For Quick Alerts
ALLOW NOTIFICATIONS  
For Daily Alerts

ಕೊಲೆಸ್ಟ್ರಾಲ್ ಕಡಿಮೆ ಮಾಡಿಕೊಳ್ಳಲು ಡಯಟ್

By Staff
|

ಕೊಲೆಸ್ಟ್ರಾಲ್ ದೇಹದಲ್ಲಿ ನೈಸರ್ಗಿಕವಾಗಿ ಉತ್ಪಾದನೆಯಾಗುವ ದ್ರವ್ಯ. ನಾವಿಲ್ಲಿ ಎರಡು ರೀತಿಯ ಕೊಲೆಸ್ಟರಾಲ್ ಗಳನ್ನು ಗಮನಿಸಬಹುದು: ಮೊದಲನೆಯದು, ಎಚ್ ಡಿ ಎಲ್- ಇದು ಸಾಮಾನ್ಯವಾಗಿ ಉತ್ತಮವಾದ ಕೊಲೆಸ್ಟ್ರಾಲ್. ಮತ್ತೊಂದು ಎಲ್ ಡಿ ಎಲ್- ಇದು ಕೆಟ್ಟ ರೀತಿಯ ಕೊಲೆಸ್ಟ್ರಾಲ್. ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದರೆ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು.

ಕೊಲೆಸ್ಟ್ರಾಲ್ ಕಡಿಮೆ ಮಾಡಿಕೊಳ್ಳಲು ಒಂದೇ ದಾರಿ ಎಂದರೆ ಸೂಕ್ತವಾದ ಪಥ್ಯ ಅಥವಾ ಡಯಟ್. ಕೊಲೆಸ್ಟ್ರಾಲ್ ಕಡಿಮೆಗೊಳಿಸಲು ಸೂಕ್ತವಾದ ಪಥ್ಯವೆಂದರೆ ಕೆಲವೊಂದು ಆಹಾರಗಳನ್ನು ವರ್ಜಿಸುವುದು ಮತ್ತು ಕೆಲವೊಂಡು ಆಹಾರ ಪದಾರ್ಥ ಸೇವನೆಯನ್ನು ಹೆಚ್ಚಿಸಿಕೊಳ್ಳುವುದು.

ಕೊಲೆಸ್ಟ್ರಾಲ್ ಕಡಿಮೆಗೊಳಿಸಿಕೊಳ್ಳಲು ಕೆಲವೊಂದು ಪಥ್ಯದ ಸಲಹೆಗಳನ್ನು ಕೆಳಗೆ ನೀಡಲಾಗಿದೆ:

ಸ್ಯಾಚುರೇಟೆಡ್ ಕೊಬ್ಬಿನಂಶವಿರುವ ಆಹಾರ ತಿನ್ನಬೇಡಿ

ಸ್ಯಾಚುರೇಟೆಡ್ ಕೊಬ್ಬಿನಂಶವಿರುವ ಆಹಾರ ತಿನ್ನಬೇಡಿ

ಕೊಲೆಸ್ಟ್ರಾಲ್ ಉತ್ಪಾದನೆಯಾಗುವುದು ಸ್ಯಾಚುರೇಟೆಡ್ ಕೊಬ್ಬಿನಂಶದಿಂದ. ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಉತ್ತಮವಾದ ಪಥ್ಯವೆಂದರೆ ಸಾಧ್ಯವಿದ್ದಷ್ಟು ಸ್ಯಾಚುರೇಟೆಡ್ ಕೊಬ್ಬಿನಂಶವಿರುವ ಆಹಾರಗಳನ್ನು ದೂರವಿರಿಸಿ ಮತ್ತು ಸಾಧ್ಯವಿದ್ದರೆ ಸಂಪೂರ್ಣವಾಗಿ ಅಂತ ಕೊಬ್ಬಿನ ಪದಾರ್ಥಗಳನ್ನು ಹೊರಗಿಟ್ಟುಬಿಡಿ. ಕೆಲವೊಂದು ಸಂದರ್ಭಗಳಲ್ಲಿ ಸ್ಯಾಚುರೇಟೆಡ್ ಕೊಬ್ಬಿನಂಶವಿರುವ ಪದಾರ್ಥಗಳನ್ನು ಸಂಪೂರ್ಣ ತಿನ್ನದಿರಲು ಸಾಧ್ಯವಿಲ್ಲದಿದ್ದರೆ ಅಂಥ ಪದಾರ್ಥಗಳನ್ನು ಸ್ವಲ್ಪ ಪ್ರಮಾಣದಲ್ಲಿ ಸೇವಿಸಿ.

