For Quick Alerts
ALLOW NOTIFICATIONS  
For Daily Alerts

ಆಕರ್ಷಕವಾಗಿ ಕಾಣಬೇಕೆ? ಇಲ್ಲಿದೆ 10 ಬ್ಯೂಟಿ ಟಿಪ್ಸ್

|

ಪ್ರತಿಯೊಬ್ಬರು ತಾನು ಆಕರ್ಷಕವಾಗಿ ಕಾಣಬೇಕು, ನನ್ನ ಸೌಂದರ್ಯವನ್ನು ಎಲ್ಲರೂ ಹೊಗಳಬೇಕೆಂದು ಬಯಸುತ್ತಾರೆ. ಕೆಲವರು ಹುಟ್ಟುವಾಗಲೇ ಸುಂದರವಾಗಿರುತ್ತಾರೆ, ಮತ್ತೆ ಕೆಲವರು ತಮ್ಮ ಮೇಕಪ್ ಹಾಗೂ ಡ್ರೆಸ್ ಸೆನ್ಸ್ ನಿಂದ ಆಕರ್ಷಕವಾಗಿ ಕಾಣುತ್ತಾರೆ. ನಿಮಗೆ ಸೌಂದರ್ಯಪ್ರಜ್ಞೆಯಿದ್ದರೆ ಮಾತ್ರೆ ಸುಂದರವಾಗಿ ಕಾಣಲು ಸಾಧ್ಯ.

ಆಕರ್ಷಕವಾಗಿ ಕಾಣಬೇಕೆಂದು ಬಯಸುವವರು ತಮ್ಮ ಸೌಂದರ್ಯ ರಕ್ಷಣೆಯ ಕಡೆಗೆ ಗಮನ ಕೊಡಬೇಕು. ಎಣ್ಣೆ ತ್ವಚೆ, ಸಾಮಾನ್ಯ ತ್ವಚೆ, ಒಣ ತ್ವಚೆ ಎಂಬ 3 ಬಗೆಯ ತ್ವಚೆಯನ್ನು ಕಾಣಬಹುದು.

ಒಂದೊಂದು ತ್ವಚೆಗೂ ಆರೈಕೆ ಮಾಡುವ ವಿಧಾನ ಭಿನ್ನವಾಗಿರುತ್ತದೆ. ತ್ವಚೆಗೆ ತಕ್ಕಂತೆ ಕ್ರೀಮ್ ಬಳಸಬೇಕು. ಇಲ್ಲಿ ನಾವು ಆಕರತ್ಷಕವಾಗಿ ಕಾಣಿಸಬೇಕೆಂದು ಬಯಸುವವರು ಮುಖ್ಯವಾಗಿ ಪಾಲಿಸಬೇಕಾದ ಬ್ಯೂಟಿ ಟಿಪ್ಸ್ ಬಗ್ಗೆ ಹೇಳಲಾಗಿದೆ. ಈ ಬ್ಯೂಟಿ ಟಿಪ್ಸ್ ಎಲ್ಲಾ ಬಗೆಯ ತ್ವಚೆಗೂ ಅನ್ವಯವಾಗುತ್ತದೆ.

1. 3-4 ಬಾರಿ ಮುಖ ತೊಳೆಯಿರಿ

1. 3-4 ಬಾರಿ ಮುಖ ತೊಳೆಯಿರಿ

ಪ್ರತೀದಿನ 3-4 ಬಾರಿ ಮುಖ ತೊಳೆಯಬೇಕು. 2 ಬಾರಿ ಮಾತ್ರ ಫೇಸ್ ವಾಶ್ ಹಾಕಿ ಮುಖ ತೊಳೆಯಿರಿ. ನಂತರ ತೊಳೆಯುವಾಗ ಹದ ಬಿಸಿ ನೀರಿನಿಂದ ತೊಳೆಯಿರಿ. ತುಂಬಾ ತಣ್ಣೀರು ಅಥವಾ ಬಿಸಿ ನೀರು ಮುಖ ತೊಳೆಯಿರಿ.

2. ಎಕ್ಸ್ ಫೋಲೆಟ್

2. ಎಕ್ಸ್ ಫೋಲೆಟ್

ಎಕ್ಸ್ ಫೋಲೆಟ್ ಮಾಡಿದರೆ ನಿರ್ಜೀವ ತ್ವಚೆಯನ್ನು ಹೋಗಲಾಡಿಸಬಹುದು, ವಾರದಲ್ಲಿ 2 ಬಾರಿಯಾದರೂ ಎಕ್ಸ್ ಫೋಲೆಟ್ ಮಾಡಿಸಬೇಕು.

3. ಮಾಯಿಶ್ಚರೈಸರ್

3. ಮಾಯಿಶ್ಚರೈಸರ್

ತ್ವಚೆಯಲ್ಲಿ ಮಾಯಿಶ್ಚರೈಸರ್ ಇರುವಂತೆ ನೋಡಿಕೊಳ್ಳಿ. ಸಾಕಷ್ಟು ನೀರು ಕುಡಿಯುವುದು, ಮಾಯಿಶ್ಚರೈಸರ್ ಕ್ರಿಮ್, ಎಣ್ಣೆ ಮಸಾಜ್ ಇವುಗಳಿಂದ ತ್ವಚೆಯನ್ನು ಕಾಪಾಡಬಹುದು.

