Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
ಡಾರ್ಕ್ ಸರ್ಕಲ್ ಸಮಸ್ಯೆಯೇ? ಈ ಟಿಪ್ಸ್ ತುಂಬಾನೇ ಪರಿಣಾಮಕಾರಿ ನೋಡಿ
ಹುಡುಗರಿಗೆ ಹೋಲಿಸಿದರೆ ಹುಡುಗಿಯರಿಗೆ ಸೌಂದರ್ಯ ಪ್ರಜ್ಞೆ ತುಸು ಜಾಸ್ತಿ ಎನ್ನಬಹುದು ಮುಖ ಚೆನ್ನಾಗಿ ಕಾಣಬೇಕು ಮುಖದಲ್ಲಿ ಯಾವುದೇ ಕಲೆ ಇರಬಾರದು ಎಂದು ಹುಡುಗಿಯರು ಬಯಸುವುದು ಸಹಜ. ನೀವು ಎಲ್ಲಾ ಕೇರ್ ಮಾಡುತ್ತೀರಾ ಸರಿ, ಆದರೆ ನಿಮ್ಮ ಕಣ್ಣಿನ ಕೆಳಗೆ ಡಾರ್ಕ್ ಸರ್ಕಲ್ ಆಗ್ತಾ ಇರೋದನ್ನ ಗಮನಿಸಿದ್ದೀರಾ? ಇದು ನಿಮ್ಮ ಸೌಂದರ್ಯಕ್ಕೆ ಕಪ್ಪು ಚುಕ್ಕೆಯಂತೆ ಅನಿಸಬಹುದು. ಹೀಗೆ ಕಣ್ಣಿನ ಕೆಳಗೆ ಕಪ್ಪು ವೃತ್ತ ಅಥವಾ ಡಾರ್ಕ್ ಸರ್ಕಲ್ ಉಂಟಾಗುವುದಕ್ಕೆ ಸಾಕಷ್ಟು ಕಾರಣಗಳು ಇವೆ.

ಕಣ್ಣಿನ ಕೆಳಗೆ ಡಾರ್ಕ್ ಸರ್ಕಲ್ ಯಾಕೆ ಆಗುತ್ತೆ ಗೊತ್ತಾ?
ನಮ್ಮ ದೈನಂದಿನ ಜೀವನದಲ್ಲಿ ಅತಿಯಾದ ಒತ್ತಡ ಸರಿಯಾಗಿ ನಿದ್ದೆ ಇಲ್ಲದೆ ಇರುವುದು ದೇಹದಲ್ಲಿ ವಿಟಮಿನ್ ಅಂಶ ಕಡಿಮೆಯಾಗುವುದು ಹೀಗೆ ಮೊದಲಾದ ಕಾರಣಗಳಿಂದ ಕಣ್ಣಿನ ಕೆಳಗೆ ಡಾರ್ಕ್ ಸರ್ಕಲ್ ಉಂಟಾಗಬಹುದು. ಮೊಟ್ಟ ಮೊದಲನೆಯದಾಗಿ ಡಾರ್ಕ್ ಸರ್ಕಲ್ ಹೋಗಲಾಡಿಸುವುದಕ್ಕೆ ನಾವು ಆರೋಗ್ಯಕರವಾದ ಆಹಾರವನ್ನು ಸೇವಿಸಬೇಕು. ಅದರ ಜೊತೆಗೆ ದೇಹಕ್ಕೆ ಅಗತ್ಯವಿರುವ ಎಲ್ಲಾ ವಿಟಮಿನ್ ಅಂಶ ಕಬ್ಬಿಣದ ಅಂಶ ದೇಹಕ್ಕೆ ಸೇರಬೇಕು. ಇದರ ಜೊತೆಗೆ ಕೆಲವು ನೈಸರ್ಗಿಕ ವಿಧಾನಗಳ ಮೂಲಕ ಕಣ್ಣಿನ ಕೆಳಗೆ ಇರುವಂತಹ ಡಾರ್ಕ್ ಸರ್ಕಲ್ ಶಾಶ್ವತವಾಗಿ ಹೋಗಲಾಡಿಸುವಂತೆ ಮಾಡಬಹುದು.
ಡಾರ್ಕ್ ಸರ್ಕಲ್ ಹೋಗಲಾಡಿಸುವುದು ಹೇಗೆ?