ಶೀತಲೀಕರಣದಲ್ಲಿ ಇಟ್ಟ ಆಹಾರ ಒಳ್ಳೆಯದಲ್ಲ

ಶೀತಲೀಕರಣದಲ್ಲಿ ಇಟ್ಟ ಆಹಾರ ಒಳ್ಳೆಯದಲ್ಲ

ಬಹಳ ದಿನಗಳವರೆಗೆ ಕಾಯ್ದಿರಿಸುವಂತೆ ತಯಾರಿಸಿದ ಆಹಾರಗಳಲ್ಲಿ ಮತ್ತು ಹೆಚ್ಚು ಕೊಬ್ಬಿನಂಶವಿರುವ ಮಾಂಸಾಹಾರಗಳಲ್ಲಿ ಆಹಾರಗಳಲ್ಲಿ ಸ್ಯಾಚುರೇಟೆಡ್ ಕೊಬ್ಬು ಹೆಚ್ಚಾಗಿರುತ್ತದೆ. ಸ್ಯಾಚುರೇಟೆಡ್ ತರಕಾರಿ ಕೊಬ್ಬುಗಳನ್ನೂ ದೂರವಿಡಬೇಕು. ಇವುಗಳೂ ಕೂಡ ದೇಹದಲ್ಲಿ ಕೆಟ್ಟ ರೀತಿಯ ಕೊಲೆಸ್ಟ್ರಾಲ್ ಹೆಚ್ಚಿಸುತ್ತವೆ.

ನಾರಿನಂಶ ಹೆಚ್ಚಿರುವ ಪದಾರ್ಥಗಳನ್ನು ಸೇವಿಸಿ

ನಾರಿನಂಶ ಹೆಚ್ಚಿರುವ ಪದಾರ್ಥಗಳನ್ನು ಸೇವಿಸಿ

ಕೊಲೆಸ್ಟ್ರಾಲ್ ಕಡಿಮೆಗೊಳಿಸಲು ಅಥವಾ ನಿಯಂತ್ರಿಸಲು ಬ್ರೆಡ್ ನಂತಹ ಹೆಚ್ಚೆಚ್ಚು ನಾರಿನಂಶವರಿಉವ ಪದಾರ್ಥಗಳನ್ನೇ ಸೇವಿಸಿ. ಇದರ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಏಕದಳ ಮತ್ತು ದ್ವಿದಳ ಧಾನ್ಯ, ಬೇಳೆ ಕಾಳುಗಳನ್ನು ಸೇವಿಸಿ. ಇವುಗಳು ಕೇವಲ ಕೊಲೆಸ್ಟ್ರಾಲ್ ಮಾತ್ರ ಕಡಿಮೆ ಮಾಡುವುದಿಲ್ಲ. ಬದಲಿಗೆ, ನಿಮ್ಮ ದೇಹದ ಕ್ಯಾಲೋರಿಯನ್ನೂ ಕಡಿಮೆಗೊಳಿಸುತ್ತವೆ. ದೇಹದಲ್ಲಿರುವ ಹೆಚ್ಚಿನ ಕ್ಯಾಲೋರಿ ನೈಸರ್ಗಿಕವಾಗಿ ಕೊಬ್ಬಿನಂಶವಾಗಿ ಮಾರ್ಪಡುತ್ತದೆ. ದೇಹದಲ್ಲಿ ಕೊಬ್ಬಿನಂಶ ಹೆಚ್ಚಾದಷ್ಟೂ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚುವ ಸಾಧ್ಯತೆ ಇರುತ್ತದೆ.

ತರಕಾರಿ ಮತ್ತು ಹಣ್ಣುಗಳನ್ನು ಹೆಚ್ಚು ತಿನ್ನಿ

ತರಕಾರಿ ಮತ್ತು ಹಣ್ಣುಗಳನ್ನು ಹೆಚ್ಚು ತಿನ್ನಿ

ಕೊಲೆಸ್ಟ್ರಾಲ್ ಕಡಿಮೆ ಮಾಡಿಕೊಳ್ಳು ಇಚ್ಚಿಸುವವರ ಪಥ್ಯದಲ್ಲಿ ಕ್ಯಾಬೇಜ್, ಕ್ಯಾರೇಟ್, ಸೌತೆಕಾಯಿ ಮತ್ತು ಹಸಿರು ಸೊಪ್ಪಿನ ತರಕಾರಿಗಳು ಸೇರಿರಲೇಬೇಕು. ತರಕಾರಿಗಳ ಜೊತೆಗೆ ತಾಜಾ ಹಣ್ಣುಗಳನ್ನೂ ಸೇವಿಸಿ. ಈ ಆಹಾರಗಳಲ್ಲಿ ಕೊಬ್ಬಿನಂಶ ತೀರಾ ತೀರಾ ಕಡಿಮೆಯಿರುತ್ತದೆ. ಇವು ನೈಸರ್ಗಿಕವಾಗಿ ದೊರೆಯುವ ಮಿನರಲ್ಸ್ ಮತ್ತು ವಿಟಾಮಿನ್ಸ್ ಗಳನ್ನು ಹೊಂದಿರುತ್ತವೆ.

