Latest Updates
-
ನೈಕಾಲ್ಯಾಂಡ್ ಡೇ 2: ಉಚಿತ ಸ್ಯಾಂಪಲ್ಸ್ ಮತ್ತು ಲೈವ್ ಮ್ಯೂಸಿಕ್ ಮಜಾ, ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಕೇರಳದಲ್ಲಿ ಆರೆಂಜ್ ಅಲರ್ಟ್: ಮಳೆಯ ನಡುವೆ ಮನೆಯಲ್ಲೇ ಫಿಟ್ ಆಗಿರಲು ಈ 10 ನಿಮಿಷದ ವ್ಯಾಯಾಮ ಮಾಡಿ -
ಬಿಗ್ ಬಾಸ್ ನೋಡುವಾಗ ಮನೆಯಲ್ಲಿ ಜಗಳ ಬೇಡವೇ? ಶಾಂತಿ ಕಾಪಾಡಲು ಇಲ್ಲಿದೆ ಸೂಪರ್ ಪ್ಲಾನ್! -
ಶರದ್ ಪೂರ್ಣಿಮೆ: ಡಯಾಬಿಟಿಸ್ ಇದ್ದರೂ ಪಾಯಸ ಸವಿಯುವುದು ಹೇಗೆ? ಆರೋಗ್ಯಕರ ಟಿಪ್ಸ್ ಇಲ್ಲಿದೆ -
ಕೇರಳದಲ್ಲಿ ಭಾರಿ ಮಳೆ: ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಪ್ರಯಾಣಿಕರು ಮತ್ತು ನಿವಾಸಿಗಳಿಗೆ ತುರ್ತು ಎಚ್ಚರಿಕೆ! -
ತಮಿಳುನಾಡು ಮಳೆ: ಮನೆಯಲ್ಲೇ ಫಿಟ್ ಆಗಿರಲು 12 ನಿಮಿಷಗಳ ಸುಲಭ ವರ್ಕೌಟ್ ರೂಟೀನ್! -
IND vs NZ ಪಂದ್ಯದ ವೇಳೆ ಜಗಳ ಬೇಡ: ದಂಪತಿಗಳಿಗಾಗಿ ಇಲ್ಲಿದೆ 12 ನಿಮಿಷಗಳ ಮ್ಯಾಜಿಕ್ ಒಪ್ಪಂದ! -
ದೆಹಲಿ ಮಾಲಿನ್ಯದ ಭೀತಿ: ₹1,500 ಕ್ಕಿಂತ ಕಡಿಮೆ ವೆಚ್ಚದಲ್ಲಿ ಮನೆಯಲ್ಲೇ ಮಾಡಿ 'DIY' ಏರ್ ಪ್ಯೂರಿಫೈಯರ್! -
ಕೇವಲ 40 ರೂಪಾಯಿಯಲ್ಲಿ ಪೌಷ್ಟಿಕ ಊಟ: ಪ್ರೋಟೀನ್ ಮತ್ತು ಐರನ್ ಹೆಚ್ಚಿಸುವ ಬೆಸ್ಟ್ ಡಯಟ್ ಪ್ಲಾನ್ ಇಲ್ಲಿದೆ! -
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ರೀಲೋಡೆಡ್: ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ಸಿಗುತ್ತೆ ಭರ್ಜರಿ ಡಿಸ್ಕೌಂಟ್!
'ಮಿಸ್ ಜಪಾನ್' ಕಿರೀಟ ವಾಪಾಸು ನೀಡಿದ ಯುವತಿ..! ವಿವಾದ ಹುಟ್ಟುಹಾಕಿದ ಜಪಾನ್ ಸುಂದರಿ..!
ಸೌಂದರ್ಯ ಸ್ಪರ್ಧೆಯಲ್ಲಿ ಭಾಗಿಯಾಗೋದು ನೂರಾರು ಯುವತಿಯರ ಆಸೆಯಾಗಿರುತ್ತೆ. ಇದಕ್ಕಾಗಿ ಅವರು ಹಲವು ರೀತಿಯ ಸಿದ್ಧತೆಯನ್ನೂ ನಡೆಸಿರುತ್ತಾರೆ. ಇನ್ನೇನಾದ್ರು ಸೌಂದರ್ಯ ಸ್ಪರ್ಧೆಗೆ ಅವಕಾಶ ಸಿಕ್ಕರಂತು ಅವರ ಸಂತೋಷಕ್ಕೆ ಪಾರವೇ ಇಲ್ಲದಂತಾಗುತ್ತದೆ. ಆದರೆ ಸೌಂದರ್ಯ ಸ್ಪರ್ಧೆಯಲ್ಲಿ ಗೆಲ್ಲಬೇಕು ಎಂದಾದರೆ ಅದಷ್ಟು ಸುಲಭವಲ್ಲ. ಅದಕ್ಕೆ ಕಠಿಣ ಪರಿಶ್ರಮದ ಅಗತ್ಯವೂ ಇರುತ್ತವೆ.