ಕಣ್ಣಿನ ಕೆಳಗೆ ಕ್ರೀಮ್ ಹಚ್ಚುವುದು!
ಕಣ್ಣಿನ ಕೆಳಗೆ ಉಂಟಾಗುವ ಸುಕ್ಕುಗಳು ಅಥವಾ ಸೂಕ್ಷ್ಮ ರೇಖೆಗಳನ್ನು ಹೋಗಲಾಡಿಸಲು ಹಾಗೂ ಕಪ್ಪು ವೃತ್ತವನ್ನು ಹೋಗಲಾಡಿಸಲು ವಿಟಮಿನ್ ಸಿ ಮತ್ತು ನಿಯಾಸಿನಮೈಡ್ ಅಂಶವಿರುವ ಕ್ರೀಮ್ ಹಚ್ಚುವುದು ಬಹಳ ಮುಖ್ಯ. ಪ್ರತಿದಿನ ಮಲಗುವ ಮುಂಚೆ ಈ ಕ್ರೀಮ್ ಹಚ್ಚುವುದರಿಂದ ಇದು ಕಣ್ಣಿನ ಕೆಳಗೆ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಹಾಗೂ ಕಪ್ಪು ಕಲೆಗಳು ನಿಧಾನಕ್ಕೆ ಕಡಿಮೆಯಾಗುವುದಕ್ಕೆ ಸಹಾಯಮಾಡುತ್ತದೆ.
ಇನ್ನು ನೀವು ಐ ಕ್ರೀಮ್ ಬಳಸುತ್ತೀರಿ ಎಂದರೆ ಅದರಲ್ಲಿ ಯಾವುದೇ ರೀತಿಯ ರಾಸಾಯನಿಕಗಳು ಇಲ್ಲದೆ ಇರುವಂತಹ ಕ್ರೀಮ್ ಆಯ್ದುಕೊಳ್ಳಿ. ಯಾವುದಾದರೂ ನೈಸರ್ಗಿಕ ಐಸ್ ಕ್ರೀಮ್ ಮಾತ್ರ ಬಳಸಿ. ಇನ್ನು ಮಾರುಕಟ್ಟೆಯಲ್ಲಿ ಸಿಗುವ ಡಾರ್ಕ್ ಸರ್ಕಲ್ ಹೋಗಲಾಡಿಸುವ ಕ್ರೀಮ್ ಗಳ ಬದಲು ನೀವು ನೈಸರ್ಗಿಕವಾಗಿ ಮನೆಯಲ್ಲಿಯೇ ಕೆಲವು ವಸ್ತುಗಳನ್ನು ಬಳಸಿ ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು ಜೊತೆಗೆ ಮುಖದಲ್ಲಿ ಕಾಣಿಸುವಂತಹ ಡಾರ್ಕ್ ಸರ್ಕಲ್ ಸಂಪೂರ್ಣವಾಗಿ ಕಡಿಮೆ ಆಗುವಂತೆ ಮಾಡಿಕೊಳ್ಳಬಹುದು. ಹಾಗಾದ್ರೆ ನೈಸರ್ಗಿಕವಾಗಿ ಡಾರ್ಕ್ ಸರ್ಕಲ್ ಕಡಿಮೆ ಆಗಲು ಏನು ಮಾಡಬೇಕು ನೋಡೋಣ.
ಸೌತೆಕಾಯಿ ಬಳಕೆ!
ಸಾಮಾನ್ಯವಾಗಿ ಡಯಟ್ ಮಾಡುವವರು ಅಥವಾ ದೇಹದ ಫಿಟ್ನೆಸ್ ಬಯಸುವವರು ಸೌತೆಕಾಯಿಯನ್ನು ಹೆಚ್ಚಾಗಿ ಬಳಕೆ ಮಾಡುವುದನ್ನ ನೀವು ನೋಡಿರಬಹುದು. ಫಿಟ್ನೆಸ್ ಟ್ರೈನರ್ ಕೂಡ ಸೌತೆಕಾಯಿ ಸೇವನೆ ಮಾಡುವುದಕ್ಕೆ ಸಲಹೆ ನೀಡುತ್ತಾರೆ. ಸೌತೆಕಾಯಿ ಕಣ್ಣಿನ ಕೆಳಗೆ ಇರುವ ಚರ್ಮವನ್ನು ಕೂಲ್ ಆಗಿಸುತ್ತದೆ. ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ. ಚರ್ಮದಲ್ಲಿ ಶೇಖರಣೆಯಾಗುವಂತಹ ಮೆಲನಿನ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಅಷ್ಟೇ ಅಲ್ಲ ಸೌತೆಕಾಯಿಯ ತುಂಡುಗಳನ್ನು ಅಥವಾ ಸ್ಲೈಸ್ ಗಳನ್ನು ಕಣ್ಣಿನ ಮೇಲೆ ಇಟ್ಟುಕೊಂಡಾಗ ಕಣ್ಣಿಗೂ ತಂಪು ಜೊತೆಗೆ ಕಣ್ಣಿನ ಕೆಳಗೆ ಇರುವ ಕಪ್ಪು ವೃತ್ತವನ್ನು ಕೂಡ ಕ್ರಮೇಣವಾಗಿ ತಡೆಗಟ್ಟುತ್ತದೆ.
