Latest Updates
-
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು
ವಿಶ್ವ ಸುಂದರಿ ಸ್ಪರ್ಧೆಗೆ ರಾಜ್ಯದ ಸಿನಿ ಶೆಟ್ಟಿ ಆಯ್ಕೆ..! ಯಾರು ಈ ಸಿನಿ ಶೆಟ್ಟಿ ಗೊತ್ತಾ?
ವಿಶ್ವ ಸುಂದರಿ ಪಟ್ಟ ಅಲಂಕರಿಸೋದು ಅಂದರೆ ಅದೇನು ಸುಲಭದ ಮಾತಲ್ಲ, ಈ ಸ್ಪರ್ಧೆಗೆ ಆಯ್ಕೆಯಾಗುವುದು ದೊಡ್ಡ ಸವಾಲು. ಅದರಲ್ಲೂ ಭಾಗಿಯಾಗಲು ಅವಕಾಶ ಸಿಗುವುದು ಬೆರಳೆಣಿಯ ಮಂದಿಗಷ್ಟೇ. ಇದೀಗ 71ನೇ ವಿಶ್ವ ಸುಂದರಿ ಸ್ಪರ್ಧೆಗೆ ದಿನಗಣನೆ ಆರಂಭವಾಗಿದೆ. ಅದರಲ್ಲೂ ಈ ಬಾರಿ ಭಾರತದಲ್ಲೇ ಈ ಸ್ಪರ್ಧೆ ನಡೆಯುತ್ತಿರುವುದು ಮತ್ತಷ್ಟು ವಿಶೇಷವಾಗಿದೆ.
ಹೌದು ಇದೇ ಫೆಬ್ರವರಿ 18 ರಿಂದ ಮಾರ್ಚ್ 9ರ ವರೆಗೆ ಭಾರತದಲ್ಲಿ ವಿಶ್ವದ ಸುಂದರಿ ಸ್ಪರ್ಧೆ ನಡೆಯುತ್ತಿದೆ. ಅದರ ಇತ್ತೀಚಿನ ಆವೃತ್ತಿಯೊಂದಿಗೆ, ಅಸ್ಕರ್ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯು ಸುಮಾರು ಮೂರು ದಶಕಗಳ ನಂತರ ದೇಶಕ್ಕೆ ಮರಳುತ್ತಿದೆ. ಫೆಬ್ರವರಿ 20 ರಂದು ನವದೆಹಲಿಯಲ್ಲಿ ಭಾರತ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ (ITDC) "ದಿ ಓಪನಿಂಗ್ ಸೆರಮನಿ" ಮತ್ತು "ಇಂಡಿಯಾ ವೆಲ್ಕಮ್ಸ್ ದಿ ವರ್ಲ್ಡ್ ಗಾಲಾ" ನೊಂದಿಗೆ ಪ್ರದರ್ಶನವು ಪ್ರಾರಂಭವಾಗುತ್ತದೆ ಎಂದು ಸಂಘಟಕರು ಮಾಹಿತಿ ಹಂಚಿಕೊಂಡಿದ್ದಾರೆ.

ಇದು ಮಾರ್ಚ್ 9 ರಂದು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಗ್ರ್ಯಾಂಡ್ ಫಿನಾಲೆಯೊಂದಿಗೆ ಮುಕ್ತಾಯಗೊಳ್ಳಲಿದೆ ಮತ್ತು ಪ್ರಪಂಚದಾದ್ಯಂತ ಈ ಸ್ಪರ್ಧೆಯನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳಲಿದ್ದಾರೆ. ಈ ಸ್ಪರ್ಧೆಯು ನವದೆಹಲಿಯ ಭಾರತ್ ಮಂಟಪ ಸೇರಿದಂತೆ ವಿವಿಧ ಸ್ಥಳಗಳಲ್ಲಿ ನಡೆಯಲಿದೆ ಮತ್ತು ಪ್ರಪಂಚದಾದ್ಯಂತದ ದೇಶಗಳ 120 ಸ್ಪರ್ಧಿಗಳು ಇದರಲ್ಲಿ ಭಾಗಿಯಾಗುತ್ತಿದ್ದಾರೆ.
ಭಾರತವು ಕೊನೆಯದಾಗಿ 1996 ರಲ್ಲಿ ಅಂತರಾಷ್ಟ್ರೀಯ ಸ್ಪರ್ಧೆಯನ್ನು ಆಯೋಜಿಸಿತ್ತು. 2017 ರಲ್ಲಿ ಕಿರೀಟವನ್ನು ಮುಡಿಗೇರಿಸಿಕೊಂಡ ಮಾನುಷಿ ಚಿಲ್ಲರ್ ಇತ್ತೀಚೆಗೆ ಸ್ಪರ್ಧೆಯನ್ನು ಗೆದ್ದ ಭಾರತೀಯರಾಗಿದ್ದರು. ಇದಕ್ಕೂ ಮೊದಲು, ರೀಟಾ ಫರಿಯಾ ಪೊವೆಲ್, ಐಶ್ವರ್ಯಾ ರೈ, ಡಯಾನಾ ಹೇಡನ್, ಯುಕ್ತಾ ಮುಖೆ ಮತ್ತು ಪ್ರಿಯಾಂಕಾ ಚೋಪ್ರಾ ಜೋನಾಸ್ ವಿಶ್ವ ಸುಂದರಿ ಕಿರೀಟ ಗೆದ್ದಿದ್ದರು.