ಆದರೆ ಇಲ್ಲೊಬ್ಬಾಕ್ಕೆ ಮಿಸ್ ಜಪಾನ್ ಸೌಂದರ್ಯ ಸ್ಪರ್ಧೆಯಲ್ಲಿ ಗೆಲುವು ಪಡೆದಿದ್ದರೂ ಆಕೆ ತೆಗೆದುಕೊಂಡ ನಿರ್ಧಾರವೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಆಕೆ ಮಿಸ್ ಜಪಾನ್ ಕಿರೀಟವನ್ನು ವಾಪಾಸು ನೀಡಿ ಈಗ ಸುದ್ದಿಯಾಗಿದ್ದಾಳೆ. ಹಾಗಾದರೆ ಆಕೆ ಪ್ರಶಸ್ತಿ ವಾಪಾಸು ನೀಡಿದ್ದು ಏಕೆ? ಇದರ ಇಂದಿನ ಕಥೆ ಏನು ಎಂಬುದನ್ನು ಇಲ್ಲಿ ನೋಡಿ.

ಕರೋಲಿನಾ ಶಿನೋ ಎಂಬಾಕೆ ಮಿಸ್ ಜಪಾನ್ ಪಟ್ಟಕ್ಕೇರಿ ಈಗ ತನ್ನ ಕಿರೀಟವನ್ನೇ ವಾಪಾಸು ನೀಡಿದ್ದಾಳೆ. ಮೂಲತಃ ಉಕ್ರೇನ್ನಲ್ಲಿ ಜನಿಸಿದ ಆಕೆ ಜಪಾನಿನ ಪೌರತ್ವವನ್ನು ಹೊಂದಿರುವ 26 ವರ್ಷದ ರೂಪದರ್ಶಿಯಾಗಿದ್ದಾಳೆ. ಮಿಸ್ ಜಪಾನ್ 2024 ಗೆದ್ದ ನಂತರ ವಿವಾದ ಆಕೆಯನ್ನು ಸುತ್ತಿಕೊಂಡಿದೆ.
ಕೆಲವರು ಅವರ ಗೆಲುವನ್ನು ಸ್ವಾಗತಿಸಿದರೆ, ಇತರರು ಅವರು ಸಾಂಪ್ರದಾಯಿಕ ಜಪಾನೀಸ್ ಸೌಂದರ್ಯ ಮಾನದಂಡಗಳನ್ನು ಪ್ರತಿನಿಧಿಸುವುದಿಲ್ಲ ಎಂದು ಭಾವಿಸಿದ್ದಾರೆ. ಇದರ ಮಧ್ಯೆ, ಸ್ಥಳೀಯ ನಿಯತಕಾಲಿಕೆಯಲ್ಲಿ ಆಕೆ ವಿವಾಹಿತನ ಜೊತೆ ಸಂಬಂಧ ಹೊಂದಿದ್ದಾಳೆ ಎಂಬ ಗಂಭೀರ ಆರೋಪದ ಲೇಖನ ಪ್ರಕಟಿಸಿತ್ತು, ಇದು ಜಪಾನ್ನಲ್ಲಿ ಭಾರೀ ಚರ್ಚೆ ಹುಟ್ಟುಹಾಕಿತ್ತು.
ಜಪಾನ್ ಟೈಮ್ಸ್ ಪ್ರಕಾರ, ಟಕುಮಾ ಮೇಡಾ ಎಂಬ ವೈದ್ಯನೊಂದಿಗೆ ಆಕೆ ಸಂಬಂಧ ಹೊಂದಿದ್ದು, ಇದು ಆಯೋಜನಕರಿಗೂ ತಿಳಿದಿತ್ತು ಎಂದು ಲೇಖನ ಪ್ರಕಟಿಸಿದೆ. ಮೊದಲಿಗೆ, ಸ್ಪರ್ಧೆಯ ಆಯೋಜಕರು ಶಿನೋವನ್ನು ಸಮರ್ಥಿಸಿಕೊಂಡರು, ಬಳಿಕ ಆಕೆಯ ಮದುವೆಯ ಬಗ್ಗೆ ತಿಳಿದಿರಲಿಲ್ಲ ಎಂದು ತಿಳಿಸಿದರು.