ಸೌತೆಕಾಯಿಯಲ್ಲಿ ವಯಸ್ಸಾದ ಗುರುತುಗಳನ್ನು ಹೋಗಲಾಡಿಸುವಂತಹ ಆಂಟಿಆಕ್ಸಿಡೆಂಟ್ ಗುಣ ಕೂಡ ಇದೆ. ಇದು ನಿಮ್ಮ ತ್ವಚೆಯ ಜೀವಕೋಶದ ಮ್ಯಾಟ್ರಿಕ್ಸ್ ಸುಧಾರಿಸಲು ಸಹಾಯ ಮಾಡುತ್ತದೆ. ಅದರಿಂದ ನೀವು ಸೌತೆಕಾಯಿಯನ್ನು ಕಣ್ಣಿನ ಸುತ್ತ ಸ್ಲೈಸ್ ಮಾಡಿ ವೃತ್ತಾಕಾರದಲ್ಲಿ ಉಜ್ಜಬೇಕು. ಈ ರೀತಿ ಮಾಡುವುದರಿಂದ ನೀನು ಕೆಳಗೆ ಕಾಣುವಂತಹ ಕಪ್ಪು ವರ್ತುಲ ನಿಧಾನವಾಗಿ ಮಾಯವಾಗುತ್ತದೆ.
ಐ ಕ್ರೀಮ್ ಜೊತೆಗೆ ಕಾಫಿ ಪೌಡರ್!
ಕಾಫಿಯಲ್ಲಿ ಇರುವಂತಹ ಅತಿಯಾದ ಕೆಫಿನ್ ಅಂಶ ದೇಹಕ್ಕೆ ಅಷ್ಟು ಒಳ್ಳೆಯದಲ್ಲ ಆದರೆ ನಿಮ್ಮ ತ್ವಚೆಗೆ ಮಾತ್ರ ತುಂಬಾನೇ ಒಳ್ಳೆಯದು. ಆಂಟಿ ಆಕ್ಸಿಡೆಂಟ್ ಗುಣ ಕೂಡ ಕಾಫಿ ಪೌಡರ್ ನಲ್ಲಿ ಇರುವುದರಿಂದ ಇದು ಕಣ್ಣಿನ ಕೆಳಗೆ ಉಂಟಾಗುವಂತಹ ಕಪ್ಪು ಕಲೆಯನ್ನು ಮಾತ್ರವಲ್ಲದೆ ಚರ್ಮ ಸುಕ್ಕುಗಟ್ಟುವಿಕೆಯನ್ನು ಕೂಡ ತಡೆಯುತ್ತದೆ.
ಕಾಫಿ ಪೌಡರ್ ಹಾಗೂ ಅದರ ಜೊತೆಗೆ ನೀವು ಬಳಸುವ ನೈಸರ್ಗಿಕ ಐಸ್ ಕ್ರೀಮ್ ಅನ್ನು ಸೇರಿಸಿ ಕಣ್ಣಿನ ಕೆಳಗೆ ನಿಯಮಿತವಾಗಿ ಹಚ್ಚಿಕೊಳ್ಳಿ. ವಾರದಲ್ಲಿ ಕನಿಷ್ಠ ಮೂರು ದಿನ ಈ ರೀತಿ ಮಾಡಿ ಇದರಿಂದ ಕಣ್ಣಿನ ಕೆಳಗಿರುವ ಕಪ್ಪು ಕಲೆ ಅಥವಾ ಡಾರ್ಕ್ ಸರ್ಕಲ್ ಮ್ಯಾಜಿಕ್ ನಂತೆ ಮಾಯವಾದಂತೆ ನೋಡಿ.