ಈ ಬಾರಿ ಭಾರತವನ್ನು ಪ್ರತಿನಿಧಿಸುತ್ತಿರುವುದು ರಾಜ್ಯದ ಯುವತಿ
ಈ ಬಾರಿ ಭಾರತದಲ್ಲೇ ವಿಶ್ವ ಸುಂದರಿ ಸ್ಪರ್ಧೆ ನಡೆಯುತ್ತಿದೆ. ಇದೇ ವೇಳೆ ಭಾರತದ ಪರವಾಗಿ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2022, ಕರ್ನಾಟಕದ ಸಿನಿ ಶೆಟ್ಟಿ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಯಾರು ಈ ಸಿನಿ ಶೆಟ್ಟಿ..?
21 ವರ್ಷದ ಸಿನಿ ಶೆಟ್ಟಿ ಅವರು ಮೂಲತಃ ಕರ್ನಾಟಕದವರಾಗಿದ್ದರೂ ಪ್ರಸ್ತುತ ಮುಂಬೈನಲ್ಲಿ ನೆಲೆಸಿದ್ದಾರೆ. ಪ್ಯಾಂಟಲೂನ್ಸ್, ಶುಗರ್ ಮತ್ತು ಗ್ಲೋಬಲ್ ದೇಸಿಯಂತಹ ಬ್ರಾಂಡ್‌ಗಳಿಗೆ ಮಾಡೆಲಿಂಗ್ ಮೂಲಕ ಅವರು ತಮ್ಮ ಪ್ರಯಾಣ ಆರಂಭಿಸಿದವರು.
ಸಿನಿ ಶೆಟ್ಟಿ ಈಗಾಗಲೇ ಹಲವು ಸ್ಪರ್ಧೆಯಲ್ಲಿ ಭಾಗಿಯಾಗಿ ತಮ್ಮ ಹೆಸರು ಅಚ್ಚೊತ್ತಿದ್ದಾರೆ. ಮಿನಾ ಮಿಸ್ ಇಂಡಿಯಾ 2022ರ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಟೈಮ್ಸ್ ಮಿಸ್ ಬಾಡಿ ಬ್ಯೂಟಿಫುಲ್, ಮಿಸ್ ಟ್ಯಾಲೆಂಟ್‌ನಂತಹ ಸ್ಪರ್ಧೆಗಳಲ್ಲೂ ಗೆದ್ದು ಬೀಗಿದ್ದಾರೆ. ಶೆಟ್ಟಿ ಅವರು ಹಣಕಾಸು ಮತ್ತು ಲೆಕ್ಕಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿದ್ದಾರೆ ಮತ್ತು ಪ್ರಸ್ತುತ ಚಾರ್ಟರ್ಡ್ ಫೈನಾನ್ಷಿಯಲ್ ಅನಾಲಿಸ್ಟ್ (CFA) ಆಗುವ ಗುರಿಯನ್ನು ಆಕೆ ಹೊಂದಿದ್ದಾರೆ.
ನಾಲ್ಕನೇ ವಯಸ್ಸಿನಿಂದಲೂ ನೃತ್ಯದ ಬಗ್ಗೆ ಒಲವು ಹೊಂದಿದ್ದ ಅವರು ತಮ್ಮ ಗುರುಗಳಾದ ರಾಧಾಕೃಷ್ಣನ್ ಪದ್ಮಿನಿಯ ಮಾರ್ಗದರ್ಶನದಲ್ಲಿ ಭರತನಾಟ್ಯವನ್ನು ಯಶಸ್ವಿಯಾಗಿ ಅಧ್ಯಯನ ಮಾಡಿದ್ದಾರೆ. ಶಾಸ್ತ್ರೀಯ ನೃತ್ಯದ ಜೊತೆಗೆ ಪಾಶ್ಚಿಪಾತ್ಯ ಡ್ಯಾನ್ಸ್‌ನಲ್ಲೂ ಅವರು ಕೈಚಳಕ ತೋರಿದ್ದಾರೆ.
ಸಿನಿ ಶೆಟ್ಟಿಗೆ ಇವರೇ ಸ್ಫೂರ್ತಿಯಂತೆ
ಸಿನಿ ಶೆಟ್ಟಿ ಪ್ರಿಯಾಂಕಾ ಚೋಪ್ರಾ ಅವರನ್ನು ತನ್ನ ದೊಡ್ಡ ಸ್ಫೂರ್ತಿ ಎಂದು ಪರಿಗಣಿಸಿದ್ದಾರೆ. ಚೋಪ್ರಾ ಸಹ ಏಳುಬೀಳ ಕಂಡರೂ ಈಗ ಅತ್ಯಂತ ಜನಪ್ರಿಯ ನಟಿಯಾಗಿದ್ದಾರೆ. ಹೀಗಾಗಿ ಚೋಪ್ರಾ ಅವರ ನಟನೆಯನ್ನು ಹಾಗೂ ಅವರ ವಿಶ್ವಸುಂದರಿ ಪಟ್ಟಕ್ಕೇರಿದ ಪ್ರವಾಸ ನೋಡಿಕೊಂಡಿ ಬೆಳೆದಿದ್ದಾರಂತೆ.
ವಿಶ್ವ ಸುಂದರಿ ಪಟ್ಟಿಯಲ್ಲಿ 6 ಬಾರಿ ಗೆದ್ದ ಭಾರತ
ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತ 6 ಬಾರಿ ಕಿರೀಟ ಗೆದ್ದು ಕೊಂಡಿದೆ.
ರೀಟಾ ಫರಿಯಾ (1966)
ಐಶ್ವರ್ಯ ರೈ (1994)
ಡಯಾನಾ ಹೇಡನ್ (1997)
ಯುಕ್ತಾ ಮುಖಿ (1999)
ಪ್ರಿಯಾಂಕಾ ಚೋಪ್ರಾ (2000)
ಮಾನುಷಿ ಚಿಲ್ಲರ್ (2017)



Click it and Unblock the Notifications
