಷಗಳವರೆಗೆ ಮುಳುಗಲು ಬಿಡಿ. ನಂತರ ಪಾದಗಳ ಬಿರುಕಿರುವಲ್ಲೆಲ್ಲಾ ದಪ್ಪ ಚರ್ಮವನ್ನು ಸೂಕ್ತವಾದ ಉಪಕರಣದಿಂದ (ಉದಾಹರಣೆಗೆ pumice stone) ಅಲ್ಪ ಒತ್ತಡದೊಡನೆ ಉಜ್ಜಿ ತೆಗೆಯಿರಿ. ನೆನಪಿಡಿ, ಒಂದೇ ಸ್ಥಳದಲ್ಲಿ ಅತಿ ಹೆಚ್ಚು ಉಜ್ಜುವುದರಿಂದ ಮೇಲಿನ ಚರ್ಮದೊಡನೆ ಕೆಳಗಿನ ಆರೋಗ್ಯಕರ ಚರ್ಮವೂ ಹಿಸಿಯಬಹುದು. ಎರಡೂ ಪಾದಗಳನ್ನು ಉಜ್ಜಿದ ಬಳಿಕ ಸ್ವಚ್ಛವಾದ ನೀರಿನಲ್ಲಿ ತೊಳೆದುಕೊಂಡು ಟವೆಲಿನಿಂದ ಒರೆಸಿಕೊಂಡು ಒಣಗಲು ಬಿಡಿ. ಬಳಿಕ ಗ್ಲಿಸರಿನ್ ಮತ್ತು ಗುಲಾಬಿನೀರಿನ ಮಿಶ್ರಣವನ್ನು ಬಿರುಕಿರುವೆಡೆಯಲ್ಲಿ ಹೆಚ್ಚಾಗಿ ಮತ್ತು ಉಳಿದೆಡೆ ತೆಳುವಾಗಿ ಹಚ್ಚಿ ಮೀನಖಂಡಗಳ ಕೆಳಗೆ ದಿಂಬಿಟ್ಟುಕೊಂಡು ಪಾದಗಳು ಹಾಸಿಗೆಯಿಂದ ಕೊಂಚ ಮೇಲಕ್ಕಿರುವಂತೆ ಪವಡಿಸಿ. ಬೆಳಿಗ್ಗೆದ್ದ ಬಳಿಕ ಸ್ನಾನ ಮಾಡುವಾಗ ಪಾದಗಳನ್ನೂ ಸ್ವಚ್ಛವಾಗಿ ತೊಳೆದುಕೊಳ್ಳಿ. ಬಿರುಕುಗಳು ಪೂರ್ಣವಾಗಿ ಮಾಯವಾಗುವವರೆಗೂ ಪ್ರತಿರಾತ್ರಿ ಈ ವಿಧಾನವನ್ನು ಪುನರಾವರ್ತಿಸಿ.