ಅಲೋವೆರಾ ಜೆಲ್ ಲೇಪನ!
ತ್ವಚೆ ಸುಕ್ಕುಗಟ್ಟುವಿಕೆಯನ್ನು ಹೋಗಲಾಡಿಸಲು ಅಲೋವೆರಾ ಜೆಲ್ ನಂತಹ ಅತ್ಯುತ್ತಮವಾದ ನೈಸರ್ಗಿಕ ವಸ್ತು ಮತ್ತೊಂದಿಲ್ಲ. ದೇಹದ ಯಾವುದೇ ಭಾಗಕ್ಕೆ ಅಲೋವೆರಾ ಜೆಲ್ ಹಚ್ಚಿದರೆ ಚರ್ಮ ಸುಕ್ಕುಗಟ್ಟುವುದು ಅಥವಾ ಚಳಿಗಾಲದ ಶುಷ್ಕತೆ ಎಲ್ಲವನ್ನು ಹೋಗಲಾಡಿಸುತ್ತದೆ. ಹಾಗಾಗಿ ನೀವು ನೈಸರ್ಗಿಕವಾದ ಅಲೋವೆರಾ ಜೆಲ್ ಅನ್ನು ನಿಯಮಿತವಾಗಿ ನಿಮ್ಮ ಕಣ್ಣಿನ ಕೆಳಗೂ ಲೇಪನ ಮಾಡುವುದನ್ನು ಮರೆಯಬೇಡಿ ಹೆಚ್ಚಾಗಿ ನೀವು ಮೇಕಪ್ ಬಳಸುವವರಾಗಿದ್ದರೆ ಮೇಕಪ್ ತೆಗೆದ ನಂತರ ಮುಖವನ್ನು ಸ್ವಚ್ಛಗೊಳಿಸಿಕೊಂಡು ನಂತರ ಅಲೋವೆರಾ ಜೆಲ್ ಹಚ್ಚುವುದರಿಂದ ಜೊತೆಗೆ ಕ್ರಮೇಣವಾಗಿ ನಿಮ್ಮ ಕಣ್ಣಿನ ಕೆಳಗಿರುವ ಸೂಕ್ಷ್ಮ ರೇಖೆಗಳು ಹಾಗೂ ಕಪ್ಪು ವೃತ್ತಗಳು ಕೂಡ ನಿವಾರಣೆಯಾಗುತ್ತಾ ಬರುತ್ತದೆ.
ರೋಸ್ ವಾಟರ್!
ಸತ್ತ ಚರ್ಮವನ್ನು ಪುನಃಶ್ಚೇತನಗೊಳಿಸಲು ಅಥವಾ ದಣಿದ ಚರ್ಮವನ್ನು ಗೊಳಿಸಲು ರೋಸ್ ವಾಟರ್ ಅಮೃತದಂತೆ ಕೆಲಸ ಮಾಡುತ್ತದೆ. ಇದನ್ನ ಚರ್ಮದ ಟೋನರ್ ರೀತಿಯಲ್ಲಿ ಬಳಸಬಹುದು ಮೇಕಪ್ ರಿಮೂವ್ ಮಾಡಿದ ನಂತರ ಮುಖವನ್ನು ತೊಳೆದು ನಂತರ ಹತ್ತಿ ಬಟ್ಟೆಯಿಂದ ರೋಸ್ ವಾಟರ್ ಅನ್ನು ಅದ್ದಿ ಮುಖಕ್ಕೆ ಚೆನ್ನಾಗಿ ಉಜ್ಜಿಕೊಳ್ಳಿ ಅದರಲ್ಲೂ ಕಣ್ಣಿನ ರೆಪ್ಪೆಯ ಕೆಳಗೆ ಸುಮಾರು 15 ನಿಮಿಷಗಳ ಕಾಲ ರೋಜ್ ವಾಟರ್ ಹಾಕಿರುವ ಹತ್ತಿಯನ್ನು ಹಾಗೆ ಇಟ್ಟುಕೊಳ್ಳಿ. ಇದು ನಿಮ್ಮ ಕಣ್ಣಿನ ಕೆಳಗೆ ಇರುವ ಕಪ್ಪು ವೃತ್ತವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ ಜೊತೆಗೆ ನಿಮ್ಮ ಮುಖ ಇನ್ನಷ್ಟು ಕಾಂತಿಯುತಗೊಳ್ಳುತ್ತದೆ
ಸಾಮಾನ್ಯವಾಗಿ ಗ್ರೀನ್ ಟೀ ಕುಡಿಯುವವರು ಮನೆಯಲ್ಲಿ ಟೀ ಬ್ಯಾಗ್ ಇಟ್ಟುಕೊಂಡಿರುತ್ತಾರೆ ಇಂತಹ ನಂತರ ಅದನ್ನು ಕಣ್ಣಿನ ಕೆಳಗೆ ಇಡುತ್ತ ಬರಬೇಕು. ಟೀ ಬ್ಯಾಗ್ ಟ್ರೀಟ್ಮೆಂಟ್ ಕಪ್ಪು ಕಲೆ ಹೋಗಲಾಡಿಸುವುದಕ್ಕೆ ಬಹಳ ಉತ್ತಮ ವಿಧಾನವಾಗಿದೆ ಹತ್ತರಿಂದ ಹದಿನೈದು ನಿಮಿಷಗಳ ಕಾಲ ಕಣ್ಣಿನ ಕೆಳಗೆ ಹಾಗು ಮುಖದ ಯಾವುದೇ ಭಾಗದಲ್ಲಿ ಇಟ್ಟುಕೊಂಡರೆ ತ್ವಚೆಗೆ ರಿಲೀಫ್ ಸಿಗುತ್ತದೆ ಹಾಗೂ ಡಾರ್ಕ್ ಸರ್ಕಲ್ ಕೂಡ ನಿಮಗೆ ತಿಳಿಯದಂತೆ ಕೆಲವೇ ದಿನಗಳಲ್ಲಿ ಮಾಯವಾಗುತ್ತದೆ.
ಆಲೂಗಡ್ಡೆ ಬಳಕೆ!
ವಿಟಮಿನ್ ಸಿ ಅಂಶ ಯಥೇಚ್ಛವಾಗಿ ಇರುವ ಆಲೂಗಡ್ಡೆಯ ಸ್ಲೈಸ್ ಗಳನ್ನು ಕಣ್ಣಿನ ಮೇಲಿಟ್ಟು ಸ್ವಲ್ಪ ಸಮಯದ ಬಳಿಕ ಅದನ್ನ ತೆಗೆಯಿರಿ. ಇದರ ಜೊತೆಗೆ ವೃತ್ತಾಕಾರದಲ್ಲಿ ಕಣ್ಣಿನ ಸುತ್ತ ಆಲೂಗಡ್ಡೆಯ ಸ್ಲೈಸ್ ಅನ್ನು ರಬ್ ಮಾಡುತ್ತಾ ಬನ್ನಿ. ಈ ರೀತಿ ಮಾಡುವುದರಿಂದ ಕೂಡ ನಿಮ್ಮ ತ್ವಚೆ ಬಹಳ ಸುಂದರವಾಗಿ ಕಾಣಿಸುತ್ತದೆ ಹಾಗೂ ಕಪ್ಪು ವರ್ತುಲ ಕೂಡ ಮಾಯವಾಗುತ್ತದೆ.
ಇವುಗಳನ್ನು ಮರೆಯಬೇಡಿ!
