Latest Updates
-
ರಾಷ್ಟ್ರೀಯ ಕೈಮಗ್ಗ ದಿನ: ನೇಕಾರರ ಹೆಗಲು-ಮಣಿಕಟ್ಟು ನೋವು ಮರೆಸುವ 12 ನಿಮಿಷದ ಸರಳ ಮಂತ್ರ! -
ರೆಪೋ ದರ ಸ್ಥಿರ: ಸಾಲಗಾರರೇ ಎಚ್ಚರ, ನಿಮ್ಮ EMI ಹೊರೆಯನ್ನು ಕಡಿಮೆ ಮಾಡಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ಬೆಂಗಳೂರಿನಲ್ಲಿ 'ಫ್ರೀಡಂ ಫ್ರಮ್ ವೇಸ್ಟ್': ದಂಡದಿಂದ ಪಾರಾಗಲು ಆಗಸ್ಟ್ 15ರೊಳಗೆ ಈ ಕೆಲಸ ಮಾಡಿ! -
8,000mAh ಬ್ಯಾಟರಿಯ ರೆಡ್ಮಿ ನೋಟ್ 17 ಲಾಂಚ್: ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ಪ್ರಮುಖ ವಿಷಯಗಳಿವು! -
ಬಾಣಂತಿಯರಿಗೆ ಬೆಂಬಲ: ತಾಯಿಯ ಆರೋಗ್ಯಕ್ಕೆ ತಂದೆಯ ಸಣ್ಣ ಸಹಾಯ ಎಷ್ಟು ಮುಖ್ಯ? -
8,000mAh ಬ್ಯಾಟರಿಯ POCO M8 Power ಲಾಂಚ್: ಈ ಫೋನ್ ಖರೀದಿಸುವ ಮುನ್ನ ನೀವು ತಿಳಿಯಲೇಬೇಕಾದ ವಿಷಯಗಳಿವು! -
ರಾಷ್ಟ್ರೀಯ ಮೂಳೆ ಮತ್ತು ಕೀಲು ದಿನ: ಬೆನ್ನು ಮತ್ತು ಮೊಣಕಾಲು ನೋವಿಗೆ ಈ 10 ನಿಮಿಷದ ವ್ಯಾಯಾಮವೇ ಮದ್ದು! -
ಫ್ರೆಂಡ್ಶಿಪ್ ಡೇ ವಿಶ್ ಮಾಡೋಕೆ ಮರೆತಿದ್ದೀರಾ? ನಿಮ್ಮ ಸ್ನೇಹಿತರ ಮನ ಗೆಲ್ಲಲು ಇಲ್ಲಿದೆ ಸಿಂಪಲ್ ಟಿಪ್ಸ್! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: 999 ರೂ. ಒಳಗಿನ ಬೆಸ್ಟ್ ಡೀಲ್ಗಳು ಮತ್ತು ಶಾಪಿಂಗ್ ಟಿಪ್ಸ್! -
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್!
ಒಣ ತ್ವಚೆಯನ್ನು ನುಣುಪಾಗಿಸುವ ಸರಳ ಮನೆಮದ್ದು
ಶುಷ್ಕ ತ್ವಚೆಯನ್ನು ನವುರಾಗಿಸಲು ಹರ ಸಾಹಸ ಪಡುತ್ತ ದೊಡ್ಡ ದೊಡ್ಡ ಮಾಲ್‌ಗಳ ದುಬಾರಿ ಅಂಗಡಿಗಳ ಶೆಲ್ಫ್ ಶೋಧಿಸುತ್ತ ಅಲೆಯುವ ಮೊದಲು, ಒಮ್ಮೆ ಸರಳವಾಗಿ ಯೋಚಿಸಿ! ಸಿದ್ಧ ಉಪಾಯವೊಂದು ನಿಮ್ಮ ಅಡುಗೆಮನೆ ಕಪಾಟಿನಲ್ಲೇ ಅಡಗಿರಬಹುದು!
ಯಾವುದೀ ಶುಷ್ಕ ತ್ವಚೆ?
ಸಾಮಾನ್ಯವಾಗಿ, ಮೂರು ವಿಧದ ತ್ವಚೆಯನ್ನು ಕಾಣಬಹುದಾಗಿದೆ. ಸಾಮಾನ್ಯತ್ವಚೆ, ಒಣ ತ್ವಚೆ, ಮತ್ತು ಜಿಡ್ಡಿನಿಂದ ಕೂಡಿದ ತ್ವಚೆ. ಈ ಪೈಕಿ, ಆಗಾಗ ಶುಚಿಗೊಳಿಸಬೇಕಾಗುತ್ತದೆ ಎಂಬುದನ್ನು ಹೊರತು ಪಡಿಸಿದರೆ, ಜಿಡ್ಡಿನಿಂದ ಕೂಡಿದ ತ್ವಚೆಯು ಆರೋಗ್ಯವಂತ ತ್ವಚೆ ಎನ್ನಬಹುದು. ತ್ವಚೆಯ ಬಗೆ ತಿಳಿದರೇನೆ ತ್ವಚೆ ಆರೈಕೆ ಸಾಧ್ಯ

ಸಾಮಾನ್ಯ ತ್ವಚೆಯಾದರೂ, ಋತುಮಾನಕ್ಕೆ ಅನುಗುಣವಾಗಿ ಬೇಸಿಗೆ ಮತ್ತು ಚಳಿಗಾಲದಲ್ಲಿ ಶುಷ್ಕತೆಗೆ ಎರವಾಗುತ್ತದೆ. ಇನ್ನು, ಒಣ ತ್ವಚೆಯಂತೂ ಸದಾ ಆರೈಕೆ ಬೇಡುವ ತ್ವಚೆ. ಒಣ ತ್ವಚೆ ಉಳ್ಳವರು ತಮ್ಮ ತ್ವಚೆಯನ್ನು ಇತರರಂತೆ ನುಣುಪಾಗಿಸುವ ಸತತ ಪ್ರಯತ್ನದಲ್ಲಿ ತೊಡಗಿ, ಕೊಂಚ ಗೆಲ್ಲುತ್ತ, ಸೋಲುತ್ತ , ಹತಾಶರಾಗುತ್ತ ಇರುತ್ತಾರೆ. ಚಳಿಗಾಲದಲ್ಲಂತೂ ಇಂತಹವರ ಪಾಡು ಹೇಳತೀರದು. ಮುಖ, ತುಟಿ, ಕೈ ಕಾಲುಗಳಲ್ಲಿ ಸದಾ ಬೂದಿ ಬಳಿದಂತಹ ಶುಷ್ಕತೆ. ಇನ್ನು ಕೆಲವರಿಗಂತೂ ತ್ವಚೆ ಒಡೆದು ರಕ್ತ ಜಿನುಗಿ ರೇಜಿಗೆ ಹುಟ್ಟಿಸುತ್ತದೆ..
ಚಿಂತೆಗಿಲ್ಲ ಅವಕಾಶ!
ಇಂತಹವರು ನಿರಾಶರಾಗಬೇಕಿಲ್ಲ. ಇವರು ತಮ್ಮ ತ್ವಚೆಯನ್ನು ಎಲ್ಲರಂತೆ ನುಣುಪಾಗಿ ಇರಿಸಿಕೊಳ್ಳುವುದು ( ದುಬಾರಿ ವೆಚ್ಚವಿಲ್ಲದೇ) ಸಾಧ್ಯವಿದೆ ಎಂದರೆ ಅಚ್ಚರಿ ಪಡಬೇಡಿ! ಸ್ವಲ್ಪ ತಾಳ್ಮೆ ವಹಿಸಿ, ತ್ವಚೆಯ ಸ್ವಚ್ಚತೆ ಮತ್ತು ಆರೈಕೆಯ ಕಡೆಗೆ ಗಮನ ಹರಿಸಿದರೆ, ಕೆಲವೇ ದಿನಗಳಲ್ಲಿ ಕಾಂತಿಯುತ ಚರ್ಮ ನಿಮ್ಮದಾಗಬಹುದು.
ಮನೆಯಲ್ಲೇ ಲಭ್ಯವಿರುವ ತೆಂಗಿನೆಣ್ಣೆ,ಸಾಧ್ಯವಿದ್ದರೆ ಬಾದಾಮಿ ಸಾರ ತೈಲ ಮತ್ತು ಲೋಳೆ ಸರ ( ಅಲೋವಿರಾ)ದ ಎಲೆ ಮುರಿದಾಗ ಜಿನುಗುವ ಲೋಳೆ (ಜೆಲ್)ನ್ನು ಮಿಶ್ರ ಮಾಡಿ ತ್ವಚೆಗೆ ಹಚ್ಚುತ್ತಾ ಬರುವುದರಿಂದ ತ್ವಚೆ ಆರೋಗ್ಯವಾಗಿಯೂ, ಸುಂದರವಾಗಿಯೂ ಆಗುವುದು. ಒಣತ್ವಚೆಗೆ ಬೇಕು ಸೂಕ್ತ ರೀತಿಯ ಮನೆಮದ್ದಿನ ಉಪಚಾರ
ಮಾಡುವ ವಿಧಾನ:
ಒಂದು ಅಗಲ ಬಾಯಿಯ ಚಿಕ್ಕ ಕರಡಿಗೆಯಲ್ಲಿ ತೆಂಗಿನ ಎಣ್ಣೆ, ಬಾದಾಮಿ ಸಾರ ತೈಲ ಮತ್ತು ಲೋಳೆಸರ (ಅಲೋವೆರಾ) ಗಳನ್ನು ಸಮ ಪ್ರಮಾಣದಲ್ಲಿ ಹಾಕಿಕೊಳ್ಳಿ. ಚಿಕ್ಕ ಚಮಚದಿಂದ ತೆನ್ನಾಗಿ ತಿರುವಿ ಬೆರೆಸಿಕೊಳ್ಳಿ. ಈ ಮಿಶ್ರಣ ಕೆಲವು ದಿನಗಳ ಕಾಲ ಕೆಡದೆ ಉಳಿಯುವುದರಿಂದ, ಹೆಚ್ಚು ಲಾಭ ಪಡೆಯಬಹುದು.
ಬಳಕೆಯ ರೀತಿ, ನೀತಿ
ಪ್ರತಿದಿನ ಸ್ನಾನದ ಅನಂತರ ಈ ಮಿಶ್ರಣವನ್ನು ಮುಖ, ಕೈ ಕಾಲುಗಳಿಗೆ ಲೇಪಿಸಿಕೊಳ್ಳಿ. ತೆಂಗಿನೆಣ್ಣೆಯು ಇತರ ಯಾವುದೇ ಎಣ್ಣೆಗಿಂತಲೂ ಸುಲಭವಾಗಿ ತ್ವಚೆಯ ಆಳಕ್ಕಿಳಿಯುವುದು. ಬಾದಾಮಿ ಸಾರ ತೈಲವೂ ಸಹ ತ್ವಚೆಗೆ ಹೆಚಿನ ಪೋಷಣೆ ಮತ್ತು ಕಾಂತಿಯನ್ನು ನೀಡುವುದು. ಇವುಗಳಿಗೆ ಬ್ಯಾಕ್ಟೀರಿಯಾ, ಸೋಂಕು, ಮತ್ತು ಶಿಲೀಂದ್ರ ರೋಗಗಳನ್ನು ನಿಗ್ರಹಿಸುವ ಶಕ್ತಿ ಇದೆ.
ಲೋಳೆಸರದಲ್ಲಿ ತ್ವಚೆಗೆ ಅತೀ ಅವಶ್ಯವಿರುವ "ಈ" ಜೀವಸತ್ವ ಹೇರಳವಾಗಿದ್ದು, ತ್ವಚೆಯನ್ನು ನುಣುಪಾಗಿ, ಕಾಂತಿಯುತವಾಗಿ ಇರಿಸಲು ಸಹಕಾರಿ. ದೀರ್ಘಕಾಲ ಈ ಮಿಶ್ರಣವನ್ನು ಬಳಸುವುದರಿಂದ ಚರ್ಮದಲ್ಲಿ ಇರಬಹುದಾದ ಕಲೆ, ಸೂರ್ಯಕಂದು( ಸನ್ ಬರ್ನ್) ನಾಶವಾಗಿ, ಹೊಸ ಹೊಳಪು ಮೂಡುವುದು. ಒಣ ತ್ವಚೆಗೆ ಅತ್ಯುತ್ತಮವಾದ ಮಾಯಿಶ್ಚರೈಸರ್
ಸಾಕಷ್ಟು ರಾಸಾಯನಿಕ ವಸ್ತುಗಳನ್ನು ತುಂಬಿಕೊಂಡ ದುಬಾರಿ ಕ್ರೀಮುಗಳ ಮೊರೆ ಹೋಗುವುದಕ್ಕಿಂತ, ಮನೆಯಲ್ಲೇ ನೀವೇ ತಯಾರಿಸಿಕೊಳ್ಳುವ ಈ " ತೇವಾಂಶ ಲೇಪ" (ಮಾಯಿಶ್ಚರೈಸರ್) ದ ಆರೈಕೆಯು ಮನಸ್ಸಿಗೂ , ತ್ವಚೆಗೂ ಹಿತವಾಗುವುದು.



Click it and Unblock the Notifications

