Latest Updates
-
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ! -
ಹೊರಗೆ ಬಿರುಗಾಳಿ, ಮನೆಯಲ್ಲಿ ಫಿಟ್ನೆಸ್: ಇಂದಿನ ಹವಾಮಾನಕ್ಕೆ ಈ ವರ್ಕೌಟ್ ಬೆಸ್ಟ್! -
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ!
ಜಯಾ ಬಚ್ಚನ್ ರೀತಿ ಉದ್ದ ಕೂದಲು ನಿಮ್ಮದಾಗಬೇಕಾ? ಆಕೆ ಹೇಳಿದ ಸೀಕ್ರೆಟ್ ಇದು..!
ಮುಖದ ಮೇಲೆ ಕೆಲಗಳು ಇಲ್ಲದಂತೆ, ಸುಂದರವಾಗಿ ಕಾಣಬೇಕು ಎಂಬ ಆಸೆ ಎಲ್ಲರಲ್ಲೂ ಇರುವುದು ಸಹಜ. ಅದರಂತೆ ತಮ್ಮ ಕೂದಲು ಸಹ ದಟ್ಟವಾಗಿ ಉದ್ದವಾಗಿರಬೇಕು ಎಂದು ಎಲ್ಲರು ಬಯಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕೂದಲಿನ ಆರೋಗ್ಯ ಕಪಾಡಿಕೊಳ್ಳುವುದೇ ದೊಡ್ಡ ಸವಾಲಿನ ಕೆಲಸವಾಗಿದೆ. ಯುವಕರಲ್ಲಿ ಮಧ್ಯವಯಸ್ಸಿಗೆ ತಲೆ ಬೋಳಾಗುವುದು, ಕೂದಲು ಉದುರುವುದು ಸಾಮಾನ್ಯ ಎನ್ನುವಂತಾಗಿದೆ.
ಇನ್ನು ಯುವತಿಯರಲ್ಲೂ ಸಹ ಈ ಸಮಸ್ಯೆ ಹೆಚ್ಚಿದೆ. ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳ ಬಳಸಿದರೂ ಕೂದಲು ಉದುರುವುದನ್ನು ಕಡಿಮೆ ಮಾಡಲು ಅವರಿಂದ ಸಾಧ್ಯವಾಗುತ್ತಿಲ್ಲ. ಈ ಕೂದಲು ಉದುರುವಿಕೆಗೆ ಇದೊಂದೇ ಕಾರಣ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಹತ್ತಾರು ಕಾರಣಗಳು ಈ ಸಮಸ್ಯೆ ಹಿಂದಿರಬಹುದು.

ಆದರೆ ನಾವಿಂದು ಕೂದಲು ಉದುರುವಿಕೆ ಸಮಸ್ಯೆಗೆ ನಟ ಅಮಿತಾಬ್ ಬಚ್ಚನ್ ಪತ್ನಿ, ನಟಿ, ರಾಜಕಾರಣಿ ಜಯಾ ಬಚ್ಚನ್ ಅವರು ಬಳಸಿದ್ದ ಪರಿಹಾರ ಕ್ರಮ ಏನು ಎಂಬುದನ್ನು ತಿಳಿದುಕೊಳ್ಳೋಣ. ನೀವು ಜಯಾ ಬಚ್ಚನ್ ಅವರ ಹಳೆಯ ಸಿನಿಮಾಗಳ ನೋಡಿರಬಹುದು. ಅವರ ಉದ್ದವಾದ ಕೇಶ ರಾಶಿ, ದಟ್ಟ ಕೂದಲು ಹಲವರ ಕಣ್ಣು ಕುಕ್ಕಿತ್ತು. ಗಾಡ ಕಪ್ಪು ಬಣ್ಣದಲ್ಲಿದ್ದ ಅವರು ಕೂದಲು ಇಂದಿಗೂ ಹಾಗೆಯೇ ಇದೆ. ಆದರೆ ಬಿಳಿ ವಯೋಸಹಜವಾಗಿ ಬಿಳಿ ಬಣ್ಣಕ್ಕೆ ತಿರುಗಿದೆ.
ಹಾಗಾದ್ರೆ ಜಯಾ ಬಚ್ಚನ್ ತಮ್ಮ ಕೂದಲ ಆರೈಕೆ ಹೇಗೆ ಮಾಡಿಕೊಳ್ಳುತ್ತಿದ್ದರು. ಕೂದಲಿಗೆ ಯಾವ ಗಿಡ ಮೂಲಿಕೆಯ ಶಾಂಪು ಬಳಸುತ್ತಿದ್ದರು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಅವರು ವಾಟ್ ದಿ ಹೆಲ್ ನವ್ಯಾ ಸೀಸನ್ 2 ಎಂಬ ಶೋ ನಡೆಸಿಕೊಡುತ್ತಾರೆ. ಇದರಲ್ಲಿ ಇತ್ತೀಚಿಗೆ ಅವರು ತಮ್ಮ ವೈಯಕ್ತಿಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಕೇಶ ರಾಶಿಯ ರಹಸ್ಯದ ಕುರಿತು ಮಾತನಾಡಿದ ಅವರು, ಕೂದಲಿಗೆ ಯಾವ ರಿತಿ ಆರೈಕೆ ಮಾಡುತ್ತಿದ್ದೆ ಎಂಬುದನ್ನು ತಿಳಿಸಿದ್ದಾರೆ.