ನಾವು ಯಾವ ರೀತಿಯ ಎಷ್ಟೇ ಔಷಧ ಬಳಕೆ ಮಾಡಿದರು ಕೂಡ ನಮ್ಮ ದೇಹ ಆರೋಗ್ಯಕರವಾಗಿರಬೇಕು ನಮ್ಮ ತ್ವಚೆ ಸುರಕ್ಷಿತವಾಗಿ ಇರಬೇಕು ಅಂದ್ರೆ ಆರೋಗ್ಯಕರವಾದ ಆಹಾರ ಸೇವನೆ ಬಹಳ ಮುಖ್ಯ. ನಾರಿನ ಅಂಶ ಇರುವ ಆಹಾರ ಸೇವನೆ ಮಾಡುವುದರಿಂದ ತ್ವಚೆಯಲ್ಲಿ ನಿರ್ಜಲೀಕರಣ ಉಂಟಾಗುವುದಿಲ್ಲ ಇದರಿಂದ ತ್ವಚೆ ಸದಾ ಕಾಂತಿಯುಕ್ತವಾಗಿರುತ್ತದೆ. ಇದರ ಜೊತೆಗೆ ಜೀವನ ಶೈಲಿ ಬದಲಾಯಿಸಿಕೊಳ್ಳುವುದು ಕೂಡ ಅಷ್ಟೇ ಮುಖ್ಯ ಒತ್ತಡದ ಜೀವನ ನಮ್ಮ ಆರೋಗ್ಯದ ಮೇಲೆ ಬಹಳ ಕೆಟ್ಟ ಪರಿಣಾಮ ಬೀರಬಹುದು ಅತಿ ಕಡಿಮೆ ವಯಸ್ಸಿನಲ್ಲಿಯೇ ವಯಸ್ಸಾದವರಂತೆ ತತ್ವಚೆ ಕಾಣಬಹುದು. ಇದಕ್ಕಾಗಿ ಸರಿಯಾದ ನಿದ್ದೆ ಒತ್ತಡ ಮುಕ್ತ ಜೀವನ ಬಹಳ ಮುಖ್ಯ.
ನಮಗೆ ದಿನದಲ್ಲಿ ಎಷ್ಟೇ ಒತ್ತಡ ಇದ್ದರೂ ರಾತ್ರಿ ಮಾತ್ರ ಸರಿಯಾಗಿ ನಿದ್ದೆ ಮಾಡಬೇಕು, ಪ್ರತಿಯೊಬ್ಬ ಮನುಷ್ಯನಿಗೂ ಸರಿ ಸುಮಾರು ಎಂಟು ಗಂಟೆಗಳ ಕಾಲ ನಿದ್ದೆ ಬೇಕು ಎಂದು ಹೇಳಲಾಗುತ್ತೆ. ಕಡೇ ಪಕ್ಷ ಐದರಿಂದ ಆರು ಗಂಟೆಗಳವರೆಗಾದರೂ ಸರಿಯಾದ ನಿದ್ದೆ ಮಾಡಿದರೆ ಕಣ್ಣಿನ ಕೆಳಗೆ ಡಾರ್ಕ್ ಸರ್ಕಲ್ ಕೂಡ ಆಗುವುದಿಲ್ಲ. ಇದರ ಜೊತೆಗೆ ಪ್ರತಿದಿನ ವ್ಯಾಯಾಮ ಹೊರ ಜಗತ್ತಿನಲ್ಲಿ ಸೂರ್ಯನ ವಿಕಿರಣಗಳು ಬೀಳುವುದಕ್ಕೂ ಮೊದಲು ವಾಕಿಂಗ್ ಮಾಡುವುದು ನಿಮ್ಮ ತ್ವಚೆಯನ್ನ ರಕ್ಷಿಸುತ್ತದೆ.
ಇವುಗಳ ಹೊರತಾಗಿ ನಿಮ್ಮ ತ್ವಚೆಯನ್ನ ರಕ್ಷಿಸಿಕೊಳ್ಳುವುದಕ್ಕೆ ಕಣ್ಣಿನ ಕೆಳಗೆ ಡಾರ್ಕ್ ಸರ್ಕಲ್ ಆಗದೆ ಇರುವುದಕ್ಕೆ ಮುಖ್ಯವಾಗಿ ಪ್ರತಿದಿನ ಸಾಕಷ್ಟು ನೀರು ಕುಡಿಯುವುದು ಬಹಳ ಮುಖ್ಯ. ನೀವು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿದರೆ ದೇಹ ಡಿ ಹೈಡ್ರೇಟ್ ಆಗುವುದಿಲ್ಲ ಇದರಿಂದ ಕಳೆದುಕೊಳ್ಳುವುದಿಲ್ಲ ತ್ವಚೆಯಲ್ಲಿ ಇರುವ ಶುಷ್ಕತೆಯನ್ನು ಹೋಗಲಾಡಿಸುವುದಕ್ಕೆ ಸರಿಯಾದ ಆಹಾರ ಕ್ರಮ ಹಾಗೂ ಸಾಕಷ್ಟು ನೀರು ಸೇವನೆ ಕೂಡ ಬಹಳ ಮುಖ್ಯವಾಗಿದೆ.



Click it and Unblock the Notifications











