Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
ಶಾಲೆಯಲ್ಲಿ ನೀವು ಮಕ್ಕಳು ಮಕ್ಕಳ ನಡುವೆ ಗಲಾಟೆ, ಜಗಳ, ಚೇಷ್ಟೆಗಳ ನೋಡಿರುತ್ತೀರಿ. ಇವರನ್ನು ತಿದ್ದಿ ತೀಡಿ ಸರಿದಾರಿಗೆ ತರುವುದೇ ಶಿಕ್ಷಕರ ಕೆಲಸ, ಶಾಲೆ ಎಲ್ಲವನ್ನು ಕಲಿಸಿಕೊಡುವ ಮಂದಿರ. ಅಲ್ಲಿ ನಾವು ಹೇಗೆ ಬೆಳೆಯುತ್ತೇವೆ ಎನ್ನುವುದು ನಮ್ಮ ಮುಂದಿನ ಜೀವನ ರೂಪಿಸುತ್ತೆ.
ಆದ್ರೆ ಇಲ್ಲೊಂದು ಶಾಲೆಯಲ್ಲಿ ಶಿಕ್ಷಕಿ ಹಾಗೂ ಪ್ರಿನ್ಸಿಪಾಲ್ ನಡುವೆಯೇ ಗಲಾಟೆ. ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ಪ್ರಿನ್ಸಿಪಾಲ್ ಶಾಲೆಯ ಕರ್ತವ್ಯದ ಸಮಯದಲ್ಲಿ ಫೇಶಿಯಲ್ ಮಾಡಿಸುತ್ತಿದ್ದಾಗ ಅದರ ವಿಡಿಯೋ ಮಾಡಿದ ಕಾರಣಕ್ಕೆ ಶಿಕ್ಷಕಿಯೊಬ್ಬರ ಕೈ ಕಚ್ಚಿರುವ ವಿಚಿತ್ರ ಘಟನೆ ನಡೆದಿದೆ.
ಉತ್ತರ ಪ್ರದೇಶದ ಉನ್ನಾವೊದಲ್ಲಿ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸರ್ಕಾರಿ ಪ್ರಾಥಮಿಕ ಶಾಲೆಯ ಮಹಿಳಾ ಪ್ರಿನ್ಸಿಪಾಲ್ ತರಗತಿ ಸಮಯದಲ್ಲಿ ಮಕ್ಕಳಿಗೆ ಪಾಠ ಮಾಡುವುದನ್ನು ಬಿಟ್ಟು ಫೇಶಿಯಲ್ ಮಾಡಿಕೊಳ್ಳುತ್ತಿರುವುದು ಕಂಡುಬಂದಿದೆ. ಇದನ್ನು ಪ್ರಶ್ನಿಸಿ ವಿಡಿಯೋ ಮಾಡಲು ಹೋದ ಶಿಕ್ಷಕಿ ಮೇಲೆ ಹಲ್ಲೆ ನಡೆಸಿ ಕೈ ಕಚ್ಚಿರುವ ಆರೋಪ ಕೇಳಿಬಂದಿದೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳಾ ಪ್ರಿನ್ಸಿಪಾಲ್ ನಡೆಗೆ ಭಾರೀ ಆಕ್ರೋಶ ಕೇಳಿಬಂದಿದೆ. ಜೊತೆಗೆ ಆಕೆಯ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗುತ್ತಿದೆ.
ನಡೆದಿರೋದೇನು.?
ಸರ್ಕಾರಿ ಪ್ರಾಥಮಿಕ ಶಾಲೆಯ ಸಂಗೀತಾ ಸಿಂಗ್ ಎಂಬ ಮಹಿಳಾ ಪ್ರಿನ್ಸಿಪಾಲ್ ತರಗತಿಯಲ್ಲಿ ಪಾಠ ಮಾಡುವ ಸಮಯದಲ್ಲಿ ಬ್ಯೂಟಿಷಿಯನ್ ಅನ್ನು ಶಾಲೆಗೆ ಕರೆಸಿಕೊಂಡಿದ್ದಾರೆ. ಬಳಿಕ ಕೊಠಡಿಯೊಂದರಲ್ಲಿ ಫೇಶಿಯಲ್ ಮಾಡಿಸುತ್ತಿದ್ದಾರೆ. ಆದರೆ ಪಾಠ ಮಾಡುವ ಅವಧಿಯಲ್ಲಿ ಪ್ರಿನ್ಸಿಪಾಲ್ ಕಾಣದಿರುವುದನ್ನು ಹುಡುಕುತ್ತಿದ್ದ ಅನಮ್ ಎಂಬ ಶಿಕ್ಷಕಿ ಆಕೆ ಇದ್ದ ಕೊಠಡಿಗೆ ಹೋಗಿದ್ದಾಳೆ. ಈ ವೇಳೆ ಕುರ್ಚಿಯ ಮೇಲೆ ಕುಳಿತು ಫೇಶಿಯಲ್ ಮಾಡಿಸಿಕೊಳ್ಳುತ್ತಿರುವುದನ್ನು ನಾವು ನೋಡಬಹುದು.
