For Quick Alerts
ALLOW NOTIFICATIONS  
For Daily Alerts

ನೆರಿಗೆ ಬೀಳದಂತೆ ತ್ವಚೆ ರಕ್ಷಣೆ ಮಾಡುವ 9 ಜ್ಯೂಸ್

|

ಕೆಲವರಿಗೆ ವಯಸ್ಸು 35 ಆಗಿರುತ್ತದೆ ಅಷ್ಟೇ, ಆದರೆ ನೋಡಲು 40ವರ್ಷ ದಾಟಿದವರಂತೆ ಕಾಣುತ್ತಾರೆ. ಮಾನಸಿಕ ಒತ್ತಡ, ಕಾಯಿಲೆ, ಜೀವನ ಶೈಲಿ ಇವೆಲ್ಲಾ ಮನುಷ್ಯನ ಸೌಂದರ್ಯದ ಮೇಲೂ ಪ್ರಭಾವ ಬೀರುತ್ತವೆ. ತ್ವಚೆ ಸೌಂದರ್ಯವನ್ನು ರಕ್ಷಣೆ ಮಾಡಲು ನಾವು ಕ್ರೀಮ್ ಗಳ ಮೊರೆ ಹೋಗುತ್ತೇವೆ. ಆದರೆ ಕ್ರೀಮ್ ಗಳಿಗಿಂತ ಪರಿಣಾಮಕಾರಿಯಾದ ಹಣ್ಣು , ತರಕಾರಿಗಳಿವೆ . ಅವುಗಳು ನಮ್ಮ ಆಹಾರ ಕ್ರಮದಲ್ಲಿದ್ದರೆ ತ್ವಚೆ ರಕ್ಷಣೆಯನ್ನು ಮಾಡುತ್ತದೆ.

ತ್ವಚೆಗೆ ಪ್ರಮುಖವಾಗಿ ಕೊಲೆಜಿನ್, antioxidants ಅವಶ್ಯಕ. ಕೊಲೆಜಿನ್ ನಮ್ಮ ದೇಹದಲ್ಲಿ ಉತ್ಪತ್ತಿಯಾಗುತ್ತದೆ, ಇದರ ಉತ್ಪತ್ತಿ ಕಡಿಮೆಯಾಗುತ್ತಾ ಹೋದಂತೆ ಮೊದಲಿಗೆ ಕಣ್ಣಿನ ಸಂಈಪ, ಹಣೆಯಲ್ಲಿ ನೆರಿಗೆಗಳು ಬೀಳಲಾರಂಭಿಸುತ್ತದೆ.

ಇಲ್ಲಿ ನಾವು 9 ಬಗ್ಗೆಯ ಪಾನೀಯಾಗಳ ಬಗ್ಗೆ ಹೇಳಿದ್ದೇವೆ, ಈ ಪಾನೀಯಾಗಳು ನೆರಿಗೆ ಬೀಳದಂತೆ ತಡೆದು , ನಿಮ್ಮ ಸೌಂದರ್ಯವನ್ನು ರಕ್ಷಣೆ ಮಾಡುತ್ತವೆ. ಚಿರ ಯೌವನದಿಂದ ಇರ ಬಯಸುವವರು ಈ ಜ್ಯೂಸ್ ಗಳನ್ನು ಆಹಾರಕ್ರಮದಲ್ಲಿ ಸೇರಿಸುವುದು ಒಳ್ಳೆಯದು.