4. ಸನ್ ಸ್ಕ್ರೀನ್ ಲೋಷನ್

4. ಸನ್ ಸ್ಕ್ರೀನ್ ಲೋಷನ್

ಸೂರ್ಯನ ಕಿರಣಗಳು ನೇರವಾಗಿ ತ್ವಚೆಯ ಮೇಲೆ ಬಿದ್ದರೆ ಬೇಗನೆ ನೆರಿಗೆಗಳು ಮೂಡುತ್ತದೆ. ಆದ್ದರಿಂದ ಹೊರಗಡೆ ಹೋಗುವಾಗ ಸನ್ ಸ್ಕ್ರೀನ್ ಲೋಷನ್ ಹಚ್ಚಿದರೆ ತ್ವಚೆಯನ್ನು ರಕ್ಷಣೆ ಮಾಡುತ್ತದೆ.

5. ತುಟಿಯ ರಕ್ಷಣೆ

5. ತುಟಿಯ ರಕ್ಷಣೆ

ಒಣ ತುಟಿ ಮುಖದ ಅಂದವನ್ನು ಕಮ್ಮಿ ಮಾಡುತ್ತದೆ, ತುಟಿಗೆ ಲಿಪ್ ಬಾಮ್ ಹಚ್ಚುವುದು, ಜೇನು ಸವರುವುದು ಮಾಡಿದರೆ ತ್ವಚೆ ತನ್ನ ಹೊಳಪನ್ನು ಕಳೆದುಕೊಳ್ಳುವುದಿಲ್ಲ. ಪ್ರತಿನಿತ್ಯ ಲಿಪ್ ಸ್ಟಿಕ್ ಹಚ್ಚಿ ರಾತ್ರಿ ಮಲಗುವ ಮುನ್ನ ಅದನ್ನು ತೊಳೆಯದಿದ್ದರೆ ತುಟಿ ಹಾಳಾಗುವುದು.

6. ಹಬೆ ಕೊಡುವುದು

6. ಹಬೆ ಕೊಡುವುದು

ಮುಖಕ್ಕೆ ಹಬೆ ಕೊಡುವುದು ತುಂಬಾ ಒಳ್ಳೆಯದು. ಹಬೆ ಕೊಟ್ಟರೆ ತ್ವಚೆಯಲ್ಲಿರುವ ಬೇಡದ ರಾಸಾಯನಿಕಗಳು ಹೊರಹೋಗುತ್ತದೆ, ತ್ವಚೆಯ ಹೊಳಪು ಹೆಚ್ಚುವುದು.

7. ನಿದ್ದೆ

7. ನಿದ್ದೆ

ಆರೋಗ್ಯವಾಗಿ ಹಾಗೂ ಆಕರ್ಷಕವಾಗಿ ಕಾಣಲು ನಿದ್ದೆ ಅವಶ್ಯಕ. ನಿದ್ದೆ ಕಮ್ಮಿಯಾದರೆ ಕಣ್ಣಿನ ಸುತ್ತ ಕಪ್ಪು ಕೆಲ ಬೀಳುವುದು.

8. ನೀರು

8. ನೀರು

ತ್ವಚೆ ರಕ್ಷಣೆಗೆ ನೀರು ಕುಡಿಯಬೇಕು. ಕಮ್ಮಿ ನೀರು ಕುಡಿದರೆ ತ್ವಚೆ ಡ್ರೈಯಾಗುವುದು.

9. ಡಯಟ್

9. ಡಯಟ್

ಆರೋಗ್ಯಕರ ಆಹಾರಕ್ರಮ ಪಾಲಿಸಿ. ಫಾಸ್ಟ್ ಫುಡ್, ಕುರುಕಲು ತಿಂಡಿಗಳನ್ನು ದೂರವಿಡಿ. ಸಿಹಿ ತಿಂಡಿಗಳನ್ನು ಹೆಚ್ಚಾಗಿ ತಿನ್ನಬಾರದು, ಖಾರವನ್ನು ಮಿತಿಯಲ್ಲಿ ತಿನ್ನಬೇಕು.

10. ವ್ಯಾಯಾಮ

10. ವ್ಯಾಯಾಮ

ಪ್ರತಿನಿತ್ಯ ಅರ್ಧ ಗಂಟೆ ವ್ಯಾಯಾಮ ಮಾಡುವುದು ಒಳ್ಳೆಯದು. ಇದರಿಂದ ಸಮತೂಕದ ಮೈಕಟ್ಟನ್ನು, ಆರೋಗ್ಯಕರ ತ್ವಚೆಯನ್ನು ಪಡೆದು ಆಕರ್ಷಕವಾಗಿ ಕಾಣುವಿರಿ.

English summary

10 Basic Beauty Tips |Tips For Body Care | 10 ಪ್ರಮುಖ ಬ್ಯೂಟಿ ಟಿಪ್ಸ್ | ದೇಹದ ಆರೈಕೆಗೆ ಕೆಲ ಸಲಹೆಗಳು

Everyone wants to look their best. Some are born beautiful and others grow to become beautiful. Looking healthy and attractive is everyone's dream, regardless of age group. Since lifestyle and skincare contribute a lot to your looks, here's some advice to keep in mind.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more