For Quick Alerts
ALLOW NOTIFICATIONS  
For Daily Alerts

ಜೈಲಿನಲ್ಲೇ ಸ್ವಾತಂತ್ರ್ಯೋತ್ಸವ; ಕಟ್ಟಾಗೆ ಸದ್ಯಕ್ಕಿಲ್ಲ ಮುಕ್ತಿ!

By Srinath
|
Katta Subramanya Naidu no bail only jail
ಬೆಂಗಳೂರು, ಆ.9: ಈ ಬಾರಿ ಪರಪ್ಪನ ಅಗ್ರಹಾರದಲ್ಲಿ 64 ನೇ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಿದ್ದು, ಮಾಜಿ ಮಂತ್ರಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ವಿಶೇಷ ಅತಿಥಿಯಾಗಲಿದ್ದಾರೆ ಎಂಬುದು ನಿಕ್ಕಿಯಾಗಿದೆ. ಏಕೆಂದರೆ ಹೆಚ್ಚುವರಿ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ. ಸುಧೀಂದ್ರ ರಾವ್ ಅವರು ಕಟ್ಟಾಳುಗಳಿಗೆ ಬಿಡುಗಡೆಯ ಎಲ್ಲ ಬಾಗಿಲುಗಳನ್ನೂ ಭದ್ರವಾಗಿ ಬಂದ್ ಮಾಡಿದ್ದಾರೆ.

ಎಲ್ಲ ರಾಜಕಾರಣಿಗಳಂತೆ ಎದುರಿಗೆ ಜೈಲುಗಂಬಿ ಕಾಣುತ್ತಿದ್ದಂತೆ ಎದೆಎದೆ ಬಡಿದುಕೊಂಡು ಕಟ್ಟಾ, ಮೈ ಲಾರ್ಡ್! ನನಗೆ ಆರೋಗ್ಯ ಸರಿಯಿಲ್ಲ ಎಂದು ನ್ಯಾಯಾಲಯಕ್ಕೆ ಅಲವತ್ತುಕೊಂಡರು. ಆರೋಗ್ಯ ಕಾರಣಗಳಿಗಾಗಿ ತನಗೆ ಜಾಮೀನು ನೀಡಬೇಕೆಂದು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮಾಡಿಕೊಂಡ ಮನವಿಯನ್ನು ಸುಧೀಂದ್ರ ಸ್ಪಷ್ಟವಾಗಿ ತಳ್ಳಿಹಾಕಿದರು.

'ನಿಮಗೆ ಅಗತ್ಯವಿರುವ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಜೈಲು ಪ್ರಾಧಿಕಾರಕ್ಕೆ ಸೂಚನೆ ನೀಡುತ್ತೇನೆ. ಯಾವುದೇ ಕಾರಣಕ್ಕೂ ತೊಂದರೆ ಯಾಗದಂತೆ ನೋಡಿಕೊಳ್ಳುವಂತೆ ಸೂಚಿಸುತ್ತೇನೆ" ಎಂದು ಹೇಳಿ ಜಾಮೀನು ಅರ್ಜಿಯನ್ನು ನಯವಾಗಿಯೇ ತಳ್ಳಿಹಾಕಿದ್ದಾರೆ. ಅಲ್ಲಿಗೆ ಕಟ್ಟಾದ್ವಯರಿಗೆ ಆ. 22ರವರೆಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವುದ ಅನಿವಾರ್ಯವಾಗಿದೆ.

ಕಟ್ಟಾ ಪ್ರಭೃತಿಗಳು ಇನ್ನೂ ಒಂದು ನಾಟಕ ಹೂಡಲು ಯತ್ನಿಸಿದ್ದಾರೆ. ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವವರೆಗೂ ನ್ಯಾಯಾಂಗ ಬಂಧನದಿಂದ ವಿನಾಯ್ತಿ ನೀಡುವಂತೆ ಅವರ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು. ಇದರಿಂದ ಒಳಗೊಳಗೇ ಕೆಂಡವಾದ ಜಡ್ಜ್ ಸುಧೀಂದ್ರ ಅವೆಲ್ಲ ನಡೆಯಾಕಿಲ್ಲ, ನಡೀತಿರು ಜೈಲಿಗೆ ಎಂದಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶ ಎದುರಿಗೇ ಇದೆ!:
2ಜಿ ಸ್ಪೆಕ್ಟ್ರಂ ಹಂಚಿಕೆ ಹಗರಣದಲ್ಲಿ ಮಾಜಿ ಸಚಿವ ಎ.ರಾಜಾ ಮತ್ತು ಕನ್ನಿಮೋಳಿಯ ಜಾಮೀನು ಅರ್ಜಿ ತಿರಸ್ಕರಿಸಿ ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನೀಡಿದ ಆದೇಶವನ್ನು ಉಲ್ಲೇಖಿಸಿದ ಜಡ್ಜ್ ಸಾಹೇಬರು, ಕಟ್ಟಾ ವಕೀಲರ ಮನವಿಯನ್ನು ತಿರಸ್ಕರಿಸಿದರು. ಅಲ್ಲಿಗೆ ಕಟ್ಟಾ ಅಂಡ್ ಗ್ಯಾಂಗ್ ಗೆ ಸದ್ಯಕ್ಕೆ ಮುಕ್ತಿಯಿಲ್ಲ. ಜತೆಗೆ ಪ್ರಕರಣದ ಆರೋಪಿಗಳಾದ ಬಿ.ಕೆ.ಮಂಜು, ಬಸವ ಪೂರ್ಣಯ್ಯ, ಪಾಲಿಕೆ ಸದಸ್ಯ ಗೋಪಿಗೆ 5ಲಕ್ಷ ಭದ್ರತಾ ಠೇವಣಿ ಮತ್ತು ಇಬ್ಬರ ಖಾತ್ರಿ ಒದಗಿಸುವಂತೆ ಷರತ್ತು ವಿಧಿಸಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿತು.

ವಿಧಿ ವಿಪರೀತ ಎನ್ನುವುದು ಇದಕ್ಕೇನಾ!?: ಒಂದು ಕಡೆ ರಾಜಭವನದಲ್ಲಿ ಡಿವಿ ಸದಾನಂದ ಗೌಡರ ಸಂಪುಟ ಸದಸ್ಯರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದರೆ, ಅದೇ ಶುಭಮಹೂರ್ತದಲ್ಲಿ, ಬಿಜೆಪಿಯ ಪ್ರಭಾವಿ ಮುಖಂಡ ಮತ್ತು ಶಾಸಕ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪರಪ್ಪನ ಅಗ್ರಹಾರ ಕಾರಾಗೃಹ ಪ್ರವೇಶಕ್ಕೆ ಪ್ರಯಾಣ ಬೆಳೆಸಿದುದು ವಿಪರ್ಯಾಸ.

English summary

Katta Subramanya Naidu no bail only jail in Parappana Agrahara Jail, Katta Subramanya Case- officers congratulated, Katta Day out in Jail, ಕಟ್ಟಾಗೆ ಜೈಲಿನಲ್ಲೇ ಸ್ವಾತಂತ್ರ್ಯೋತ್ಸವ; ಅವಯ್ಯನಿಗೆ ಸದ್ಯಕ್ಕಿಲ್ಲ ಮುಕ್ತಿ!

Katta Subramanya Naidu no bail only jail in Parappana Agrahara Jail, Katta Subramanya Case- officers congratulated, Katta Day out in Jail.
Story first published: Tuesday, August 9, 2011, 11:14 [IST]
X
Desktop Bottom Promotion