For Quick Alerts
ALLOW NOTIFICATIONS  
For Daily Alerts

ಇಂಥ ಸ್ವಾಮೀಜಿಗಳ ಸಂತತಿ ಇನ್ನಷ್ಟು ಬೆಳೆಯಲಿ

By Prasad
|
Esha Vittaladas Swamiji
ಫೇಸ್ ಬುಕ್ ನಲ್ಲಿ ಕಂಡಂತಹ ಅಪರೂಪದ ಸ್ವಾಮೀಜಿಗಳಲ್ಲಿ ಮೂಡಬಿದಿರೆಯ 39 ವರ್ಷದ ಕೆಮಾರು ಸ್ವಾಮೀಜಿ ಉರ್ಫ್ ಈಶ ವಿಠಲದಾಸ ಸ್ವಾಮೀಜಿ ಒಬ್ಬರು. ಕೆಲವರಿಗೆ ಸನ್ಯಾಸ ದೀಕ್ಷೆ ಅನಿರೀಕ್ಷಿತವಾಗಿ ಒಲಿದು ಬಂದಿರುತ್ತದೆ, ಕೆಲವರು ತಾವಾಗಿಯೇ ಲೌಕಿಕ ವೈಭೋಗಗಳನ್ನು ಧಿಕ್ಕರಿಸಿ ಆಧ್ಯಾತ್ಮದೆಡೆಗೆ ಸಾಗಿರುತ್ತಾರೆ. ಕೆಮಾರು ಸ್ವಾಮೀಜಿ ಎರಡನೇ ಗುಂಪಿಗೆ ಸೇರುತ್ತಾರೆ.

ಆಧ್ಯಾತ್ಮದೆಡೆಗೆ ಮರುಳಾಗುವ ಮುನ್ನ ಈಶ ವಿಠಲದಾಸ ಸ್ವಾಮೀಜಿಗಳು ಮೆಕ್ಯಾನಿಕಲ್ ಇಂಜಿನಿಯರಿಂಗ್ ಮಾಡಿ ಲಾರ್ಸನ್ ಅಂಡ್ ಟೂಬ್ರೊ ಕಂಪನಿಯಲ್ಲಿ ಉನ್ನತ ಉದ್ಯೋಗದಲ್ಲಿದ್ದರು. ಆದರೆ, ಅವರನ್ನು ಆಧ್ಯಾತ್ಮ ತನ್ನೆಡೆಗೆ ಸೆಳೆಯಲು ಆರಂಭಿಸಿತು. ಕೊನೆಗೊಂದು ದಿನ ಕೆಲಸಕ್ಕೆ ಗುಡ್ ಬೈ ಹೇಳಿ ಧಾರ್ಮಿಕ ಅಧ್ಯಯನ ಮತ್ತು ಆಧ್ಯಾತ್ಮದಲ್ಲಿ ತೊಡಗಿಕೊಂಡರು.

ಮುಂದೆ ಅನೇಕ ಸ್ವಾಮೀಜಿಗಳನ್ನು, ಆಧ್ಯಾತ್ಮಿಕ ಗುರುಗಳನ್ನು ಭೇಟಿ ಮಾಡಿದರು. ಹಿಮಾಲಯ, ಹರಿದ್ವಾರ, ಕೇದಾರನಾಥ, ಮಧುರಾ ತೀರ್ಥಯಾತ್ರೆ ಕೈಗೊಂಡು ಆಧ್ಯಾತ್ಮ, ಭಕ್ತಿ, ಜ್ಞಾನದ ಹಸಿವನ್ನು ನೀಗಿಸಿಕೊಂಡರು. ಅಲ್ಲಿ ಕಳೆದ ಸಮಯದಲ್ಲಿ ವೇದ ಕಲಿಕೆ ಮತ್ತು ಧ್ಯಾನದಲ್ಲಿ ಮುಳುಗಿರುತ್ತಿದ್ದರು. ನಂತರ 1999ರಲ್ಲಿ ಮೂಡಬಿದಿರೆಯ ಪಲಡ್ಕ ಬಳಿ ಕೆಮಾರು ಮಠವನ್ನು ಶ್ರೀಗಳು ಸ್ಥಾಪಿಸಿದರು. ಮುಂದೆ 2002ರಲ್ಲಿ ಸಂದೀಪನಿ ಆಶ್ರಮವನ್ನೂ ಸ್ಥಾಪಿಸಿದರು.