ಈ ಎಲ್ಲಾ ವಿವಾದ, ಆರೋಪಗಳು ಹುಟ್ಟಿಕೊಂಡ ಬಳಿಕ ಶಿನೋ ತನಗೆ ಒಲಿದಿದ್ದ ಮಿಸ್ ಜಪಾನ್ ಕಿರೀಟ ವಾಪಾಸು ನೀಡಲು ಮುಂದಾದಳು, ಈ ಕುರಿತು ಇನ್ಸ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ವೊಂದನ್ನು ಹಂಚಿಕೊಂಡಿರುವ ಆಕೆ, ಶ್ರೀ. ಮೇಡಾ ಅವರ ಪತ್ನಿ, ಕುಟುಂಬ ಮತ್ತು ಒಳಗೊಂಡಿರುವ ಎಲ್ಲರಿಗೂ ಉಂಟಾದ ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ. ನಾನು ಇತರ ದಿನ ನನ್ನ ಏಜೆನ್ಸಿಗೆ ವಿವರಿಸಿದ್ದರಲ್ಲಿ ಕೆಲವು ವ್ಯತ್ಯಾಸಗಳಿವೆ. ಗೊಂದಲ ಮತ್ತು ಭಯ ಸತ್ಯವನ್ನು ಮಾತನಾಡಲು ಸಾಧ್ಯವಾಗದಂತೆ ಮಾಡಿದೆ.
ನನ್ನನ್ನು ನಂಬಿದ ಮತ್ತು ನನ್ನನ್ನು ಬೆಂಬಲಿಸಿದ ಎಲ್ಲರಿಗೂ ವಿಷಯವನ್ನು ತಿಳಿಸಿದ್ದಕ್ಕಾಗಿ ನಾನು ನಿಜವಾಗಿಯೂ ವಿಷಾದಿಸುತ್ತೇನೆ. ನಾನು ಈ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸುತ್ತೇನೆ ಮತ್ತು ಮಿಸ್ ಜಪಾನ್ ಗ್ರ್ಯಾಂಡ್ ಪ್ರಿಕ್ಸ್ ಅನ್ನು ನಿರಾಕರಿಸಿದ್ದೇನೆ. ನನ್ನ ಅಂಗಸಂಸ್ಥೆಯಿಂದ ತೆಗೆದುಹಾಕಲು ನಾನು ನನ್ನ ಏಜೆನ್ಸಿಯನ್ನು ಕೇಳಿದೆ ಮತ್ತು ಅದನ್ನು ಸ್ವೀಕರಿಸಲಾಗಿದೆ. ಇದರಿಂದ ಉಂಟಾದ ಅನಾನುಕೂಲತೆಗಾಗಿ ಮತ್ತು ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ದ್ರೋಹ ಮಾಡಿದ್ದಕ್ಕಾಗಿ ನಾವು ನಿಜವಾಗಿಯೂ ವಿಷಾದಿಸುತ್ತೇವೆ ಎಂದಿದ್ದಾಳೆ.
ಶಿನೋ ಉಕ್ರೇನ್ನಲ್ಲಿ ಜನಿಸಿದಳು, ನಂತರ ಐದನೇ ವಯಸ್ಸಿನಲ್ಲಿ, ಅವಳು ತನ್ನ ತಾಯಿಯೊಂದಿಗೆ ಜಪಾನ್ಗೆ ತೆರಳಿದಳು ಮತ್ತು ತನ್ನ ಮಲತಂದೆಯ ಉಪನಾಮವನ್ನು ಆಕೆ ಇಟ್ಟುಕೊಂಡಿದ್ದಳು. ಜನವರಿ 22 ರಂದು, ಸ್ಪರ್ಧೆಯು ಪ್ರಶಸ್ತಿಯನ್ನು ಪಡೆದ ಯುರೋಪಿಯನ್ ಪರಂಪರೆಯ ಮೊದಲ ವ್ಯಕ್ತಿಯಾಗಿ ಶಿನೋ ಕಿರೀಟ ಪಡೆದಿದ್ದರು. ಅವರು 2022 ರಲ್ಲಿ ಸ್ವಾಭಾವಿಕ ನಾಗರಿಕರಾದರು ಮತ್ತು ಜಪಾನಿನ ನಿರರ್ಗಳ ಬರಹಗಾರ ಮತ್ತು ಸ್ಪೀಕರ್ ಆಗಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.



Click it and Unblock the Notifications
