Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
26 ವರ್ಷಗಳ ದಕ್ಷ ಸೇವೆ: 'ಸೊಸೈಟಿ' ಸ್ವಾಮಿ ಹೆಗ್ಗಳಿಕೆ

ಪ್ರಾಥಮಿಕ ಶಾಲಾ ವಿದ್ಯಾಭ್ಯಾಸವನ್ನು ಅಗಸನಪುರದಲ್ಲಿ ಮುಗಿಸಿದ ನಾಗರಾಜಸ್ವಾಮಿ, ಪ್ರೌಢ ಶಾಲಾ ವಿದ್ಯಾಭ್ಯಾಸವನ್ನು ಕನಕಪುರ ತಾಲೂಕಿನ ಮರಳೇಗವಿ ಮಠದಲ್ಲಿ ಪೂರೈಸಿದರು. ಬಳಿಕ ಅವರು ಕಾಲೇಜು ವಿದ್ಯಾಭ್ಯಾಸವನ್ನು ಮದ್ದೂರು ತಾಲೂಕಿನ ಭಾರತೀನಗರದ ಭಾರತೀ ಕಾಲೇಜಿನಲ್ಲಿ ಮಾಡಿದರು.
ಇವರು ವಾಣಿಜ್ಯ ಪದವಿಯನ್ನು 1984ರಲ್ಲಿ ಮುಗಿಸಿ ಉದ್ಯೋಗಕ್ಕಾಗಿ ಬೆಂಗಳೂರಿಗೆ 1985ರಲ್ಲಿ ಬಂದು, ಹೈಗ್ರೌಂಡ್ಸ್‌ನಲ್ಲಿರುವ ಬಸವ ಸಮಿತಿಯಲ್ಲಿ ಬೆರಳಚ್ಚುಗಾರನಾಗಿ ಆರು ತಿಂಗಳು ಸೇವೆ ಸಲ್ಲಿಸಿದ್ದಾರೆ.
1985ರ ಜುಲೈ 29ರಂದು ಕರ್ನಾಟಕ ಪತ್ರಕರ್ತರ ಸಹಕಾರ ಸಂಘದಲ್ಲಿ ಎರಡನೇ ದರ್ಜೆ ಸಹಾಯಕ ಹುದ್ದೆಗೆ ಸೇರಿಕೊಂಡರು. 7 ವರ್ಷಗಳ ಸೇವೆಯಲ್ಲಿ ಇವರ ಕರ್ತವ್ಯನಿಷ್ಠೆ ಹಾಗೂ ಪ್ರಾಮಾಣಿಕತೆಯನ್ನು ಪರಿಗಣಿಸಿದ ಆಡಳಿತ ಮಂಡಳಿ, 1992ರಲ್ಲಿ ಸಹಾಯಕ ಹುದ್ದೆಗೆ ಬಡ್ತಿ ನೀಡಿತು.
ಉತ್ತಮ ಕಾರ್ಯನಿರ್ವಹಣಾಧಿಕಾರಿ:
ಆ ಹುದ್ದೆಯಲ್ಲಿ ಮೂರು ವರ್ಷ ಪೂರೈಸುವಷ್ಟರಲ್ಲಿ 1995ರ ಜುಲೈನಲ್ಲಿ ಇವರ ಕಾರ್ಯದಕ್ಷತೆ ಪರಿಗಣಿಸಿ ಆಡಳಿತ ಮಂಡಳಿ ಮತ್ತೊಂದು ಬಡ್ತಿ ನೀಡಿತು. ಅದು ಸಹಕಾರ ಸಂಘದ ಅತ್ಯುನ್ನತ ಹುದ್ದೆಯಾದ ಕಾರ್ಯದರ್ಶಿ. ಇದೀಗ ಅವರು ಪೂರೈಸಿರುವ ಸೇವಾವಧಿ 26 ವರ್ಷಗಳು. 2010ರ ಸೆಪ್ಟಂಬರ್ ತಿಂಗಳಲ್ಲಿ ಅವರ 25 ವರ್ಷಗಳ ಅನುಪಮ ಸೇವೆಯನ್ನು ಪರಿಗಣಿಸಿ ಅಡಳಿತ ಮಂಡಳಿ ಸಂಘದ ಸರ್ವಸದಸ್ಯರ ಸಭೆಯಲ್ಲಿ ಆತ್ಮೀಯವಾಗಿ ಅಭಿನಂದಿಸಿದೆ.
2006ರ ನವೆಂಬರ್ ತಿಂಗಳಲ್ಲಿ ಸರ್ಕಾರದ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಸಹಕಾರಿ ವಸತಿ ಮಹಾಮಂಡಲ ನಿಯಮಿತವು ಆಯೋಜಿಸಿದ್ದ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ನಾಗರಾಜಸ್ವಾಮಿ ಅವರಿಗೆ ಉತ್ತಮ ಕಾರ್ಯನಿರ್ವಹಣಾಧಿಕಾರಿ ಎಂದು ಗೌರವಿಸಿದೆ.
ಕ.ಪ.ಸ.ಸಂಘ ಇಂದು ಸ್ವಂತ ಕಟ್ಟಡ ಹೊಂದಿದ್ದು, ಅಗಾಧವಾಗಿ ಬೆಳೆಯುತ್ತಿದೆ. ಈ ಬೆಳವಣಿಗೆಯಲ್ಲಿ ಆಡಳಿತ ಮಂಡಳಿ ಸದಸ್ಯರಿಂದ ಸಾಮಾನ್ಯ ಸದಸ್ಯರವರೆಗೆ ಆಡಳಿತ ಮಂಡಳಿ ಶ್ರಮದ ಜೊತೆ ಜೊತೆಗೆ ನಾಗರಾಜಸ್ವಾಮಿ ಅವರ ಪಾತ್ರವನ್ನು ಎಲ್ಲರೂ ಮುಕ್ತ ಕಂಠದಿಂದ ಹೊಗಳುತ್ತಾರೆ.
ಆಡಳಿತದಲ್ಲಿ ಕನ್ನಡ ಎಂಬ ಘೋಷವಾಕ್ಯವನ್ನು ಕನ್ನಡ ಪ್ರೇಮಿಯಾದ ನಾಗರಾಜಸ್ವಾಮಿ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದಲ್ಲಿ ಅಕ್ಷರಶಃ ಜಾರಿಗೆ ತಂದಿದ್ದಾರೆ.



Click it and Unblock the Notifications