Latest Updates
-
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ!
ವಯಸ್ಸಿಗಿಂತ ಚಿಕ್ಕವರಂತೆ ಕಾಣಬೇಕೆ?

ಈ ರೀತಿ ತ್ವಚೆ ಪಡೆಯಲು ಈ ಕೆಳಗಿನ ಸಲಹೆಗಳನ್ನು ಪಾಲಿಸಿದರೆ ಸಾಕು, ನಿಮ್ಮ ವಯಸ್ಸಿಗಿಂತ 10 ವರ್ಷ ಚಿಕ್ಕವರಂತೆ ಕಾಣುವಿರಿ.
1. ಆಹಾರಕ್ರಮದಲ್ಲಿ ತರಕಾರಿ ಮತ್ತು ಹಣ್ಣು ಹಂಪಲುಗಳನ್ನು ಹೆಚ್ಚಾಗಿ ತಿನ್ನಬೇಕು. ಮಿತಿಯಾಗಿ 3 ಹೊತ್ತು ತಿನ್ನಿ ಅಥವಾ ಸ್ವಲ್ಪ-ಸ್ವಲ್ಪವಾಗಿ ಆರು ಹೊತ್ತು ತಿನ್ನಿ. ಆದರೆ ಮಿತಿ ಮೀರಿ ತಿನ್ನಬಾರದು. 8-10 ಗ್ಲಾಸ್ ನೀರು ಕುಡಿಯಬೇಕು.
2. ವಾರಕ್ಕೊಮ್ಮೆ ಸ್ಕ್ರಬ್ ಮಾಡಿ ನಿರ್ಜೀವ ತ್ವಚೆಯನ್ನು ಹೋಗಲಾಡಿಸಬೇಕು. ನಂತರ ತ್ವಚೆಗೆ ಮಾಯಿಶ್ಚರೈಸರ್ ಪ್ರತಿದಿನವೂ ಮಾಡಬೇಕು.
3. ಮುಖವನ್ನು ಕಡಿಮೆಯೆಂದರೂ ದಿನದಲ್ಲಿ 2 ಬಾರಿ ತೊಳೆಯಬೇಕು.
4. ಸ್ಕಿನ್ ಕ್ಯಾನ್ಸರ್ ಮತ್ತು ಇತರ ತ್ವಚೆ ಸಮಸ್ಯೆ ತಡೆಗಟ್ಟಲು ಉತ್ತಮ ಗುಣಮಟ್ಟದ ಸನ್ ಸ್ಕ್ರೀನ್ ಲೋಷನ್ ಬಳಸಿ.
5. ದೇಹದ ಆಕಾರವು ಆಕರ್ಷಕವಾಗಿ ಕಾಣಲು ಪ್ರತಿದಿನ ವ್ಯಾಯಾಮ ಮಾಡಬೇಕು.
6. ನಕರಾತ್ಮಕವಾಗಿ ಚಿಂತಿಸುವ ಬದಲು ಧನಾತ್ಮಕವಾಗಿ ಯೋಚಿಸಬೇಕು. ಒಳ್ಳೆಯ ಯೋಚನೆ ಸೌಂದರ್ಯ ಮತ್ತು ಆರೋಗ್ಯಕ್ಕೆ ಒಳ್ಳೆಯದು. ನಗಾಡಿದರೆ ಮುಖದ ಸ್ನಾಯುಗಳು ಸಡಿಲವಾಗಿ ಅವುಗಳಿಗೆ ಉತ್ತಮ ವ್ಯಾಯಾಮ ದೊರಕಿದಂತೆ ಆಗುತ್ತದೆ. ಆದ್ದರಿಂದ ಮುಖ ಗಂಟಕ್ಕಿ ಮುಖದಲ್ಲಿ ನೆರಿಗೆ ಬರಲು ಕಾರಣವಾಗುವುದಕ್ಕಿಂತ ನಗುಮುಖ ಸೌಂದರ್ಯವನ್ನು ಹೆಚ್ಚಿಸುತ್ತದೆ.
7. ಹೊಸ ವಿಷಯಗಳ ಬಗ್ಗೆ ಕಲೆಯುವ ಆಸಕ್ತಿ ಇರಬೇಕು.ಚುರುಕತನ ಇದ್ದರೆ ನಿಮ್ಮೆಡೆಗೆ ಇತರರು ಬೇಗನೆ ಆಕರ್ಷಿತರಾಗುತ್ತಾರೆ.