ಹಾಲು

ಹಾಲು

ಮಲಗುವ ಮುನ್ನ ಒಂದು ಲೋಟ ಹಾಲು ಕುಡಿದು ಮಲಗುವುದು ಒಳ್ಳೆಯದು. ಇದರಲ್ಲಿರುವ ಕ್ಯಾಲ್ಸಿಯಂ ಮೂಳೆಯನ್ನು ಆರೋಗ್ಯವಾಗಿ ಇಡುತ್ತದೆ. ಸ್ನಾಯುಗಳಿಗೂ ಒಳ್ಳೆಯದು. ದೇಹ ಆರೋಗ್ಯವಾಗಿದ್ದರೆ ನೋಡಲೂ ಆರೋಗ್ಯಕರವಾಗಿ ಕಾಣುವಿರಿ. ದಿನಾ ಹಾಲು ಕುಡಿದರೆ ಚಿಕ್ಕ ಪ್ರಾಯದಲ್ಲಿ ನೆರಿಗೆ ಬೀಳುವುದಿಲ್ಲ.

ಕಾಫಿ

ಕಾಫಿ

ಹಾಲು ಹಾಕದ ಕಾಫಿಯನ್ನು ಬೆಳಗ್ಗೆ ಬ್ರೇಕ್ ಫಾಸ್ಟ್ ಜೊತೆ ಕುಡಿಯುವುದು ಒಳ್ಳೆಯದು. ಕಾಫಿಯನ್ನು ಬೆಳಗ್ಗೆ ತೆಗೆದುಕೊಂಡರೆ ಹಸಿವನ್ನು ನಿಯಂತ್ರನದಲ್ಲಿಡುತ್ತದೆ, ಹೃದಯಕ್ಕೂ ಒಳ್ಳೆಯದು. ತುಂಬಾ ಕಾಫಿ ಕುಡಿಯುವ ಅಭ್ಯಾಸ ಒಳ್ಳೆಯದಲ್ಲ.

 ಗ್ರೀನ್ ಟೀ

ಗ್ರೀನ್ ಟೀ

ಇದನ್ನು ಮಧ್ಯಾಹ್ನ ಊಟ ಆದ ಬಳಿಕ ಕುಡಿಯುವುದು ಒಳ್ಳೆಯದು, ಇದು ಸ್ತನ ಕ್ಯಾನ್ಸರ್ ಬರದಂತೆ ತಡೆಯುತ್ತದೆ. ಬ್ಲ್ಯಾಕ್ ಟೀ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.

ಹಾಟ್ ಕೋಕಾ

ಹಾಟ್ ಕೋಕಾ

ಇದರಲ್ಲಿ antioxidants ಅಧಿಕವಿದ್ದು ಸೌಂದರ್ಯವನ್ನು ವೃದ್ಧಿಸುತ್ತದೆ.

ನೀರು

ನೀರು

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರು ಕುಡಿಯುವುದು ಒಳ್ಳೆಯದು. ನೀರು ಕುಡಿದರೆ ಅದು ದೇಹದಲ್ಲಿರುವ ಬೇಡದ ಕಲ್ಮಶಗಳನ್ನು ಹೊರ ಹಾಕುತ್ತದೆ, ದೇಹದಲ್ಲಿ ನೀರಿನಂಶವನ್ನು ಕಾಪಾಡುತ್ತದೆ. ಇದರಿಂದ ತ್ವಚೆ ಆರೋಗ್ಯವಾಗಿರುತ್ತದೆ. ಆರೋಗ್ಯಕರ ತ್ವಚೆಗೆ ಬೇಗನೆ ನೆರಿಗೆ ಬೀಳುವುದಿಲ್ಲ.

ಗ್ರೇಪ್ ಜ್ಯೂಸ್

ಗ್ರೇಪ್ ಜ್ಯೂಸ್

ದ್ರಾಕ್ಷಿಯಲ್ಲಿ antioxidants ಅಧಿಕವಿದ್ದು , ದೇಹದಲ್ಲಿರುವ ಅಧಿಕ ಕೊಬ್ಬನ್ನು ಕರಗಿಸುತ್ತದೆ, ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ. ದ್ರಾಕ್ಷಿಯ ಬೀಜದ ಎಣ್ಣೆಯಿಂದ ಮುಖವನ್ನು ಮಸಾಜ್ ಮಾಡಬಹುದು.

