For Quick Alerts
ALLOW NOTIFICATIONS  
For Daily Alerts

ಸಾಹಿತ್ಯಾರಾಧಕ, ಪತ್ರಕರ್ತ ನಾಗರಾಜಸ್ವಾಮಿಗೆ ಕಸಾಪ ನಂಟು

By Srinath
|

ನಾಗರಾಜಸ್ವಾಮಿ ಸಾಹಿತ್ಯದ ವಿದ್ಯಾರ್ಥಿ ಅಲ್ಲದಿದ್ದರೂ, ಸಾಹಿತ್ಯದಲ್ಲಿ ಆಸಕ್ತಿ ಹೊಂದಿದವರಾಗಿದ್ದು, ಚುಟುಕುಗಳನ್ನು ರಚಿಸುವ, ಕವನಗಳನ್ನು ರಚಿಸುವ ಹವ್ಯಾಸ ಬೆಳೆಸಿಕೊಂಡಿದ್ದಾರೆ.

ಇವರು ರಚಿಸಿದ ಕೆಲ ಚುಟುಕುಗಳು ಚುಟುಕು ಸಾಹಿತ್ಯ ಪರಿಷತ್ತು ಹೊರತಂದಿರುವ ಚುಟುಕು ಸಂಗ್ರಹ ಕೃತಿಯಲ್ಲಿ, ಅಡ್‌ವೈಸರ್ ಪ್ರಕಾಶನ ಹೊರ ತಂದಿರುವ ಕವನ ಸಂಕಲನದಲ್ಲಿ ಪ್ರಕಟವಾಗಿದೆ. ರಾಮಮೂರ್ತಿ ಕನ್ನಡ ಸಂಘ ಹೊರ ತಂದಿರುವ ಕವನ ಸಂಕಲನದಲ್ಲಿ ಇವರ ಕವನವೊಂದು ಪ್ರಕಟವಾಗಿದೆ. ಸುಧಾ ವಾರ ಪತ್ರಿಕೆಯಲ್ಲಿಯೂ ಇವರ ಒಂದು ಚುಟುಕು ಪ್ರಕಟವಾಗಿದೆ.

ನಾಗರಾಜಸ್ವಾಮಿ ಹವ್ಯಾಸಿ ಪತ್ರಕರ್ತರಾಗಿರುವುದು ವಿಶೇಷ. ಇವರ ಅನೇಕ ಲೇಖನಗಳು ವಿಜಯ ಕರ್ನಾಟಕ, ಪ್ರಜಾವಾಣಿ, ಉದಯವಾಣಿ, ಸಂಜೆವಾಣಿ ಮತ್ತು ಸುಧಾ ವಾರ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಬಹುಜನ ಕನ್ನಡಿಗರು ಪತ್ರಿಕೆಯಲ್ಲಿ ಇವರ ವರದಿಗಳು ಪ್ರಕಟಗೊಂಡಿವೆ.

ಜೊತೆಗೆ ಅಂಕಣಕಾರರಾಗಿಯೂ ಲೇಖನಗಳನ್ನು ಬರೆಯುತ್ತಿದ್ದು, ಅಡ್ವೈಸರ್ ಮಾಸ ಪತ್ರಿಕೆಯಲ್ಲಿ ರಾಜಕೀಯ ವಿಶ್ಲೇಷಣಾ ಲೇಖನಗಳನ್ನು ಬರೆಯುತ್ತಿದ್ದಾರೆ.

ಕನ್ನಡ ಪರ ಸಂಘಟನೆಯಾದ ಕನ್ನಡ ಸಂಘರ್ಷ ಸಮಿತಿಯ ಸಂಪರ್ಕ ಹೊಂದಿದ ನಾಗರಾಜಸ್ವಾಮಿ, ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯ ನಂತರ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಇವರು ಕಳೆದ 15 ವರ್ಷಕ್ಕೂ ಹೆಚ್ಚು ಕಾಲದಿಂದ ಸಮಿತಿಯ ಕೋಶಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ನಂಟು:

ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯಲ್ಲಿ ವಿಶೇಷ ಆಹ್ವಾನಿತ, ಸಂಘ ಸಂಸ್ಥೆ ಪ್ರತಿನಿಧಿ, ಗೌರವ ಸಂಚಾಲಕರಾಗಿ ಸೇವೆ ಸಲ್ಲಿಸಿರುವ ಇವರು ಕಳೆದ 3 ವರ್ಷಗಳಿಂದ ಗೌರವ ಕೋಶಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೇ ಬೆಂಗಳೂರು ವರದಿಗಾರರ ಕೂಟದ ಗೌರವ ಸಲಹೆಗಾರರಾಗಿಯೂ ಆಗಿದ್ದಾರೆ.

ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೆ ಒಪ್ಪಿಕೊಂಡ ಕೆಲಸವನ್ನು ಅಚ್ಚುಕಟ್ಟಾಗಿ ಸಕಾಲಕ್ಕೆ ಮಾಡಿಕೊಡುವ, ಎಲ್ಲರ ಜೊತೆ ಆತ್ಮೀಯವಾಗಿ ನಡೆದುಕೊಳ್ಳುವ, ವಿನಾಕಾರಣ ಯಾರ ಜೊತೆಯೂ ಸಂಘರ್ಷಕ್ಕೆ ಹೋಗದಂತಹ ವಿಶಿಷ್ಟ ವ್ಯಕ್ತಿತ್ವ ಹೊಂದಿರುವ ನಾಗರಾಜಸ್ವಾಮಿ 50 ಸಾರ್ಥಕ ವರ್ಷಗಳನ್ನು ಅರ್ಥಪೂರ್ಣವಾಗಿ ಪೂರೈಸಿರುವ ಈ ಸುಸಂದರ್ಭದಲ್ಲಿ ಅ.ನ.ಕೃ. ಕನ್ನಡ ಸಂಘ ಮತ್ತು ಸ್ನೇಹಿತರು ಇದೇ 29ರಂದು ಅಭಿನಂದಿಸುತ್ತಿದೆ.

English summary

Karnataka Journalist Co-Operative Society A.S. Nagaraja Swamy literary services, A.S. Nagaraja Swamy literary world, A.S. Nagaraja Swamy Biodata Bangalore, ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಎಎಸ್ ನಾಗರಾಜಸ್ವಾಮಿ ಸಾಹಿತ್ಯ ಪರಿಚಯ, 26 ವರ್ಷಗಳ ದಕ್ಷ ಸೇವೆ: 'ಸೊಸೈಟಿ' ನಾಗರಾಜಸ್ವಾಮಿ ಪರಿಚಯ

Karnataka Journalist Co-Operative Society Secretary A.S. Nagaraja Swamy will be felicitated on Oct 29 at Kannada Sahitya Parshat (KSP), Chamraj pet, Bangalore. Here is a brief bio of A.S. Nagaraja Swamy who is well known in literary world.
Story first published: Tuesday, October 18, 2011, 9:09 [IST]
X