ಇದರಿಂದ ಕುಪಿತಗೊಂಡ ಪ್ರಿನ್ಸಿಪಾಲ್ ಸಂಗೀತಾ ಸಿಂಗ್ ಶೀಕ್ಷಕಿ ಅನಮ್ ಮೇಲೆ ಹಲ್ಲೆ ನಡೆಸಿ ಆಕೆಯ ಕೈ ಕಚ್ಚಿದ್ದಾಳೆ. ವಿಡಿಯೋದ ಕೊನೆಯಲ್ಲಿ ಶಿಕ್ಷಕಿ ಅನಮ್ ಅಳುತ್ತ ತನ್ನ ಕೈಗೆ ಗಾಯವಾಗಿರುವುದನ್ನು ತೋರಿಸುತ್ತಿದ್ದಾಳೆ. ಒಂದು ಕೈಯಲ್ಲಿ ರಕ್ತಸ್ರಾವವಾಗಿದ್ದರೆ ಮತ್ತೊಂದು ಕೈನಲ್ಲಿ ಆಕೆ ಕಚ್ಚಿರುವ ಗಾಯದ ಗುರುತುಗಳಿವೆ.
ಈ ಘಟನೆ ಸಂಬಂಧ ಶಿಕ್ಷಕಿ ಅನಮ್ ಬಿಘಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆಕೆಯ ವೈದ್ಯಕೀಯ ಪರೀಕ್ಷೆ ವರದಿ ಅನ್ವಯ ಪ್ರಿನ್ಸಿಪಾಲ್ ಸಂಗೀತಾ ಸಿಂಗ್ ವಿರುದ್ಧ ಪ್ರಕರಣ ಸಹ ದಾಖಲಾಗಿದೆ. ಅಲ್ಲದೆ ಶಿಕ್ಷಣಾಧೀಕಾರಿ ಸಹ ತನಿಖೆಗೆ ಆದೇಶಿಸಿದ್ದಾರೆ.
ಈ ನಡುವೆ ವೈರಲ್ ಆಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಹಲವರು ಸ್ಥಳೀಯ ಆಡಳಿತವನ್ನು ಪ್ರಶ್ನಿಸಿದರೆ, ಕೆಲವರು ಸರ್ಕಾರಿ ಶಿಕ್ಷಕರು ಶಾಲಾ ಆವರಣವನ್ನು ಹೇಗೆ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು. "ಸರ್ಕಾರಿಆಶಲೆ ಪ್ರಿನ್ಸಿಪಾಲ್ ಮತ್ತು ಶಿಕ್ಷಕರು ಸರ್ಕಾರಿ ಶಾಲೆಯನ್ನು ಬ್ಯೂಟಿ ಪಾರ್ಲರ್ ಆಗಿ ಪರಿವರ್ತಿಸಿದ್ದಾರೆ, ಇದು ಆಘಾತಕಾರಿ ಬೆಳವಣಿಗೆ ಎಂದು ಕೆಲವರು ಆರೋಪಿಸಿದ್ದಾರೆ.
ಜೊತೆಗೆ ಶಿಕ್ಷಕಿ ಅನಮ್ ಮಾಡಿರುವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಈ ರೀತಿ ಸರ್ಕಾರಿ ವೇತನ ಪಡೆಯುವ ಸಿಬ್ಬಂದಿ ತಮ್ಮ ಕರ್ತವ್ಯ ಮಾಡದೆ ಲೋಪ ಎಸಗುವವರ ವಿರುದ್ಧ ಆ ಇಲಾಖೆಯಲ್ಲೇ ಹೋರಾಟಗಳು, ವಿರೋಧಗಳು ಕೇಳಿಬಂದಾಗ ಮಾತ್ರ ಸರ್ಕಾರಿ ಇಲಾಖೆಗಳು ಜನರ ಕಷ್ಟಗಳಿಗೆ, ನೆರವಿಗೆ ಬರುತ್ತವೆ ಎಂದು ಹಲವರು ಅಭಿಪ್ರಾಯ ಹೊರಹಾಕಿದ್ದಾರೆ.
ಇದಕ್ಕೂ ಮೊದಲು ಛತ್ತೀಸ್‌ಗಢದ ಬಸ್ತಾರ್‌ನ ಸರ್ಕಾರಿ ಶಾಲೆಯ ಶಿಕ್ಷಕನೊಬ್ಬ ಮಕ್ಕಳ ಕೈಯಲ್ಲೇ ಚಪ್ಪಲಿ ಏಟು ತಿಂದಿರುವ ಘಟನೆ ನಡೆದಿತ್ತು ಇಲ್ಲಿನ ಪ್ರಾಥಮಿಕ ಶಾಲೆ ಶಿಕ್ಷಕನಾಗಿದ್ದ ಆತ ಶಾಲೆಯಲ್ಲೇ ಮದ್ಯ ಪಾನ ಮಾಡುತ್ತಿದ್ದ. ಪ್ರಶ್ನಿಸಿದವರ ಮೇಲೆಯೇ ಮರು ಪ್ರಶ್ನೆ ಮಾಡಿ ನಾನಿರುವುದೇ ಹೀಗೆ, ಕುಡಿದು ಶಾಲೆಗೆ ಬರುತ್ತೇನೆ ಏನು ಮಾಡುತ್ತೀಯ ಎಂಬೆಲ್ಲಾ ಹಾರಿಕೆಯ ಉತ್ತರ ನೀಡುತ್ತಿದ್ದ. ಈ ವೇಳೆ ಮಕ್ಕಳೇ ಆತನಿಗೆ ಚಪ್ಪಲಿಯಲ್ಲಿ ಹೊಡದು ಶಾಲೆಯಿಂದ ಓಡಿಸಿದ್ದ ಘಟನೆ ಸಹ ನಡೆದಿತ್ತು.



Click it and Unblock the Notifications