ಸಸ್ಯಾಹಾರಿ ಎಣ್ಣೆಯ ಮಸಾಜ್

ಸಸ್ಯಾಹಾರಿ ಎಣ್ಣೆಯ ಮಸಾಜ್

ಒಂದು ವೇಳೆ ಚಳಿಗಾಲದ ಕಾರಣ ನಿಮ್ಮ ಹಿಮ್ಮಡಿಗಳಲ್ಲಿ ಬಿರುಕುಂಟಾಗಿದ್ದರೆ (ಕಿರಿದಾದ ಬಿರುಕುಗಳು) ನಿಮ್ಮ ಅಡುಗೆ ಎಣ್ಣೆಯ ನಯವಾದ ಮಸಾಜ್ ಸಾಕಾಗುತ್ತದೆ. ಆಲಿವ್ ಎಣ್ಣೆ ಈ ನಿಟ್ಟಿನಲ್ಲಿ ಅತ್ಯುತ್ತಮವಾಗಿದೆ.ಬಾದಾಮಿ ಎಣ್ಣೆ, ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆಯನ್ನೂ ಬಳಸಬಹುದು. ರಾತ್ರಿ ಮಲಗುವ ಮುನ್ನ ಪಾದಗಳಿಗೆ ಎಣ್ಣೆಯಿಂದ ನಯವಾಗಿ ಮಸಾಜ್ ಮಾಡಿ ಬೆಚ್ಚನೆನ ಕಾಲ್ಚೀಲಗಳನ್ನು ಧರಿಸಿ ನಿದ್ರಿಸಿ. ಬೆಳಿಗ್ಗಿದ್ದ ಬಳಿಕ ತಣ್ಣನೆಯ ನೀರಿನಿಂದ ಮೃದುವಾದ ಸಾಬೂನಿನೊಂದಿಗೆ ತೊಳೆದುಕೊಳ್ಳಿ. ಕೆಲವೇ ದಿನಗಳಲ್ಲಿ ಬಿರುಕುಗಳು ಮುಚ್ಚಿಕೊಳ್ಳುತ್ತವೆ.

ಬೇವಿನ ಎಲೆಗಳು

ಬೇವಿನ ಎಲೆಗಳು

ಆಯುರ್ವೇದದಲ್ಲಿ ಬಿರುಕುಬಿಟ್ಟ ಹಿಮ್ಮಡಿಗಳಿಗೆ ಬೇವಿನ ಎಲೆಗಳನ್ನು ಅರೆದು ಮಾಡಿದ ಲೇಪನವನ್ನು ಸವರಲು ತಿಳಿಸಲಾಗಿದೆ. ಕೆಲವು ಕಹಿಬೇವಿನ ಎಲೆಗಳನ್ನು ಚೆನ್ನಾಗಿ ತೊಳೆದು ಅರೆಯಿರಿ. ಕೊಂಚ ನೀರು ಸೇರಿಸಿ ಮದರಂಗಿ ಹಚ್ಚುವಷ್ಟು ದಟ್ಟನೆಯ ಲೇಪನ ತಯಾರಿಸಿಕೊಳ್ಳಿ. ಇದಕ್ಕೆ ಸ್ವಲ್ಪ ಅರಿಶಿನ ಪುಡಿಯನ್ನು ಸೇರಿಸಿ ರಾತ್ರಿ ಮಲಗುವ ಮುನ್ನ ಪಾದಗಳಿಗೆ ಹಚ್ಚಿಕೊಳ್ಳಿ. ಸುಮಾರು ಅರ್ಧಘಂಟೆಯವರೆಗೆ ಒಣಗಲು ಬಿಟ್ಟು ಸ್ವಚ್ಛವಾದ ನೀರಿನಿಂದ ತೊಳೆದುಕೊಳ್ಳಿ. ಬೇವು ಮತ್ತು ಅರಿಶಿನ ಎರಡೂ ಬ್ಯಾಕ್ಟೀರಿಯಾಗಳ ವಿರುದ್ಧ ಸಮರ್ಥವಾಗಿ ಹೋರಾಡುವ ಶಕ್ತಿ ಪಡೆದಿರುವುದರಿಂದ ಶೀಘ್ರವೇ ಬಿರುಕುಬಿಟ್ಟ ಚರ್ಮ ಆರೋಗ್ಯಕರವಾಗಿ ಕಂಗೊಳಿಸುತ್ತದೆ. ಅತಿಹೆಚ್ಚು ಬಿರುಕಿದ್ದರೆ ಮಾತ್ರ ದಿನಕ್ಕೆರಡು ಬಾರಿ, ಇಲ್ಲದಿದ್ದರೆ ದಿನಕ್ಕೊಂದು ಬಾರಿ ಮಾತ್ರ ಉಪಯೋಗಿಸಿದರೆ ಸಾಕು.