ಕರಿಬೇವಿನ ಎಲೆಗಳು ಮತ್ತು ಮೆಂತ್ಯ ಕಾಳುಗಳಿಂದ ತುಂಬಿದ ತೆಂಗಿನ ಎಣ್ಣೆಯ ಮಿಶ್ರಣವನ್ನು ಕೂದಲಿಗೆ ಹಚ್ಚುತ್ತಿರುವುದಾಗಿ ಹೇಳಿದ್ದಾರೆ. ಈ ಮಿಶ್ರಣವನ್ನು ಕುದಿಸಿ, ತಂಪಾಗಿಸಿ ಮತ್ತು ಹಚ್ಚಿಕೊಳ್ಳುತ್ತಾರಂತೆ, ಮಾರುಕಟ್ಟೆಯಲ್ಲಿ ಸಿಗುವ ಯಾವುದೇ ಎಣ್ಣೆಯನ್ನೂ ಅವರು ಬಳಸಿಲ್ಲವಂತೆ.
ತೆಂಗಿನ ಎಣ್ಣೆಯು ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿದೆ, ವಿಶೇಷವಾಗಿ ಲಾರಿಕ್ ಆಮ್ಲವಿದ್ದು, ಇದು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ. ಇದು ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾದ ಸೋಂಕನ್ನು ತಡೆಗಟ್ಟುವ ಮೂಲಕ ನೆತ್ತಿಯ ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ತೆಂಗಿನ ಎಣ್ಣೆ ಕೂದಲಿನಲ್ಲಿ ಪ್ರೋಟೀನ್ ನಷ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಒಳಗಿನಿಂದ ಕೂದಲನ್ನು ಬಲಪಡಿಸುತ್ತದೆ.
ಕರಿಬೇವಿನ ಎಲೆಗಳು ಉತ್ಕರ್ಷಣ ನಿರೋಧಕಗಳು ಮತ್ತು ಬೀಟಾ-ಕ್ಯಾರೋಟಿನ್ ಮತ್ತು ಪ್ರೋಟೀನ್‌ಗಳಂತಹ ಅಗತ್ಯ ಪೋಷಕಾಂಶಗಳ ಶಕ್ತಿ ಕೇಂದ್ರವಾಗಿದೆ. ಈ ಪೋಷಕಾಂಶಗಳು ಕೂದಲು ಕಿರುಚೀಲಗಳನ್ನು ಪೋಷಿಸುತ್ತದೆ, ಬಲವಾದ ಮತ್ತು ಆರೋಗ್ಯಕರ ಕೂದಲು ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಕರಿಬೇವಿನ ಎಲೆಗಳು ಕೂದಲು ತೆಳುವಾಗುವುದನ್ನು ಮತ್ತು ಒಡೆಯುವುದನ್ನು ತಡೆಯುವ ಅಮೈನೋ ಆಮ್ಲಗಳನ್ನು ಸಹ ಹೊಂದಿರುತ್ತವೆ.
ಇನ್ನು ಮೆಂತೆ ಕಾಳುಗಳಲ್ಲಿ ಪ್ರೋಟೀನ್‌ಗಳು, ನಿಕೋಟಿನಿಕ್ ಆಮ್ಲ ಮತ್ತು ಲೆಸಿಥಿನ್ ಅಂಶ ಸಮೃದ್ಧವಾಗಿದೆ, ಇದು ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ ಮತ್ತು ಕೂದಲು ಉದುರುವಿಕೆಯನ್ನು ತಡೆಯುತ್ತದೆ.
ಈ ಎಣ್ಣೆ ತಯಾರಿಸುವುದು ಹೇಗೆ?
ಜಯಾ ಬಚ್ಚನ್ ಬಳಸುವ ಕೂದಲು ಎಣ್ಣೆಯನ್ನು ತಯಾರಿಸಲು, ಮೆಂತ್ಯ ಬೀಜಗಳು ಮತ್ತು ಕರಿಬೇವಿನ ಎಲೆಗಳನ್ನು ತೆಂಗಿನ ಎಣ್ಣೆಯೊಂದಿಗೆ ಸೇರಿಸಿ. ಚೆನ್ನಾಗಿ ಕುದಿಸಿ. ಬಳಿಕ ತಣ್ಣಗಾಗಲು ಬಿಡಿ, ನಂತರ ನೆತ್ತಿಗೆ ಹಾಕಿ ಚೆನ್ನಾಗಿ ಮಸಾಜ್ ಮಾಡಿ. ಇನ್ನು ಈ ಎಣ್ಣೆ ಹಚ್ಚಿದ ತಕ್ಷಣ ಕೂದಲು ತೊಳೆಯುವುದು ಇಲ್ಲವೆ ತಲೆ ಸ್ನಾನ ಮಾಡಬೇಡಿ. ಒಂದಿಷ್ಟು ಹೊತ್ತು ಹಾಗೆಯೇ ಬಿಡಿ. ಅದು ಬೆಳಗ್ಗೆ ಹಚ್ಚಿ ರಾತ್ರಿ ಸ್ನಾನ ಮಾಡಿ. ಇಲ್ಲವೆ ರಾತ್ರಿ ಹೊತ್ತು ಹಚ್ಚಿ ಬೆಳಗ್ಗೆ ಸ್ನಾನ ಮಾಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications