For Quick Alerts
ALLOW NOTIFICATIONS  
For Daily Alerts

ಫೇಸ್‌ಬುಕ್ಕಿನಲ್ಲಿ ವಿದ್ಯಾಪಾರಂಗತ ಮರುಳಸಿದ್ಧ ಸ್ವಾಮೀಜಿ

By Prasad
|
Sri Basava Marulasidda Swamiji
ಸಮಾಜದ ಓರೆಕೋರೆಗಳನ್ನು ಸರಿಪಡಿಸುತ್ತಿರುವ, ದಾರಿತಪ್ಪಿದ ಮಕ್ಕಳನ್ನು ಸರಿದಾರಿಗೆ ತರುತ್ತಿರುವ, ಅಂಧಕಾರದಲ್ಲಿ ಜ್ಞಾನಜ್ಯೋತಿ ಬೆಳಗಿಸುತ್ತಿರುವ, ವಿದ್ಯಾಪೀಠಗಳನ್ನು ಸ್ಥಾಪಿಸಿ ಜ್ಞಾನಾರ್ಜನೆಗೈಯುತ್ತಿರುವ, ನಾಸ್ತಿಕರಲ್ಲಿ ಆಸ್ತಿಕ ಭಾವನೆ ಹುಟ್ಟಿಸುತ್ತಿರುವ ಕರ್ನಾಟಕದ ಸ್ವಾಮೀಜಿಗಳು ಅಸಾಧ್ಯ ಸಮಾಜಸೇವೆ ಗೈದಿದ್ದಾರೆ.

ಇನ್ನು ರಾಜಕಾರಣಿಗಳು ಸಂಕಷ್ಟ ಎದುರಾದಾಗ, ಸಂಸತ ಹಂಚಿಕೊಳ್ಳುವಾಗ, ಬೇರೇನೂ ಕೆಲಸವಿಲ್ಲದಾಗ, ಸುಖಾಸುಮ್ಮನೆ ಸ್ವಾಮೀಜಿಗಳ ಕಾಲಿಗೆ ಎರಗಿ ಆಶೀರ್ವಾದ ಪಡೆಯುವುದು, ಸಲಹೆಸೂಚನೆಗಳನ್ನು ತೆಗೆದುಕೊಳ್ಳುವುದು ಎಲ್ಲರಿಗೂ ತಿಳಿದ ವಿಚಾರ. ಇನ್ನು ಅವರನ್ನು ನಂಬುವ ಜನಸಾಮಾನ್ಯರ ಮಾತಂತೂ ಕೇಳುವುದೇ ಬೇಡ. ಸ್ವಾಮೀಜಿಗಳು ಹೇಳಿದ್ದೇ ವೇದವಾಕ್ಯ.

ಇದೇ ಸಮಾಜದಲ್ಲಿ ಖೊಟ್ಟಿ ಸ್ವಾಮೀಜಿಗಳು, ಕಳ್ಳ ಸ್ವಾಮೀಜಿಗಳು, ದಗಲಬಾಜಿ ಸ್ವಾಮೀಜಿಗಳೂ ಇರುತ್ತಾರೆ. ಇವರೆಲ್ಲರ ನಡುವೆ ತಮ್ಮಷ್ಟಕ್ಕೆ ತಾವು ಕೆಲಸ ಮಾಡಿಕೊಂಡು ಲೋಕದ ವ್ಯಾಪಾರವನ್ನು ಗಮನಿಸುತ್ತ, ಜನತೆಯ ಕಷ್ಟಸುಖಗಳಿಗೆ ಸ್ಪಂದಿಸುತ್ತ, ಕಾಲಕ್ಕೆ ತಕ್ಕಂತೆ ತಮ್ಮನ್ನೂ ಅಪ್ಡೇಡ್ ಮಾಡಿಕೊಳ್ಳುವ ವಿದ್ಯಾವಂತ ಸ್ವಾಮೀಜಿಗಳೂ ಅನೇಕರಿದ್ದಾರೆ. ಅಂಥವರಲ್ಲಿ ಒಬ್ಬರು ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ (ಹುಟ್ಟಿದ್ದು 1984ರಲ್ಲಿ).