8. ಧೂಮಪಾನ ಸೇದಿ ಅದರ ಹೊಗೆ ಬಿಡುವಾಗ ಹೊಗೆಯಲ್ಲಿರುವ ವಿಷಕಾರಕ ಕಣಗಳು ತ್ವಚೆ ಮೇಲೆ ಕೆಟ್ಟ ಪರಿಣಾಮ ಬೀರಿ ಮುಖ ಬೇಗನೆ ವಯಸ್ಸಾದಂತೆ ಕಾಣುವಂತೆ ಮಾಡುತ್ತದೆ. ಆದ್ದರಿಂದ ಸೌಂದರ್ಯದ ಬಗ್ಗೆ ಕಾಳಜಿ ಇರುವವರು ಧೂಮಪಾನ ಬಿಡುವುದು ಒಳ್ಳೆಯದು.
9. ಮುಖ್ಯವಾದ ಇನ್ನೊಂದು ಅಂಶವೆಂದರೆ ಕೂದಲಿನ ವಿನ್ಯಾಸ ಬದಲಾಯಿಸಬೇಕು. ಟ್ರೆಂಡ್ ಗೆ ತಕ್ಕಂತೆ ಕೂದಲನ್ನು ಕತ್ತರಿಸಬೇಕು. ಈ ರೀತಿ ಮಾಡಿದರೆ ಮುಖ ಆಕರ್ಷಕವಾಗಿ ಕಾಣುವುದು. ರಾಸಾಯನಿಕವಿರುವ ಹೇರ್ ಕಲರ್ ಹಚ್ಚದೆ ನೈಸರ್ಗಿಕವಾದ ವಿಧಾನದಿಂದ ಕೂದಲಿನ ಪೋಷಣೆ ಮಾಡಬೇಕು.
10. ಗಾಢವಾದ ಮೇಕಪ್ ಮಾಡದೆ ತೆಳುವಾದ ಮೇಕಪ್ ಮಾಡಬೇಕು.
11. ಲಿಪ್ ಸ್ಟಿಕ್ ಹಚ್ಚಿದರೆ ಅದು ಹಲ್ಲಿಗೆ ಅಂಟ ಬಾರದು. ಆ ರೀತಿಯ ಲಿಪ್ ಸ್ಟಿಕ್ ಹಚ್ಚಬೇಕು. ಹಲ್ಲು ತುಂಬಾ ಹಳದಿ ಬಣ್ಣದಲ್ಲಿದ್ದರೆ ಡೆಂಟಿಸ್ಟ್ ಹತ್ತಿರ ಹೋಗಿ ಶುಚಿ ಮಾಡಿಸಿಕೊಂಡು ಬರಬೇಕು.
12. ಉಗುರನ್ನು ಕತ್ತರಿಸಿ ಶುದ್ಧವಾಗಿ ಇಟ್ಟುಕೊಳ್ಳಬೇಕು. ಬಣ್ಣ ಹಚ್ಚುವುದಾದರೆ ಒಳ್ಳೆಯ ಬಣ್ಣದ ಮತ್ತು ಗುಣಮಟ್ಟದ ನೇಲ್ ಪಾಲೀಷ್ ಬಳಸಿ.
13. ಪುರುಷರಾಗಿದ್ದರೆ ನೀಟಾಗಿ ಸೇವ್ ಮಾಡಬೇಕು.
14. ಫ್ಯಾಷನೇಬಲ್ ಡ್ರೆಸ್ ಹಾಕಿ, ಆದರೆ ಸೂಕ್ತವಾದ ಡ್ರೆಸ್ ಹಾಕಬೇಕು. ಫ್ಯಾಷನ್ ಹೆಸರಿನಲ್ಲಿ 25 ವರ್ಷದ ಹುಡುಗಿ 15 ವರ್ಷದ ಹುಡುಗಿಯ ರೀತಿ ಡ್ರೆಸ್ ಮಾಡುವುದು ಸರಿಯಲ್ಲ.
15. ಸೌಂದರ್ಯವರ್ಧಕವಾಗಿ ನೈಸರ್ಗಿಕ ಸಾಧನಗಳನ್ನು ಬಳಸುವುದು ಒಳ್ಳೆಯದು.



Click it and Unblock the Notifications