For Quick Alerts
ALLOW NOTIFICATIONS  
For Daily Alerts

ಟಿವಿ ನೋಡಿದರೆ ಅಕಾಲಿಕ ನೆರಿಗೆ ಬೀಳುವುದೇ?

|
Surprising Facts That Causes Ageing
ವಯಸ್ಸಾದಂತೆ ಮುಖದಲ್ಲಿ ನೆರಿಗೆ ಮೂಡುವುದು ಪ್ರಕೃತಿ ಸಹಜ ನಿಯಮ. ಆದರೆ ಅದೇ ಮಾನಸಿಕ ಒತ್ತಡ, ಅನಾರೋಗ್ಯಕರ ಆಹಾರಕ್ರಮ ಇವುಗಳಿಂದಾಗಿ ಅಕಾಲಿಕ ನೆರಿಗೆ ಉಂಟಾಗಿ ನಿಜವಾದ ವಯಸ್ಸಿಗಿಂತ ಅಧಿಕ ವಯಸ್ಸಾದವರಂತೆ ಕಾಣಿಸುವುದು.

ಪ್ರತಿಯೊಬ್ಬರೂ ನಿಜವಾದ ವಯಸ್ಸಿಗಿಂತ ಚಿಕ್ಕವರಂತೆ ಕಾಣಬಯಸುತ್ತೇವೆ, ಆದರೆ ಅಕಾಲಿಕ ನೆರಿಗೆ ಮುಖದಲ್ಲಿ ಬಂದರೆ ತುಂಬಾ ಬೇಜಾರಾಗುತ್ತದೆ. ಮಾನಸಿಕ ಒತ್ತಡ, ಕೆಲಸ, ಆಹಾರಕ್ರಮ ಇವುಗಳಲ್ಲದೆ ಮತ್ತೆ ಕೆಲವು ಆಶ್ಚರ್ಯಕರ ಸಂಗತಿಗಳು ಮುಖದಲ್ಲಿ ನೆರಿಗೆ ಮೂಡಲು ಕಾರಣವಾಗಿವೆ. ಆ ಆಶ್ಚರ್ಯಕರ ಸಂಗತಿಗಳು ಯಾವುವು ಎಂದು ತಿಳಿಯಲು ಮುಂದೆ ಓದಿ.

ದೂರದರ್ಶನ: ವಿಪರೀತ ಟಿವಿ ನೋಡಿದರೆ ಕಣ್ಣಿಗೆ ಮಾತ್ರವಲ್ಲ ತ್ವಚೆಗೂ ಒಳ್ಳೆಯದಲ್ಲ. ಅಲ್ಲದೆ ಟಿವಿ ನೋಡುವಾಗ ಟಿವಿಯ ಸಮೀಪ ಕುಳಿತು ನೋಡದೆ ದೂರ ಕುಳಿತು ನೋಡುವ ಅಭ್ಯಾಸ ಒಳ್ಳೆಯದು.

ಪರಿಸರ ಮಾಲಿನ್ಯ: ಅತೀಯಾದ ಪರಿಸರ ಮಾಲಿನ್ಯ ಹೊಂದಿರುವ ಪ್ರದೇಶದಲ್ಲಿ ವಾಸಿಸುತ್ತಿದ್ದರೆ ಮುಖದಲ್ಲಿ ನೆರಿಗೆ ಮೂಡುತ್ತದೆ. ದೂಳಿರುವ ಪ್ರದೇಶದಲ್ಲಿ ಓಡಾಡುವುದು, ರಾಸಾಯನಿಕ ವಸ್ತುಗಳಿಂದಾಗಿ ಮಾಲಿನ್ಯವಾಗಿರುವ ಪರಿಸರ ಇದರಿಂದಾಗಿ ಮುಖದಲ್ಲಿ ಬೇಗನೆ ನೆರಿಗೆಗಳು ಬೀಳುತ್ತವೆ.

ತುಂಬಾ ಕ್ಲೆನ್ಸಿಂಗ್ ಮಾಡುವುದು: ಮುಖವನ್ನು ದಿನದಲ್ಲಿ ಒಂದು ಬಾರಿ ಮಾತ್ರ ಕ್ಲೆನ್ಸ್ ಮಾಡಿದರೆ ಒಳ್ಳೆಯದು. ಒಂದ್ಕಕಿಂತ ಅಧಿಕ ಬಾರಿ ಕ್ಲೆನ್ಸ್ ಮಾಡಿದರೆ ಮುಖದಲ್ಲಿರುವ ನೈಸರ್ಗಿಕ ಎಣ್ಣೆಯಂಶ ಹೋಗಿ ಮುಖದ ತ್ವಚೆ ಸಡಿಲವಾಗಿ ನೆರಿಗೆಗಳು ಮೂಡುತ್ತದೆ.

ಕುಡಿತ: ಕುಡಿತದ ಅಭ್ಯಾಸವಿದ್ದರೆ ದೇಹದ ಆರೋಗ್ಯ ಮತ್ತು ತ್ವಚೆಯ ಆರೋಗ್ಯ ಕಡಿಮೆಯಾಗಿ ಬೇಗನೆ ವಯಸ್ಸಾದವರಂತೆ ಕಾಣುವುದು.

ತಿನ್ನುವ ಅಭ್ಯಾಸ: ಅಧಿಕ ಸಿಹಿ ತಿನ್ನುವ ಅಭ್ಯಾಸವಿದ್ದರೆ ಮುಖದಲ್ಲಿ ನೆರಿಗೆಗಳು ಬೇಗನೆ ಕಾಣಿಸಿಕೊಳ್ಳುತ್ತದೆ.

ಕೆಲಸ: ಹವಾನಿಯಂತ್ರಕ ಕೊಠಡಿಯಲ್ಲಿ ಕೆಲಸ ಮಾಡುವುದರಿಂದ ಮತ್ತು ಅಧಿಕ ಕೆಲಸದ ಒತ್ತಡ ಈ ಎರಡು ಕಾರಣಗಳಿಂದ ಮುಖದಲ್ಲಿ ನೆರಿಗೆಗಳು ಬೇಗನೆ ಮೂಡುತ್ತದೆ.

English summary

Surprising Facts That Causes Ageing | Tips For Beauty | ಬೇಗನೆ ನೆರಿಗೆ ಮೂಡಿಸುವ ಆಶ್ಚರ್ಯಕರ ಕಾರಣಗಳು | ಸೌಂದರ್ಯಕ್ಕಾಗಿ ಕೆಲ ಸಲಹೆಗಳು

Apart from age factors, there are some surprising facts that forms wrinkles on your skin. Here are a few things that causes aging.
X
Desktop Bottom Promotion