Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಫೌಂಡೇಶನ್ ಬದಲು ಮೆಹಂದಿ ಬಳಸಿದ ಯುವತಿ..! ಇದು ಎಷ್ಟು ಸುರಕ್ಷಿತ.?
ಮೇಕಪ್ ಮಾಡಿಕೊಳ್ಳೋದು, ಸುಂದರವಾಗಿ ಕಾಣೋದು ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ, ಅದ್ರಲ್ಲೂ ಮಹಿಳೆಯರಂತು ಮೇಕಪ್ ಬಳಕೆ ಮಾಡದೆ ಯಾವ ಕೆಲಸವೂ ಆರಂಭಿಸಲ್ಲ. ಅವರ ನಿತ್ಯದ ಕಾರ್ಯ ಆರಂಭವಾಗೋದೆ ಮೇಕಪ್‌ನಿಂದ. ಸುಂದರವಾಗಿ ಕಾಣಬೇಕು ಅನ್ನೋದು ಅವರ ಅಂತಿಮ ಗುರಿಯಾಗಿರುತ್ತೆ.
ಹೀಗಾಗಿ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ರೀತಿ ಮೇಕಪ್ ಕಿಟ್‌ಗಳು ಅವರ ಬಳಿ ಇರುತ್ತೆ. ಮುಖಕ್ಕೆ ಅವರು ಸಾವಿರಾರು ರೂಪಾಯಿಯ ಮೇಕಪ್ ಕಿಟ್‌ಗಳನ್ನು ಬಳಸುತ್ತಾರೆ. ಈಗಂತು ಲಕ್ಷ ರೂಪಾಯಿವರಗಿನ ಬ್ರಾಂಡೆಡ್ ಕಿಟ್‌ಗಳು ಸಹ ಮಾರುಕಟ್ಟೆಯಲ್ಲಿವೆ. ಅದರಲ್ಲೂ ಯುವತಿಯರು ಮುಖಕ್ಕೆ ಹಚ್ಚುವ ಫೌಂಡೇಶನ್ ಆಯ್ಕೆಯಲ್ಲಿ ಬಹಳ ಎಚ್ಚರಿಕೆ ವಹಿಸುತ್ತಾರೆ.

ತಾವು ಮಾಡುವ ಮೇಕಪ್ ಚೆನ್ನಾಗಿ ಕಾಣಬೇಕೆಂದರೆ ಈ ಫೌಂಡೇಶನ್ ಬಹಳ ಮುಖ್ಯ. ಇದಕ್ಕಾಗಿ ಹಲವು ರೀತಿಯ ಕ್ರೀಮ್‌ಗಳನ್ನು ಖರೀದಿಸುತ್ತಾರೆ. ಆದರೆ ಇಲ್ಲೊಬ್ಬ ಯುವತಿ ಬಳಸುತ್ತಿರುವ ಫೌಂಡೇಶನ್ ಕಂಡು ಜನ ನಿಬ್ಬೆರಗಾಗಿರುವು ಜೊತೆಗೆ ಆತಂಕ ಹೊರಹಾಕಿದ್ದಾರೆ. ಆಕೆ ಫೌಂಡೇಶನ್ ಜಾಗದಲ್ಲಿ ಮೆಹಂದಿ ಬಳಸುತ್ತಿರುವುದು ಕಂಡುಬಂದಿದ್ದು, ಆಕೆಯ ವಿಡಿಯೋ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ಮೇಕಪ್ ಆರ್ಟಿಸ್ಟ್ ಅಥವಾ ಬ್ಯೂಟಿ ಬ್ಲಾಗರ್‌ಗಳ ಸಂಖ್ಯೆ ಹೆಚ್ಚಾಗಿಯೇ ಇದೆ. ಆಕೆ ಸಹ ಬ್ಯೂಟಿ ಬ್ಲಾಗರ್ ಆಗಿದ್ದು, ತನ್ನ ಮೇಕಪ್ ಟುಟೋರಿಯಲ್‌ನಲ್ಲಿ ಆಕೆ ಫೌಂಡೇಶನ್ ಬದಲಿಗೆ ಮೆಹಂದಿ ಹಚ್ಚಿಕೊಂಡು ಎಚ್ಚರ ಅಚ್ಚರಿಗೆ ಕಾರಣರಾಗಿದ್ದಾಳೆ.
ಈ ವೀಡಿಯೊವನ್ನು Instagram ನಲ್ಲಿ @the_sastamakeup ಅವರು ಹಂಚಿಕೊಂಡಿದ್ದಾರೆ ಮತ್ತು 45,000 ಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ಆದ್ರೆ ಇದು ಮುಖಕ್ಕೆ ಒಳ್ಳೆಯದಲ್ಲ ಎಂಬ ಸಲಹೆಯೂ ಅವರಿಗೆ ಸಿಕ್ಕಿದೆ. ಮೆಹಂದಿಯಲ್ಲಿ ಮುಖಕ್ಕೆ ಹಚ್ಚಲು ಯೋಗ್ಯ ರಾಸಾಯನಿಕ ಇರುವುದಿಲ್ಲ. ಇದರಲ್ಲಿರುವ ರಾಸಾಯನಿಕವು ಮುಖಕ್ಕೆ ಹಾನಿ ಮಾಡುವುದು ಖಚಿತ ಎಂಬ ಭಾವನೆ ನೆಟ್ಟಿಗರದ್ದು.
