For Quick Alerts
ALLOW NOTIFICATIONS  
For Daily Alerts

ಮೈಸೂರು ಬಸ್ ಸಂಚಾರ ಸ್ಯಾಟಲೈಟ್ ನಿಲ್ದಾಣಕ್ಕೆ ಮೊಟಕು

By Srinath
|
ಬೆಂಗಳೂರು, ಆಗಸ್ಟ್ 21: ಮೆಜೆಸ್ಟಿಕ್ ಬಳಿ ಮೆಟ್ರೊ ಕಾಮಗಾರಿ ಆರಂಭವಾದ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು, ಇನ್ನು ಮುಂದೆ ಮೈಸೂರು ಕಡೆಗೆ ಸಂಚರಿಸುವ ಐರಾವತ ಮತ್ತು ರಾಜಹಂಸ ಬಸ್‌ಗಳು ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಕಾರ್ಯಚರಣೆಗೊಳ್ಳಲಿವೆ. ಈ ವ್ಯವಸ್ಥೆ ಶನಿವಾರ ದಿಂದಲೇ ಜಾರಿಗೆ ಬಂದಿದೆ.

ಇದರಿಂದ ಐರಾವತ (ವೋಲ್ವೊ) ಬಸ್ ಪ್ರಯಾಣ ದರದಲ್ಲಿ ರೂ.10 ಹಾಗೂ ರಾಜಹಂಸ ಸಾರಿಗೆಗಳಲ್ಲಿ ಒಂದು ಹಂತದ ಪ್ರಯಾಣ ದರ ಕಡಿಮೆಯಾಗಲಿದೆ. ಮೈಸೂರು ಕಡೆಯಿಂದ ಬಂದಿಳಿಯುವ ಪ್ರಯಾಣಿಕರ ಅನುಕೂಲಕ್ಕಾಗಿ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ವಿನೂತನ ಷಟಲ್ ಬಸ್‌ ಸೇವೆಯನ್ನೂ ಆರಂಭಿಸಲಾಗಿದೆ. ವಿಶಿಷ್ಟ ಶೈಲಿಯ 10 ಬಸ್‌ಗಳನ್ನು ಈ ಬಸ್ ನಿಲ್ದಾಣದಿಂದ ಷಟಲ್ ಸೇವೆಗಳ ರೂಪದಲ್ಲಿ ಸಂಚಾರಕ್ಕೆ ಬಿಡಲಾಗಿದೆ.

ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸಲಾದ ಹವಾ ನಿಯಂತ್ರಿತ ಪ್ರಯಾಣಿಕರ ಕೊಠಡಿಯನ್ನು ಸಾರಿಗೆ ಸಚಿವ ಆರ್. ಅಶೋಕ ಶನಿವಾರ ಉದ್ಘಾಟಿಸಿದರು. 100 ಪ್ರಯಾಣಿಕರು ಕುಳಿತುಕೊಳ್ಳಬಹುದಾದಂತೆ ಉತ್ತಮ ಆಸನಗಳುಳ್ಳ ಹವಾನಿಯಂತ್ರಿತ ಕೊಠಡಿಯಲ್ಲಿ ಟಿ.ವಿ, ದಿನಪತ್ರಿಕೆ, ಕುಡಿಯುವ ನೀರು, ಶೌಚಾಲಯದ ಸೌಲಭ್ಯ ಕಲ್ಪಿಸಲಾಗಿದೆ

English summary

Mysore Bus service from Satellite Bus station, Mysore-Bangalore Buses not to reach Majestic, ಮೈಸೂರು ಬಸ್ ಸಂಚಾರ ಸ್ಯಾಟಲೈಟ್ ನಿಲ್ದಾಣಕ್ಕೆ ಮೊಟಕು

Bus service to and from Mysore now, will not reach upto Kempegowda Bus Station Thankas to Metro work. It will terminate at Satellite Bus station at Mysore road. Transport Minister R. Ashoka inaugaurated the new service on Aug 20.
Story first published: Sunday, August 21, 2011, 8:53 [IST]
X
Desktop Bottom Promotion