ಟೊಮೆಟೊ ಜ್ಯೂಸ್

ಟೊಮೆಟೊ ಜ್ಯೂಸ್

ಟೊಮೆಟೊ ಜ್ಯೂಸ್ ಕೂಡ ತ್ವಚೆ ರಕ್ಷಣೆಯನ್ನು ಮಾಡುತ್ತದೆ, ಈ ಜ್ಯೂಸ್ ದೇಹದಲ್ಲಿರುವ ಬೇಡದ ರಾಸಾಯನಿಕಗಳನ್ನು ಹೊರಹಾಕಿ ತ್ವಚೆ ಆರೋಗ್ಯವನ್ನು ಹೆಚ್ಚಿಸುತ್ತದೆ, ನೆರಿಗೆ ಬೀಳದಂತೆ ತ್ವಚೆಯನ್ನು ರಕ್ಷಿಸುತ್ತದೆ.

ಕ್ಯಾರೆಟ್ ಜ್ಯೂಸ್

ಕ್ಯಾರೆಟ್ ಜ್ಯೂಸ್

ಕ್ಯಾರೆಟ್ ಜ್ಯೂಸ್ ಕೂಡ ದೇಹದ ಹಾಗೂ ತ್ವಚೆಯ ಆರೋಗ್ಯ ವೃದ್ಧಿಸುವಲ್ಲಿ ತುಂಬಾ ಸಹಕಾರಿಯಾಗಿದೆ. ಚಿರಯೌನದ ಸೌಂದರ್ಯ ಬೇಕೆಂದು ಬಯಸುವವರು ಕ್ಯಾರೆಟ್ ಅನ್ನು ತಮ್ಮ ಆಹಾರಕ್ರಮದಲ್ಲಿ ಸೇರಿಸುವುದು ಒಳ್ಳೆಯದು.

 ಕಿತ್ತಳೆ ಜ್ಯೂಸ್

ಕಿತ್ತಳೆ ಜ್ಯೂಸ್

ಕಿತ್ತಳೆ ಜ್ಯೂಸ್ ಕುಡಿದರೆ ಇದು ಚರ್ಮದಲ್ಲಿ ಕೊಲೆಜಿನ್ ಉತ್ಪತ್ತಿಯನ್ನು ಹೆಚ್ಚಿಸುತ್ತದೆ. ತ್ವಚೆಯಲ್ಲಿ ಕೊಲೆಜಿನ್ ಉತ್ಪತ್ತಿ ಕಡಿಮೆಯಾದರೆ ನೆರಿಗೆ ಬೀಳುವುದು.

 ಕೆಂಪು ವೈನ್

ಕೆಂಪು ವೈನ್

ಇದು ಸೌಂದರ್ಯವನ್ನು ರಕ್ಷಣೆ ಮಾಡುವ ಮದ್ಯವಾಗಿದೆ. ಕೆಂಪು ವೈನ್ ಅನ್ನು ರಾತ್ರಿ ಊಟದ ಬಳಿಕ ಸ್ವಲ್ಪ ತೆಗೆದುಕೊಂಡರೆ ರಕ್ತ ಶುದ್ಧೀಯಾಗುವುದು, ಇದರಿಂದ ಮುಖದ ಕಾಂತಿ ಹೆಚ್ಚುವುದು, ಅಕಾಲಿಕ ನೆರಿಗೆ ಬೀಳುವುದಿಲ್ಲ.

English summary

9 Drinks To Fight Ageing | Tips For Body Care | ಅಕಾಲಿಕ ಮುಪ್ಪಿನ ವಿರುದ್ಧ ಹೋರಾಡುವ ಜ್ಯೂಸ್ ಗಳು | ದೇಹದ ಆರೈಕೆಗೆ ಕೆಲ ಸಲಹೆಗಳು

If you want to fight ageing, you can have some liquids that will help you have a flawless skin naturally.These six drinks fight aging. See what they are and when to down them.
X
Desktop Bottom Promotion