ಮೀನು ಮತ್ತು ತೆಳುವಾದ ಮಾಂಸವನ್ನು ಸೇವಿಸಿ

ಮೀನು ಮತ್ತು ತೆಳುವಾದ ಮಾಂಸವನ್ನು ಸೇವಿಸಿ

ಕೊಲೆಸ್ಟ್ರಾಲ್ ನಿಯಂತ್ರಿಸುವ ಪಥ್ಯದಲ್ಲಿ ಮೀನಿನ ಪದಾರ್ಥಗಳು ಸೇರಿದ್ದರೆ ಒಳ್ಳೆಯದು. ಕಾಡ್, ಸಲ್ಮಾನ್ ಮತ್ತು ಟ್ಯುನಾದಂತ ಮೀನುಗಳು ಒಮೆಗಾ 3 ಫ್ಯಾಟಿ ಆಸಿಡ್ಸ್ ಗಳನ್ನು ಹೆಚ್ಚೆಚ್ಚು ಹೊಂದಿರುತ್ತವೆ. ಇದರಿಂದಾಗಿ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಪೋಷಕಾಂಶಗಳು ಹೇರಳವಾಗಿವೆ.ಮಾಂಸಾಹಾರದಿಂದ ದೂರವುಳಿಯಲು ಸಾಧ್ಯವಿಲ್ಲದವರು ತೆಳುವಾದ ಮಾಂಸಗಳ ಸೇವನೆಯನ್ನು ರೂಢಿಸಿಕೊಳ್ಳಬೇಕು. ಚರ್ಮ ಹೊರತಾದ ಮಾಂಸಾಹಾರ ಇತ್ಯಾದಿ.

ಸರಿಯಾದ ಪ್ರಮಾಣದಲ್ಲಿ ತಿನ್ನಿ

ಸರಿಯಾದ ಪ್ರಮಾಣದಲ್ಲಿ ತಿನ್ನಿ

ಕೊಲೆಸ್ಟ್ರಾಲ್ ಕಡಿಮೆಗೊಳಿಸಲು ಕೇವಲ ಪಥ್ಯಾಹಾರಗಳನ್ನು ಸೇರಿಸುವುದು ಅಥವಾ ಕೆಲವೊಂದು ಆಹಾರಗಳನ್ನು ತಿನ್ನದಿರುವುದು ಮಾತ್ರ ಸಾಲುವುದಿಲ್ಲ. ಇದರ ಜೊತೆಗೆ ಆಹಾರಗಳನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದೂ ಕೂಡ ಮುಖ್ಯವಾಗುತ್ತದೆ. ಆಹಾರ ಪದಾರ್ಥಗಳನ್ನು ತಿನ್ನುವ ಮುಂಚೆ ಆಯಾ ಆಹಾರ ಪದಾರ್ಥಗಳಲ್ಲಿರುವ ಪೋಷಕಾಂಶಗಳ ಬಗ್ಗೆ ಸರಿಯಾಗಿ ತಿಳಿದುಕೊಂಡು ಸೇವಿಸಬೇಕು.

ತಿನ್ನುವ ಕ್ರಮ

ತಿನ್ನುವ ಕ್ರಮ

ದಿನದಲ್ಲಿ ಸರಿಸುಮಾರು 6-7 ಸಲ ದ್ವಿದಳ ಧಾನ್ಯಗಳು, 3-5 ಬಾರಿ ತರಕಾರಿಗಳು, 2-4 ಬಾರಿ ಹಣ್ಣುಹಂಪಲುಗಳನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆಗೊಳಿಸಲು ಸಾಧ್ಯವಿದೆ.

English summary

Proper Diets for Lowering Cholesterol

Cholesterol is a substance produced naturally in the body. There are two types of Cholesterol: HDL, commonly known as good cholesterol, and LDL, commonly referred to as bad cholesterol. A high level of cholesterol in the body can cause serious problems.
X