ಅಕ್ಕಿಹಿಟ್ಟು, ಸೇಬಿನ ಶಿರ್ಕಾ ಮತ್ತು ಜೇನು

ಅಕ್ಕಿಹಿಟ್ಟು, ಸೇಬಿನ ಶಿರ್ಕಾ ಮತ್ತು ಜೇನು

ಸುಮಾರು ಮೂರು ಚಮಚ ಬೆಳ್ತಿಗೆ ಅಕ್ಕಿಯನ್ನು ನಯವಾಗಿ ಪುಡಿಮಾಡಿ ಒಂದು ಚಮಚ ಜೇನು ಮತ್ತು ಒಂದು ಚಮಚ ಸೇಬಿನ ಶಿರ್ಕಾ (apple cider vinegar) ಸೇರಿಸಿ ಮಿಶ್ರಣ ತಯಾರಿಸಿಕೊಳ್ಳಿ. ಒಂದು ವೇಳೆ ಬಿರುಕುಗಳು ತುಂಬಾ ಆಳಕ್ಕಿಳಿದಿದ್ದರೆ ಈ ಮಿಶ್ರಣಕ್ಕೆ ಒಂದು ಚಮಚ ಆಲಿವ್ ಅಥವಾ ಬಾದಾಮಿ ಎಣ್ಣೆಯನ್ನು ಸೇರಿಸಿ. ರಾತ್ರಿ ಮಲಗುವ ಮುನ್ನ ನಿಮ್ಮ ಪಾದಗಳನ್ನು ಸುಮಾರು ಇಪ್ಪತ್ತು ನಿಮಿಷಗಳವರೆಗೆ ಉಗುರುಬೆಚ್ಚನೆಯ ನೀರಿನಲ್ಲಿ ಮುಳುಗಿಸಿ. ಬಳಿಕ ಸ್ವಚ್ಛವಾದ ಬಟ್ಟೆಯಲ್ಲಿ ಒರೆಸಿಕೊಂಡು ಈ ಮಿಶ್ರಣವನ್ನು ಹಚ್ಚಿ ನಯವಾಗಿ ಮಸಾಜ್ ಮಾಡಿ. ಈ ವಿಧಾನದಿಂದ ಬಿರುಕು ಶೀಘ್ರವಾಗಿ ಮುಚ್ಚಿ ನಯವಾದ ಹಿಮ್ಮಡಿಗಳು ಶೀಘ್ರವೇ ನಿಮ್ಮದಾಗುತ್ತವೆ.

ಶಿರ್ಕಾದಲ್ಲಿ ಪಾದಗಳನ್ನು ಮುಳುಗಿಸುವುದು

ಶಿರ್ಕಾದಲ್ಲಿ ಪಾದಗಳನ್ನು ಮುಳುಗಿಸುವುದು

ಅಸಿಟಿಕ್ ಆಮ್ಲ ಅಥವಾ ಬಿಳಿಯ ಶಿರ್ಕಾ ಪಾದಗಳ ಒಣಚರ್ಮವನ್ನು ನಿವಾರಿಸುವಲ್ಲಿ ನೆರವಾಗುತ್ತದೆ. ಇದಕ್ಕಾಗಿ ಒಂದು ಅಗಲವಾದ ಪಾತ್ರೆಯಲ್ಲಿ ಪಾದ ಮುಳುಗುವಷ್ಟು ಉಗುರುಬೆಚ್ಚನೆಯ ನೀರನ್ನು ತುಂಬಿಸಿ ಕಾಲು ಕಪ್ ಬಿಳಿಯ ಶಿರ್ಕಾಸೇರಿಸಿ. ಇದಕ್ಕೆ ಒಂದು ಚಮಚದಷ್ಟು ಆಲಿವ್ ಅಥವಾ ಬೇರೆ ಲಭ್ಯವಿರುವ ಎಣ್ಣೆ ಸೇರಿಸಿ ಕದಡಿ. ಈ ನೀರಿನಲ್ಲಿ ಪಾದಗಳನ್ನು ಸುಮಾರು ಹತ್ತು ನಿಮಿಷಗಳವರೆಗೆ ನೆನೆಸಿ. ಬಳಿಕ ನಿಮ್ಮಲ್ಲಿ ಲಭ್ಯವಿರುವ ಉಪಕರಣ ಅಥವಾ ಕಲ್ಲನ್ನು ಉಪಯೋಗಿಸಿ ಹೊರಚರ್ಮವನ್ನು ಉಜ್ಜಿ ತೆಗೆಯಿರಿ. ನಂತರ ಸ್ವಚ್ಛವಾದ ನೀರಿನಲ್ಲಿ ತೊಳೆದುಕೊಂಡು ಒಣಗಲು ಬಿಡಿ. ಒಣಗಿದ ಬಳಿಕ ಆರ್ದ್ರತೆಯನ್ನು ಹೆಚ್ಚಿಸುವ ಯಾವುದೇ ಕ್ರೀಂ (moisturiser) ಹಚ್ಚಿ ನಿದ್ರಿಸಿ. ಬೆಳಿಗ್ಗೆದ್ದ ಬಳಿಕ ಸ್ನಾನ ಮಾಡುವಾಗ ಪಾದಗಳನ್ನೂ ತೊಳೆದುಕೊಳ್ಳಿ.