ಅವರು ನಡೆಸುತ್ತಿರುವ ವಿದ್ಯಾಸಂಸ್ಥೆ, ಸಮಾಜ ಸೇವೆಗಳ ಜೊತೆಗೆ ಅವರ ಉದಾತ್ತ ಧ್ಯೇಯಗಳು ಭಕ್ತಾದಿಗಳನ್ನು ಆಕರ್ಷಿಸುತ್ತಿವೆ. ಮಠ, ಆಶ್ರಮ, ದೇವಸ್ಥಾನಗಳನ್ನು ಸ್ಥಾಪಿಸಿದ್ದರ ಹಿಂದೆ ಅವರಿಗೊಂದು ಖಚಿತವಾದ ಗುರಿಯಿದೆ. ಪ್ರತಿ ಮಕ್ಕಳಿಗೂ ಭೌತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ದೊರೆಯಬೇಕಾಗಿರುವುದು ಅವಶ್ಯಕ ಎಂಬುದು ಅವರ ನುಡಿ. ಮಕ್ಕಳನ್ನು ಉತ್ತಮವಾದ ನಾಗರಿಕರನ್ನಾಗಿ ಮಾಡಿದರೆ ದೇಶವನ್ನು ಬಲಿಷ್ಠವಾಗಿ ಕಟ್ಟಲು ಸಾಧ್ಯ ಎಂಬುದು ಅವರ ಬೀಜಮಂತ್ರ.

ಫೇಸ್ ಬುಕ್ಕಿನಲ್ಲಿ ಈಶ ಸ್ವಾಮೀಜಿ
ಗಳ ಅಕೌಂಟಲ್ಲಿ ಖಾತೆ ತೆರೆಯಲಾಗಿದೆ. ಅಲ್ಲಿ ಎಷ್ಟು ಜನ ಫೇಸ್ ಬುಕ್ ಗೆಳೆಯರನ್ನು ಅವರು ಸಂಪಾದಿಸಿದ್ದಾರೆ ಎಂಬ ಮಾಹಿತಿ ದೊರೆಯದಿದ್ದರೂ, ಅವರು ಉತ್ತಮ ಜೀವನ ನಡೆಸಲು ನಾವು ಅನುಸರಿಸಬೇಕಾದ ಹಲ ಸಲಹೆಗಳು ಬಹುವಾಗಿ ಆಕರ್ಷಿಸುತ್ತವೆ. ಅವರನ್ನು ಸಂಪರ್ಕಿಸಬೇಕಿದ್ದರೆ ಈಮೇಲ್ ವಿಳಾಸ : [email protected]. ಇಂಥ ಸ್ವಾಮೀಜಿಗಳ ಸಂಸತಿ ಇನ್ನಷ್ಟು ಬೆಳೆಯಲಿ. [ಒನ್ಇಂಡಿಯಾ-ಕನ್ನಡ ಫೇಸ್‌ಬುಕ್ ಫ್ಯಾನ್ ಕ್ಲಬ್ ಸೇರಿರಿ]

English summary

Swamijis from Karnataka on Facebook | Esha Vittaladas Swamiji | ಫೇಸ್ ಬುಕ್ ನಲ್ಲಿ ಸ್ವಾಮೀಜಿಗಳು | ಈಶ ವಿಠಲದಾಸ ಸ್ವಾಮೀಜಿ

Esha Vittaladas Swamiji or fondly known as Kemaru Swamiji in one of unique swamijis we have in Karnataka. Though he was mechanical engineer and was with Larsen & Toubro, he was attracted towards spirituality and established own mutt Kemaru Mutt in Moodbidri.
Story first published: Wednesday, March 28, 2012, 11:42 [IST]
X
Desktop Bottom Promotion