ನಮಗೆ ತಿಳಿದಿರುವುದು ಒಂದು ಬಿಂದುವಿನಷ್ಟು, ತಿಳಿಯದಿರುವುದು ಸಾಗರದಷ್ಟು ಎಂಬ ನೀತಿವಾಣಿ ಪಾಲಿಸುತ್ತಿರುವ ಯುವ ಸ್ವಾಮೀಜಿಗಳಲ್ಲಿ ಬಸವ ಮರುಳಸಿದ್ಧ ಸ್ವಾಮೀಜಿಯೂ ಒಬ್ಬರು. ಮೂಲತಃ ದಾವಣಗೆರೆಯವರಾದ ಸ್ವಾಮೀಜಿಗಳು ಸದ್ಯಕ್ಕೆ ವಾಸಿಸುತ್ತಿರುವುದು ಶಿವಮೊಗ್ಗದಲ್ಲಿ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪದವಿ ಗಳಿಸಿದ್ದಾರೆ. ಸಂಗೀತ, ಸಾಹಿತ್ಯ, ಸಿನೆಮಾ ಇಷ್ಟಪಡುವ ಸ್ವಾಮೀಜಿಯನ್ನು ಅಪ್ಟುಡೇಟ್ ಸ್ವಾಮೀಜಿ ಅಂದರೂ ಪರವಾಗಿಲ್ಲ. ಧ್ಯಾನ ಮತ್ತು ಬ್ಯಾಡ್ಮಿಂಟನ್ ಆಟವಾಡುವುದು ಅವರಿಗೆ ಅತಿ ಇಷ್ಟವಾದ ಸಂಗತಿಗಳು.

ಫೇಸ್ ಬುಕ್ ನಲ್ಲಿ ಅಡಿಗಾಲಿಟ್ಟಿರುವ ಸ್ವಾಮೀಜಿಗಳು ಸಂಪಾದಿಸಿರುವ ಗೆಳೆಯರು ಮಾತ್ರ ಬೆರಳೆಣಿಕೆಯಷ್ಟು. ಸ್ವಾಮೀಜಿ ದೇಶ ಸುತ್ತಿದ್ದಾರೆ, ಕೋಶ ಓದಿದ್ದಾರೆ. ಇಂಥವರ ಹೆಚ್ಚಿನ ಅಗತ್ಯ ಸಮಾಜಕ್ಕೆ ಯಾವತ್ತಿಗೂ ಇದ್ದೇ ಇರುತ್ತದೆ. ಇದೇ ಡಿಸೆಂಬರ್ 1ರಂದು ತಮ್ಮ 27ನೇ ಹುಟ್ಟುಹಬ್ಬವನ್ನು ಮಕ್ಕಳೊಂದಿಗೆ ಆಚರಿಸಿಕೊಂಡ ಬಸವ ಮರುಳಸಿದ್ಧ ಸ್ವಾಮೀಜಿಗಳ ಫೇಸ್ ಬುಕ್ ಗೆಳೆಯರ ಬಳಗ ಇನ್ನಷ್ಟು ಹೆಚ್ಚಲಿ. [ದಟ್ಸ್‌ಕನ್ನಡ ಫೇಸ್‌ಬುಕ್ ಫ್ಯಾನ್ ಕ್ಲಬ್ ಸೇರಿರಿ]

English summary

Swamijis from Karnataka on Facebook | Basava Marulasidda Swamiji | ಫೇಸ್ ಬುಕ್ ನಲ್ಲಿ ಸ್ವಾಮೀಜಿಗಳು | ಬಸವ ಮರುಳಸಿದ್ಧ ಸ್ವಾಮೀಜಿ

Sri Basava Marulasidda Swamiji is one of the active swamijis on Facebook. Very young and energetic Swamiji is from Davanagere, but settled in Shivamogga, Karnataka. He has around 250 friends on Facebook.
Story first published: Wednesday, March 28, 2012, 11:40 [IST]
X
Desktop Bottom Promotion