ಏಕೆಂದರೆ ಮೆಹಂದಿ ಹೆಚ್ಚು ಕೆಂಪಾಗಿರಲಿ ಎಂದು ಮತ್ತು ಬಹುಬೇಗನೆ ಗಾಢ ಕೆಂಪುಬಣ್ಣಕ್ಕೆ ತಿರುಗಲಿ ಎಂದು ಅಸುರಕ್ಷಿತ ಬಣ್ಣವಿರುವ ರಾಸಾಯನಿಕಗಳ ಬಳಸುತ್ತಾರೆ. ಇದು ಕೈ-ಕಾಲುಗಳಿಗೆ ಮಾತ್ರ ಬಳಕೆ ಯೋಗ್ಯವಾಗಿರುತ್ತದೆ. ಆದ್ರೆ ಎಂದಿಗೂ ಮುಖಕ್ಕೆ ಬಳಸಬಾರದು. ಒಂದು ವೇಳೆ ಅದು ಕಣ್ಣುಗಳಿಗೆ ತಾಕಿದರೆ ಅದರಿಂದ ಹಲವಾರು ಸಮಸ್ಯೆ ಎದುರಿಸಬೇಕಾಗಬಹುದು.
ಕೆಲವರಿಗೆ ಕೈ ಮೇಲೆ ಇನ್ಸ್‌ಸ್ಟಂಟ್ ಮೆಹಂದಿ ಹಚ್ಚಿದರೂ ಅಲರ್ಜಿ ಆಗುವುದನ್ನು ನೋಡಬಹುದು. ಇನ್ನು ಮುಖಕ್ಕೆ ಹಚ್ಚಿದರೆ ಏನಾಗಬಹುದು. ಹಣ ಉಳಿಸಲು ಹೋಗಿ ವೈದ್ಯರಿಗೆ ಒಂದಿಷ್ಟು ಹಣ ನೀಡುವ ಜೊತೆಗೆ ಮುಖದ ಮೇಲೆ ಶಾಶ್ವತ ಕಲೆಗಳಾಗುವ ಸಂಭವವಿರುವುದರಿಂದ ಈ ರೀತಿಯ ಶಾರ್ಟ್ ಕಟ್ ಬಳಸಬಾರದು ಎಂದು ಕೆಲವರು ಸಲಹೆ ನೀಡಿದ್ದಾರೆ.
ಕೆಲವು ವೇಳೆ ಮೆಹಂದಿಯಲ್ಲಿ ಪಿಕ್ರಾಮಿಕ್ ಆಸಿಡ್, ಸಿಂಥೆಟಿಕ್ ಡೈ, ಕಾರ್ಸಿನೋಜೆನಿಕ್ ರಾಸಾಯನಿಕ ಬಳಸಲಾಗುತ್ತದೆ. ಈ ರಾಸಾಯನಿಕಗಳು ಭಾರತದಲ್ಲಿ ಬಳಕೆಯಲ್ಲಿಯೇ ಇಲ್ಲ. ಇವು ಅತ್ಯಂತ ಬೇಗ ಕೆಂಪು ಬರುವುದು ಹಾಗೂ ದೀರ್ಘಕಾಲ ಉಳಿಯುವಂತೆ ಮಾಡಲು ಬಳಸಲಾಗುತ್ತವೆ. ಇದು ಚರ್ಮದ ಕ್ಯಾನ್ಸರ್‌ನಿಂದ ಹಿಡಿದು ಅಲರ್ಜಿ, ತುರಿಕೆ, ಉರಿಗೂ ಕಾರಣವಾಗಬಹುದು.
ಮಾರುಕಟ್ಟೆಯಲ್ಲಿ ಇಂದಿಗೂ ಮಾರಾಟವಾಗುವ ಹಲವು ಮೆಹಂದಿಗಳಲ್ಲಿ ಪ್ಯಾರಾಫೆನಿಲಿನ್ ಡೈಯಾಮೈನ್ (PPD) ರಾಸಾಯನಿಕಗಳಿರುತ್ತವೆ. ಇದು ಚರ್ಮದ ಸಮಸ್ಯೆಗಳಿಗೆ ಪ್ರಾಥಮಿಕ ಕಾರಣವಾಗಿದೆ. ಮೆಹಂದಿ ಗಾಢ ಬಣ್ಣವನ್ನು ಬಿಡುವುದನ್ನು ಖಚಿತಪಡಿಸಿಕೊಳ್ಳಲು, ಅದನ್ನು ಸೋಡಿಯಂ ಪಿಕ್ರೇಮೇಟ್‌ನೊಂದಿಗೆ ಬೆರೆಸಲಾಗುತ್ತದೆ. ಈ ರಾಸಾಯನಿಕ-ಆಧಾರಿತ ಗೋರಂಟಿಗಳು ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ, ಅವು ಕ್ಯಾನ್ಸರ್‌ಗೆ ಕಾರಣವಾಗಬಹುದು. ಜೊತೆಗೆ ಇವು ಚರ್ಮದ ಕಾಯಿಲೆಯಾದ ಪಾಪುಲ್ಸ್ ಮತ್ತು ಮ್ಯಾಕ್ಯೂಲ್ಸ್ ನಂತಹ ಗಂಭೀರ ಸಮಸ್ಯೆಗೆ ಕಾರಣವಾಗಬಹುದು.



Click it and Unblock the Notifications