ತುಳಸಿ ಮತ್ತು ಲೋಳೆಸರ

ತುಳಸಿ ಮತ್ತು ಲೋಳೆಸರ

ಕೆಲವು ತುಳಸಿಯ ಎಲೆಗಳನ್ನು (ದಂಟಿನ ಕೆಳಭಾಗದ ಎಲೆಗಳು ಉತ್ತಮ) ನೀರಿನೊಂದಿಗೆ ಬೆರೆಸಿ ಅರೆದು ಲೇಪನ ತಯಾರಿಸಿ. ಇದಕ್ಕೆ ಸ್ವಲ್ಪ ಅರಿಶಿನದ ಪುಡಿ, ಒಂದೆರಡು ಚಿಕ್ಕ ಕರ್ಪೂರದ ಬಿಲ್ಲೆಗಳನ್ನು ಪುಡಿಮಾಡಿ ಸೇರಿಸಿ. ಕಡೆಯದಾಗಿ ಲೋಳೆಸರದ ಒಂದು ಚಿಕ್ಕ ಕೋಡನ್ನು ಅರೆದು ಬೆರೆಸಿ. ಈ ಮಿಶ್ರಣವನ್ನು ಪಾದಗಳಿಗೆ ಹಚ್ಚಿಕೊಂಡು ಸುಮಾರು ಹದಿನೈದು ನಿಮಿಷಗಳವರೆಗೆ ಒಣಗಲು ಬಿಡಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಂಡು ಬಟ್ಟೆಯಿಂದ ಒರೆಸಿಕೊಳ್ಳಿ. ಅತಿಹೆಚ್ಚು ಬಿರುಕಿದ್ದರೆ ಮಾತ್ರ ದಿನಕ್ಕೆರಡು ಬಾರಿ, ಇಲ್ಲದಿದ್ದರೆ ದಿನಕ್ಕೊಂದು ಬಾರಿ ಅನುಸರಿಸಿದರೆ ಶೀಘ್ರವೇ ಬಿರುಕುಗಳು ತುಂಬಿ ಆರೋಗ್ಯಕರ ಹಿಮ್ಮಡಿಗಳ ಮೇಲೆ ನಿಮ್ಮ ನೆಚ್ಚಿನ ಉಡುಗೆ ಮತ್ತು ಸ್ಯಾಂಡಲ್ ಧರಿಸಿ ಹೆಮ್ಮೆಯಿಂದ ಓಡಾಡಿ.

English summary

Home Remedies to Cure Cracked Heels

Cracked heels are painful and cause discomfort. You cannot wear your favourite sandals and to top it all, your gait becomes awkward. You must follow some home remedies for cracked heels to avoid this problem. Stay tuned to this article to know quick remedies for cracked heels in you home... have a look
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X